ಮದುವೆಗೂ ಮೊದಲೇ 10 ವರ್ಷ ಮಕ್ಕಳು ಮಾಡಿಕೊಳ್ಳುವುದು ಬೇಡ ಎಂಬ ಒಳ ಒಪ್ಪಂದ ಆಗಿತ್ತು. ಈ ಕಾರಣಕ್ಕೆ ಇಷ್ಟು ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲ ಎಂದು ಸ್ಪಷ್ಟಣೆ ಕೊಟ್ಟ ಉಪಾಸನ.

 

ಮದುವೆ, ಮಕ್ಕಳು, ಸಂಸಾರ, ಕುಟುಂಬ ಇದು ಈ ನೆಲದಲ್ಲಿ ಒಂದು ಅರ್ಹತಾ ಮಾನದಂಡವಾಗಿದೆ ಎಂದೇ ಹೇಳಬಹುದು. ಅದಕ್ಕಾಗಿ ಸಮಾಜ ಪ್ರತಿ ಬಾರಿ ಇಂತಹ ಪ್ರಶ್ನೆಗಳನ್ನು ಕೇಳಿ ಅದರ ಮೇಲೆ ನಮ್ಮ ಯೋಗ್ಯತೆಯನ್ನು ನಿರ್ಧರಿಸಿಬಿಡುತ್ತದೆ. ಈ ಪ್ರಶ್ನೆಗಳು ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರೆಟಿಗಳನ್ನು ಕಾಡದೇ ಬಿಡುವುದಿಲ್ಲ. ಇಂತಹ ಪ್ರಶ್ನೆಗಳು ಎದುರಾದಾಗ ಅದಕ್ಕೆ ಹೇಗೆ ಪ್ರತಿಕ್ರಿಸುತ್ತಿವೆ ಎನ್ನುವುದು ಸಕಾರಾತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ಕೂಡ ನಮ್ಮನ್ನು ಸಮಾಜದಲ್ಲಿ ಬಿಂಬಿಸುತ್ತದೆ.

ಇದಕ್ಕೆ ಸ್ಪಷ್ಟ ಉದಾಹರಣೆ ಉಪಾಸನ ಮತ್ತು ರಾಮ್ ಚರಣ್ ತೇಜ್ ಜೋಡಿ. ಇವರಿಬ್ಬರು 2013ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 10 ವರ್ಷಗಳ ಕಳೆದರೂ ಇವರಿಗೆ ಮಕ್ಕಳಿರಲಿಲ್ಲ, ಇದಕ್ಕಾಗಿ ಜೋಡಿ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ. ಉಪಾಸನ ಅವರು ಅಪೋಲೋ ಆಸ್ಪತ್ರೆ ಒಡೆತನದ ಹಕ್ಕುದಾರಿ ಜೊತೆಗೆ ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಒಡತಿ, ಇನ್ನು ರಾಮಚರಣ್ ತೇಜ್ ಮೆಗಾಸ್ಟಾರ್ ಚಿರಂಜೀವಿ ಪುತ್ರ ಇವರಬ್ಬಿರ ನಡುವೆ ಎಂಥಹದೇ ಸಮಸ್ಯೆ ಇದ್ದರೆ ಕೂಡ ಮಕ್ಕಳು ಮಾಡಿಕೊಳ್ಳಬಹುದಿತ್ತು ಆದರೂ ದಂಪತಿ ಇದನ್ನು ಮುಂದಕ್ಕೆ ಹಾಕುತ್ತಲೇ ಬಂದರು‌

ಸೋಶಿಯಲ್ ಮೀಡಿಯಾದಲಂತು ಈ ವಿಚಾರವಾಗಿ ಸಾಕಷ್ಟು ಬಾರಿ ಉಪಸನ ಟ್ರೋಲ್ ಆದರು. ರಾಮ್ ಚರಣ್ ತೇಜ್ ಅವರನ್ನು ಕೂಡ ಈ ವಿಷಯಕ್ಕಾಗಿ ಟಾರ್ಗೆಟ್ ಮಾಡಿ ಬೇರೆ ನಾಯಕರ ಅಭಿಮಾನಿಗಳು ಅವಮಾನಿಸಿದರು ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿದ್ದ ಇವರು ಈ ವರ್ಷ ಜನತೆಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಈಗ ಆಸ್ಕರ್ ಅವಾರ್ಡ್ ಸಮಾರಂಭದ ಸಮಯದಲ್ಲಿ ಉಪಾಸನ 26 ವಾರಗಳ ಗರ್ಭಿಣಿ ಎನ್ನುವುದನ್ನು ರಾಮ್ ಚರಣ್ ತೇಜ್ ಅನೌನ್ಸ್ ಮಾಡಿದ್ದಾರೆ. ಇದಕ್ಕೂ ಮುನ್ನ ಮಾವ ಚಿರಂಜೀವಿ ಅವರು ಸಹ ಮನೆಗೆ ಹೊಸ ಅತಿಥಿ ಆಗುತ್ತಿರುವ ಬಗ್ಗೆ ಅನೌನ್ಸ್ ಮಾಡಿದ್ದರು.

ಇನ್ನೂ ಇಷ್ಟು ವರ್ಷಗಳು ಮಕ್ಕಳು ಪಡೆಯದೆ ಇದ್ದದಕ್ಕೆ ಪ್ರಶ್ನೆ ಮಾಡುತ್ತಿರುವ ಸಮಾಜಕ್ಕೆ ಉಪಾಸನ ಸ್ಪಷ್ಟನೆ ಕೊಟ್ಟಿದ್ದಾರೆ. ನಾವಿಬ್ಬರು ಮದುವೆ ಆದಾಗಲೇ ಹತ್ತು ವರ್ಷಗಳು ಮಕ್ಕಳು ಬೇಡ ಎನ್ನುವ ಒಪ್ಪಂದಕ್ಕೆ ಬಂದಿದ್ದೆವು. ಕುಟುಂಬದವರ, ಸ್ನೇಹಿತರ ಯಾರೊಬ್ಬರ ಒತ್ತಾಯಕ್ಕೂ ನಾವು ಮಣಿಯಲಿಲ್ಲ. ನಮ್ಮಿಬ್ಬರಿಗೂ ಸಂಬಂಧದ ಅರಿವನ್ನು ಹೆಚ್ಚಿಸಲು ಇದು ಸಹಾಯ ಮಾಡಿತು. ನಾವು ಸಮಾಜದ ಅವಶ್ಯಕತೆಗಾಗಿ ಅಲ್ಲ ನಮಗೆ ಬೇಕು ಅನಿಸಿದಾಗ ಮಕ್ಕಳು ಮಾಡಿಕೊಳ್ಳುತ್ತಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ ಉಪಾಸನಾ.

ಇದೇ ಮೊದಲನೇ ನಲ್ಲ ಈ ಹಿಂದೆ ಕೂಡ ಸಾಕಷ್ಟು ಬಾರಿ ಇದೇ ರೀತಿ ಮಕ್ಕಳ ಬಗ್ಗೆ ಪ್ರಶ್ನೆ ಕೇಳಿದವರಿಗೆ ಇವರು ಖಡಕ್ಕಾಗಿ ಆನ್ಸರ್ ಮಾಡಿದ್ದರು. ಮಕ್ಕಳು ಹೆರುವುದು ಎಂದರೆ ಅಷ್ಟು ಸುಲಭವಲ್ಲ, ಅದೊಂದು ಜವಾಬ್ದಾರಿ. ಹೆತ್ತ ಮೇಲೆ ಅವರನ್ನು ಅಷ್ಟೇ ಚೆನ್ನಾಗಿ ಪೋಷಿಸಿ ಏನು ಕೊರತೆ ಆಗದಂತೆ ನೋಡಿಕೊಳ್ಳಬೇಕು. ಅದಕ್ಕೆ ನಾವಿಬ್ಬರು ಆರ್ಥಿಕವಾಗಿ ಸದೃಢವಾಗಿರಬೇಕು ಎನ್ನುವುದು ಮೊದಲು ಆದ್ಯತೆ ಆಗಿತ್ತು. ಈಗ ನಾವಿಬ್ಬರು ನಮ್ಮ ಕ್ಷೇತ್ರದಲ್ಲಿ ನಾವಂದುಕೊಂಡಿದ್ದನ್ನು ಸಾಧಿಸಿದ್ದೇವೆ ಈಗ ಮಕ್ಕಳು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಟಿ ಉತ್ತರಿಸಿದ್ದಾರೆ.

ಆದರೆ ಇವರು ಬೇರೆ ಏನೇ ಕಾರಣ ಕೊಟ್ಟಿದ್ದರು ಒಪ್ಪಿಕೊಳ್ಳಬಹುದಿತ್ತು ಹಣದ ವಿಚಾರ ಮಾತನಾಡಿದ್ದರಿಂದ ಇವರಿಬ್ಬರಿಗೂ ಇರುವ ಬ್ಯಾಕ್ಗ್ರೌಂಡ್ಗೆ ಇದು ತುಂಬಾ ಸಿಲ್ಲಿ ಆನ್ಸರ್ ಎನಿಸುತ್ತಿದೆ ಎಂದು ಮತ್ತೊಂದು ವರ್ಗ ಚಕಾರವೆತ್ತಿದೆ. ಅದೇನೇ ಇದ್ದರೂ 10 ವರ್ಷದ ಬಳಿಕವಾದರೂ ಉಪಾಸನ ಮಡಿಲಿಗೆ ಮಗು ಬರುತ್ತಿರುವುದು ಎಲ್ಲರ ಮುಖದಲ್ಲೂ ನಗು ತರಿಸಿದೆ.

Leave a Comment