ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಅನೇಕ ನಟಿಯರು ಬಂದು, ಸಿನಿಮಾಗಳಲ್ಲಿ ನಟಿಸಿ ಹೋಗಿದ್ದಾರೆ ಅಲ್ಲದೆ ಅನೇಕ ಕನ್ನಡದ ನಟಿಯರು ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲು ನಟಿಸಿದ್ದಾರೆ. ಅದರಲ್ಲಿ ಕೆಲವು ನಟಿಯರು ವಿಭಿನ್ನವಾಗಿ ಇದ್ದಾರೆ. ಅದರಲ್ಲಿ ಒಬ್ಬ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಇತ್ತೀಚಿಗೆ ಕನ್ನಡ ಸಿನಿಮಾ ರಂಗಕ್ಕೆ ಬಂದಿದ್ದು ಹೆಚ್ಚು ಜನಪ್ರಿಯ ಗಳಿಸಿದ್ದಾರೆ. ಬೇರೆ ನಟಿಯರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಕನ್ನಡದ ನಿರ್ದೇಶಕರುಗಳು ಮತ್ತು ನಿರ್ಮಾಪಕರು ತಮ್ಮ ಹೊಸ ಸಿನಿಮಾಗಳಿಗೆ ರಚಿತಾ ರಾಮ್ ಅವರನ್ನೆ ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ರಚಿತಾ ರಾಮ್ ಅವರು ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.
ಈ ಮುದ್ದು ನಗುವಿನ ಗುಳಿ ಕೆನ್ನೆಯ ಚೆಲುವೆ ರಚಿತಾ ರಾಮ್ ಒಬ್ಬ ಅದ್ಭುತ ನಟಿ ಆಗಿದ್ದಾರೆ. ಇವರ ಗುಳಿ ಕೆನ್ನೆ ಹಾಗೂ ಇವರ ನಟನೆಗೆ ಎಷ್ಟೋ ಹುಡುಗರು ಮನಸೋತಿದ್ದಾರೆ. ಇದರಿಂದ ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ರಚಿತಾ ರಾಮ್ ಅವರು. ಇವರು ಸಿನಿಮಾದಲ್ಲಿ ನೈಜವಾಗಿ ನಟಿಸಿ, ಟಾಪ್ ನಲ್ಲಿ ಮಿಂಚುತ್ತಾ ಇದ್ದಾರೆ. ರಚಿತಾ ರಾಮ್ ಅವರು ಇದೀಗ ಸ್ಟಾರ್ ನಟಿಯಾಗಿ ಜನಪ್ರಿಯರಾಗಿದ್ದರೂ ಸ್ವಲ್ಪ ಕೂಡ ಅಹಂಕಾರ ಸ್ವಭಾವ ಎಲ್ಲಿಯೂ ತೋರಿಸುವುದಿಲ್ಲ. ಎಲ್ಲರೊಂದಿಗೆ ಖುಷಿಯಿಂದ ಮಿಂಗಲ್ ಆಗುವ ಅವರ ವ್ಯಕ್ತಿತ್ವ ಹೊಂದಿದ್ದು, ಪ್ರತಿಯೊಬ್ಬರನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಾರೆ. ಹೀಗಾಗಿಯೇ ರಚಿತಾ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ.
ಎಲ್ಲೇ ಹೋಗಲಿ ಅಭಿಮಾನಿಗಳ ಜೊತೆ ಸಹಜ ಮನುಷ್ಯನಾಗಿಯೇ ಇರುವ ಇವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ತುಂಬಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ರಚಿತಾ ರಾಮ್ ಅವರು ಮೊಟ್ಟ ಮೊದಲು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬುಲ್ ಬುಲ್ ಸಿನಿಮಾದಲ್ಲಿ. ಇದರಲ್ಲಿ ತನ್ನ ಗುಳಿ ಕೆನ್ನೆ, ಮುಗ್ಧವಾದ ಅಭಿನಯದ ಮೂಲಕ ಪ್ರೇಕ್ಷಕರೆಲ್ಲರ ಮನಗೆದ್ದಿದ್ದಾರೆ. ಇವರು ಮೊದಲಿಗೆ ಜೀ ಕನ್ನಡದಲ್ಲಿ ಹತ್ತು ವರ್ಷಗಳ ಹಿಂದೆ ಪ್ರಸಾರ ಆಗುತ್ತಿದ್ದ ಅರಸಿ ಧಾರವಾಹಿಯಲ್ಲಿ ನಟಿಸಿದ್ದರು.
ಆದಾದ ನಂತರ ಸಿನಿಮಾದಲ್ಲಿ ಅವಕಾಶ ಸಿಕ್ಕಿ ಎಲ್ಲಾ ಸ್ಟಾರ್ ನಟರ ಜೊತೆಗೆ ಅಂದರೆ ಕಿಚ್ಚ ಸುದೀಪ್, ಡಿ ಬಾಸ್ ದರ್ಶನ್, ಗಣೇಶ್, ಶ್ರೀ ಮುರಳಿ, ಶಿವರಾಜ್ ಕುಮಾರ್, ನಿನಾಸಂ ಸತೀಶ್ ಮುಂತಾದವರುಗಳ ಜೊತೆ ಸಿನಿಮಾಗಳಲ್ಲಿ ನಟಿಸಿ ಯಶಸ್ಸನ್ನು ಗಳಿಸಿದ್ದಾರೆ. ಇವರು ನಟಿಸಿರುವ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳೇ ಆಗಿವೆ. ಹೀಗಾಗಿ ರಚಿತಾ ರಾಮ್ ಒಬ್ಬ ಸಕ್ಸಸ್ ಫುಲ್ ನಟಿಯಾಗಿ ಮಿಂಚುತ್ತಿದ್ದಾರೆ. ಇನ್ನು ರಚಿತಾ ಅವರು ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲದೇ ಕೆಲವು ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಂಡು ವೀಕ್ಷಕರಿಗೆ ಸಂತಸ ಕೊಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಕಾಮಿಡಿ ಶೋ ನಲ್ಲಿ ಜಡ್ಜ್ ಆಗಿದ್ದರು. ಇದೀಗ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಡ್ರಾಮಾ ಜೂನಿಯರ್ಸ್ ಸೀಸನ್ 4 ಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತೀರ್ಪುಗಾರರಾಗಿ ಇದ್ದಾರೆ.
ರಚಿತಾ ರಾಮ್ ಅವರು ಒಂದು ಕಾರ್ಯಕ್ರಮದಲ್ಲಿ ಮಾಡಿದ ಡ್ಯಾನ್ಸ್ ನ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿ ಮಾಡಿದೆ. ಹೌದು, ಒಂದು ಕಾರ್ಯಕ್ರಮದಲ್ಲಿ ರಘು ದೀಕ್ಷಿತಾ ಅವರು ರಚಿತಾ ಅವರು ಅಭಿನಯಿಸಿರುವ ಸಿನಿಮಾದ ಚಾಂದಿನಿ ಅನ್ನುವ ಹಾಡು ಹಾಡುತ್ತಿದ್ದರು. ಆಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಚಿತಾ ರಾಮ್ ಅವರು ವೇದಿಕೆ ಮೇಲೆ ಹೋಗಿ ಆ ಹಾಡಿಗೆ ಸಕತ್ ಆಗಿ ಟಪಾಂಗುಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಅಂದು ಬಿಳಿ ಬಣ್ಣದ ಸೀರೆ ಉಟ್ಟಿದ್ದ ರಚಿತಾ ಅವರು ಸಖತ್ ಹಾಟ್ ಆಗಿ ಕಾಣಿಸುತ್ತಿದ್ದ ಅವರ ಈ ಡ್ಯಾನ್ಸ್ ನೋಡಿ ಅಭಿಮಾನಿಗಳು ಸಂತೋಷ ಪಟ್ಟು ಕಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿದ್ದಾರೆ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ.