Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮುಂದಿನ ಶೋ ನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತಾಡ್ತಿನಿ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ.

Posted on April 4, 2023 By Kannada Trend News No Comments on ಮುಂದಿನ ಶೋ ನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತಾಡ್ತಿನಿ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ.

 

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಆರಂಭಗೊಂಡಿದೆ. ಆ ಬಾರಿ ನಾಲ್ಕು ವರ್ಷಗಳ ನಂತರ ಸೀಸನ್ 5 ಆರಂಭವಾಗುತ್ತಿದ್ದು ಮೊದಲ ಅತಿಥಿಯಾಗಿ ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಅವರು ಸಾಧಕರ ಸೀಟ್ ಅಲಂಕರಿಸಿದ್ದಾರೆ. ವಾಹಿನಿಯು ತಿಂಗಳ ಹಿಂದೆಯಿಂದಲೇ ಪ್ರೋಮೋಗಳನ್ನು ಹರಿಬಿಟ್ಟು ಪ್ರೇಕ್ಷಕರಿಗೂ ಯಾವ ಸಾಧಕರನ್ನು ಕೆಂಪು ಕುರ್ಚಿ ಮೇಲೆ ನೋಡಲು ಇಷ್ಟ ಪಡುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು.

ಅತಿ ಹೆಚ್ಚಿನವರು ಈ ಬಾರಿ ರಿಷಭ್ ಶೆಟ್ಟಿ, ರಮ್ಯಾ ಮತ್ತು ಡಾ.ಬ್ರೋ ಅವರ ಹೆಸರನ್ನು ಹೇಳಿದ್ದರು. ಅಂತಿಮವಾಗಿ ಕಳೆದು ನಾಲ್ಕು ಸೀಸನ್ ಗಳಿಂದಲೂ ಕಿರುತೆರೆ ಪ್ರೇಕ್ಷಕರು ಕಾಯುತ್ತಿದ್ದ ರಮ್ಯಾ ಅವರ ಮೊದಲ ಅತಿಥಿಯಾಗಿ ಬಂದಿದ್ದಾರೆ. ಈ ಶನಿವಾರ ಮತ್ತು ಭಾನುವಾರ ರಮ್ಯಾ ಅವರು ಅತಿಥಿಯಾಗಿ ಆಗಮಿಸಿ ತನ್ನ ಬದುಕಿನ ಯಾನದ ಬಗ್ಗೆ ಹಾಗೂ ಅವರ ಯಶಸ್ಸಿನ ಏರಿಳಿತಗಳ ಬಗ್ಗೆ ಕುಟುಂಬ, ಸ್ನೇಹಿತರು, ರಾಜಕೀಯ ಮತ್ತು ಸಿನಿಮಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ರಮ್ಯಾ ಅವರು ಈ ಕಾರ್ಯಕ್ರಮದಲ್ಲಿ ಕೆಲ ಘಳಿಗೆ ಭಾವುಕರಾಗಿ ಕಣ್ಣೀರು ಕೂಡ ಇಟ್ಟಿದ್ದಾರೆ. ಎಲ್ಲವೂ ಸರಿ ಇತ್ತು, ಆದರೆ ಕನ್ನಡ ಕಾರ್ಯಕ್ರಮದಲ್ಲಿ ರಮ್ಯ ಅವರು ಅತಿ ಹೆಚ್ಚು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದು ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಿದೆ. ಈ ಕಾರಣಕ್ಕಾಗಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಹಾಗೂ ರಮ್ಯಾ ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಜೀ ಕನ್ನಡ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರನ್ನು ಎಳೆತರಲಾಗುತ್ತಿದೆ.

ಒಂದರ್ಥದಲ್ಲಿ ಇದಕ್ಕೆಲ್ಲಾ ಅವರು ಡಾ.ಬ್ರೋ ಅವರನ್ನು ಕರೆಸಿ ಎಂದು ಕೇಳಿದಾಗ ಕೊಟ್ಟ ರಾಘವೇಂದ್ರ ಹುಣಸೂರು ಅವರು ಕೊಟ್ಟ ವಿಡಂಬನಾತ್ಮಕ ಉತ್ತರವೇ ಕಾರಣ ಎನ್ನಬಹುದು. ಆ ವಿಡಿಯೋ ವೈರಲ್ ಆಗಿ ನಿಮ್ಮ ಅಜ್ಜಿಗೆ ಡಾ.ಬ್ರೋ ಗೊತ್ತಾ, ನಿಮ್ಮ ಅಮ್ಮನಿಗೆ ಗೊತ್ತಾ ಎಂದು ಅವರು ಹೇಳಿದ್ದ ಮಾತುಗಳು ವೈರಲಾಗಿ ಈಗ ಅದನ್ನೇ ಕಂಟೆಂಟ್ ಆಗಿ ಬಳಸಿಕೊಂಡು ರಮ್ಯಾ ಅವರ ಇಂಗ್ಲಿಷ್ ಎಪಿಸೋಡ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.

ನಮ್ಮ ಅಜ್ಜಿಗೆ ಇಂಗ್ಲಿಷ್ ಗೊತ್ತಿಲ್ಲ, ನಮ್ಮಮ್ಮನಿಗೂ ಗೊತ್ತಿಲ್ಲ ಹಾಗಾಗಿ ಟಿವಿ ಆಫ್ ಮಾಡಿ ಮಲಗಿ ಬಿಟ್ಟರು, ಚಾನೆಲ್ ಚೇಂಜ್ ಮಾಡಿದರು. ನನಗೆ ರಮ್ಯಾ ಅವರ ಇಂಗ್ಲಿಷ್ ಕೇಳಿ ಯಾವುದೇ ಇಂಗ್ಲಿಷ್ ಕಾರ್ಯಕ್ರಮ ನೋಡಿದ ಹಾಗೆ ಆಯಿತು ಈ ಅನಿಸಿಕೆಗಳನ್ನು ಹಾಕಿ ಟ್ರೊಲ್ ಮಾಡಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದ್ದ ಈ ಬೆಳವಣಿಗೆಗಳನ್ನೆಲ್ಲ ನೋಡಿ ಸುಮ್ಮನಿದ್ದ ರಮ್ಯ ಅವರು ಈಗ ಟ್ರೋಲ್ ಪೇಜ್ ಒಂದಕ್ಕೆ ಕಮೆಂಟ್ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ.

ಕಾರ್ಯಕ್ರಮದ ಹೆಸರು ವೀಕೆಂಡ್ ವಿತ್ ರಮೇಶ್ ಎಂದು ಹೇಳುವುದಕ್ಕೆ ನಾನು ಇಷ್ಟಪಡುತ್ತೇನೆ, ಕಾರ್ಯಕ್ರಮದಲ್ಲಿ ಕನ್ನಡರೇತರರು ಅತಿಥಿಗಳಾಗಿದ್ದರೆ, ನಾನು ಎಲ್ಲರನ್ನು ಒಳಗೊಳ್ಳಲು ಇಷ್ಟಪಟ್ಟಿದ್ದೆ ಅಷ್ಟೇ. ಮುಂದಿನ ಶೋ ಅಲ್ಲಿ ನನ್ನ ಎಲ್ಲ ಮುದ್ದು ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತನಾಡುತ್ತೇನೆ. ನಾವು ಪ್ರೀತಿಯ ಹಾಗೂ ದಯೆ ಭಾಷೆಯನ್ನು ಮಾತನಾಡೋಣ ಎನ್ನುವ ಕಮೆಂಟ್ ಮಾಡಿದ್ದಾರೆ. ಇದರಲ್ಲೂ ಸಹ ಇಂಗ್ಲೀಷ್ ಹಾಗೂ ಕನ್ನಡ ಎರಡು ಮಿಕ್ಸ್ ಆಗಿದ್ದು ಈ ಕಮೆಂಟ್ ಬಗ್ಗೆ ಕೂಡ ಪರ ಮತ್ತು ವಿರೋಧ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Entertainment Tags:Actor Ramya, Ramya in weekend with ramesh, Sandalwood Queen
WhatsApp Group Join Now
Telegram Group Join Now

Post navigation

Previous Post: ಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ನಟಿ.
Next Post: ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore