Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರಾಧಿಕಾ ಮತ್ತು ಮಗಳೊಟ್ಟಿಗೆ ದೇವಸ್ಥಾನದಲ್ಲಿ ಕಾಣಿಸಿಕೊಂಡ ಹೆಚ್ ಡಿ ಕುಮಾರಸ್ವಾಮಿ, ಪತಿಯ ಹಣೆಗೆ ತಿಲಕವಿಟ್ಟು ತಾಳಿಗೆ ನಮಸ್ಕಾರ ಮಾಡಿಕೊಂಡ ರಾಧಿಕಾ ವಿಡಿಯೋ ನೋಡಿ.

Posted on October 16, 2022 By Kannada Trend News No Comments on ರಾಧಿಕಾ ಮತ್ತು ಮಗಳೊಟ್ಟಿಗೆ ದೇವಸ್ಥಾನದಲ್ಲಿ ಕಾಣಿಸಿಕೊಂಡ ಹೆಚ್ ಡಿ ಕುಮಾರಸ್ವಾಮಿ, ಪತಿಯ ಹಣೆಗೆ ತಿಲಕವಿಟ್ಟು ತಾಳಿಗೆ ನಮಸ್ಕಾರ ಮಾಡಿಕೊಂಡ ರಾಧಿಕಾ ವಿಡಿಯೋ ನೋಡಿ.

 

ಮತ್ತೆ ದೇವಸ್ಥಾನದಲ್ಲಿ ಒಂದಾದ ರಾಧಿಕಾ ಮತ್ತು ಎಚ್ ಡಿ ಕುಮಾರಸ್ವಾಮಿ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಎಚ್ ಡಿ ಕುಮಾರಸ್ವಾಮಿ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮಗೆ ಗೊತ್ತೆ ಇದೆ. ಈ ಮದುವೆಯನ್ನು ಇವರಿಬ್ಬರು ಗೌಪ್ಯವಾಗಿ ಮಾಡಿಕೊಂಡಿದ್ದರು ಆದರೆ ಕಾಲ ಕಳೆದಂತೆ ಇವರಿಬ್ಬರೂ ಪತಿ ಮತ್ತು ಪತ್ನಿಯರು ಎಂಬ ವಿಚಾರವನ್ನು ಅವರೇ ಹೊರ ಹಾಕುತ್ತಾರೆ. ಅಷ್ಟೇ ಅಲ್ಲದೆ ಈ ದಂಪತಿಗಳಿಗೆ ಶಮಿಕ ಎಂಬ ಒಂದು ಮುದ್ದಾದ ಹೆಣ್ಣು ಮಗು ಕೂಡ ಇದೆ ಈ ಮಗುವಿನ ಹುಟ್ಟು ಹಬ್ಬದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಭಾಗಿಯಾಗಿದ್ದಂತಹ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಇದರ ಮೂಲಕ ಎಲ್ಲರಿಗೂ ಕೂಡ ಹೆಚ್ ಡಿ ಕುಮಾರಸ್ವಾಮಿಯವರೇ ರಾಧಿಕಾ ಅವರ ಗಂಡ ಎಂಬ ವಿಚಾರ ತಿಳಿಯುತ್ತದೆ.

