ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಕಣ್ಣಿಗೆ ಯಾವ ಎಣ್ಣೆ ಹಾಕಬೇಕು ಅಥವಾ ತುಪ್ಪವನ್ನು ಹಾಕಬೇಕು ಹಾಗೂ ಈ ರೀತಿ ಈ ವಿಧಾನ ಅನುಸರಿಸುವುದರಿಂದ ಕಣ್ಣಿನ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಕಣ್ಣಿಗೆ ನಾವು ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಳಸಬಹುದು ಹಾಗೂ ನಾಟಿ ಹಸುವಿನ ತುಪ್ಪ ಅಥವಾ ಎಮ್ಮೆಯ ತುಪ್ಪವನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ಜರ್ಸಿ ಹಸುವಿನ ತುಪ್ಪವನ್ನು ಬಳಸಕೂಡದು ಹೌದು ಇದನ್ನು ಹಾಕುವುದರಿಂದ ಅದರಲ್ಲಿ ಇರುವಂತಹ ಕೆಲವೊಂದಷ್ಟು ವಿಷಕಾರಿ ಅಂಶ ನಮ್ಮ ಕಣ್ಣಿಗೆ ಸೇರುತ್ತದೆ.
ಆದ್ದರಿಂದ ಇದು ಸೇವನಿಗೂ ಅಷ್ಟು ಒಳ್ಳೆಯದಲ್ಲ ಹಾಗೂ ಕಣ್ಣಿಗೆ ಹಾಕುವುದಕ್ಕೂ ಕೂಡ ಅಷ್ಟು ಒಳ್ಳೆಯದಲ್ಲ ಅದೇ ರೀತಿಯಾಗಿ ನಾಟಿ ಹಸುವಿನ ತುಪ್ಪವನ್ನು ಬಳಸುವುದರಿಂದ ಏನೆಲ್ಲಾ ಪ್ರಯೋಜನ ಎಂದು ನೋಡುವುದಾದರೆ ಅದರಲ್ಲಿ ಹಲವಾರು ರೀತಿಯ ಒಳ್ಳೆಯ ಪೋಷಕಾಂಶಗಳು ಇರುತ್ತದೆ ಇದು ನಮ್ಮ ಕಣ್ಣಿನಲ್ಲಿ ಇರುವಂತಹ ವಾತ ಪಿತ್ತ ಕಫದ ಸಮಸ್ಯೆಗಳನ್ನು ದೂರಮಾಡುತ್ತದೆ.
ಹಾಗಾದರೆ ಈ ದಿನ ಕಣ್ಣಿನ ವಿಚಾರವಾಗಿ ಸಂಬಂಧಿಸಿದಂತೆ ಪ್ರತಿಯೊಬ್ಬ ರಿಗೂ ಕಣ್ಣು ಎಷ್ಟು ಬಹಳ ಮುಖ್ಯವಾದದ್ದು ಹಾಗೂ ಅದರಿಂದ ನಾವು ಏನೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ನೋಡುವುದಾದರೆ ಪ್ರತಿಯೊಬ್ಬರಿಗೂ ಕೂಡ ಕಣ್ಣು ಬಹಳ ಪ್ರಮುಖವಾದಂತಹ ಅಂಗವಾಗಿದ್ದು ಇದರಿಂದ ಆ ವ್ಯಕ್ತಿಯ ಸೌಂದರ್ಯವೂ ಸಹ ಹೆಚ್ಚಾಗುತ್ತದೆ.
ಅಗ್ನಿ ತತ್ವದ ಸಂಕೇತ ಎಂದು ನಾವು ಕಣ್ಣನ್ನು ಹೇಳಬಹುದು. ಬಹಳ ಪ್ರಮುಖವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಕಣ್ಣಿನಲ್ಲಿ ಆಲೋಚಕ ಪಿತ್ತ ಇರುತ್ತದೆ. ಮತ್ತು ತರ್ಪಕ ಕಫ ಇರುತ್ತದೆ ಇವೆರಡರಿಂದ ಕಣ್ಣಿನಲ್ಲಿ ಹಲವಾರು ರೀತಿಯ ಕಾರ್ಯಗಳು ನಡೆಯುತ್ತಿರುತ್ತದೆ.
