ಕಳೆದ ನಾಲ್ಕೈದು ತಿಂಗಳಿನಿಂದ ನಟಿ ರಮ್ಯಾ ಅವರು ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದರೆ ಹೌದು ಕಳೆದ ಐದು ವರ್ಷಗಳಿಂದಲೂ ಯಾವುದೇ ಸಿನಿಮಾದಲ್ಲಿ ನಟನೆ ಮಾಡಿದ ಚಿತ್ರರಂಗದಿಂದ ದೂರ ಉಳಿದಿದಂತಹ ನಟಿ ರಮ್ಯಾ ಅವರು ಇತ್ತೀಚಿನ ದಿನದಲ್ಲಿ ಮಾತ್ರ ಸಿನಿಮಾ ರಂಗಕ್ಕೆ ಸಂಬಂಧಪಟ್ಟಂತಹ ಎಲ್ಲಾ ಕಾರ್ಯ ಕಲಾಪಗಳಲ್ಲಿಯೂ ಕೂಡ ಪಾಲ್ಗೊಳ್ಳುತ್ತಿದ್ದಾರೆ.
ಇನ್ನು ಸ್ವಾತಿಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದೇನೆ ಎಂಬ ವಿಚಾರವನ್ನು ವಿಜಯದಶಮಿಯ ದಿನ ಹೇಳಿಕೊಂಡಿದ್ದರು. ಆದರೆ ಈ ಒಂದು ಸಿನಿಮಾವನ್ನು ನಟಿ ರಮ್ಯಾ ಅವರು ಸ್ವತಃ ತಮ್ಮದೇ ಬ್ಯಾನರ್ ಅಡಿಯಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದರು.
ಹಾಗಾಗಿ ಅವರ ಸ್ವಂತ ಸಂಸ್ಥೆ ಆದಂತಹ ಆಪಲ್ ಬಾಕ್ಸ್ ಎಂಬ ನಿರ್ಮಾಣ ಸಂಸ್ಥೆ ಅಡಿಯಲ್ಲಿಯೇ ನಾನು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವುದು ನನಗೆ ಸರಿ ಕಾಣಿಸುತ್ತಿಲ್ಲ. ಹಾಗಾಗಿ ಈ ಚಿತ್ರಕ್ಕೆ ಬೇರೆ ನಾಯಕ ನಟಿಯನ್ನು ಆಯ್ಕೆ ಮಾಡುತ್ತಿದ್ದೇನೆ ನಾನು ಮತ್ತೊಂದು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಕಂಬ್ಯಾಕ್ ಮಾಡುತ್ತೇನೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದರು.
ಈ ವಿಚಾರ ಕೇಳಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು ಇನ್ನು ಕೆಲವು ಅಭಿಮಾನಿಗಳು ರಮ್ಯಾ ಅವರ ಬರುವಿಕೆಗಾಗಿ ಕಾದಿದ್ದರು ಹಾಗಾಗಿ ಮೊನ್ನೆಯಷ್ಟೇ ಡಾಲಿ ಧನಂಜಯ್ ಅಭಿನಯದ ಉತ್ತರಖಂಡ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಮೊನ್ನೆ ಅದ್ದೂರಿಯಾಗಿ ಮುಹೂರ್ತ ಕಾರ್ಯಕ್ರಮವು ಕೂಡ ಜರುಗಿದೆ ಈ ಕಾರ್ಯಕ್ರಮಕ್ಕೆ ನಟಿ ರಮ್ಯಾ ಅವರು ಬಂದ ಲೂಕ್ ನೋಡಿ ಎಲ್ಲರೂ ಕೂಡ ಫಿದಾ ಆಗಿದ್ದಾರೆ.
ಜರತಾರಿ ಸೀರೆಯನ್ನು ಉಟ್ಟು ಬಂಗಾರದ ನಕ್ಲೇಸ್ ಅನ್ನು ತೊಟ್ಟು ಮದುಮಗಳಂತೆ ಕಾಣಿಸುತ್ತಿದ್ದಾರೆ ರಮ್ಯಾ ಅವರ ಈ ಲುಕ್ ನೋಡಿ ಪಡ್ಡೆ ಹುಡುಗರು ನಿದ್ದೆ ಗಳಿಸಿಕೊಂಡಿರುವುದಂತೂ ಸತ್ಯ. ಕಳೆದ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ಇರುವಂತಹ ರಮ್ಯಾ ಅವರಿಗೆ ಅಭಿಮಾನಿ ಬಳಗ ಮಾತ್ರ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಇವರ ನೋಟಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದಾರೆ.
ಅದರಲ್ಲಿಯೂ ಕೂಡ ಈ ರೀತಿ ಸೀರೆಯನ್ನು ಉಟ್ಟು ಆಭರಣ ತೊಟ್ಟು ಕ್ಯಾಮೆರಾ ಮುಂದೆ ಬಂದರೆ ಯಾವ ಹುಡುಗರು ತಾನೆ ಇಷ್ಟ ಪಡುವುದಿಲ್ಲ ಹೇಳಿ ಇದೆಲ್ಲ ಒಂದು ಕಡೆಯಾದರೆ ಇದೀಗ ರಮ್ಯಾ ಅವರು ಧರಿಸಿ ಬಂದ ನಕ್ಲಿಸ್ ವಿಚಾರ ಭಾರಿ ಚರ್ಚೆಗೆ ಗುರಿಯಾಗಿದೆ. ಹೌದು ನಟಿ ರಮ್ಯಾ ಅವರು ಧರಿಸಿದ ನೆಕ್ಲೆಸ್ ಬೆಲೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ಚರ್ಚೆ ಉಂಟಾಗಿದೆ ಕೆಲವು ಮೂಲಗಳ ಪ್ರಕಾರ ನಟಿ ರಮ್ಯಾ ಅವರು ಧರಿಸಿದ ನಕ್ಲೇಸ್ ಬೆಲೆ 20 ಲಕ್ಷ ರೂಪಾಯಿ ಅಂತ ತಿಳಿದು ಬಂದಿದೆ.
ಈ ಬೆಲೆಯನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ದಂಗಾಗಿದ್ದಾರೆ ಅಷ್ಟೇ ಅಲ್ಲದೆ ಸಾಮಾನ್ಯ ವರ್ಗದ ಜನರಿಗೆ 20 ಲಕ್ಷ ಅಂದರೆ ನಿಜಕ್ಕೂ ಕೂಡ ದೊಡ್ಡ ಮೊತ್ತವೇ ಈ ಹಣದಲ್ಲಿ ಅವರು ಜೀವನ ಪೂರ್ತಿ ಜೀವನ ಸಾಗಿಸುತ್ತಾರೆ. ಅದೇನೇ ಆಗಲಿ ಸದ್ಯ ಕಂತು ನಟಿಯ ರಮ್ಯಾ ಅವರ ಧರಿಸಿದ ನೆಕ್ಲೆಸ್ ಎಲ್ಲರ ಗಮನ ಸೆಳೆಯುತ್ತಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.