ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಸೂಪರ ಸ್ಟಾರ್ (Super star of Indian cinema industry) ಎಂದು ಕರೆಸಿಕೊಂಡಿರುವ ರಜನಿಕಾಂತ್ (Rajanikanth) ಅವರು ಸದ್ಯಕ್ಕೆ ತಮಿಳು ಚಿತ್ರರಂಗದ ಮೇರು ನಟ. ತಲೈವ ಎಂದೇ ತಮಿಳುನಾಡಿನಲ್ಲಿ ಖ್ಯಾತರಾಗಿರುವ ರಜನಿಕಾಂತ್ ಅವರು ತಮಿಳು ತೆಲುಗು ಹಿಂದಿ ಕನ್ನಡ ಬಂಗಾಳಿ ಹೀಗೆ ದೇಶದ ನಾನಾ ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟ ಎಂದು ಕೂಡ ಹೆಸರು ಮಾಡಿದ್ದಾರೆ. ರಜನಿಕಾಂತ್ ಅವರು ಇಂದು ತಮಿಳುನಾಡು ಚಿತ್ರರಂಗವನ್ನು ಆಳುತ್ತಿದ್ದಾರೆ ಎಂದರೆ ಅದು ಸುಳ್ಳಲ್ಲ.
ಯಾಕೆಂದರೆ ಇಂದು ತಮಿಳುನಾಡು ಮಾತ್ರ ಅಲ್ಲದೆ ಇಡೀ ದೇಶವೇ ಇವರ ಸಿನಿಮಾ ರಿಲೀಸ್ ಆಗೋದನ್ನು ಕಾಯುತ್ತಿರುತ್ತದೆ. ಈ ಇಳಿ ವಯಸ್ಸಿನಲ್ಲಿ ಸಹ ಇವರ ಸಿನಿಮಾಗೆ ಇಷ್ಟು ಹವಾ ಇದೆ ಎಂದರೆ ಅದು ಈ ಭಾಷ ನಿಗೆ ಇರುವ ಅಭಿಮಾನಿ ಬಳಗ ಎಂತದ್ದು ಎನ್ನುವುದನ್ನು ತಿಳಿಸುತ್ತದೆ. ರಜನಿಕಾಂತ್ ಅವರು ಇಂದು ತಮಿಳುನಾಡಿನಲ್ಲಿ ಸೆಟಲ್ ಆಗಿದ್ದಾರೆ. ಆದರೆ ಅವರು ಮೂಲತಃ ಕರ್ನಾಟಕದವರು. ಹುಟ್ಟಿ ಬೆಳೆದಿದ್ದು ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಬೆಂಗಳೂರಿನಲ್ಲಿಯೇ.
ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡಕ್ಟರ್ (BTS bus conductor) ಆಗಿದ್ದ ಶಿವಾಜಿ ರಾವ್ (Shivaji rao) ರಜನಿಕಾಂತ್ ಆಗಿ ಬದಲಾದ ಕಥೆಯೇ ರೋಚಕ. ಅವರ ಬದುಕಿನ ಕಥೆಯನ್ನು ತೆಗೆದುಕೊಂಡರೆ ಅದೇ ಒಂದು ಸೂಪರ್ ಹಿಟ್ ಸಿನಿಮಾ ಆಗುತ್ತದೆ. ಈ ರೀತಿ ಬದುಕಿನಲ್ಲಿ ಬಂದ ಎಲ್ಲಾ ಅಡೆ-ತಡೆಗಳನ್ನು ಮೆಟ್ಟಿ ನಿಂತು ಹೀರೋ ಆಗಿ ಬೆಳೆದ ಈ ಪಡಿಯಪ್ಪ ನಿಜ ಜೀವನದಲ್ಲಿ ಕೂಡ ನಾಯಕ ನಟನೇ. ರಜನಿಕಾಂತ್ ಅವರು ಇನ್ನು ಸಹ ಕನ್ನಡ ನೆಲದ ನಂಟನ್ನು ಉಳಿಸಿಕೊಂಡಿದ್ದಾರೆ.
ಕನ್ನಡದ ಮೇಲೆ ಅಷ್ಟೇ ಅಪಾರವಾದ ಪ್ರೀತಿಯನ್ನು ಹೊಂದಿದ್ದಾರೆ ಎನ್ನುವುದಕ್ಕೆ ಇತ್ತೀಚೆಗೆ ಕನ್ನಡದ ಕಾಂತರಾ (Kanthara) ಸಿನಿಮಾ ಸೂಪರ್ ಹಿಟ್ ಆಗಿ ಹೆಸರು ಮಾಡಿದ್ದಕ್ಕಾಗಿ ಕಾಂತಾರ ಸಿನಿಮಾದ ನಟ ಹಾಗೂ ನಿರ್ದೇಶಕನಾಗಿದ್ದ ರಿಷಭ್ ಶೆಟ್ಟಿ (Directorand actor Rishabh Shetty) ಅವರನ್ನು ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದೆ ಸಾಕ್ಷಿ. ಆರಂಭದ ದಿನಗಳಲ್ಲಿ ಅವಕಾಶಗಳಿಗಾಗಿ ಅಲೆದಾಡುತ್ತಿದ್ದಾಗ ರಜನಿಕಾಂತ್ ಅವರಿಗೆ ಕನ್ನಡ ಚಿತ್ರರಂಗ ಅವಕಾಶ ಕೊಟ್ಟಿತ್ತು.
ಕನ್ನಡದ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಹಾಗೂ ಖಳನಾಯಕನಾಗಿ ಮತ್ತು ಎರಡನೇ ನಾಯಕನಾಗಿ ಕೂಡ ರಜನಿಕಾಂತ್ ಅವರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕನ್ನಡದ ಹಲವು ಸಿನಿಮಾಗಳ ಆಫರ್ ಗಳನ್ನು ಕೂಡ ಕಾರಣಾಂತರಗಳಿಂದ ರಿಜೆಕ್ಟ್ ಮಾಡಿದ್ದಾರೆ. ಮೊದಲಿಗೆ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾದ ಜಲೀಲ ಪಾತ್ರವನ್ನು ರಜನಿಕಾಂತ್ ಅವರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಅವರು ಮಾಡಲಾಗಲಿಲ್ಲ.
ಆನಂತರ ಆ ಅವಕಾಶ ಅಂಬರೀಶ್ ಅವರ ಪಾಲಿಗೆ ಹೋಗಿ ಕರ್ನಾಟಕಕ್ಕೆ ಮತ್ತೊಬ್ಬ ರೆಬೆಲ್ ಸ್ಟಾರ್ ಸಿಕ್ಕುವ ರೀತಿ ಆಯಿತು. ಇದೇ ರೀತಿ ದೊರೆ ಭಗವಾನ್ (Dore Bhaghavan) ಅವರ ನಿರ್ದೇಶನದ ಡಾಕ್ಟರ್ ರಾಜ್ ಕುಮಾರ್ (Dr.Rajkumar) ಅವರ ನಟನೆಯ ಗಿರಿಕನ್ಯೆ (Girikanye) ಸಿನಿಮಾ ಆವರನ್ನು ಕೂಡ ತಲೈವಾ ರಿಜೆಕ್ಟ್ ಮಾಡಿದ್ದರು. ಆ ಸಮಯದಲ್ಲಿ ಬಹಳ ಸಿನಿಮಾಗಳಲ್ಲಿ ರಜನಿಕಾಂತ್ ಅವರು ಬ್ಯುಸಿ ಇದ್ದ ಕಾರಣ ಅವರಿಗೆ ಡಾಕ್ಟರ್ ರಾಜ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಆಸೆ ಇದ್ದರೂ ಅಂದು ಆ ಪಾತ್ರದಲ್ಲಿ ಅಭಿನಯಿಸಲು ಆಗಲಿಲ್ಲ.
ನಂತರ ಅದು ವಜ್ರಮುನಿ (Vajramuni) ಅವರ ಪಾಲಿಗೆ ಹೋಯಿತು. ನಂತರ ಗಿರಿಕನ್ಯೆ ಸಿನಿಮಾ ಸೂಪರ್ ಹಿಟ್ ಆಗಿ ಹೊಸ ದಾಖಲೆಯನ್ನು ಮಾಡಿತು. ಅಂದು ಆ ಪಾತ್ರ ಮಾಡಲು ಆಗದಿದ್ದಕ್ಕೆ ಇಂದಿಗೂ ರಜನಿಕಾಂತ್ ಅವರಿಗೆ ಅಣ್ಣಾವ್ರ ಸಿನಿಮಾದಲ್ಲಿ ನಟಿಸಲು ಆಗಲಿಲ್ಲವಲ್ಲಾ ಎನ್ನುವ ನೋವು ಇನ್ನು ಸಹಾ ಕಾಡುತ್ತಿದೆಯಂತೆ.