ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಳೆದು ಒಂದು ವರ್ಷದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯ ಪ್ರೋಮೋ ಓಡಾಡುತ್ತಿದ್ದ ದಿನದಿಂದಲೇ ಈ ಧಾರಾವಾಹಿಯು ಗೆಲ್ಲುವ ಭರವಸೆ ಇತ್ತು. ಯಾಕೆಂದರೆ ಮೂರು ಹೆಣ್ಣು ಮಕ್ಕಳನ್ನು ಪಡೆದು ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ಮಕ್ಕಳನ್ನು ಸಾಕಿ ಸಲಹಿ ಅವರನ್ನು ಹಠದಿಂದ ಎತ್ತರದ ಸ್ಥಾನಕ್ಕೆ ತರುವ ಗಟ್ಟಿಗಿತ್ತಿ ಪುಟ್ಟಕ್ಕನ ಕಥೆ ಇದಾಗಿತ್ತು.
ಮಂಡ್ಯ ಭಾಗದ ಹಳ್ಳಿಯೊಂದರಲ್ಲಿ ನಡೆದಿರುವ ಕಥೆಯಂತಿರುವ ಈ ಧಾರಾವಾಹಿಯ ಶೂಟಿಂಗ್ ಕೂಡ ಅದೇ ರೀತಿಯ ಸೆಟ್ಟಿನಲ್ಲಿ ನಡೆಯುತ್ತಿದೆ. ಈ ಧಾರಾವಾಹಿ ಕಥಾಹಂದರಕ್ಕೆ ಮನಸೋತಿರುವ ಜನ ಪ್ರತಿದಿನ ಕೂಡ ತಪ್ಪದೇ ಇದನ್ನು ನೋಡುತ್ತಾರೆ. ಟಿ.ಆರ್.ಪಿ ವಿಷಯದಲ್ಲಿ ಕೂಡ ಹಲವು ವಾರಗಳಿಂದಲೇ ನಂಬರ್ ಒನ್ ಪಟ್ಟಿಯಲ್ಲಿ ಇರುವ ಇದು ದಿನದಿಂದ ದಿನಕ್ಕೆ ತನ್ನ ಪ್ರೇಕ್ಷಕರ ಸಂಖ್ಯೆಯನ್ನು ಇಮ್ಮಡಿ ಗೊಳಿಸಿಕೊಳ್ಳುತ್ತಿದೆ.
ಜೊತೆಗೆ ಈ ಧಾರಾವಾಹಿಯ ಮುಖ್ಯ ಆಕರ್ಷಣೆ ಏನು ಎಂದರೆ ಇಲ್ಲಿ ಪುಟ್ಟಕ್ಕನ ಪಾತ್ರ ಮಾಡಿರುವುದು ಕನ್ನಡದ ಹೆಮ್ಮೆಯ ಹಿರಿಯ ಕಲಾವಿದ ಉಮಾಶ್ರೀ ಅವರು ಎನ್ನುವುದು. ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರಕ್ಕೆ ಎಷ್ಟು ಜೀವ ತುಂಬಿದ್ದಾರೆ ಎಂದರೆ ಆ ಪಾತ್ರವೇ ಅವರಂತೆ ಅಭಿನಯಿಸಿದ್ದಾರೆ. ಉಮಾಶ್ರೀ ಅವರು ಎಂತಹ ಮೇರು ಕಲಾವಿದೆ ಎನ್ನುವುದರ ಬಗ್ಗೆ ಎರಡು ಮಾತಿಲ್ಲ ಆದರೆ ಈ ಪಾತ್ರದಲ್ಲಿ ಕೂಡ ಅವರು ಆ ಪಾತ್ರದೊಳಗೆ ತಾವೇ ಆವಾಹನೆ ಆಗಿದ್ದಾರೆ ಎನಿಸುತ್ತದೆ.
ಅವರ ನಿಜ ಜೀವನಕ್ಕೂ ಕೂಡ ಬಹಳ ಹತ್ತಿರವಾಗಿರುವ ಕಥೆಯಂತಿರುವ ಈ ಕಥೆಯಿಂದ ಅದಕ್ಕೆ ಇನ್ನಷ್ಟು ಜೀವಂತಿಕೆ ಹೆಚ್ಚಾಗಿದೆ. ಮತ್ತು ಉಮಾಶ್ರೀ ಅವರ ಜೀವನಾನುಭವದ ಮಾತುಗಳು ಈ ಕಥೆಗೆ ಇನ್ನಷ್ಟು ಶಕ್ತಿ ತುಂಬಿ ಸಂಭಾಷಣೆಯಿಂದಲೇ ಧಾರಾವಾಹಿಯ ಹಿರಿಮೆ ಇನ್ನಷ್ಟು ಹೆಚ್ಚಾಗಿದೆ ಎಂದು ಸಹಾ ಹೇಳಬಹುದು.
ಈ ಧಾರಾವಾಹಿಯ ಇತರ ಪಾತ್ರಗಳಾದ ಸಹನಾ, ಸ್ನೇಹ ಮತ್ತು ಸುಮಾ ಎನ್ನುವ ಮೂರು ಮಕ್ಕಳ ಪಾತ್ರಗಳು ಹಾಗೂ ಸಹನಾ ಅವರನ್ನು ಪ್ರೀತಿಸುವ ಆ ಊರಿನ ಶಾಲಾ ಶಿಕ್ಷಕರಾದ ಮುರಳಿ ಎನ್ನುವ ಪಾತ್ರ, ಊರಿನ ಗೌಡ್ತಿ ಆದ ಬಂಗಾರಮ್ಮ ಮತ್ತು ಆತನ ಮಗನಾದ ಕಂಠಿಯ ಪಾತ್ರ, ಕಂಠಿಯ ಸಹೋದರಿ ವಸುಧಾ ಮತ್ತು ಆತನ ಪತಿ ಚಂದ್ರು ಹಾಗೂ ಚಂದುವಿನ ತಾಯಿ ಮತ್ತು ಪುಟ್ಟಕ್ಕನ ಪತಿ ಹಾಗೂ ಪತಿಯ ಎರಡನೇ ಹೆಂಡತಿ ರಾಜೇಶ್ವರಿ.
ರಾಜೇಶ್ವರಿಯ ತಮ್ಮ ಕಾಳಿಯ ಪಾತ್ರಗಳು ಧಾರಾವಾಹಿ ಇನ್ನಿತರ ಪ್ರಮುಖ ಪಾತ್ರಗಳು ಆಗಿದ್ದು. ಈ ಪ್ರತಿಯೊಂದು ಪಾತ್ರ ಗಳಿಗೂ ಕೂಡ ಈಗ ಅನೇಕ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ತೆರೆ ಮೇಲೆ ಬಣ್ಣ ಹಚ್ಚಿ ಪಾತ್ರಕ್ಕೆ ಹೊಂದ ಹಾಗೆ ಒಬ್ಬೊಬ್ಬರು ಕೂಡ ವಿಭಿನ್ನ ರೀತಿಯ ಕಾಶ್ಚ್ಯೂಮ್ ತೊಟ್ಟು ಪಾತ್ರಕ್ಕೆ ನ್ಯಾಯ ದಕ್ಕಿಸುವಂತೆ ನಟಿಸುತ್ತಿರುವ ಇವರುಗಳು ಮೇಕಪ್ ಇಲ್ಲದೆಯೂ ಸಹ ಅಷ್ಟೇ ಸುಂದರವಾಗಿದ್ದಾರೆ.
ಧಾರಾವಾಹಿಯಲ್ಲಿ ನಟಿಸಿರುವ ಎಲ್ಲಾ ಪ್ರಮುಖ ಪಾತ್ರದಾರಿಗಳು ಮೇಕಪ್ ಇಲ್ಲದ ಸಾಮಾನ್ಯ ದಿನಗಳಲ್ಲಿ ಹೇಗಿರುತ್ತಾರೆ ಎನ್ನುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇವುಗಳನ್ನು ಅವರ ವೈಯಕ್ತಿಕ ಸೋಶಿಯಲ್ ಮೀಡಿಯಾ ಖಾತೆಗಳಿಂದ ಆರಿಸಲಾಗಿದ್ದು ಪ್ರತಿಯೊಬ್ಬರೂ ಕೂಡ ತೀರ ಸಾಮಾನ್ಯವಾಗಿ ಸಾಮಾನ್ಯ ಜೀವನದಲ್ಲಿ ಇದ್ದಾಗ ಸೆಲ್ಫಿ ತೆಗೆದುಕೊಂಡಿರುವ ಮತ್ತು ಸ್ನೇಹಿತರ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಇವಾಗಿವೆ.
ಮೇಕಪ್ ಇಲ್ಲದೆಯೂ ಸಹ ಯಾವ ತಾರೆಗೂ ಕಡಿಮೆ ಇಲ್ಲದಂತೆ ಇವರೆಲ್ಲರೂ ಕಂಗಳಿಸುತ್ತಿದ್ದಾರೆ. ನೀವು ಸಹ ಈ ವಿಡಿಯೋ ನೋಡಿ ನಿಮಗೆ ಅವರು ಧಾರಾವಾಹಿಯಲ್ಲಿ ಮೇಕಪ್ ಅಲ್ಲಿ ಇರುವುದು ಇಷ್ಟವೋ ಅಥವಾ ತೀರ ಸರಳವಾಗಿ ಸಾಮಾನ್ಯವಾಗಿ ಇರುವ ಫೋಟೋಗಳು ಇಷ್ಟವೋ ಎನ್ನುವ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.