Friday, June 9, 2023
HomeEntertainmentಡಿ-ಬಾಸ್ ನಾ ನೋಡಿ ಕಲಿಬೇಕು, ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡ್ತಾರೆ, ಅವ್ರನ್ನ ಹೇಗೆ ಸೇಫ್...

ಡಿ-ಬಾಸ್ ನಾ ನೋಡಿ ಕಲಿಬೇಕು, ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡ್ತಾರೆ, ಅವ್ರನ್ನ ಹೇಗೆ ಸೇಫ್ ಮಾಡ್ತಾರೆ ಅಂತ. ನಾನು ಅದನ್ನ ಕಣ್ಣಾರೆ ಕಂಡಿದ್ದೆನೆ ಎಂದ ನಟಿ ರಚಿತಾ ರಾಮ್.

 

ಕ್ರಾಂತಿ ಸಿನಿಮಾದ ಜರ್ನಿಯಿಂದ ದರ್ಶನ್ ಅವರ ಈ ಗುಣಗಳು ರಚಿತರಾಮ್ ಅವರು ಕಂಡಿದ್ದಂತೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತೂಗುದೀಪ ಪ್ರೊಡಕ್ಷನ್ ಇಂದ ಲಾಂಚ್ ಆದವರು. ದರ್ಶನ್ ಅವರ ಜೊತೆಗೆ ಮೊದಲ ಬಾರಿ ಬುಲ್ ಬುಲ್ ಸಿನಿಮಾದಲ್ಲಿ ನಾಯಕಿಯಾದ ಇವರು ನಂತರ ಅಂಬರೀಶ ಸಿನಿಮಾದಲ್ಲೂ ಕೂಡ ಜೊತೆಯಾದರು ಈಗ ಈ ಇಬ್ಬರ ಕಾಂಬಿನೇಷನ್ ಅಲ್ಲಿ ಕ್ರಾಂತಿ ಸಿನಿಮಾ ಬರುತ್ತಿದೆ.

ಕ್ರಾಂತಿ ಸಿನಿಮಾದ ಜರ್ನಿ ಬಗ್ಗೆ ರಚಿತಾ ರಾಮ್ ಅವರು ತಮ್ಮ ಅಭಿಪ್ರಾಯವನ್ನು, ಕ್ರಾಂತಿ ಸಿನಿಮಾದ ಪ್ರಚಾರದ ಅಂಗವಾಗಿ ಯುಟ್ಯೂಬ್ ಚಾನೆಲ್ ಒಂದರಲ್ಲಿ ಭಾಗಿಯಾಗಿ ಹಂಚಿಕೊಂಡಿದ್ದಾರೆ. ಅವರು ಇಷ್ಟು ವರ್ಷದಲ್ಲಿ ದರ್ಶನ್ ಅವರ ಜೊತೆ ಇದ್ದರೂ ಕೂಡ ಅವರ ಕೆಲವೊಂದು ಗುಣಗಳು ಕ್ರಾಂತಿ ಸಿನಿಮಾದ ಜರ್ನಿಯಲ್ಲಿ ಕಣ್ಣಿಗೆ ಬಿದ್ದದಂತೆ ಆ ಬಗ್ಗೆ ಅವರೇ ಅವರ ಮಾತಿನಲ್ಲಿ ಈ ರೀತಿ ಹೇಳಿದ್ದಾರೆ.

ಕ್ರಾಂತಿ ಸಿನಿಮಾದಲ್ಲಿ ನಾವೆಲ್ಲ ಕೆಲಸ ಮಾಡಿದ್ದೇವೆ ಅಷ್ಟೇ ಆದರೆ ಅದನ್ನು ಮಾರ್ಕೆಟಿಂಗ್ ಮಾಡುತ್ತಿರುವುದು ಪ್ರಮೋಷನ್ ಮಾಡುತ್ತಿರುವುದು ದರ್ಶನ್ ಸರ್ ಅವರ ಸೆಲೆಬ್ರಿಟಿಗಳು. ನಾವು ಈ ಸಿನಿಮಾದ ಹಾಡುಗಳನ್ನು ಒಂದೊಂದು ಸಿಟಿಯಲ್ಲಿ ರಿಲೀಸ್ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು, ಆದರೆ ಅದು ಇಷ್ಟು ಚೆನ್ನಾಗಿ ಮೂಡಿ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ನನ್ನ ಜರ್ನಿಯಲ್ಲಿ ಅಷ್ಟು ಜನ ಸೇರಿರುವುದನ್ನು ನೋಡಿಯೇ ಇರಲಿಲ್ಲ.

ದರ್ಶನ್ ಆವರಿಗೆ 5000, 10,000 ಅಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ ಅವರೆಲ್ಲಾ ದೊಡ್ಡ ಸಮುದ್ರದ ರೀತಿ ಕಾಣುತ್ತಿರುತ್ತಾರೆ. ಅಲ್ಲದೆ ದರ್ಶನ್ ಸರ್ ಅವರು ನಮ್ಮನ್ನು ಪ್ರಚಾರಕ್ಕೆ ಎಲ್ಲೇ ಕರೆದುಕೊಂಡು ಹೋದರು ಸ್ಟೇ ಆದ ಜಾಗದಿಂದ ಕಾರ್ಯಕ್ರಮಕ್ಕೆ ಬಸ್ ಅಲ್ಲಿ ಅಥವಾ ಟಿಟಿ ಗಾಡಿಯಲ್ಲಿ ಕಳುಹಿಸಿ ಕೊಡುತ್ತಾರೆ. ಅಲ್ಲೆಲ್ಲಾ ನಾವು ಶಾಲಾ ಮಕ್ಕಳ ರೀತಿ ಒಟ್ಟಿಗೆ ಕೂತು ಹೋಗುತ್ತೇವೆ ಈ ಎಕ್ಸ್ಪೀರಿಯೆನ್ಸ್ ಕೂಡ ಹೊಸದು.

ದರ್ಶನ್ ಸರ್ ಅವರು ರಿಲೀಸ್ ಕಾರ್ಯಕ್ರಮಗಳಲ್ಲಿ ಅವರೇ ನಿರೂಪಣೆ ಕೂಡ ಮಾಡಿದ್ದಾರೆ ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಸರ್ ಅವರ ಮೇಲೆ ಅವರ ಜರ್ನಿ ಶುರುವಾದ ದಿನದಿಂದಲೂ ಕೂಡ ಪದೇಪದೇ ಪೆಟ್ಟು ಬೀಳುತ್ತಿದೆ. ಆದರೆ ಅವರ ಸೆಲೆಬ್ರಿಟಿಗಳು ಮಾತ್ರ ಅವರನ್ನು ಕೈಬಿಟ್ಟಿಲ್ಲ ಅಷ್ಟರ ಮಟ್ಟಿಗೆ ಅಭಿಮಾನ ಸಂಪಾದಿಸುತ್ತಿದ್ದಾರೆ ದರ್ಶನ್ ಸರ್, ಅವರೇ ಡಿ ಬಾಸ್ ನಿಜವಾದ ಆಸ್ತಿ.

ಇಷ್ಟು ಅಭಿಮಾನಕ್ಕೆ ಅವರ ಡೌನ್ ಟು ಅರ್ಥ್ ಗುಣ. ದರ್ಶನ್ ಸರ್ ಅವರು ಮಾತನಾಡಿರುವುದರಿಂದ ಕೆಲವೊಮ್ಮೆ ವಿವಾದಗಳು ಸೃಷ್ಟಿಯಾಗಿವೆ. ಆದರೆ ಅವರು ಮಗುವಿನ ರೀತಿ ಸ್ವಭಾವದವರು. ಚಿಕ್ಕ ಮಕ್ಕಳೇ ಪ್ರವೋಕ್ ಮಾಡಿದರೆ ಸುಮ್ಮನಿರುವುದಿಲ್ಲ ಅಂತಹದರಲ್ಲಿ ಅವರು ಮಾತನಾಡಿದ್ದನ್ನೇ ದೊಡ್ಡದಾಗಿ ಹೇಳಿ ಅವರ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ನಿಜವಾಗಿಯೂ ದರ್ಶನ್ ತುಂಬಾ ಸರಳ ವ್ಯಕ್ತಿ ಅವರನ್ನು ಹ್ಯಾಂಡಲ್ ಮಾಡುವುದು ಬಹಳ ಈಝಿ.

ಅವರಿಗೆ ಕಾರುಗಳ ಮೇಲೆ ಕ್ರೇಜ್ ಇರಬಹುದು ಆದರೆ ಅವರು ನೆಲದ ಮೇಲೆ ಕೂಡ ಮಲಗುವಷ್ಟು ಸಿಂಪಲ್. ಅವರ ಜೊತೆಗಿದ್ದರೆ ನಮಗೆ ಗೊತ್ತಿಲ್ಲದ ಹಾಗೆ ನಾವು ಕೂಡ ಅವರನ್ನೇ ಫಾಲೋ ಮಾಡಿ ಬಿಡುತ್ತವೆ. ಕ್ರಾಂತಿ ಸಿನಿಮಾದ ಜರ್ನಿ ನನಗೆ ಎಷ್ಟೋ ಬಾರಿ ಆನಂದದ ಕಣ್ಣೀರು ತರಿಸಿದೆ ಮತ್ತು ಇಷ್ಟು ದಿನದ ಜರ್ನಿಯಲ್ಲಿ ಈವರೆಗೆ ನಾನು ಕಲಿಯದ ಪಾಠಗಳನ್ನು ಕಲಿಸಿದೆ. ಈ ಕ್ರಾಂತಿ ಸಿನಿಮಾದಿಂದ ನಾನು ಟೀಮ್ ಅಂದರೆ ಏನು ಎನ್ನುವುದನ್ನು ಕಲಿತೆ ನಾವು ಎಲ್ಲೇ ಪ್ರಚಾರಕ್ಕೆ ಹೋದಾಗಲೂ ಒಂದೇ ಬಣ್ಣದ ಬಟ್ಟೆ ತರಿಸುತ್ತೇವೆ ಅದು ಕೂಡ ನಾವು ಸರ್ ಜೊತೆಗೆ ಇದ್ದೇವೆ ಎನ್ನುವುದನ್ನು ತೋರಿಸುವ ಸಿಂಬಲ್ ಎನ್ನಬಹುದು. ಎಂಬ ಇತ್ಯಾದಿ ಮಾತುಗಳನ್ನು ಹೇಳಿದ್ದಾರೆ. ಅವರ ಈ ಮಾತುಗಳನ್ನು ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.