ಕನ್ನಡತಿ ಧಾರವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆ ನೋಡಲು ವೀಕ್ಷಕರು ಕಾದು ಕೂತಿದ್ದರು ಆದರೆ ಧಾರಾವಾಹಿಯಲ್ಲಿ ಕೆಲವು ಟ್ವಿಸ್ಟ್ ಗಳನ್ನು ನೀಡಲು ತಂಡ ಮುಂದಾಗಿತ್ತು. ಇದಕ್ಕೆ ಫ್ಯಾನ್ಸ್ ಬೇ’ಸರ ಹೊರ ಹಾಕಿದ್ದಾರೆ ನಾವು ಧಾರಾವಾಹಿಯನ್ನು ನೋಡುವುದೇ ಇಲ್ಲ ಎಂಬ ಕಾಮೆಂಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಫ್ಯಾನ್ಸ್ ಆ’ಕ್ರೋ’ಶವನ್ನು ಈ ರೀತಿ ಹೊರ ಹಾಕೋಕೆ ಕಾರಣವೇನು. ಕನ್ನಡತಿ ಧಾರಾವಾಹಿಯಲ್ಲಿ ಎಲ್ಲರೂ ಕಾದಿದ್ದ ಕ್ಷಣ ಕೊನೆಗೂ ಬಂದಿದೆ ಹರ್ಷ ಮತ್ತು ಭುವಿ ಮದುವೆಯಾಗುತ್ತಿದ್ದಾರೆ. ಆದರೆ ಈ ಮದುವೆಯಲ್ಲಿ ವರುಧಿನಿ ಹೈಡ್ರಾಮಾ ಮಾಡಿ ಕೈ ಕತ್ತರಿಸಿಕೊಂಡಿದ್ದಾಳೆ ಈ ಮೂಲಕ ಹರ್ಷ ಹಾಗೂ ಭುವಿ ಮದುವೆ ತಡೆಯಲು ಪ್ರಯತ್ನಿಸಿದ್ದಾಳೆ.
ವರುದಿನಿಯನ್ನು ಯಾರು ಬೇಕಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅವಕಾಶವಿತ್ತು ಆದರೆ ಭುವಿಯೇ ವರದಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಇದು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ ಕೆಲ ಧಾರಾವಾಹಿಗಳಿಗೆ ಸಾಕಷ್ಟು ಫ್ಯಾನ್ಸ್ ಕನೆಕ್ಟ್ ಆಗಿರುತ್ತಾರೆ ಹೀಗಾಗಿ ಧಾರಾವಾಹಿಯಲ್ಲಿ ಏನಾದರೂ ಅನಗತ್ಯ ಟ್ವಿಸ್ಟ್ ಕೊಟ್ಟರೆ ಅಥವಾ ಧಾರಾವಾಹಿ ಬೇರೆಯದೇ ಟ್ರ್ಯಾಕ್ ಪಡೆದುಕೊಂಡರೆ ಅದನ್ನ ಅವರು ಸಹಿಸಿಕೊಳ್ಳುವುದಿಲ್ಲ. ಈಗ ಕನ್ನಡತಿ ಧಾರಾವಾಹಿ ಯಲ್ಲೂ ಕೂಡ ಅದೇ ಆಗಿದೆ. ಹರ್ಷ ಹಾಗೂ ಭುವಿ ಮದುವೆಯ ಮಧ್ಯ ತರಲಾದ ಹೈಡ್ರಾಮ ನೋಡಿ ಫ್ಯಾನ್ಸ್ ಕುಪಿತ ಗೊಂಡಿದ್ದಾರೆ ಸಾಕು ನಿಲ್ಲಿಸಿ ಈ ಗೋಳು ನಮ್ಮ ತಲೆ ಸಿಡಿತಿದೆ ಇದನ್ನು ನೋಡಿ ಮದುವೆ ಅಂತ ಬಕಪಕ್ಷಿಗಳ ತರಹ ಕಾದಿದ್ದಕ್ಕೆ ಈ ತರಹ ಟಾ’ರ್ಚರ್ ಕೊಡುತ್ತಿದ್ದೀರಾ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡತಿ ಸೀರಿಯಲ್ ಕುಸಿಯುತ್ತಿರುವುದಕ್ಕೆ ವರು ಆರ್ಭಟ ಕಾರಣ ಅಲ್ಲ, ಹರ್ಷ ಭುವಿನ ಸೈಡ್ ಲೈನ್ ಮಾಡಿರುವುದೇ ಕಾರಣ ಎಲ್ಲೇ ಹೋದರು ಮೊದಲಿನ ಹರ್ಷ ಮತ್ತು ಭುವಿ ಎಂದು ಅಭಿಮಾನಿ ಓರ್ವ ಕಮೆಂಟ್ ಮಾಡಿದ್ದಾನೆ. “ಕನ್ನಡತಿ ಧಾರಾವಾಹಿಯಲ್ಲಿ ಭುವಿ ಅವರು ಮಾತನಾಡುವ ಕನ್ನಡವನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ, ಬೇರೆ ಯಾವುದೇ ಧಾರವಾಹಿಯನ್ನು ಹೋಲಿಸಿದರೆ ಈ ಧಾರಾವಾಹಿ ತುಂಬಾ ವಿಭಿನ್ನವಾಗಿ ಹೊರಹೊಮ್ಮುತ್ತಿದೆ ಹಾಗೂ ಈ ದಾರವಾಹಿಯಲ್ಲಿ ಕನ್ನಡದ ಬಗ್ಗೆ ಇರುವ ಬೆಲೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ ಎಂದು ಹೇಳಲು ತಪ್ಪಾಗುವುದಿಲ್ಲ ಆದಕಾರಣ ಹಲವಾರು ವೀಕ್ಷಕರು ಈ ದಾರಾವಾಹಿಯನ್ನು ವೀಕ್ಷಿಸಲು ಇಚ್ಛೆಪಡುತ್ತಾರೆ ಮತ್ತು ಈ ದಾರವಾಹಿಯ ಕೊನೆಯಲ್ಲಿ ಬರುವ ಪದಬಂಧ ಅಂದರೆ ಒಂದು ಪದದ ಸಂಪೂರ್ಣ ಅರ್ಥವನ್ನು ಹೇಳುವುದರ ಮೂಲಕ ಈ ಧಾರಾವಾಹಿಯನ್ನು ಮುಕ್ತಾಯಗೊಳಿಸುತ್ತಾರೆ. ಇದರ ಮೂಲಕ ಎಷ್ಟೋ ಜನಗಳಿಗೆ ಆ ಪದದ ಸಂಪೂರ್ಣ ಅರ್ಥ ತಿಳಿದು ಕೊಂಡಂತಾಗುತ್ತದೆ ಇದರಿಂದ ತುಂಬಾ ಉಪಯೋಗವಾಗುತ್ತದೆ ಎಂದು ಹೇಳಬಹುದಾಗಿದೆ ಎಂದಿದ್ದಾರೆ.
ಹಾಗೆಯೇ ಭುವಿ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ನಾಯಕಿ ಇವರು ತಾವೇ ಬರೆದ ಒಂದು ಪುಸ್ತಕವನ್ನು ಬಿಡುಗಡೆ ಮಾಡಿರುವುದು ತುಂಬಾ ಹೆಮ್ಮೆಯ ವಿಷಯ, ಪುಸ್ತಕದಲ್ಲಿ ಬರುವ ಪ್ರತಿಯೊಂದು ಕಥೆಗಳು ತುಂಬಾ ವಿಭಿನ್ನವಾಗಿದ್ದು ಓದುವವರಿಗೆ ತುಂಬ ಸಂತೋಷವಾಗುತ್ತದೆ ಎಂದು ಹೇಳಬಹುದು, ಹಾಗೂ ಇವರಿಗೆ ಕನ್ನಡದ ಮೇಲೆ ಇರುವ ಅಭಿಮಾನ ಎಲ್ಲರಿಗೂ ಇಷ್ಟ ಆಗುತ್ತದೆ. ಆದ ಕಾರಣದಿಂದಲೇ ಇವರಿಗೆ ಹೆಚ್ಚಿನ ಸಂಖ್ಯೆಯ ಫ್ಯಾನ್ಸ್ ಇದ್ದಾರೆ ಎಂದು ಹೇಳಲು ತಪ್ಪಾಗುವುದಿಲ್ಲ. ಕನ್ನಡತಿ ಧಾರವಾಹಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.