ಇವುಗಳಲ್ಲಿ ಅಸಮತೋಲನೆ ಉಂಟಾದರೆ ಕಣ್ಣಿನ ನರಗಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದ್ದರಿಂದ ನಾವು ಕಣ್ಣಿನ ಆರೋಗ್ಯವನ್ನು ಬಹಳ ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಮೇಲೆ ಹೇಳಿದಂತೆ ಆಲೋಚಕ ಪಿತ್ತ ಹಾಗೂ ತರ್ಪಕ ಕಫ, ಉದಾನ ವಾಯುವಿನ ವ್ಯತ್ಯಾಸದಿಂದ ಕಣ್ಣಿಗೆ ಸಂಬಂಧಿಸಿದೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಹಾಗಾಗಿ ಇದನ್ನು ನಾವು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎಂದರೆ ಮೇಲೆ ಹೇಳಿದಂತೆ ಕಣ್ಣಿಗೆ ಎಣ್ಣೆಯನ್ನು ಹಾಕುವ ವಿಧಾನ ಹಾಗೂ ಕಣ್ಣಿಗೆ ತುಪ್ಪವನ್ನು ಹಾಕುವ ವಿಧಾನ ಈ ಎಲ್ಲಾ ಸಮಸ್ಯೆಗಳನ್ನು ಸರಿ ಪಡಿಸುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.
ಹಾಗೇನಾದರೂ ಈ ಸಮಸ್ಯೆಗಳು ಪ್ರಾರಂಭದ ಹಂತದಲ್ಲಿದ್ದರೆ ಅದನ್ನು ಈ ವಿಧಾನ ಅನುಸರಿಸುವುದರ ಮೂಲಕ ಸರಿಪಡಿಸಬಹುದು ಹಾಗೇನಾದರೂ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಉಲ್ಬಣವಾಗಿದ್ದರೆ ಆಯುರ್ವೇದದಲ್ಲಿ ಹಲವಾರು ರೀತಿಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಅದನ್ನು ತೆಗೆದುಕೊಳ್ಳುವುದರ ಮೂಲಕ ನೀವು ಇದನ್ನು ದೂರ ಮಾಡಬಹುದಾಗಿದೆ.
ಹಾಗಾದರೆ ಕಣ್ಣಿಗೆ ಎಣ್ಣೆ ಅಥವಾ ತುಪ್ಪವನ್ನು ಯಾವ ವಿಧಾನ ಅನುಸರಿಸುವುದರ ಮೂಲಕ ಅದನ್ನು ನಾವು ಹೇಗೆ ಬಳಸಬೇಕು ಎಂದು ನೋಡುವುದಾದರೆ. ರಾತ್ರಿ ಮಲಗುವ ಮುನ್ನ ಕಣ್ಣಿಗೆ ನಾಲ್ಕು ಹನಿ ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಅಥವಾ ಶುದ್ಧವಾದ ತುಪ್ಪವನ್ನು ಬಳಸಬಹುದು.
ಇದನ್ನು ಹಾಕಿ ಕಣ್ಣನ್ನು 20 ಬಾರಿ ಮುಚ್ಚಿ ತೆಗೆಯಬೇಕು. ಹೀಗೆ ಮಾಡು ವುದರಿಂದ ಕಣ್ಣಿನಲ್ಲಿರುವಂತಹ ಎಲ್ಲ ನರಮಂಡಲ ಕ್ರಿಯಾಶೀಲವಾಗುತ್ತದೆ. ನೀವು ಕಣ್ಣಿಗೆ ಎಣ್ಣೆ ಅಥವಾ ತುಪ್ಪವನ್ನು ಹಾಕುವುದರಿಂದ ಕೇವಲ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಮೆದುಳಿನ ಆರೋಗ್ಯ ವನ್ನು ಸಹ ಹೆಚ್ಚಿಸುತ್ತದೆ. ಆದ್ದರಿಂದ ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಇಲ್ಲದಿದ್ದರೂ ಈ ವಿಧಾನ ಅನುಸರಿಸುವುದು ಒಳ್ಳೆಯದು.