ತಾಜ್ ಮಹಲ್ ಚಾರ್ಮಿನಾರ್ ಇಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟ ಖ್ಯಾತ ನಿರ್ದೇಶಕ ಆರ್ ಚಂದ್ರು (R.Chandru) ಅವರ ಮತ್ತೊಂದು ಬಹು ನಿರೀಕ್ಷಿತ ಚಿತ್ರ ರಿಲೀಸ್ ಗೆ ರೆಡಿಯಾಗಿ ನಿಂತಿದೆ. ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kicha Sudeep) ಅವರ ಕಾಂಬಿನೇಷನ್ ನ ಎರಡನೇ ಚಿತ್ರವಾದ ಕಬ್ಜಾ (Kabzaa) ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಮೊನ್ನೆ ಅಷ್ಟೇ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು ಸಿನಿಮಾ ಬಿಡುಗಡೆಗಾಗಿ ಇಡೀ ನಾಡಿನಾದ್ಯಂತ ಕಲಾಪೇಕ್ಷಕರು ಅದು ಕುಳಿತಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರು ಈ ಸಿನಿಮಾವನ್ನು ಅಪ್ಪು ಅವರ ಹುಟ್ಟುಹಬ್ಬದ (Appu birthday) ಪ್ರಯುಕ್ತ ಮಾರ್ಚ್ 17 ರಂದು ಬಿಡುಗಡೆ ಮಾಡುತ್ತೇವೆ, ಈ ಸಿನಿಮಾವನ್ನು ಅಪ್ಪು ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ಕೂಡ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಮಾಧ್ಯಮದವರಿಗೆ ಸಿಕ್ಕ ಆರ್.ಚಂದ್ರು ಅವರನ್ನು ಮಾಧ್ಯಮದವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಮುಖವಾಗಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೂ ಮುಂಚೆ ಫೆಬ್ರವರಿ ತಿಂಗಳಿನಲ್ಲಿಯೇ ದರ್ಶನ್ (Darshan) ಅವರ ಹುಟ್ಟು ಹಬ್ಬ ಬರುತ್ತಿದೆ ಅಂದು ಸಿನಿಮಾ ಬಿಡುಗಡೆ ಮಾಡಬಹುದಿತ್ತಲ್ಲ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.
ಅದಕ್ಕೆ ಆರ್ ಚಂದ್ರು ಅವರು ಪುನೀತ್ ರಾಜಕುಮಾರ್ ಅವರಿಗೆ ಕಬ್ಜಾ ಸಿನಿಮಾದ ಹಲವು ವಿಷಯಗಳನ್ನು ಹೇಳಿದ್ದೆ, ನನಗೆ ಸಿನಿಮಾ ಬಗ್ಗೆ ಕೆಲವು ಸಲಹೆಗಳನ್ನು ಅವರು ಕೊಟ್ಟಿದ್ದರು. ಟೀಸರ್ ರಿಲೀಸ್, ಅಥವಾ ಟೈಟಲ್ ಲಾಂಚ್ ಹೀಗೆ ಯಾವುದಾದರು ಒಂದು ಕಾರ್ಯಕ್ರಮವನ್ನು ಅವರ ಕೈಯಿಂದ ಮಾಡಿಸಬೇಕು ಎಂದು ಆಸೆ ಪಟ್ಟಿದ್ದೆ ಅವರು ಸಹ ಒಪ್ಪಿಕೊಂಡು ಬರುತ್ತೇನೆ ಎಂದು ಹೇಳಿದ್ದರು ಆದರೆ ಇಂದು ಅವರು ನಮ್ಮೊಂದಿಗೆ ಇಲ್ಲ ಎನ್ನುವ ದುಃಖ ಎಲ್ಲರಂತೆ ನನಗೂ ಕಾಡುತ್ತಿದೆ.
ಹಾಗಾಗಿ ಅವರ ನೆನಪಿಗಾಗಿ ಪ್ರೀತಿಯಿಂದ ಅವರಿಗೆ ಅರ್ಪಿಸುತ್ತಿದ್ದೇನೆ ಅಷ್ಟೇ ಆದರೆ ದರ್ಶನ್ ಅವರಿಗಾಗಿ ಕಬ್ಜಾ ಮತ್ತು ಕೆಜಿಎಫ್ ರೇಂಜಿಗೆ ಸಿನಿಮಾ ಒಂದನ್ನು ಮಾಡೋಣ. ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ನಿರ್ದೇಶಕರಿಗೆ ಕೂಡ ಈ ಆಸೆ ಇರುತ್ತದೆ ದರ್ಶನ್ ಅವರೊಂದಿಗೆ ಸಿನಿಮಾ ಮಾಡಬೇಕು ಎಂದು ನಾನು ಸಹ ಅಂಥವರಲ್ಲಿ ಒಬ್ಬ ಜೊತೆಗೆ ನಾನು ಕೂಡ ದರ್ಶನ್ ಅವರ ಅಭಿಮಾನಿ.
ದರ್ಶನ್ ಅವರಿಗಾಗಿ ಸಿನಿಮಾ ಮಾಡ್ತೇನೆ ಆದರೆ ಅನೌನ್ಸ್ ಮಾಡುವುದು ದೊಡ್ಡದಲ್ಲ ಅದಕ್ಕೆ ಸಮಯ ಕೂಡಿ ಬರಬೇಕು, ಕಥೆ ಅವರ ಡೇಟ್ಸ್ ಎಲ್ಲವು ಹೊಂದಬೇಕು, ಒಂದು ದಿನ ಆಗುತ್ತದೆ ಎಂದಿದ್ದಾರೆ. ಜೊತೆಗೆ ಸಿನಿಮಾ ಬಜೆಟ್ ಇತ್ತೀಚೆಗೆ ಹೆಚ್ಚಾಗುತ್ತಿದೆ ಮುಂದಿನ ಸಿನಿಮಾಗಳಲ್ಲಿ ನೀವು ಅದೇ ರೀತಿ ಪ್ಲಾನ್ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಕಾಂತರಾ ಸಿನಿಮಾ ಇದಕ್ಕೆ ಪಾಠ ಆಗಿದೆ, ಕಂಟೆಂಟ್ ಮುಖ್ಯ ಬಜೆಟ್ ಅಲ್ಲ ಎಂದು.
ನಾವು ಸಹ ಅದೇ ರೀತಿ ಹೋಗುತ್ತೇವೆ ಎಂದಿದ್ದಾರೆ ಜೊತೆಗೆ ಸಿನಿಮಾ ಹಿಟ್ ಹಾಗೂ ಫ್ಲಾಫ್ ಗಳ ಬಗ್ಗೆ ಕೂಡ ಮಾತನಾಡಿದ ಇವರು ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ವೆಸ್ಟ್ ಮಾಡುವುದು ಕೂಡ ಒಂದು ಉದ್ಯಮ. ನಿರ್ಮಾಪಕರಿಗೆ ಅವರ ಬಜೆಟ್ ಮೇಲೆ ಎಷ್ಟು ಬಂದರೂ ಸಂಬಳ ಇದ್ದಂತೆ. ಅವರ ಬಜೆಟ್ ಮೇಲೆ ಹಣ ಬಂದರೆ ಸಾಕು ಸಿನಿಮಾ ಗೆದ್ದಂತೆ. ಇಲ್ಲಿ ಎಲ್ಲರೂ ಮಾಡುತ್ತಿರುವುದು ಕನ್ನಡ ಸಿನಿಮಾ ಇಂಡಸ್ಟ್ರಿಗಾಗಿ ಎನ್ನುವುದು ಮುಖ್ಯ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