ನಟಿ ರಮ್ಯಾ ಅವರು ಇದೀಗ ಚಿತ್ರರಂಗ ಹಾಗೂ ಕಿರುತರೆ ಸೇರಿದಂತೆ ಎಲ್ಲಾ ಸಿನಿಮಾ ಕಾರ್ಯಕ್ರಮದಲ್ಲೂ ಕೂಡ ಭಾಗಿಯಾಗುತ್ತಿದ್ದಾರೆ ಕಳೆದ ನಾಲ್ಕೈದು ವರ್ಷಗಳಿಂದಲೂ ಕೂಡ ಚಿತ್ರರಂಗ ಹಾಗೂ ಕಿರುತೆರೆಯಿಂದ ದೂರ ಉಳಿದಿದ್ದರು. ಆದರೆ ಇದೀಗ ಆರು ತಿಂಗಳಿನಿಂದ ಈಚೆ ಯಾವುದೇ ಸಿನಿಮಾ ಕಾರ್ಯವಿರಲಿ ಇವೆಂಟ್ ಇರಲಿ ಅಥವಾ ಕಿರುತೆರೆಗೆ ಸಂಬಂಧಪಟ್ಟಂತಹ ಕಾರ್ಯಕ್ರಮ ಇರಲಿ ಎಲ್ಲದರಲ್ಲೂ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ರಮ್ಯಾ ಅಭಿಮಾನಿಗಳಿಗೆ ಸಂತಸದ ವಿಚಾರವ ಏಕೆಂದರೆ ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲು ಕೂಡ ನೋಡಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಕಿರುತರೆಯಲ್ಲೂ ಕೂಡ ನೋಡಲು ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ರಮ್ಯಾ ಅಭಿಮಾನಿಗಳು ರಮ್ಯಾ ಅವರನ್ನು ಇದೀಗ ಎಲ್ಲಾ ಕಡೆ ನೋಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಇನ್ನು ಕಳೆದ ಶನಿವಾರ ಮತ್ತು ಭಾನುವಾರ ನಡೆದಂತಹ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಕಾರ್ಯಕ್ರಮ ಅವಾರ್ಡ್ಸ್ ನಲ್ಲಿ ನಟಿ ರಮ್ಯಾ ಅವರು ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ವೇದಿಕೆಯ ಮೇಲೆ ಬಂದಂತಹ ರಮ್ಯಾ ಅವರು ಕಿರುತೆರೆಯ ನಟ ನಟಿಯರಿಗೆ ಶುಭಾಶಯವನ್ನು ಸಲ್ಲಿಸಿದ್ದಾರೆ. ತದನಂತರ ನಿರೂಪಕ ಅಕುಲ್ ಬಾಲಾಜಿ ಅವರು ನಿಮ್ಮ ಪ್ರೀತಿಯ ಹುಡುಗನ ಬಗ್ಗೆ ಏನು ಹೇಳುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಸಮಯದಲ್ಲಿ ರಮ್ಯಾ ಅವರು ನಾನಿನ್ನು ಸಿಂಗಲ್ ಅಂತ ಹೇಳಿದ್ದಾರೆ ತದನಂತರ ಅಕುಲ್ ಬಾಲಾಜಿ ಅವರು ಪರವಾಗಿಲ್ಲ ನೀವು ಮದುವೆಯಾಗುವಂತಹ ಹುಡುಗ ಹೇಗಿರಬೇಕು ಅದನ್ನಾದರೂ ಹೇಳಿ ಎಂದು ಪ್ರಶ್ನೆ ಕೇಳಿದ್ದಾರೆ.
ಅಕುಲ್ ಬಾಲಾಜಿ ಕೇಳಿದ ಪ್ರಶ್ನೆಗೆ ರಮ್ಯ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ ಹೌದು, ರಮ್ಯಾ ಅವರು ತಮ್ಮ ಕನಸಿನ ಹುಡುಗನ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ವೇದಿಕೆಯ ಮೇಲೆ ಮಾತನಾಡಿದ್ದಾರೆ. ಅದೇನೆಂದರೆ ನಾನು ಇನ್ನು ಸಿಂಗಲ್ ಹಾಗಾಗಿ ನನ್ನನ್ನು ಮದುವೆಯಾಗುವಂತಹ ಹುಡುಗ ಕೂಡ ಸಿಂಗಲ್ ಆಗಿ ಇರಬೇಕು, ಆತನಿಗೆ ಈಗಾಗಲೇ ಮದುವೆ ಆಗಿರಬಾರದು ಅವರು ಕೂಡ ಸಿಂಗಲ್ ಆಗಿ ಇರಬೇಕು, ನಾನು ಅವರ ಲುಕ್ಸ್ ಬಗ್ಗೆ ಜಾಸ್ತಿ ಯೋಚನೆ ಮಾಡೋದಿಲ್ಲ ಅವರು ಒಳ್ಳೆಯ ಮನುಷ್ಯನಾಗಿರಬೇಕು ಅವರಲ್ಲಿ ಕರುಣೆಯ ಮನೋಭಾವ ಇರಬೇಕು. ಇದಿಷ್ಟು ಗುಣಗಳು ಇದ್ದರೆ ಸಾಕು ಆತನನ್ನು ನಾನು ಮದುವೆಯಾಗುತ್ತೇನೆ ಎಂದು ವೇದಿಕೆಯ ಮೇಲೆ ಹೇಳಿದ್ದಾರೆ.
ರಮ್ಯಾ ಕೊಟ್ಟ ಈ ಉತ್ತರವನ್ನು ಕೇಳಿದಂತಹ ಹುಡುಗರು ಆಶ್ಚರ್ಯ ಚಕಿತರಾಗಿದ್ದರೆ ಏಕೆಂದರೆ ಸಾಮಾನ್ಯವಾಗಿ ನಟಿಯರು ಹೆಚ್ಚು ಹಣ ಆಸ್ತಿ ಗಾಗಿ ಆಸೆ ಪಡುತ್ತಾರೆ. ತಮಗಿಂತಲೂ ಸುಂದರವಾಗಿರುವಂತಹ ಪತಿಯನ್ನು ಪಡೆಯಬೇಕು ಅಂತ ಅಂದುಕೊಳ್ಳುತ್ತಾರೆ ಆದರೆ ನಟಿ ರಮ್ಯಾ ಅವರು ಮಾತ್ರ ವಿಭಿನ್ನವಾಗಿ ಯೋಚಿಸಿದ್ದಾರೆ. ಅವರಿಗೆ ಲುಕ್ ನಾ ಬಗ್ಗೆ ಯಾವುದೇ ಚಿಂತೆ ಇಲ್ಲ ಒಳ್ಳೆಯ ಮನುಷ್ಯನಾಗಿರಬೇಕು ಹಾಗೂ ಕರುಣೆಯ ಮನೋಭಾವನೆಯನ್ನು ಹೊಂದಿದ್ದರೆ ಸಾಕು ಎಂದು ಹೇಳಿದ್ದಾರೆ. ಹಾಗಾಗಿ ಈ ಕಾಲದಲ್ಲೂ ಕೂಡ ಇಂತಹ ನಟಿ ಮಣಿಯರು ಇದ್ದಾರಲ್ಲ ಎಂದು ರಮ್ಯಾ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನಟಿ ರಮ್ಯಾ ಅವರಿಗೆ ಇನ್ನೇನು 40 ವರ್ಷದ ಸಮೀಪವಾಗಿದೆ ಆದರೂ ಕೂಡ ಇವರಿಗೆ ತಕ್ಕಂತಹ ಹುಡುಗ ಇನ್ನೂ ಸಿಕ್ಕಿಲ್ಲ ಹಾಗಾಗಿ ಇನ್ನು ಮುಂದೆಯಾದರೂ ರಮ್ಯಾ ಬಯಸಿದಂತಹ ಗುಣಗಳನ್ನು ಹೊಂದಿರುವ ವ್ಯಕ್ತಿಯೇ ಇವರಿಗೆ ಸಿಗಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.