ಇತ್ತೀಚೆಗಷ್ಟೇ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡಿಗೆ ಎಲ್ಲಾ ಕಡೆಯೂ ಅದ್ಭುತವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಪಡ್ಡೆಹುಡುಗರಿಗೆ ಹಿಡಿಸುವಂತಹ ಸಾಹಿತ್ಯವನ್ನು ಶಬ್ಬೀರ್ ಅಹ್ಮದ್ ರವರು ನೀಡಿದ್ದಾರೆ. ನಕಾಶ್ ಅಜಿಜ್ ಹಾಗೂ ಸುನಿಧಿ ಚೌಹಾನ್ ರವರು ಅದ್ಭುತವಾಗಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ರವರ ಸಂಗೀತ ನಿರ್ದೇಶನಕ್ಕೆ ತಕ್ಕಂತೆ ಜಾನ್ನಿ ಮಾಸ್ಟರ್ ಅತ್ಯುತ್ತಮ ನೃತ್ಯವನ್ನು ನೀಡಿದ್ದಾರೆ. ಇದಕ್ಕೆ ತಕ್ಕಂತೆ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮೋಡಿ ಮಾಡಿದ್ದಾರೆ. ಸದ್ಯಕ್ಕೆ ಇನ್ಸ್ಟಾಗ್ರಾಂ ಫೇಸ್ಬುಕ್ ಗಳಲ್ಲಿ ಈ ಹಾಡಿನದ್ದೆ ಸದ್ದು ಹಾಗೂ ಇನ್ಸ್ಟಾ ರೀಲ್ಸ್ ಗಳಲ್ಲಿಯೂ ಈ ನೃತ್ಯದ ತುಣುಕುಗಳೆ ಕಾಣಸಿಗುತ್ತದೆ. ಕನ್ನಡದಲ್ಲಷ್ಟೇ ಅಲ್ಲದೇ ಹಿಂದಿ,ತೆಲುಗು, ಮಲೆಯಾಳಂ,ತಮಿಳು ಮುಂತಾದ ಭಾಷೆಗಳಲ್ಲಿ ಈ ಹಾಡಿನದ್ದೇ ಹವಾ.
ಕಿಚ್ಚ ಸುದೀಪ್ ರವರು ಇದೇ ರೀತಿ ಹಿಂದೆಯೂ ಸಹ ತಮ್ಮ ಚಿತ್ರಗಳ ಹಾಗೂ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. ಹಿಂದೆ ದಿ ವಿಲನ್ ಚಿತ್ರದ ಹಾಡುಗಳ ಮೂಲಕ ಶಿವಣ್ಣ ಅವರ ಜೊತೆ ಕಿಚ್ಚ ಸುದೀಪ್ ರವರು ಹೆಜ್ಜೆಹಾಕಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಇದೇ ಸಾಲಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಸಹ ಮುನ್ನುಗ್ಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಅನುಪ್ ಭಂಡಾರಿಯವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ವಿಕ್ರಾಂತ್ ರೋಣ ಟ್ರೈಲರ್ ಪ್ರೇಕ್ಷಕರ ಮನಸೂರೆಗೊಳಿಸಿದೆ. ಈ ಚಿತ್ರವು 3D ಟೆಕ್ನಾಲಜಿ ಯೊಂದಿಗೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಸಾಮಾನ್ಯವಾಗಿ ನಮ್ಮ ಸ್ಯಾಂಡಲ್ವುಡ್ನಲ್ಲಿ ಡಿ ಬಾಸ್ ಶಿವಣ್ಣ ಕಿಚ್ಚ ಸುದೀಪ್ ರವರ ಚಿತ್ರಗಳೆಂದರೆ ಅಭಿಮಾನಿಗಳಿಗೆ ಹಬ್ಬ.
ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಯಾವುದೇ ಚಿತ್ರದ ಹಾಡುಗಳು ಅಥವಾ ನೃತ್ಯಗಳು ಬಿಡುಗಡೆಯಾದರೆ ಸಾಕು ನಮ್ಮ ಟ್ಯಾಲೆಂಟ್ ಮೇಕರ್ ಗಳು ಅವುಗಳನ್ನು ಸಿಂಕ್ ಮಾಡುವುದರಲ್ಲಿ ನಿಸ್ಸೀಮರು. ಇದೇ ರೀತಿ ವಿಕ್ರಾಂತ್ ರೋಣ ಚಿತ್ರದ ರಕ್ಕಮ್ಮ ಹಾಡನ್ನು ಅನೇಕರು ತಮ್ಮ ಬುದ್ಧಿಗೆ ತಕ್ಕಂತೆ ಸಿಂಕ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಇದೇ ರೀತಿ mysore mango ಎನ್ನುವ ಯುಟ್ಯೂಬ್ ಚಾನೆಲ್ ನವರು ಡಾಕ್ಟರ್ ವಿಷ್ಣುವರ್ಧನ್ ನಟಿಸಿರುವ ಚಿನ್ನದಂತ ಮಗ ಚಿತ್ರದ ಈ ಎದೆಯ ವೀಣೆ ಎನ್ನುವ ಹಾಡಿನ ನೃತ್ಯಕ್ಕೆ ರಕ್ಕಮ್ಮ ಹಾಡನ್ನು ಸಿಂಕ್ ಮಾಡಿದ್ದಾರೆ. ಈ ರಕ್ಕಮ್ಮ ಹಾಡು ವಿಷ್ಣುವರ್ಧನ್ ನಟಿಸಿರುವ ಈ ಚಿತ್ರದ ಹಾಡಿಗೆ ಎಷ್ಟು ಹೊಂದಿಕೆ ಆಗಿದೆ ಎಂದರೆ ರಕ್ಕಮ್ಮ ಹಾಡಿಗೆ ವಿಷ್ಣುವರ್ಧನ್ ಹಾಗೂ ಜಯಮಾಲಿನಿಯವರೇ ಸ್ಟೆಪ್ ಹಾಕಿದ್ದಾರೆನೋ ಎನಿಸುವಂತೆ ಅದ್ಭುತವಾಗಿ ಮಾಡಿದ್ದಾರೆ.
ಚಿನ್ನದಂತ ಮಗ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಜಯಮಾಲಿನಿ ಅವರು ಈ ಎದೆಯ ವೀಣೆ ಎಂಬ ಹಾಡಿಗೆ ಅದ್ಭುತವಾಗಿ ನೃತ್ಯ ಪ್ರದರ್ಶಿಸಿದ್ದಾರೆ. ಅಷ್ಟೇ ದಿಟ ಎನ್ನುವ ಹಾಗೆ ರಕ್ಕಮ್ಮ ಹಾಡನ್ನು ಈ ನೃತ್ಯಕ್ಕೆ ಸಿಂಕ್ ಮಾಡಿದಾಗ ಅಲ್ಲಿ ಕಂಡುಬಂದಿದ್ದು ನಿಜಕ್ಕೂ ಪ್ರೇಕ್ಷಕರೇ ಹುಬ್ಬೇರಿಸುವಂತಿದೆ mysore mango ಯುಟ್ಯೂಬ್ ಚಾನೆಲ್ ನವರ ಈ ಸಿಂಕ್ ಮಾಡುವ ಬುದ್ಧಿವಂತಿಕೆಗೆ ನೋಡುಗರೆಲ್ಲರೂ ತಲೆದೂಗಲೇಬೇಕಾಗಿದೆ. ಇನ್ನೂ ಅನೇಕರು ಇದೇ ರೀತಿ ರಿಮಿಕ್ಸ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ ರಕ್ಕಮ್ಮ ಹಾಡಿಗೆ ವಿಷ್ಣುವರ್ಧನ್ ಹಾಗೂ ಜಯಮಾಲಿನಿಯವರ ಈ ರೆಟ್ರೋ ಡಾನ್ಸ್ ಅದ್ಭುತವಾಗಿ ಹೊಂದಿಕೊಂಡಿದೆ. ಈ ಹಾಡನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಕಾಮೆಂಟ್ ಮಾಡಿ, ಹಾಡು ಇಷ್ಟ ಆದರೆ ಲೈಕ್ ಕೊಟ್ಟ ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