ಇನ್ನು ರಾಧಿಕಾ ಅವರಿಗೆ ಇದು ಮೊದಲನೇ ಮದುವೆ ಏನಲ್ಲ ಅವರು 15 ವರ್ಷ ವಯಸ್ಸಿನಲ್ಲಿ ಇರುವಾಗಲೇ ರತನ್ ಎಂಬ ಅವರೊಟ್ಟಿಗೆ ಇವರ ಮದುವೆಯಾಗಿರುತ್ತದೆ. ಆದರೆ ರತನ್ ಅವರು ಹೃ.ದ.ಯ.ಘಾ.ತ.ದಿಂದ ಸಾ.ವ.ನ್ನ.ಪ್ಪು.ತ್ತಾ.ರೆ ತದನಂತರ ರಾಧಿಕಾ ಅವರು ನಟನೆಯಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದ ಕಾರಣ ಚಿತ್ರರಂಗಕ್ಕೆ ಪಾದರ್ಪಣೆ ಪಡೆಯುತ್ತಾರೆ. ನೀಲ ಮೇಘ ಶಾಮ ಎಂಬ ಸಿನಿಮಾದಲ್ಲಿ ಪುಟ್ಟದೊಂದು ಪಾತ್ರದಲ್ಲಿ ನಟನೆ ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ವಿಜಯ ರಾಘವೇಂದ್ರ ಅಭಿನಯದ ನಿನಗಾಗಿ ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಕಾಣಿಸಿಕೊಂಡರು. ಇದಾದ ನಂತರ ತಬ್ಬಲಿ, ತವರಿಗೆ ಬಾ ತಂಗಿ, ಅಣ್ಣ ತಂಗಿ, ಸ್ವೀಟಿ, ರವಿ ಬೋಪಣ್ಣ, ಧಮಯಂತಿ, ಅನಾಥರು, ಹೀಗೆ ಕನ್ನಡದ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ಕೇವಲ ನಟನೆ ಮಾತ್ರವಲ್ಲದೆ ರಾಧಿಕಾ ಕುಮಾರಸ್ವಾಮಿ ಅವರು ಶಮಿಕ ಎಂಟರ್ಪ್ರೈಸಸ್ ಎಂಬ ಸಂಸ್ಥೆಯನ್ನು ತೆರೆದು ಅದರ ಮೂಲಕ ನಿರ್ಮಾಪಕಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಮತ್ತು ಮೋಹಕ ತಾರೆ ರಮ್ಯಾ ಅವರ ಲಕ್ಕಿ ಸಿನಿಮಾ ಶಮಿಕಾ ಎಂಟರ್ಪ್ರೈಸಸ್ ಮೂಲಕವೇ ಬಂತು. ಇದಾದ ನಂತರ ಸ್ವೀಟಿ ಎಂಬ ಸಿನಿಮಾವು ಕೂಡ ಸಮೀಪ ಎಂಟರ್ಪ್ರೈಸಸ್ ಮೂಲಕ ಹೊರ ಬಂದಿತ್ತು. ತದನಂತರ ರಾಧಿಕಾ ಅವರು ಕೊನೆಯದಾಗಿ ನಿರ್ಮಾಣ ಮಾಡಿದ ಸಿನಿಮ ಅಂದರೆ ಅದು ಧಮಯಂತಿ ಅಂತ ಹೇಳಬಹುದು ಇನ್ನು ಕಳೆದ ತಿಂಗಳಷ್ಟೇ ಬಿಡುಗಡೆಯಾದ ರವಿಚಂದ್ರನ್ ಅವರ ರವಿ ಬೋಪಣ್ಣ ಎಂಬ ಸಿನಿಮಾದಲ್ಲಿ ಮತ್ತೆ ನಾಯಕ ನಟಿಯಾಗಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಇದಿಷ್ಟು ಇವರ ಸಿನಿ ಜೀವನ ಇನ್ನು ವಯಕ್ತಿಕ ಜೀವನಕ್ಕೆ ಬರುವುದಾದರೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಮದುವೆಯಾದ ನಂತರ ರಾಧಿಕಾ ಕುಮಾರಸ್ವಾಮಿ ಅವರು ಹಲವಾರು ಟೀಕೆಗೆ ಗುರಿಯಾಗುತ್ತಾರೆ. ಅಷ್ಟೇ ಅಲ್ಲದೆ ಸ್ವತಃ ನಿಖಿಲ್ ಕುಮಾರಸ್ವಾಮಿಯವರೇ ರಾಧಿಕ ವಿರುದ್ಧ ಗುಡುಗುತ್ತಾರೆ. ಹೌದು ನನಗೆ ಇರುವುದು ಒಬ್ಬಳೇ ತಾಯಿ ಅದು ಅನಿತಾ ಕುಮಾರಸ್ವಾಮಿ ನನ್ನ ತಾಯಿಗೆ ಮೋಸವಾಗುತ್ತಿದೆ ನಾನು ಯಾವುದೇ ಕಾರಣಕ್ಕೂ ಶಮಿತ ಅವರನ್ನು ನನ್ನ ತಂಗಿ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಹೇಳಿಕೆ ನೀಡಿದರು. ಈ ಹೇಳಿಕೆ ಕೇಳಿದಂತಹ ನಟಿ ರಾಧಿಕಾ ಕುಮಾರಸ್ವಾಮಿ ಅವರು ಕೂಡ ಯಾರು ಒಪ್ಪಿಕೊಂಡರು ಒಪ್ಪಿಕೊಳ್ಳದೆ ಹೋದರೂ ಕೂಡ ಶಮಿಕ ಎಚ್ ಡಿ ಕುಮಾರಸ್ವಾಮಿ ಅವರಿಗೆ ಹುಟ್ಟಿದ ಮಗಳೇ ಎಂಬುವುದು ಇಡೀ ಕರ್ನಾಟಕದ ಜನತೆಗೆ ತಿಳಿದಿದೆ ಎಂದು ತಿರುಗೇಟು ಕೊಟ್ಟರು.

