Home Entertainment ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.

ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.

0
ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.

ಓಟಿಟಿಯಲ್ಲಿ ಪ್ರಾರಂಭವಾದ ಬಿಗ್ ಬಾಸ್ ನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯರ್ ಇಬ್ಬರೂ ಕೂಡ ಸ್ಪರ್ಧಿಯಾಗಿದ್ದರು ಸುಮಾರು 40 ದಿನಗಳ ಕಾಲ ಓ ಟಿ ಟಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಇದೀಗ ಬಿಗ್ ಬಾಸ್ ಸೀಸನ್ 9ರ ಆವೃತ್ತಿ ಗೂ ಕಾಲಿಟ್ಟಿರುವ ವಿಚಾರ ನಿಮಗೆ ತಿಳಿದಿದೆ. ಓಟಿಟಿ ಬಿಗ್ ಬಾಸ್ ನಲ್ಲಿಯೇ ಇವರಿಬ್ಬರೂ ಕೂಡ ಬಹಳ ಆತ್ಮೀಯ ಸ್ನೇಹಿತರಾದರು ಇನ್ನು ಬಿಗ್ ಬಾಸ್ ಸೀಸನ್ 9ರ ಮನೆಗೆ ಬಂದ ಮೇಲಂತೂ ಹೇಳುವ ಹಾಗೆಯೇ ಇಲ್ಲ. ಇವರಿಬ್ಬರ ನಡುವೆ ಇದ್ದಂತಹ ಸಂಬಂಧ ಇನ್ನಷ್ಟು ಆತ್ಮೀಯವಾಯಿತು ಅಷ್ಟೇ ಅಲ್ಲದೆ ಸಾನ್ಯಾ ಕೂಡ ಪರೋಕ್ಷವಾಗಿ ರೂಪೇಶ್ ಶೆಟ್ಟಿ ಅವರನ್ನು ಪ್ರೀತಿಸುತ್ತಿರುವ ವಿಚಾರವನ್ನು ಮನೆಯವರ ಜೊತೆ ಹೇಳಿಕೊಂಡಿದ್ದರು.

ಈ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಅವರು ಕೂಡ ಕಳೆದ ಎರಡು ವಾರಗಳಿಂದಲೂ ಕಾಲೆಳೆಯುತ್ತಿದ್ದರು ಆದರೆ ಇದು ಕಿಚ್ಚ ಸುದೀಪ್ ಅವರಿಗೆ ಪರೋಕ್ಷವಾಗಿ ಕೊಡುತ್ತಿದ್ದಂತಹ ಎಚ್ಚರಿಕೆ ಎಂದು ಸಾನ್ಯಾ ಮತ್ತು ರೂಪೇಶ್ ಇಬ್ಬರಿಗೂ ಕೂಡ ಅರಿವಾಗಿರಲಿಲ್ಲ. ಆದರೆ ಈ ವಾರದಲ್ಲಿ ಮಾತ್ರ ಕಿಚ್ಚ ಸುದೀಪ್ ರೂಪೇಶ್ ಹಾಗೂ ಸಾನಿಯಾ ಅವರ ಅತೀವ ವರ್ತನೆಯ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಮನೆ ಇರುವುದು ಅದಕ್ಕಾಗಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಈ ವಿಚಾರ ಕೇಳುತ್ತಿದ್ದ ಹಾಗೆ ರೂಪೇಶ್ ಶೆಟ್ಟಿ ನೀವು ತಪ್ಪಾಗಿ ತಿಳಿದುಕೊಂಡಿದ್ದೀರಾ ನಾವಿಬ್ಬರು ಆ ರೀತಿ ಇಲ್ಲ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಸುದೀಪ್, ಕ್ಯಾಪ್ಟನ್ಸಿ ಅವಧಿ ಮುಗಿದ ಮೇಲೆ ನೀವು ಪಿಕ್ ನಿಕ್ ಮಾಡ್ತಾ ಇದ್ರಿ ಕ್ಯಾಪ್ಟನ್ ರೂಂ ಗೆ ಒಂದು ಗೌರವ ಇದೆ ಅದು ಪಿಕ್ ನಿಜ್ ಸ್ಪಾಟ್ ಅಲ್ಲ ಎಂದು ಅವರು ಹೇಳಿದ್ದಾರೆ. ಈ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ ರೂಪೇಶ್ ಅವರು ಸ್ಪಷ್ಟನೆಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ನಮ್ಮ ಉದ್ದೇಶ ಹಾಗೆ ಇರಲಿಲ್ಲ ನಾನು ಯಾವಾಗಲೂ ಆ ರೀತಿ ಇರಲಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಇದಕ್ಕೆ ನಟ ಕಿಚ್ಚ ಸುದೀಪ್ ಅವರು ಸಹಾ ಖಡಕ್ ಉತ್ತರವನ್ನು ನೀಡಿದ್ದಾರೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.

ನೀವು ಮಿತಿ ಮೀರಿ ನಡೆದುಕೊಂಡಿದ್ದೀರಿ ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು ನೀವು ಮಧ್ಯ ರಾತ್ರಿ ಹಗ್ ಮಾಡಿಕೊಳ್ತೀರಿ ಅದಕ್ಕೆ ನಾವು ಯಾವುದೇ ಅಪಸ್ವರವನ್ನು ತೆಗೆದಿಲ್ಲ. ಅದು ಅಲ್ಲೇನು ಸಮಸ್ಯೆ ಅಲ್ಲ ಈ ಮೊದಲು ಸಹಾ ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಆದರೆ ಈಗ ಅದನ್ನು ಹೇಳ್ತಾ ಇದ್ದೀವಿ ಅಂದ್ರೆ ಅರ್ಥ ಮಾಡ್ಕೊಳ್ಳಿ ನೀವು ಹೀಗೆ ಮಾಡ್ತಾ ಇರೋದ್ರಿಂದಲೇ ನಮಗೆ ಕಂಟೆಂಟ್ ಸಿಗುತ್ತಿದೆ ಎಂದರೆ ಈ ಮನೆ ಅದಕ್ಕಲ್ಲ ಎಂದು ಅವರು ಹೇಳಿದ್ದಾರೆ. ಸುದೀಪ್ ಅವರ ಈ ಎಚ್ಚರಿಕೆ ಮುಂದಿನ ದಿನಗಳಲ್ಲಿ ಹೇಗೆ ಕೆಲಸ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಆದರೂ ಕೂಡ ಪ್ರತಿ ಬಾರಿಯ ಸೀಸನ್ ನಲ್ಲಿಯೂ ಕೂಡ ಒಂದಲ್ಲ ಒಂದು ಪ್ರಣಯ ಪಕ್ಷಿ ಜೋಡಿಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸೀಸನ್ ಮೂರರಿಂದ ಹಿಡಿದು ಸೀಸನ್ 9ರವರೆಗೂ ಕೂಡ ಬಿಗ್ ಬಾಸ್ ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಂತಹ ವ್ಯಕ್ತಿಗಳ ಪೈಕಿ ಇದೀಗ ಹೆಚ್ಚು ಸದ್ದು ಮಾಡುತ್ತಿರುವುದು ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅಂತಾನೆ ಹೇಳಬಹುದು.

ಇನ್ನು ಕಿಚ್ಚ ಸುದೀಪ್ ಅವರ ಮಾತನ್ನು ಕೇಳುತ್ತಿದ್ದ ಹಾಗೆ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಗಳಗಳನೆ ಅತ್ತಿದ್ದಾರೆ ನನ್ನನ್ನು ದಯವಿಟ್ಟು ಬಿಗ್ ಬಾಸ್ ಮನೆಯಿಂದ ಆಚೆ ಕಳಿಸಿ ಬಿಡಿ ಎಂದು ತಮ್ಮ ನೋವನ್ನು ಹೊರ ಹಾಕಿದ್ದಾರೆ. ಮುಂದಿನ ದಿನದಲ್ಲಿ ರೂಪೇಶ್ ಯಾವ ನಿರ್ಧಾರ ತೆಗೆದು ಯಾವತ್ತಿರುವ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಕಿಚ್ಚ ಸುದೀಪ್ ಅವರು ಹೇಳಿದ ಮಾತು ಸರಿಯೇ ಅಥವಾ ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ಅವರು ನಡೆದುಕೊಳ್ಳುತ್ತಿರುವ ರೀತಿ ಸರಿಯೇ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here