ಇಡೀ ಕರ್ನಾಟಕದ ತುಂಬೆಲ್ಲ ಗಣೇಶ ಚತುರ್ಥಿಯ ಸಂಭ್ರಮ, ತಿಂಗಳುಗಳ ಹಿಂದೆಯಿಂದಲೇ ಇದಕ್ಕಾಗಿ ಭಾರತದಾದ್ಯಂತ ತಯಾರಿ ಶುರುವಾಗಿದೆ. ಆದರೆ ಕರ್ನಾಟಕದ ಮಟ್ಟಕ್ಕೆ ಈ ಬಾರಿ ಗಣೇಶನ ಉತ್ಸವದಲ್ಲಿ ಒಂಚೂರು ಮಂಕು ಕವಿದ ಭಾವ ಜೊತೆಗೆ ದೊಡ್ಮನೆಗೆ ವರ್ಷದಿಂದ ಯಾವುದೇ ಹಬ್ಬದ ಸಂಭ್ರಮವೇ ಇಲ್ಲ. ಕಾರಣ ಕರುನಾಡಿನ ಮಗನನ್ನು ಕಳೆದುಕೊಂಡಿರುವ ಆ ನೋವು ದುಃಖ. ಆಗಸ್ಟ್ 29ಕ್ಕೆ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು 10 ತಿಂಗಳು ತುಂಬಿದೆ. ಈ ಪ್ರಯುಕ್ತ ಕುಟುಂಬಸ್ಥರೆಲ್ಲ ಕಂಠೀರವ ಸ್ಟುಡಿಯೋ ಅಲ್ಲಿರುವ ಅಪ್ಪು ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ದಿನ ದಿನ ಕಳೆಯುತ್ತಿದ್ದಂತೆ ನೋವು ಕರಗುತ್ತದ್ದೆ ಎಂದು ಎಲ್ಲರು ಹೇಳುತ್ತಾರೆ ಆದರೆ ಅಪ್ಪು ಇಲ್ಲದ ನೋವು ಮಾತ್ರ ದಿನಗಳ ಅಂತರ ಹೆಚ್ಚಾದಷ್ಟು ಎದೆಯಾಳವನ್ನು ಇರಿಯುತ್ತಿದೆ.
ಕಳೆದ 10 ತಿಂಗಳಿಂದ ಕರ್ನಾಟಕದ ಪ್ರತಿ ಹಬ್ಬ ಪ್ರತಿ ಜಾತ್ರೆ ಪ್ರತಿ ಸಭೆ ಪ್ರತಿ ಸಮಾರಂಭ ಹೀಗೆ ಪ್ರತಿದಿನವೂ ಕೂಡ ಅಪ್ಪುವಿನ ಜಪ ತಪ್ಪದೇ ನಡೆಯುತ್ತಿದೆ ಈಗಾಗಲೇ ದಾಖಲೆ ಮಟ್ಟದಷ್ಟು ಅಪ್ಪುವಿನ ಹೆಸರಿನಲ್ಲಿ ಅನೇಕ ಒಳ್ಳೆಯ ಕೆಲಸಗಳು ಕೂಡ ನಡೆದಿವೆ. ಇದಕ್ಕೆಲ್ಲ ಸ್ಫೂರ್ತಿ ಅಪ್ಪು ಅವರೇ, ಅವರು ಬದುಕನ್ನು ನೋಡಿದ ರೀತಿ ಹಾಗೂ ಅವರ ಬದುಕನ್ನು ಸಮಾಜಕ್ಕಾಗಿ ಮೀಸಲಿಟ್ಟ ಅವರ ಗುಣ ಅಪ್ಪು ಅಕಾಲಿಕದ ಮರಣದ ಬಳಿಕ ಹೃದಯಗಳ ಕಣ್ ತೆರೆದಿದೆ ಎನ್ನಬಹುದು. ಇದುವರೆಗೂ ಅಭಿಮಾನಿಗಳು ಅಷ್ಟೇ ಆಗಿದ್ದ ಕರ್ನಾಟಕದ ಜನತೆ ಈಗ ಅಪ್ಪುವಿಗೆ ಭಕ್ತರೇ ಆಗಿ ಹೋಗಿದ್ದಾರೆ, ಅಪ್ಪುವಿನ ಹಾದಿಯಲ್ಲಿ ತಮ್ಮಿಂದದಷ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಹೆಜ್ಜೆ ಇಡುತ್ತಿದ್ದಾರೆ. ಎಲ್ಲರ ಮನೆಯಲ್ಲೂ ಕೂಡ ಅಪ್ಪುವಿನ ರೀತಿ ಒಬ್ಬ ಮಗ ಇರಬೇಕು ಎನ್ನುವುದು ಎಲ್ಲ ತಂದೆ ತಾಯಿಯ ಆಶಯ.
ಈಗ ಇದೇ ರೀತಿ ದಂಪತಿಯೊಬ್ಬರು ತಮ್ಮ ಮಗುವಿಗೆ ಅಪ್ಪುವಿನ ಹೆಸರಿಸಿಕೊಳ್ಳುವ ಮೂಲಕ ಅವರು ಅಪ್ಪುವಂತೆ ಆಗಬೇಕು ಎಂದು ಆಸೆ ಪಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಸಬಾ ಸಮೀಪದ ಗ್ರಾಮದ ದಂಪತಿಗಳಾದ ಮಾರುತಿ ಬೆಳವಣಿಕಿ ಮತ್ತು ಸಂಗೀತ ಎನ್ನುವ ದಂಪತಿಗೆ ಗಂಡು ಮಗುವನ್ನು 22 ದಿನಗಳ ಹಿಂದೆ ಜನಿಸಿದೆ. ಜೊತೆಗೆ ಮಾರುತಿ ಅವರು ಅಪ್ಪು ಅವರ ಅಭಿಮಾನಿ ಆಗಿದ್ದು ಚಿಕ್ಕ ವಯಸ್ಸಿನಿಂದಲೂ ಕೂಡ ಅಪ್ಪು ಅವರನ್ನು ಬಹಳ ಇಷ್ಟಪಡುತ್ತಿದ್ದರು. ಅಲ್ಲದೆ ಅಪ್ಪುವಿನ ಯಾವುದೇ ಸಿನಿಮಾ ರಿಲೀಸ್ ಆದರೂ ಕೂಡ ಅದನ್ನು ಹಬ್ಬದಂತೆ ಸಂಭವಿಸುತ್ತಿದ್ದ ಇವರು ಆ ಭಾಗದಲ್ಲೆಲ್ಲಾ ಅಪ್ಪು ಎಂದು ಫೇಮಸ್ ಆಗಿದ್ದಾರೆ. ಅಪ್ಪು ಅವರು ಇಹ ಲೋಕ ತಿಳಿಸಿದ ಬಳಿಕ ಬಹಳ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದ ಮಾರುತಿ ಕುಟುಂಬ ಈಗ ಮರಿ ಅಪ್ಪುವನ್ನು ಕಾಣುತ್ತಿದ್ದಾರೆ.
ಈಗ ತಮ್ಮ ಮಗುವಿಗೆ ಅಪ್ಪು ಅವರ ಹೆಸರನ್ನೇ ಇಡಬೇಕು ಎಂದು ನಿರ್ಧರಿಸುವ ದಂಪತಿ ಈ ಕಾರ್ಯಕ್ರಮವನ್ನು ಶಿವಣ್ಣ ಅಥವಾ ರಾಘಣ್ಣನ ಕೈಯಿಂದ ಮಾಡಿಸಬೇಕು ಎಂದು ಬಯಸಿದ್ದರು ಅವರ ಆಸೆಯನ್ನು ಈಡೇರಿಸಿದ ರಾಘಣ್ಣ ಅವರು ತಮ್ಮ ನಿವಾಸದಲ್ಲಿ ಅಪ್ಪು ಅಭಿಮಾನಿಯ ಮಗನ ಕಿವಿಯಲ್ಲಿ ಮೂರು ಬಾರಿ ಪುನೀತ್ ರಾಜಕುಮಾರ್ ಎಂದು ಹೇಳುವ ಮೂಲಕ ಆ ಮಗುವಿಗೆ ಪ್ರೀತಿಯ ತಮ್ಮನ ಹೆಸರಿಟ್ಟಿದ್ದಾರೆ ಹಾಗೂ ಈ ಖುಷಿಯ ಸಂಭ್ರಮದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಾಘಣ್ಣ ಅವರ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಅದರಲ್ಲಿ ಅತಿ ಹೆಚ್ಚು ಸುದ್ದಿಯನ್ನು ಕುಟುಂಬಸ್ಥರ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ.