Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರಾಕೇಶ್ ಜಯಶ್ರೀಗೆ ಕಿಸ್ ಕೊಟ್ಟಿದ್ದನ್ನು ನೋಡಿದ ಸೋನು ಗೌಡ ನನಗೂ ಕೊಡು ಅಂತ ಹಿಂದೆ ಬಿದ್ದಿದ್ದಾಳೆ, ಬಿಗ್ ಬಾಸ್ ಮನೆಯಲ್ಲಿ ನೆಡೆಯುತ್ತಿದೆ ಕಿಸ್ಸಿನ ಸುರಿಮಳೆ

Posted on September 7, 2022 By Kannada Trend News No Comments on ರಾಕೇಶ್ ಜಯಶ್ರೀಗೆ ಕಿಸ್ ಕೊಟ್ಟಿದ್ದನ್ನು ನೋಡಿದ ಸೋನು ಗೌಡ ನನಗೂ ಕೊಡು ಅಂತ ಹಿಂದೆ ಬಿದ್ದಿದ್ದಾಳೆ, ಬಿಗ್ ಬಾಸ್ ಮನೆಯಲ್ಲಿ ನೆಡೆಯುತ್ತಿದೆ ಕಿಸ್ಸಿನ ಸುರಿಮಳೆ

ಓಟಿಟಿಯಲ್ಲಿ ಪ್ರಾರಂಭವಾಗಿರುವ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಪ್ರತಿನಿತ್ಯವೂ ಕೂಡ ದಿನಕ್ಕೊಂದು ವಿಚಾರಕ್ಕೆ ಸುದಿಯಾಗುತ್ತಿರುವುದು ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಸೋನು ಗೌಡ ಅವರ ಹುಚ್ಚಾಟಕ್ಕೆ ಮಿತಿಯೇ ಇಲ್ಲ ಎಂದು ಬಿಗ್ ಬಾಸ್ ಮನೆಯ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಿಂದ ಹಿಡಿದು ಇಲಿಯವರೆಗೂ ಕೂಡ ಸೋನು ಗೌಡ ಅವರು ರಾಕೇಶ್ ಮೇಲೆ ವಿಶೇಷವಾದ ಆಕರ್ಷಣೆಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ರಾಕೇಶ್ ಎಲ್ಲೇ ಹೋದರು ಬಂದರೂ ಆತನ ಹಿಂದೆ ಸೋನು ಗೌಡ ಅವರ ಸುತ್ತಾಡುತ್ತಿದ್ದಾರೆ.

ಇದಕ್ಕೆ ಪೂರಕವಾಗುವಂತೆ ರಾಕೇಶ್ ಕೂಡ ಸ್ಪಂದಿಸುತ್ತಿದ್ದಾರೆ ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ಮತ್ತು ಪ್ರೇಕ್ಷಕರು ಹಾಗೂ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳು ಇವರಿಬ್ಬರೂ ನಡುವೆ ಲವ್ವಿ ಡವ್ವಿ ಪ್ರಾರಂಭ ಆಗಿರಬಹುದು ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ನೆನ್ನೆ ಎಪಿಸೋಡ್ ನಲ್ಲಿ ಬೆಡ್ ರೂಮ್ ಏರಿಯಾದಲ್ಲಿ ರಾಕೇಶ್ ಮತ್ತು ಜಯಶ್ರೀ ಹಾಗೂ ಸೋನು ಗೌಡ ಅವರು ಕುಳಿತುಕೊಂಡಿರುತ್ತಾರೆ. ಇದೆ ವೇಳೆಯಲ್ಲಿ ರಾಕೇಶ್ ಗೌಡ ಸೋನು ಗೌಡಗೆ ಬೇಸರವಾಗಬೇಕು ಆಕೆಗೆ ಕೋಪ ಬರಬೇಕು ಹಾಗೂ ತನ್ನ ಮೇಲೆ ಪೋಸೆಸಿವ್ ಇದಿಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಜಯಶ್ರೀ ಕೆನ್ನೆಗೆ ಮುತ್ತು ನೀಡುತ್ತಾನೆ.

ಇದನ್ನು ನೋಡಿದಂತಹ ಸೋನು ಗೌಡ ಬೇಸರ ವ್ಯಕ್ತಪಡಿಸಿ ಕೋಪ ಮಾಡಿಕೊಂಡು ಅಲ್ಲಿಂದ ಎದ್ದು ಹೋಗುತ್ತಾಳೆ ಅಷ್ಟೇ ಅಲ್ಲದೆ ಜಯಶ್ರೀ ನೀನು ನನಗೆ ಕಿಸ್ ಕೊಟ್ಟಿದ್ದಕ್ಕೆ ಸೋನು ಮುಖ ನೋಡು ಹೇಗಾಗಿದೆ ಎಂದು ಕಾಲೆಳೆಯುತ್ತಾಳೆ. ಆದರೆ ಸೋನು ಗೌಡ ನನಗೆ ಏನು ಆಗೇ ಇಲ್ಲ ಎಂಬ ಮಾದರಿಯಲ್ಲೇ ನಟಿಸಲು ಪ್ರಾರಂಭಿಸುತ್ತಾಳೆ ಆದರೆ ಆಕೆಯ ಮುಖದಲ್ಲಿ ಇದ್ದಂತಹ ಭಾವನೆ ಎದ್ದು ಕಾಣುತ್ತದೆ. ಇದರಿಂದಲೇ ತಿಳಿಯುತ್ತದೆ ರಾಕೇಶ್ ಅವರನ್ನು ಸೋಲು ಇಷ್ಟಪಡುತ್ತಿದ್ದಾರೆ ಅಂತ ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಜಯಶ್ರೀ ಗೆ ಕಿಸ್ ಕೊಟ್ಟ ರಾಕೇಶ್ ಬಳಿ ಬಂದಂತಹ ಸೋನು ಗೌಡ ನನಗೂ ಕೂಡ ಒಂದು ಕಿಸ್ ಕೊಡು ಅಂತ ಬಹಿರಂಗವಾಗಿ ಬಿಗ್ ಬಾಸ್ ಮನೆಯಲ್ಲಿ ಕೇಳುತ್ತಾಳೆ.

