ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಬೆಳೆಯುತ್ತಾ ಹೋದಂತೆ ಜೀವನದಲ್ಲಿ ನಮ್ಮದೇ ಆದ ಒಂದು ಸ್ಥಾನ ಮಾನ ಸಿಗಬೇಕು ಎಂದು ಹಂಬಲಿಸುತ್ತೇವೆ. ಅದಕ್ಕಾಗಿ ಹಂತ ಹಂತವಾಗಿ ಜೀವನದ ಮೇಲೇರಲು ನಾನಾ ಪ್ರಯತ್ನಗಳನ್ನು ಮಾಡುತ್ತೇವೆ. ನಾವು ಎಷ್ಟೇ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಕೆಲವೊಮ್ಮೆ ನಾವು ಅಂದುಕೊಂಡ ಕೆಲಸ ಆಗುವುದಿಲ್ಲ.
ಕಷ್ಟಪಟ್ಟು ಮಾಡಿದ ಶ್ರಮವೆಲ್ಲವೂ ಕಣ್ಣ ಮುಂದೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಆಗ ನಮ್ಮ ಅದೃಷ್ಟ ಕೆಟ್ಟಿದೆ ಎನ್ನುವುದಕ್ಕೆ ಪ್ರಮುಖ ನಿರ್ದರ್ಶನ ಎಂದೇ ಭಾವಿಸಬಹುದು. ಆ ಘಳಿಗೆಯಲ್ಲಿ ಮನಸ್ಸಿಗೆ ಆಗುವ ನೋ’ವು ಅಷ್ಟಿಷ್ಟಲ್ಲ. ಯಾವುದೋ ಒಂದು ಬಾರಿ ಈ ರೀತಿ ಆಗಿದ್ದರೆ ಸಹಿಸಬಹುದು ಆದರೆ ಕೆಲವರಿಗೆ ಪ್ರತಿ ಬಾರಿಯೂ ಕೂಡ ಹೇಗಾಗುತ್ತದೆ.
ಜೀವನದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದ ವ್ಯಕ್ತಿಯ ಎಲ್ಲಾ ಕೆಲಸಗಳ ಕೆಡಲು ಶುರು ಆಗುತ್ತದೆ. ಯಾವ ಕಾರ್ಯ ಕೈಗೆತ್ತಿಕೊಂಡರು ನೆರವೇರುವುದಿಲ್ಲ. ಪ್ರಮುಖ ಕೆಲಸ ಕಾರ್ಯಗಳಿಗಾಗಿ ಮನೆಯಿಂದ ಹೊರಟಾಗ ಅಡ್ಡಿಗಳು ಎದುರಾಗುತ್ತವೆ ಅಥವಾ ಎಲ್ಲಾ ಕಡೆಯಿಂದಲೂ ಅವಮಾನಗಳು ಆಗುತ್ತವೆ ಹಣ ಕಳೆದುಕೊಳ್ಳುತ್ತಾನೆ.
ದಿನದಿಂದ ದಿನಕ್ಕೆ ಬೆಳೆಯಬೇಕಾಗಿದ್ದವನು, ವ್ಯಾಪಾರ ವ್ಯವಹಾರದಲ್ಲೂ ಹಿನ್ನಡೆ ಹೊಂದಿಕೊಳ್ಳುತ್ತಾನೆ, ಉದ್ಯೋಗ ಸ್ಥಳದಲ್ಲಿಯೂ ಕೂಡ ಕಿರಿಕಿರಿ ಆರಂಭ ಆಗುತ್ತದೆ ಒಂದೇ ಸಮನೆ ಈ ರೀತಿ ನಾನಾ ಸಂಕಷ್ಟಗಳು ಎದುರಾಗಿ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದರೆ ಯಾವುದೋ ಕೆ’ಟ್ಟ ಶಕ್ತಿಯ ಪ್ರಭಾವ ಎಂದು ಅನುಮಾನ ಬರದೇ ಇರದು.
ಆಗ ಇವುಗಳ ಪರಿಹಾರ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಇದು ಮುಂದುವರೆದು ಅಷ್ಟ ಧರಿದ್ರಗಳು ಕಾಡಲು ಶುರುವಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಮೊದಲಿನಂತೆ ಜೀವನವನ್ನು ಸಂತೋಷದಿಂದ ಕಳೆಯಬೇಕು ಎಂದರೆ ಈಗ ನಾವು ಹೇಳುವ ಈ ಒಂದು ಸಣ್ಣ ಉಪಾಯ ಮಾಡಿ ಸಾಕು.
ಕೆಲವೊಮ್ಮೆ ಜೀವನದಲ್ಲಿ ನಂಬಿಕೆ ಇಟ್ಟು ಮಾಡುವ ಸಣ್ಣ ಸಣ್ಣ ಉಪಾಯಗಳಿಂದ ಬಹಳ ಉತ್ತಮ ಪರಿಣಾಮಗಳು ಸಿಗುತ್ತವೆ. ಅದನ್ನು ನಮ್ಮ ಹಿರಿಯರು ತಿಳಿಸಿ ಹೋಗಿದ್ದಾರೆ ಅಂತಹದೇ ಒಂದು ಉತ್ತಮವಾದ ಪರಿಹಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಸಾಮಾನ್ಯವಾಗಿ ಈ ರೀತಿಯ ಸಮಸ್ಯೆಗಳು ಆದಾಗ ಅದನ್ನು ನರ ದೃಷ್ಟಿ ದೋ’ಷದಿಂದ ಅಥವಾ ಏಳಿಗೆ ಸಹಿಸಲಾಗದೆ ಹಿತ ಶ’ತ್ರುಗಳು ಮಾಡುವ ಪ್ರಯೋಗಗಳ ಪರಿಣಾಮ ಎಂದು ಭಾವಿಸಲಾಗುತ್ತದೆ. ಈ ರೀತಿ ಅನುಮಾನಗಳಿದ್ದಾಗ ಅವುಗಳು ಕಳೆಯಬೇಕು ಎಂದರೆ ಬಿಳಿ ಸಾಸಿವೆ ಹಾಗೂ ಉಪ್ಪಿನಿಂದ ದೃಷ್ಟಿ ತೆಗೆದುಕೊಳ್ಳಬೇಕು ಇದನ್ನು ಮನೆಯಲ್ಲಿ ಯಾರಾದರೂ ಹಿರಿಯರು ಇದ್ದರೆ ಅವರಿಂದ ಮಾಡಿಸಿಕೊಳ್ಳಬಹುದು ಅಥವಾ ನಮಗೆ ನಾವೇ ಕೂಡ ಮಾಡಿಕೊಳ್ಳಬಹುದು.
ಈ ರೀತಿ ಬಿಳಿ ಸಾಸಿವೆ ಹಾಗೂ ಉಪ್ಪಿನಿಂದ ದೃಷ್ಟಿ ತೆಗೆದು ನಿವಾಳಿಸಿದ ಬಿಳಿ ಸಾಸಿವೆ ಹಾಗೂ ಉಪ್ಪನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಮಾಡಿದ ಮೇಲೆ ಅದ್ಭುತ ರೀತಿಯಲ್ಲಿ ಪರಿಣಾಮಗಳನ್ನು ಕಾಣುತ್ತೀರಿ. ಒಂದು ವೇಳೆ ಈ ರೀತಿ ಆದಮೇಲೂ ಕೂಡ ಹಣಕಾಸಿನ ಸಮಸ್ಯೆ ಮುಂದುವರೆದಿದೆ, ಆರ್ಥಿಕವಾಗಿ ಮುಗ್ಗಟ್ಟು ಎದುರಿಸುತ್ತಿದ್ದೀರಿ ಎಂದರೆ.
ಮಹಾತ್ರಿಪುರೇಶ್ವರಿ ಯಂತ್ರ ಅಥವಾ ತುಳಸಿ ಯಂತ್ರ ಅಥವಾ ಕಾಲಭೈರವ ಯಂತ್ರ ಇವುಗಳಲ್ಲಿ ಯಾವುದಾದರೂ ಒಂದನ್ನು ಧಾರಣೆ ಮಾಡಿ. ಈ ರೀತಿ ಮಾಡುವುದರಿಂದ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಒಳ್ಳೆ ಬದಲಾವಣೆಗಳು ನಿಮ್ಮ ಬದುಕಿನಲ್ಲಿ ಉಂಟಾಗುತ್ತದೆ. ಬಹಳ ಉಪಯುಕ್ತವಾದ ಮಾಹಿತಿ ಇದಾಗಿತ್ತು ತಪ್ಪದೇ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.