ಇದಾದ ನಂತರ ರಾಧಿಕಾ ಕುಮಾರಸ್ವಾಮಿ ಹಾಗೂ ಹೆಚ್‍ಡಿ ಕುಮಾರಸ್ವಾಮಿ ಅವರ ನಡುವೆ ವೈ ಮನಸು ಉಂಟಾಗಿ ಒಂದೆರಡು ವರ್ಷ ದೂರ ಉಳಿದಿದ್ದರೂ ಎಂದು ಕೆಲವು ಆಪ್ತ ಮೂಲಗಳಿಂದ ತಿಳಿದು ಬಂದಿತು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಮತ್ತೆ ಇವರಿಬ್ಬರ ನಡುವೆ ಇದ್ದಂತಹ ವೈ ಮನಸು ಸರಿ ಹೋಗಿದೆ ಹಾಗಾಗಿ ಇವರಿಬ್ಬರೂ ಕೂಡ ಮತ್ತೆ ಮೊದಲಿನಂತೆ ಒಟ್ಟಾಗಿ ಜೀವನ ಸಾಗಿಸುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ. ಆದರೆ ಇದು ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ ಆದರೂ ಕೂಡ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ರಾಧಿಕಾ ಮತ್ತು ಶಮಿಕ ಮೂವರು ಕೂಡ ದೇವಸ್ಥಾನ ಒಂದರ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಈ ಸಮಯದಲ್ಲಿ ಸ್ವತಃ ರಾಧಿಕಾ ಅವರೇ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ತಿಲಕವನ್ನು ಇಟ್ಟಿದ್ದಾರೆ ಕುಮಾರಸ್ವಾಮಿಯವರು ಕೂಡ ತಮ್ಮ ಮಗಳನ್ನು ಎತ್ತಿ ಮುದ್ದಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದ್ದಾರೆ, ನಿಖಿಲ್ ನೋಡಿದರೆ ನಾನು ತಂಗಿ ಅಂತ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ಒಂದು ಬಾರಿ ಮಾಧ್ಯಮದಲ್ಲಿ ರಾಧಿಕಾ ಯಾರು ಎಂಬುದೇ ನನಗೆ ಗೊತ್ತಿಲ್ಲ ಅಂದಿದ್ದರು. ಆದರೆ ಈಗ ನೋಡಿದರೆ ಎಲ್ಲರೂ ಒಟ್ಟಾಗಿ ಇದ್ದಾರೆ ಇದನೆಲ್ಲಾ ನೋಡುತ್ತಿದ್ದ ಜನರು ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಬೈದುಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

 

Entertainment Tags:H D Kumaraswamy, Radhika Kumarswamy, Shamika
WhatsApp Group Join Now
Telegram Group Join Now

Post navigation

Previous Post: ಸೈಮಾ ವೇದಿಕೆಯ ಮೇಲೆ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮಾಡಿದ ಈ ಸಖತ್ ಡಾನ್ಸ್ ನೋಡಿದ್ರೆ ನಿಜಕ್ಕೂ ನೀವು ಕೂಡ ನಿಂತಲ್ಲೇ ಕುಣಿಯುತ್ತೀರಾ.
Next Post: ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore