Home Cinema Updates ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ಕುರಿತಾಗಿ ಡಿ ಬಾಸ್ ಪತ್ನಿ ಭಾವುಕರಾಗಿ ಹೇಳಿದ್ದೇನು ಗೊತ್ತ.?

ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ಕುರಿತಾಗಿ ಡಿ ಬಾಸ್ ಪತ್ನಿ ಭಾವುಕರಾಗಿ ಹೇಳಿದ್ದೇನು ಗೊತ್ತ.?

0
ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ಕುರಿತಾಗಿ ಡಿ ಬಾಸ್ ಪತ್ನಿ ಭಾವುಕರಾಗಿ ಹೇಳಿದ್ದೇನು ಗೊತ್ತ.?

ಕನ್ನಡ ಸಿನಿಮಾ ರಂಗದ ಡಿ ಬಾಸ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬ ಈ ಹೆಸರಿಗೆ ಎಂತಹ ತಾಕತ್ತು ಇದೆ ಎಂಬುದು ತಮಗೆ ಗೊತ್ತೇ ಇದೆ. ಒಂದು ಕಾಲದ ಟಾಪ್ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾಗಿದ್ದರೂ ಕೂಡ ಡಿ ಬಾಸ್ ದರ್ಶನ್ ಅವರ ಸಿನಿಮಾ ಕರಿಯರ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಹೌದು ದರ್ಶನ್ ಅವರ ಸಿನಿಮಾ ಜರ್ನಿ ಶುರುಮಾಡಿದ್ದು ಒಬ್ಬ ಲೈಟ್ ಮ್ಯಾನ್ ಆಗಿ ಎಂಬ ಮಾಹಿತಿ ಯಲ್ಲರಿಗೂ ತಿಳಿದೇ ಇದೆ. ಶಿವಣ್ಣ ಅವರ ಜನುಮದ ಜೋಡಿ ಸಿನಿಮಾದಲ್ಲಿ ದರ್ಶನ್ ಅವರು ಲೈಟ್ ಮ್ಯಾನ್ ಆಗಿ ಕೆಲಸ ಮಾಡಿದ್ದು. ಆ ನಂತರ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ, ಮೆಜೆಸ್ಟಿಕ್ ಎಂಬ ಚಿತ್ರದ ಮೂಲಕ ಹೀರೋ ಆಗಿ ಹೊರಹೊಮ್ಮಿದರು.

ಇವತ್ತಿಗೆ ಡಿ ಬಾಸ್ ದರ್ಶನ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದು ಕರ್ನಾಟಕದಲ್ಲಿ ದರ್ಶನ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕಳೆದ ವರ್ಷ ದರ್ಶನ್ ಅವರ ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಂಡಿದ್ದು ರಾಬರ್ಟ್ ಸಿನಿಮಾ ವನ್ನು ಉಮಾಪತಿಯವರು ನಿರ್ಮಾಣ ಮಾಡಿ ತರುಣ್ ಸುಧೀರ್ ರವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ರಾಬರ್ಟ್ ಬಿಡುಗಡೆ ಬಳಿಕ ದರ್ಶನ್ ಅವರು ಬೇರೆ ಕಾರಣಗಳಿಗೆ ಸುದ್ದಿಯಾದರು. ಹೌದು ಮೊದಲು ಯಾರೋ ದರ್ಶನ್ ಅವರಿಗೆ 25 ಕೋಟಿ ವಂಚನೆ ಮಾಡಿದ್ದಾರೆ ಎಂಬ ಸುದ್ದಿ ಬಂದು ನ್ಯೂಸ್ ವಾಹಿನಿಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಆನಂತರ ಇಂದ್ರಜಿತ್ ಲಂಕೇಶ್ ಅವರು ಎಂಟ್ರಿಕೊಟ್ಟು ಡಿ ಬಾಸ್ ದರ್ಶನ್ ಅವರು ಮೈಸೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುವವನ ಮೇಲೆ ಈ ರೀತಿ ಹ’ಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಹೇಳಿದರು ಬಳಿಕ ಏನಿಲ್ಲ ಆಯಿತು ಎಂಬುದು ನಿಮಗೆ ಗೊತ್ತೇ ಇರುತ್ತದೆ. ದರ್ಶನ್ ಹಾಗೂ ಲಂಕೇಶ್ ಮತ್ತು ಉಮಾಪತಿ ಶ್ರೀನಿವಾಸ್ ಅವರು ಒಂದಾದ ನಂತರ ಮತ್ತೊಂದು ಸುದ್ದಿಗೋಷ್ಠಿ ಗಳನ್ನು ಮಾಡಲು ಶುರುಮಾಡಿದ್ದು ಪರ-ವಿರೋಧ ಹೇಳಿಕೆಗಳನ್ನು ಶುರುಮಾಡಿದರು.
ಇದೆಲ್ಲದರ ನಡುವೆ ದರ್ಶನ್ ಅವರದ್ದು ಎನ್ನಲಾದ ಒಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಆ ಆಡಿಯೋದಲ್ಲಿ ದರ್ಶನ್ ಅವರು ಕನ್ನಡದ ನ್ಯೂಸ್ ಚಾನೆಲ್ ಗಳಿಗೆ ಬೈದಿದ್ದಾರೆ ಎಂದು ಕನ್ನಡದ ನ್ಯೂಸ್ ಚಾನಲ್ ಗಳು ದರ್ಶನ್ ಅವರನ್ನು ಬ್ಯಾನ್ ಮಾಡಿದ್ದು ಸುಮಾರು ಕಳೆದ 10 ತಿಂಗಳಿಂದ ದರ್ಶನ್ ಅವರ ಯಾವುದೇ ಸುದ್ದಿಯನ್ನು ಕೂಡ ಪ್ರಸಾರ ಮಾಡುತ್ತಿಲ್ಲ.

ಹೌದು ದರ್ಶನ್ ಅವರ ಕ್ರಾಂತಿ ಸಿನಿಮಾದ ಮುಹೂರ್ತಕ್ಕೆ ಕೂಡ ಯಾವುದೇ ಮೀಡಿಯಾದವರು ಬಂದಿರಲಿಲ್ಲ ಸದ್ಯ ಇದೀಗ ಇದರ ಬಗ್ಗೆ ಕೊನೆಗೂ ಮಾತನಾಡಿದ ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರು ಯಾವುದೇ ಮೀಡಿಯಾ ಇಲ್ಲದಿದ್ದಾಗ ಎಷ್ಟು ಹೆಸರು ಮಾಡಿದ್ದರು ಲಕ್ಷಾಂತರ ಜನ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅದೇ ರೀತಿ ಅವರ ಅಭಿಮಾನಿಗಳೆ ಅವರ ಶಕ್ತಿ ಅವರೇ ಸಿನಿಮಾವನ್ನು ಗೆಲ್ಲಿಸುತ್ತಾರೆ. ನಾನು ಯಾವುದೇ ಮೀಡಿಯಾದವರ ಬಗ್ಗೆ ಮಾತನಾಡಲು ಇಚ್ಛೆಪಡುವುದಿಲ್ಲ ಮೀಡಿಯಾದವರು ನಮಗೆ ಸಾಕಷ್ಟು ರೀತಿಯಲ್ಲಿ ಸಹಾಯ ಕೂಡ ಮಾಡಿದ್ದಾರೆ ಎಂದು ಹೇಳಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಭಾವುಕರಾಗಿದ್ದಾರೆ.

ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಮೀಡಿಯಾದವರು ಯಾವುದೇ ರೀತಿಯಾದಂತಹ ಸಪೋರ್ಟ್ ಮತ್ತು ಪ್ರಚಾರ ಮಾಡುತ್ತಿಲ್ಲ. ಹಾಗಾಗಿ ಅಭಿಮಾನಿಗಳೇ ಕ್ರಾಂತಿ ಸಿನಿಮಾವನ್ನು ಗೆಲ್ಲುವುದಕ್ಕಾಗಿ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಬಳಕೆ ಮಾಡಿ ಶಕ್ತಿಯನ್ನು ತುಂಬುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು .? ನೀವು ದರ್ಶನ್ ಅವರ ಸಿನಿಮಾ ಬೆಂಬಲ ನೀಡುತ್ತಿರ ಹಾಗಾದರೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ.

LEAVE A REPLY

Please enter your comment!
Please enter your name here