ಇದನ್ನು ಕೇಳಿದಂತಹ ರಾಕೇಶ್ ಗೆ ಒಂದು ಕ್ಷಣ ಆಶ್ಚರ್ಯ ಆಗುತ್ತದೆ ಆದರೂ ಹುಡುಗಿ ಕೇಳಿದ್ದಾಳಲ್ಲ ಅಂತ ಹೇಳಿ ಮರು ಯೋಚನೆ ಮಾಡದೆ ಸ್ವಲ್ಪವೂ ಕೂಡ ಹೆದರಿಕೆಯಿಲ್ಲದೆ ಸೋನು ಕೆನ್ನೆಗೆ ಮುತ್ತು ಕೊಟ್ಟೇ ಬಿಡುತ್ತಾನೆ. ಇದನ್ನು ನೋಡಿದಂತಹ ಬಿಗ್ ಬಾಸ್ ಸ್ಪರ್ಧೆಗಳೆಲ್ಲೆರೂ ಕೂಡ ಔಹಾರುತ್ತಾರೆ ಸದ್ಯಕ್ಕೆ ಈ ಎಪಿಸೋಡ್ ಓಟಿಟಿಯಲ್ಲಿ ಪ್ರಾರಂಭವಾಗಿದ್ದು ಈ ಎಪಿಸೋಡ್ ನೋಡಿದಂತಹ ನೆಟ್ಟಿಗರು ಸೋನು ಗೌಡ ಅವರಿಗೆ ಹಿಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ‌. ಅಷ್ಟೇ ಅಲ್ಲದೆ ಸಾಕಷ್ಟು ಟ್ರೋಲ್ ಕೂಡ ಮಾಡುತ್ತಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ವಿಚಿತ್ರ ಮನೋಭಾವನೆ ಹೊಂದಿರುವ ಏಕೈಕ ವ್ಯಕ್ತಿ ಅಂದರೆ ಸೋನು ಗೌಡ ಅಂತಾನೆ ಹೇಳಬಹುದು.

ಆಕೆಯ ಮಾತಿಗೆ ಹಿತಿಮಿತಿಯೇ ಇರುವುದಿಲ್ಲ ಈ ಕಾರಣಕ್ಕಾಗಿಯೇ ಕಳೆದ ವಾರ ಪಂಚಾಯಿತಿ ಕಟ್ಟೆಯಲ್ಲಿ ಕಿಚ್ಚ ಸುದೀಪ್ ಅವರು ಸೋನು ಗೌಡ ಅವರಿಗೆ ಎಚ್ಚರಿಕೆ ನೀಡಿದ್ದರು‌. ಅಷ್ಟೇ ಅಲ್ಲದೆ ನೆನ್ನೆ ಎಪಿಸೋಡ್ ನಲ್ಲಿ ಆರ್ಯವರ್ಧನ್ ಗುರೂಜಿ ಕೂಡ ನಿನ್ನ ಬಾಯಿಗೆ ಕಸಬರಿಗೆ ಹಾಕಬೇಕಾಗುತ್ತದೆ ಸ್ವಲ್ಪ ಸುಮ್ಮನಿರು ಎಂದು ಗದರಿದ್ದರು. ಆದರೂ ಕೂಡ ಸೋನು ಗೌಡ ಅವರ ಹುಚ್ಚಾಟಕ್ಕೆ ಮಾತ್ರ ಕೊನೆ ಎಂಬುದೇ ಇಲ್ಲ ಸದ್ಯಕ್ಕೆ ರಾಕೇಶ್ ನಿಂದ ಕಿಸ್ ಪಡೆದುಕೊಂಡಂತಹ ಸೋನು ಅದೇ ಮೂಡ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

Entertainment Tags:Jayashree, Mini big boss, Rakesh Adiga, Sonu Srinivas Gowda
WhatsApp Group Join Now
Telegram Group Join Now

Post navigation

Previous Post: ಮೊನ್ನೆಯಷ್ಟೇ ಮದುವೆಯಾದ ನಟಿ ಮಹಾಲಕ್ಷ್ಮಿ ಗಂಡನ ಒಟ್ಟು ಆಸ್ತಿ ಎಷ್ಟು ಗೊತ್ತಾ ನಿಜಕ್ಕೂ ಬೆರಗಾಗಿ ಹೋಗ್ತೀರಾ.
Next Post: ಬುದ್ಧಿಮಾಂಧ್ಯ ಮಗನನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಳವಿಕಾ ಅವಿನಾಶ್ ಈ ಕರುಣಾಜನಕ ವಿಡಿಯೋ ನೋಡಿದ್ರೆ ಎಂಥವರಾದರೂ ಕಣ್ಣೀರು ಹಾಕ್ತಾರೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore