ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿಯು ತನ್ನದೇ ಆದ ಹಲವು ವಿಶೇಷತೆಯಿಂದ ಕನ್ನಡಿಗರ ಮನಸ್ಸನ್ನು ಸೆಳೆದಿದೆ. ಕಥೆಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ನೋಡಿಗರ ಮನಸ್ಸಿನಲ್ಲಿ ತುಂಬಾ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಿದೆ. ಕಥೆಯ ಮುಖ್ಯಪಾತ್ರಧಾರಿ ಭುವನೇಶ್ವರಿ ಅಲಿಯಾಸ್ ಸೌಪರ್ಣಿಕ ಅವರು ಕನ್ನಡ ಭಾಷೆ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಧಾರಾವಾಹಿಯ ತುಂಬಾ ಅವರು ಕನ್ನಡದಲ್ಲಿ ಮಾತನಾಡುವುದು, ಆಫೀಸ್ ಕೆಲಸದ ಜೊತೆ ಕನ್ನಡ ಕಲಿಸುವ ಟೀಚರ್ ಆಗಿ ಕೆಲಸ ಮಾಡುತ್ತಿರುವುದು ಈಗಿನ ಕಾಲದ ಎಲ್ಲಾ ಎಂಗೆಳೆಯರ ಮನಸ್ಸನ್ನು ಆಕರ್ಷಿಸಿದೆ. ಜೊತೆಗೆ ಕಥೆಯ ನಾಯಕ ಹರ್ಷನ ಪಾತ್ರವೂ ಕೂಡ ಅಷ್ಟೇ ಸೊಗಸಾಗಿದೆ. ಒಂದು ಕಂಪನಿಯ ಸಿಇಒ ಆಗಿ ಜವಾಬ್ದಾರಿಗಳನ್ನು ಹೊರುತ್ತಿರುವ ಈ ಪಾತ್ರವನ್ನು ತುಂಬಾ ನೈಜವಾಗಿ ಅಭಿನಯಿಸಿದ್ದಾರೆ ಕಿರಣ್ ರಾಜ್ ಅವರು.
ಜೊತೆಗೆ ಅವರ ತಾಯಿಯ ಪಾತ್ರವಾದ ಅಮ್ಮಮನ ಪಾತ್ರವೂ ಕೂಡ ಕಥೆಗೆ ಬಹುದೊಡ್ಡ ತೂಕದಂತಿದೆ. ಸಣ್ಣ ಹಳ್ಳಿಯಿಂದ ಬಂದು ರತ್ಮಮಾಲ ಕಾಫಿ ಶಾಪ್ ಮತ್ತು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿರುವ ಅಮ್ಮಮ್ಮ ಪಾತ್ರವೂ ಕೂಡ ಎಲ್ಲರಿಗೂ ಒಂದು ಸ್ಪೂರ್ತಿ ಅಂತಿದೆ. ಜೊತೆಗೆ ಸಾನಿಯಾ ಪಾತ್ರವೂ ಕೂಡ ಕಥೆಗೆ ಅವರೇ ಮುಖ್ಯ ವಿಲನ್ ಎನ್ನುವ ರೀತಿ ಇಲ್ಲಿವರೆಗೂ ತೋರಿಸಲಾಗಿದೆ. ತನಗೆ ಸಾಮರ್ಥ್ಯ ಇಲ್ಲ ಎಂದು ಗೊತ್ತಿದ್ದರೂ ಕೂಡ ಕಂಪನಿಯ ಎಂಡಿ ಆಗಬೇಕು ಎಂದು ಹಠ ತೊಟ್ಟಿರುವ ಸಾನಿಯಾ ಅದಕ್ಕಾಗಿ ಸಾವಿರ ಸಾಹಸಗಳನ್ನು ಮಾಡುತ್ತಿರುತ್ತಾಳೆ. ಮತ್ತು ಈ ಕಾರಣಕ್ಕಾಗಿ ಅಮ್ಮಮ್ಮ ಅವರ ತಂಗಿ ಮಗನನ್ನು ಪ್ರೀತಿಸಿ ಮದುವೆಯಾಗಿರುವ ಸಾನಿಯಾ ಯೋಗ್ಯತೆ ಕಥೆಯ ನಾಯಕನಿಗೆ ಈಗಾಗಲೇ ತಿಳಿದಿದ್ದು ಮನೆಯಲ್ಲಿ ಯಾವಾಗಲೂ ಇವರಿಬ್ಬರ ನಡುವೆ ವಾಗ್ವಾದ ನಡೆಯುತ್ತಲೇ ಇರುತ್ತದೆ. ಈ ಧಾರಾವಾಹಿಯ ಪ್ರಮುಖ ಆಧಾರವೇ ಕಥೆಯ ಸಂಭಾಷಣೆ ಎನ್ನಬಹುದು.
ಪ್ರತಿಯೊಬ್ಬರೂ ಕೂಡ ಮಾತನಾಡುವ ಮಾತುಗಳು ಹಾಗೂ ಅವರ ಅಭಿನಯ ನಮ್ಮ ಕಣ್ಣ ಮುಂದೆ ಯಾವುದೋ ಕುಟುಂಬದಲ್ಲಿ ನಡೆಯುತ್ತಿರುವ ನಿಜ ಕಥೆಯ ರೀತಿ ನಮ್ಮನ್ನು ಇನ್ವಾಲ್ವ್ ಮಾಡಿಬಿಡುತ್ತದೆ. ಮತ್ತು ಕಥೆಯಲ್ಲಿ ಇನ್ನೊಂದು ನಾಯಕಿ ಎಂದು ಹೇಳಬೇಕೋ ಅಥವಾ ಕಥೆಯ ಖಳನಾಯಕಿ ಎಂದು ಹೇಳಬೇಕೋ ಎನ್ನುವ ಗೊಂದಲ ಮೂಡಿಸುವ ಪಾತ್ರ ಅದು ವರುಧಿನಿ ಪಾತ್ರ. ಇಲ್ಲಿಯವರೆಗೂ ಹಠಮಾರಿ ಹೆಣ್ಣಾಗಿ ತನಗೆ ತೊಂದರೆ ಕೊಟ್ಟವರನ್ನು ಎರಡು ಪಟ್ಟು ನೋವು ಅನುಭವಿಸುವ ಹಾಗೆ ಮಾಡಿ, ಅನಿಸಿದ್ದನ್ನು ಮಾಡಿ ತೀರಿಸುವ, ಸಿಟಿಯಲ್ಲಿ ತನ್ನದೇ ಆದ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಅನ್ನು ಮಾಡಿಕೊಂಡು ಎಲ್ಲವನ್ನು ತಾನು ಒಬ್ಬಳೇ ನಿರ್ವಹಿಸುವ ಇಂಡಿಪೆಂಡೆಂಟ್ ಗರ್ಲ್ ಆಗಿ ಹಾಗೂ ಯಾವಾಗಲೂ ಟ್ರೆಂಡಿಂಗ್ ಆಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವ ಫ್ಯಾಷನ್ ಹುಡುಗಿಯಾಗಿ ಹಾಗೂ ಕನ್ನಡತಿ ಭುವಿಯ ಪ್ರಾಣ ಸ್ನೇಹಿತೆ ಯಾಗಿ ಈ ಪಾತ್ರವನ್ನು ತೋರಿಸಲಾಗಿತ್ತು.
ಆದರೆ ಹರ್ಷ ಅವರನ್ನು ವರುಧಿನಿ ಕೂಡ ತುಂಬಾ ಪ್ರೀತಿ ಮಾಡಿ ಆತನನ್ನೇ ತನ್ನ ಹೀರೋ ಎಂದು ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡು ಹಲವು ಬಾರಿ ತನ್ನ ನಿವೇದನೆಯನ್ನು ತಿಳಿಸಿದ್ದರೂ ಕೂಡ ಹರ್ಷನ ಪ್ರೀತಿ ಮಾತ್ರ ಭುವಿಗೆ ದೊರಕಿದೆ. ಈಗ ಈ ಜೋಡಿಗಳು ಮದುವೆ ಹಂತಕ್ಕೂ ಕೂಡ ತಲುಪಿದ್ದಾರೆ. ಈ ಮದುವೆಯನ್ನು ತಾನೇ ನಿರ್ವಹಿಸುವ ಜವಾಬ್ದಾರಿ ಹೊತ್ತುಕೊಂಡಿರುವ ವರುಧಿನಿ ಮದುವೆ ನಿಲ್ಲಿಸುವ ಸಲುವಾಗಿ ಹಲವಾರು ಷ’ಡ್ಯಂ’ತ್ರ’ಗಳನ್ನು ಮಾಡಿ ಸೋತಿದ್ದಾಳೆ. ಆ’ತ್ಮ’ಹ’ತ್ಯೆಯ ಪ್ರಯತ್ನ ಮಾಡಿ ಆಸ್ಪತ್ರೆಯನ್ನು ಸೇರಿದ್ದರೂ ಕೂಡ ಭುವಿ ಮತ್ತು ಹರ್ಷನ ಮದುವೆಯನ್ನು ತಪ್ಪಿಸಲಾಗಲಿಲ್ಲ. ಕೊನೆಗೂ ರಾಮಾಚಾರಿ ಕಥಾನಾಯಕನ ಸಾರಥ್ಯದಲ್ಲಿ ಕನ್ನಡದ ಮಂತ್ರೋಚ್ಚಾರಣೆಯಿಂದ ಮದುವೆ ನಡೆದಿದೆ. ಆದರೂ ಕೂಡ ಈಗಲೂ ಹರ್ಷನ ಮೇಲೆ ಆಸೆ ಇಟ್ಟುಕೊಂಡಿರುವ ವರೂಧಿನಿ ಸಾನಿಯಾ ಬಳಿ ಭುವಿ ಹರ್ಷನಿಗೆ ಹೊಂದುವುದಿಲ್ಲ ಮೂರೇ ತಿಂಗಳಲ್ಲಿ ಇವರಿಬ್ಬರು ಬೇರೆ ಆಗುವಂತೆ ಮಾಡುತ್ತೇನೆ ಎಂದು ಚಾಲೆಂಜ್ ಮಾಡಿದ್ದಾಳೆ. ಈ ದೃಶ್ಯವನ್ನು ನೋಡಿದವರಿಗೆ ವರುಧಿನಿಯೇ ಪ್ರಾಣ ಸ್ನೇಹಿತೆಯ ಬದುಕಿಗೆ ವಿಲನ್ ಆಗುತ್ತಿದ್ದಾಳೆ ಅನಿಸುವಂತಿದೆ. ವರುಧಿನಿ ಚಾಲೆಂಜ್ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಹರ್ಷ ಮತ್ತು ಭುವಿ ಬೇರೆ ಬೇರೆ ಆಗುತ್ತಾರ.? ಕಾಮೆಂಟ್ ಮುಖಾಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.