Sunday, June 4, 2023
HomeViral Newsಮೋದಿ ಸಿನಿಮಾನೇ ಗೆಲ್ಸೋಕೆ ಆಗ್ಲಿಲ್ಲ ಪಠಾಣ್ ಗೆ ಬಾಯ್ಕಾಟ್ ಮಾಡಲು ಹೊರಟಿದ್ರು ಆದ್ರೆ ಆ ಸಿನಿಮಾ...

ಮೋದಿ ಸಿನಿಮಾನೇ ಗೆಲ್ಸೋಕೆ ಆಗ್ಲಿಲ್ಲ ಪಠಾಣ್ ಗೆ ಬಾಯ್ಕಾಟ್ ಮಾಡಲು ಹೊರಟಿದ್ರು ಆದ್ರೆ ಆ ಸಿನಿಮಾ ಸೋಲ್ತಾ.? ಎಂದು ವ್ಯಂಗ್ಯ ಮಾಡಿದ ಪ್ರಕಾಶ್ ರೈ.

 

ಕೇರಳದ ಸಂವಾದ ಒಂದರಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ರೈ (Prakash Rai) ಅವರು ಮಾತಿನ ನಡುವೆ ಸಿನಿಮಾ ವಿಚಾರವನ್ನು ತೆಗೆದುಕೊಂಡಿದ್ದಾರೆ. ಪಠಾಣ್ (Pataan) ಸಿನಿಮಾದ ಗೆಲುವು ಹಾಗೂ ಮೋದಿ ಸಿನಿಮಾದ ಸೋಲಿನ ನಡುವೆ ತಾಳೆ ಹಾಕಿ ವ್ಯಂಗ್ಯದ ನುಡಿಗಳನ್ನಾಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ನ ಶಾರುಖಾನ್ (Shar ruk khan) ಹಾಗೂ ದೀಪಿಕಾ ಪಡುಕೋಣೆ (Deepika padukone) ಅವರು ಮುಖ್ಯ ಭೂಮಿಕೆಯಲ್ಲಿರುವ ಪಠಾಣ್ ಸಿನಿಮಾವನ್ನು ನಾನಾ ಕಾರಣಗಳಿಂದ ಬಾಯ್ ಕಟ್ ಮಾಡುವಂತೆ ಮಾತುಕತೆ ನಡೆಯುತ್ತಿತ್ತು.

ಆ ಸಮಯದಲ್ಲಿ ಇನ್ನೇನು ಚಿತ್ರ ಬ್ಯಾನ್ ಆಗೇ ಬಿಡುತ್ತದೆ ಎನ್ನುವಷ್ಟರ ಮಟ್ಟಕ್ಕೆ ಎಲ್ಲ ಕಡೆ ಕೂಗು ಜೋರಾಗಿತ್ತು. ಆದರೆ ಇದೆಲ್ಲವನ್ನು ದಾಟಿ ಇಂದು ಸಿನಿಮಾ ಗೆದ್ದು ಬಿಟ್ಟಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡುತ್ತಿರುವ ಇದು ಒಟ್ಟು ಎಲ್ಲಾ ಕಲೆಕ್ಷನ್ ಸೇರಿಸಿ 12 ದಿನಕ್ಕೆ 900 ಕೋಟಿಯನ್ನು ಬಾಚಿದೆ. ಈ ಉದಾಹರಣೆಯನ್ನು ಇಟ್ಟುಕೊಂಡು ಪ್ರಕಾಶ್ ರೈ ಈಗ ಕೊಂಕಾಡುತ್ತಿದ್ದಾರೆ. ಪಠಾಣ್ ಸಿನಿಮಾ 700 ಕೋಟಿ ದಾಟಿದೆ, ಆ ಸಿನಿಮಾ ಬಾಯ್ ಕಟ್ ಗ್ಯಾಂಗಿನವರು ಬಾಯ್ ಕಟ್ ಮಾಡಲು ಹೋಗಿದ್ದರು

ಆದರೆ ಅವರಿಗೆ ಅವರ ಮೋದಿ (Modi) ಸಿನಿಮಾವನ್ನು ಮೂವತ್ತು ಕೋಟಿಯ ಸಿನಿಮಾ ಆಗಿ ಕೂಡ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಪ್ರಕಾಶ್ ರೈ ಅವರು ಅವರೆಲ್ಲ ಬೊಗಳುತ್ತಾರೆ ಅಷ್ಟೇ ಕಚ್ಚುವುದಿಲ್ಲ ಎಂದಿದ್ದಾರೆ. ಜೊತೆಗೆ ದಿ ಕಾಶ್ಮೀರಿ ಫೈಲ್ (The Kashmiri Files) ಸಿನಿಮಾ ಬಗ್ಗೆ ಕೂಡ ಮಾತನಾಡಿ. ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಇಂಟರ್ನ್ಯಾಷನಲ್ ವಿಮರ್ಶಕರು ಮತ್ತು ಜೂರಿ ಮೆಂಬರ್ಸ್ ತೆಗಳಿದ್ದಾರೆ.

ಅದೊಂದು ನಾನ್ಸೆನ್ಸ್ ಸಿನಿಮಾ ಆದರೆ ಆ ಸಿನಿಮಾದ ನಿರ್ದೇಶಕ ಕೇಳುತ್ತಿದ್ದಾನೆ ನನಗೆ ಯಾಕೆ ಆಸ್ಕರ್ ಬಂದಿಲ್ಲ ಎಂದು ಎನ್ನುತ್ತಾ ಆಡಿಕೊಂಡಿದ್ದಾರೆ. ಪ್ರೋಪಗಾಂಡ (Propaganda) ಸಿನಿಮಾ ಮಾಡಲೆಂದೇ ಅವರು ಸುಮಾರು 2000 ಕೋಟಿ ಅಷ್ಟು ಖರ್ಚು ಮಾಡುತ್ತಾರೆ, ಆದರೆ ಪ್ರತಿ ಬಾರಿ ಕೂಡ ಪ್ರೇಕ್ಷಕನನ್ನು ಮೂರ್ಖ ಮಾಡಲು ಆಗುವುದಿಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕೆಜಿಎಫ್ ಟೂ (KGF2) ಸಿನಿಮಾ ರಿಲೀಸ್ ಆದ ವೇಳೆಯಲ್ಲಿ ಸಹ ಆ ಸಿನಿಮಾದಲ್ಲಿ ಪ್ರಕಾಶ್ ರಾಜ್ ಅವರು ಇದ್ದಾರೆ ಎನ್ನುವ ಕಾರಣಕ್ಕೆ ಹಲವು ಕಡೆ ಸಿನಿಮಾವನ್ನು ಬ್ಯಾನ್ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಆದರೂ ಸಹ ಅದೆಲ್ಲದರ ನಡುವೆ ಕೆಜಿಎಫ್ ಟೂ ಸಿನಿಮಾ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲಿ ಹೊಸ ದಾಖಲೆಯನ್ನು ಬರೆದು ಬಿಟ್ಟಿತ್ತು. ಪಠಾಣ್ ಸಿನಿಮಾದಲ್ಲಿ ನಾಯಕ ನಟಿಯಾದ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿ ಭೇಷ್ರಾಮ್ ರಂಗ್ ಹಾಡೊಂದರಲ್ಲಿ ಬೀಚ್ ಮುಂದೆ ಹೆಜ್ಜೆ ಹಾಕಿದ್ದರು.

ಇದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕೆ ಸಿನಿಮಾದ ಬ್ಯಾನ್ ಮಾಡುವ ತನಕ ವಿಚಾರ ಹೋಗಿತ್ತು. ಸಿನಿಮಾ ಬಿಡುಗಡೆ ಆದ ಮೇಲೂ ಕೂಡ ಹಿಂದೂ ಕಾರ್ಯಕರ್ತರು ಹಾಗೂ ಭಜರಂಗಿ ದಳದವರು ಅನೇಕ ಕಡೆ ಥಿಯೇಟರ್ ಗೆ ನುಗ್ಗಿ ದಾಂಧಲೇ ನಡೆಸಿದ್ದಾರೆ. ಇದೆಲ್ಲದರ ನಡುವೆ ಹಲವು ವರ್ಷಗಳಿಂದ ಬಾಯಿ ಬಿಟ್ಟುಕೊಂಡು ಬಾಲಿವುಡ್ ಕಾಯುತ್ತಿದ್ದ ಒಂದು ಹಿಟ್ ಪಠಾಣ್ ಸಿನಿಮಾದಿಂದ ಸಿಕ್ಕಿದೆ ಎಂದು ಹೇಳಬಹುದು. ಸದ್ಯಕ್ಕೆ ಇಡೀ ಬಾಲಿವುಡ್ ಈಗ ಆ ಸಂಭ್ರಮಾಚರಣೆಯಲ್ಲಿದೆ.