Sunday, June 4, 2023
HomeEntertainmentರಚಿತಾ ರಾಮ್ ಜೊತೆ ವಿಜಯ್ ರಾಘವೇಂದ್ರ ಮಾಡಿದ ಮಸ್ತ್ ಡಾನ್ಸ್ ಒಮ್ಮೆ ನಿಜಕ್ಕೂ ಫಿದಾ...

ರಚಿತಾ ರಾಮ್ ಜೊತೆ ವಿಜಯ್ ರಾಘವೇಂದ್ರ ಮಾಡಿದ ಮಸ್ತ್ ಡಾನ್ಸ್ ಒಮ್ಮೆ ನಿಜಕ್ಕೂ ಫಿದಾ ಆಗ್ತಿರಾ.

ರಚಿತಾ ರಾಮ್ ವಿಜಯ ರಾಘವೇಂದ್ರ ಡ್ಯಾನ್ಸ್

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಚಿತಾ ರಾಮ್. ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ರಚಿತಾ, ಹಿಂದಕ್ಕೆ ತಿರುಗಿ ನೋಡಿದ್ದೆ ಇಲ್ಲ. ಕನ್ನಡ ಚಿತ್ರರಂಗದ ಮೇರು ನಟರಾದ ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಎಲ್ಲಾ ಕನ್ನಡ ನಟರ ಜೊತೆಯಲ್ಲೂ ನಟಿಸಿ ಯಶಸ್ಸು ಪಡೆದಿದ್ದಾರೆ.

ಸಿನಿರಂಗದಲ್ಲಿ 10 ವರ್ಷ ಪೂರೈಸಿದ್ದಾರೆ ರಚಿತಾ. ನಟಿ ರಚಿತಾ ರಾಮ್ ಅವರು ಚಿತ್ರದಲ್ಲಿ ಅಭಿನಯಿಸುವುದು ಅಲ್ಲದೆ ಹಲವು ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಮುಂಚೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಕಾಮಿಡಿ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ನಂತರ ಇತ್ತೀಚೆಗೆ ಮುಗಿದ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಸೀಸನ್ 4 ರಲ್ಲು ಕೂಡ ರಚಿತಾ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಕ್ರೇಜಿ ïಸ್ಟಾರ್ ರವಿಚಂದ್ರನ್ ಹಾಗೂ ಹಿರಿಯ ನಾಯಕನಟಿ ಲಕ್ಷ್ಮಿ ಅಮ್ಮ ಅವರು ಕೂಡ ತೀರ್ಪುಗಾರರಾಗಿ ಇದ್ದರು.

ರಚಿತಾ ಅವರಎ ಎಲ್ಲಾ ಕಾರ್ಯಕ್ರಮದಲ್ಲೂ ಉತ್ತಮವಾದ ಸಲುಹೆಯನ್ನು ನೀಡುತ್ತಾ ಸೋತವರಿಗೆ ಪ್ರೋತ್ಸಾಹ ನೀಡುತ್ತಾ, ಗೆದ್ದವರಿಗೆ ಮಾರ್ಗ ವನ್ನೂ ತೋರಿಸುತ್ತಾ, ಎಲ್ಲಾರಿಗೂ ಮಾದರಿಯಾಗಿದ್ದಾರೆ ಇನ್ನು ಇತ್ತೀಚೆಗೆ ಜೀ ಕನ್ನಡ ವಾಹಿನಿಯವರು ಸೂಪರ್ ಕ್ವೀನ್ಸ್ ಎಂಬ ರಿಯಾಲಿಟಿ ಶೋ ಅನ್ನು ಶುರುಮಾಡಿದ್ದಾರೆ.

ಈ ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್ ರಾಘವೇಂದ್ರ ಅವರು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು, ಅಲ್ಲದೆ ವಿಜಯ್ ರಾಘವೇಂದ್ರ ಅವರಿಗೆ ಕನ್ನಡ ಚಿತ್ರರಂಗದ ನಂಟು ಚಿಕ್ಕವಯಸ್ಸಿನಿಂದಲೂ ಇದೆ. ಕಲೆ ಕ್ಷೇತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಸಂಗೀತದಲ್ಲು ಜೊತೆಗೆ ನೃತ್ಯದಲ್ಲಿಯು ಸೈ ಎನಿಸಿಕೊಂಡಿದ್ದಾರೆ.

ಹೌದು ವಿಜಯ ರಾಘವೇಂದ್ರ ಅವರು ಈಗಾಗಲೇ ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಅಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಸೂಪರ್ ಕ್ವೀನ್ ‘ ಎಂಬ ಶೀರ್ಷಿಕೆಯ ಈ ರಿಯಾಲಿಟಿ ಶೋ ಹೆಣ್ತನವನ್ನು ಸಂಭ್ರಮಿಸುವುದಾಗಿದೆ. ಹೊಸ ರಿಯಾಲಿಟಿ ಶೋ ನವೆಂಬರ್ 19 ರಂದು ಕನ್ನಡದ ಪ್ರಮುಖ ಸಾಮಾನ್ಯ ಮನರಂಜನಾ ಜೀ ಚಾನಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿದೆ.

ರಿಯಾಲಿಟಿ ಶೋ ತನ್ನ ಗ್ರ್ಯಾಂಡ್ ಪ್ರೀಮಿಯರ್‌ಗಾಗಿ ಹೊಂದಿಸಲ್ಪಟ್ಟಿರುವುದರಿಂದ, ದೂರದರ್ಶನ ಉದ್ಯಮದ ಹತ್ತು ಮಹಿಳಾ ಸೆಲೆಬ್ರಿಟಿಗಳು ಹೊಸ ರಿಯಾಲಿಟಿ ಶೋನ ಸ್ಪರ್ಧಿಗಳಾಗಿ ಭಾಗವಾಗಲಿದ್ದಾರೆ. ರಶ್ಮಿ ಪ್ರಭಾಕರ್, ಐಶ್ವರ್ಯ ಶಿಂದೋಗಿ, ಚಂದ್ರಕಲಾ ಮೋಹ, ಅಪೂರ್ವ ಶ್ರೀ, ರೇಖಾ ಮೆನನ್, ಗೀತಾ ಭಾರತಿ ಭಟ್, ರಜಿನಿ, ಗೇಬ್ರಿಯೆಲಾ ಸ್ಮಿತ್ ಮತ್ತು ವಿಜೆ ಹೇಮಲತಾ ಅವರನ್ನು ಸೂಪರ್ ಕ್ವೀನ್‌ನ ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿದೆ.

ಹೊಸ ರಿಯಾಲಿಟಿ ಶೋನ ತೀರ್ಪುಗಾರರಾಗಿ ಚಲನಚಿತ್ರ ತಾರೆಯರಾದ ವಿಜಯ್ ರಾಘವೇಂದ್ರ ಮತ್ತು ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿ ಇರುವ ರಚಿತಾ ರಾಮ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ಇತ್ತೀಚೆಗೆ ವಿಜಯ್ ರಾಘವೇಂದ್ರ ಅವರು ಹಾಗೂ ರಚಿತಾ ರಾಮ್ ಅವರು ಇಬ್ಬರು ಸೇರಿ ವಿಜಯ್ ಅವರ ಸೇವಂತಿ ಸಿನಿಮಾದ ಜಾಜಿ ಮಲ್ಲಿಗೆ ನೋಡೇ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸದ್ಯ ಈ ರೀಲ್ಸ್ ಇನ್ಸ್ತಗ್ರಾಂ ಅಲ್ಲಿ ವೈರಲ್ ಆಗಿದೆ.