ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದರ ಹಿಂದೆ ಓಡುತ್ತಿರುತ್ತಾರೆ ಕೆಲವರು ಅಂದುಕೊಳ್ಳುತ್ತಾರೆ ನನಗೆ ಇಂತಿಷ್ಟು ಹಣ ಸಿಕ್ಕಿಬಿಟ್ಟರೆ ಸಾಕು ಜೀವನಪೂರ್ತಿ ನೆಮ್ಮದಿಯಿಂದ ಇರುತ್ತೇನೆ ಎಂದು ಕೆಲವರು ಎಂದುಕೊಳ್ಳುತ್ತಾರೆ ನನಗೆ ನನ್ನಿಷ್ಟದ ಹುದ್ದೆ ಸಿಕ್ಕೆ ಬಿಟ್ಟರೆ ಸಾಕು ನಾನು ಜೀವನಪೂರ್ತಿ ನೆಮ್ಮದಿಯಾಗಿ ಇರುತ್ತೇನೆ ಎಂದು. ಹೀಗೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಆಸೆ ಇಟ್ಟುಕೊಂಡಿರುತ್ತಾರೆ ಆ ಸಾಧನೆ ಮಾಡಿದ ಬಳಿಕ ನಾನು ಸಂತೋಷವಾಗಿ ಇರುತ್ತೇನೆ ಎಂದುಕೊಳ್ಳುತ್ತಾರೆ ಆದರೆ ಜೀವನದಲ್ಲಿ ನೆಮ್ಮದಿ ಹಾಗೂ ಸಂತೋಷ ಎನ್ನುವುದು ಸಕ್ಸಸ್ ಇಂದ ಆಗಲಿ ಅಥವಾ ಹಣದಿಂದ ಆಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಭಾರತದ ದಂತಕಥೆ ಎನಿಸಿರುವ ರಜನಿಕಾಂತ್ ಅವರು. ಭಾರತದ ಸೂಪರ್ ಸ್ಟಾರ್ ಆಗಿರುವ ಇವರ ಬಾಯಿಂದ ಈ ಮಾತು ಬರಲು ಕಾರಣ ಆಗಿದ್ದಾದರೂ ಏನು ಗೊತ್ತಾ.?
ಶಿವಾಜಿರಾವ್ ಗಾಯಕ್ವಾಡ್ ಇದು ರಜನಿಕಾಂತ್ ಅವರ ಮೊದಲ ಹೆಸರು ಬೆಂಗಳೂರಿನ ಹನುಮಂತನಗರದಲ್ಲಿ ಮರಾಠಿ ಕುಟುಂಬ ಒಂದರಲ್ಲಿ ಜನಿಸಿ ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಹೊಟ್ಟೆಪಾಡಿಗಾಗಿ ಹಲವಾರು ಕೆಲಸವನ್ನು ಮಾಡುತ್ತಿದ್ದ ಇವರು ಬಿಟಿಎಸ್ ಬಸ್ ಕಂಡಕ್ಟರ್ ಆಗಿ ಹಲವು ದಿನಗಳ ವರೆಗೆ ಸೇವೆ ಸಲ್ಲಿಸಿದ್ದಾರೆ. ಅದೇ ಸಮಯದಲ್ಲಿ ಇವರಿಗೆ ಸಿನಿಮಾ ರಂಗದ ಬಗ್ಗೆ ಆಕರ್ಷಣೆ ಉಂಟಾಗಿ ಚೆನ್ನೈಗೆ ಹೋಗಿ ಇದಕ್ಕೆ ಸಂಬಂಧಪಟ್ಟ ತರಬೇತಿ ಪಡೆದುಕೊಳ್ಳಲು ಸೇರಿಕೊಳ್ಳುತ್ತಾರೆ. ಇದಾದ ನಂತರ ಅವರ ಬದುಕು ಎಲ್ಲವರು ಆಶ್ಚರ್ಯ ಪಡುವ ರೀತಿ ಬದಲಾಯಿತು ಇಂದಿಗೂ ಕೂಡ ಎಷ್ಟೋ ಯುವಕರಿಗೆ ರಜನಿಕಾಂತ್ ಅವರು ರೋಲ್ ಮಾಡೆಲ್ ಆಗಿದ್ದಾರೆ. ಯಾಕೆಂದರೆ ಹೀರೋ ಆಗಬೇಕು ಎಂದು ಹಠ ಹೊತ್ತು ಚೆನೈಗೆ ಹೋದ ಈತ ಇಡೀ ಭಾರತವಲ್ಲದೇ ವಿಶ್ವವೇ ತಿರುಗಿ ನೋಡುವಂತಹ ನಟನಾಗಿ ಬೆಳೆದು ನಿಂತಿದ್ದಾರೆ.
ರಜನಿಕಾಂತ್ ಅವರು ಪ್ರಾರಂಭಿಕ ಹಂತದಲ್ಲಿ ಒಂದೆರಡು ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು ಕೂಡ ಅವರ ಹೀರೋ ಆಗಿ ಬೆಳೆದ ಮೇಲೆ ಎಂದು ಕೂಡ ಹಿಂತಿರುಗಿ ನೋಡಿದ್ದೇ ಇಲ್ಲ. ತಮಿಳುನಾಡನ್ನು ಇಂದಿಗೂ ಆಳುತ್ತಿರುವ ನಂಬರ್ ವನ್ ಸೂಪರ್ ಸ್ಟಾರ್ ಆಗಿರುವ ಇವರು ತಮ್ಮ ಆದರ್ಶಮಯ ಜೀವನದಿಂದ ಎಲ್ಲರ ಪ್ರೀತಿಯನ್ನು ಗಳಿಸಿದ್ದಾರೆ. ಆಧ್ಯಾತ್ಮದಲ್ಲೂ ಬಹಳಷ್ಟು ಆಸಕ್ತಿ ಹೊಂದಿರುವ ಇವರು ರಾಜಕೀಯವಾಗಿ ಕೂಡ ಗುರುತಿಸಿಕೊಂಡು ಸಮಾಜ ಸೇವೆ ಮಾಡುವ ಆಸೆ ಪಟ್ಟಿದ್ದರು. ಆದರೆ ಅನಾರೋಗ್ಯ ಸಮಸ್ಯೆಯಿಂದ ರಾಜಕೀಯ ಆಸಕ್ತಿಯನ್ನು ಹಿಂಪಡೆದಿರುವ ಇವರು ಸಿನಿಮಾರಂಗದಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. 70ರ ಆಸು ಪಾಸಿನಲ್ಲಿರುವ ಇವರ ಸಿನಿಮಗಳಿಗಾಗಿ ಇನ್ನು ಕೂಡ ಅಭಿಮಾನಿಗಳು ಕಾಯುತ್ತಿದ್ದಾರೆ.
ಈಗ ಅವರ ಬದುಕಿನಲ್ಲಿ ಹಣ ಹೆಸರು ಎಲ್ಲ ಇದೆ ಆದರೆ ನೆಮ್ಮದಿ ಇಲ್ಲ ಇಂದು ಅವರೇ ಹೇಳುತ್ತಿದ್ದಾರೆ ಇತ್ತೀಚೆಗೆ ಒಂದು ಸಮಾರಂಭದಲ್ಲಿ ಮುಕ್ತವಾಗಿ ಮಾತನಾಡಿದ ಅವರು ಈ ಕುರಿತಾದ ಹೇಳಿಕೆಗಳನ್ನು ನೀಡಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವುದು ಎಲ್ಲರಿಗೂ ತಿಳಿದೇ ಇದೆ, ಅವರ ಆಪ್ತ ಬಳಗವು ಹೇಳುವಂತೆ ರಜನಿಕಾಂತ್ ಅವರ ಎರಡು ಹೆಣ್ಣು ಮಕ್ಕಳ ಬದುಕು ಕೂಡ ಹಸನಾಗಿ ಇಲ್ಲದೆ ಇರುವುದು ಅವರ ಈ ನೋವಿಗೆ ಕಾರಣವಾಗಿದೆಯಂತೆ. ರಜನಿಕಾಂತ್ ಅವರ ಮೊದಲ ಮಗಳು ಸೌಂದರ್ಯ ಪ್ರೀತಿಸಿ ವಿವಾಹವಾಗಿದ್ದರೂ ಕೂಡ 2017ನೇ ಇಸ್ವಿಯಲ್ಲಿ ತಮ್ಮ ಮದುವೆಯನ್ನು ಮುರಿದುಕೊಂಡರು. ಈಗ 2019 ರಲ್ಲಿ ಮರು ವಿವಾಹವಾಗಿದ್ದಾರೆ. ಅದರ ರಜನಿಕಾಂತ್ ಅವರಿಗೆ ಅದಕ್ಕಿಂತಲೂ ಹೆಚ್ಚಿಗೆ ಶಾ.ಕ್ ನೀಡಿದ್ದು ಎರಡನೇ ಪುತ್ರಿ ಐಶ್ವರ್ಯ ಹಾಗೂ ಧನುಷ್ ಅವರ ವಿ.ಚ್ಛೇ.ದ.ನ.
ಧನುಷ್ ಹಾಗು ರಜನಿಕಾಂತ್ ಅವರ ನಡುವೆ ತುಂಬಾ ಒಳ್ಳೆಯ ಬಾಂಧವ್ಯವಿತ್ತು ಸಿನಿಮಾಗೆ ಸಂಬಂಧಪಟ್ಟ ಹಾಗೆ ಹಾಗೂ ಕೌಟುಂಬಿಕ ವಿಚಾರಗಳಲ್ಲೂ ಧನುಷ್ ಅವರು ರಜನಿಕಾಂತ್ ಅವರಿಗೆ ಶಕ್ತಿ ಆಗಿದ್ದರು. ಈಗ ಅಳಿಯ ಹಾಗೂ ಮಗಳು ಬೇರೆ ಬೇರೆ ಆಗಿರುವುದು ರಜನಿಕಾಂತ್ ಅವರನ್ನು ಬಹಳ ಕಾಡುತ್ತಿದೆಯಂತೆ ಇಬ್ಬರು ಮಕ್ಕಳು ಕೂಡ ಪ್ರೀತಿಸಿ ವಿವಾಹವಾದರೂ ವಿ.ಚ್ಛೇ.ದ.ನ ಪಡೆದಿದ್ದಾರೆ ಈ ನೋ.ವಿನಿಂದ ರಜನಿಕಾಂತ್ ಅವರಿಗೆ ಸ್ವಲ್ಪವೂ ಕೂಡ ನೆಮ್ಮದಿ ಇಲ್ಲ ಹಾಗಾಗಿ ಆಪ್ತರೊಂದಿಗೆ ನನ್ನ ಬದುಕಿನಲ್ಲಿ ಕೋಟಿ ಕೋಟಿ ಆಸ್ತಿ ಇದ್ದರೇನು ನೆಮ್ಮದಿ ಮಾತ್ರ ಇಲ್ಲ ಎಂದು ತಮ್ಮ ಅಳಲನ್ನು ತೊಡೆದುಕೊಂಡಿದ್ದಾರೆ. ಜೀವನದಲ್ಲಿ ನೋವು ಎಂಬುದು ಒಂದು ಭಾಗಶಹ ಅಂಶ ಸೆಲಬ್ರೆಟಿಯಾಗಿರಲಿ ಸಾಮಾನ್ಯ ಜನರು ಆಗಿರಲಿ ಎಲ್ಲರೂ ಕೂಡ ಈ ನೋ.ವನ್ನು ದಾಟಿ ಮುಂದೆ ಸಾಗಲೇಬೇಕು. ರಜಿನಿ ಅವರ ಪಾಲಿಗೂ ಕೂಡ ಇದೇ ದೊರೆತಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