Sunday, June 4, 2023
HomeCinema Updatesಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ...

ಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ನಟಿ.

 

ಕನ್ನಡದ ಬಹು ನಿರೀಕ್ಷಿತ ಪ್ರಯೋಗಾತ್ಮಕ ಚಿತ್ರ ಪೆಂಟಗಾನ್ ಏಪ್ರಿಲ್ ಮೊದಲ ವಾರದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗಿದೆ. ಒಂದೆಡೆ ಚಿತ್ರತಂಡ ಸಿನಿಮಾ ತಯಾರಾದ ದಿನದಿಂದಲೂ ನಾನಾ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದೆ. ಈ ಸಿನಿಮಾದಲ್ಲಿ ಅಭಿನಯಿಸಿದ್ದ ತನಿಷಾ ಕುಪಂದ ಎನ್ನುವ ನಟಿ ಇದೇ ರೀತಿ ಸಿನಿಮಾ ಬಗ್ಗೆ ಪ್ರಚಾರ ಮಾಡುವ ಸಲುವಾಗಿ ಸಂದರ್ಶನ ಕೊಡಲು ಹೋಗಿ ಕಾಂಟ್ರವರ್ಸಿಗೆ ಸಿಲುಕಿದ್ದಾರೆ.

ತನಿಷಾ ಕುಪಂದ ಪೆಂಟಗಾನ್ ಸಿನಿಮಾದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲೇನಲ್ಲ ಈ ಹಿಂದೆ ದಂಡುಪಾಳ್ಯ ಸಿನಿಮಾದಲ್ಲೂ ಕೂಡ ಪೂಜಾ ಗಾಂಧಿ ಜೊತೆ ನಟಿಸಿದ್ದ ಇವರು ಹಸಿ ಬಿಸಿ ದೃಶ್ಯಗಳಲ್ಲಿ ಕನ್ನಡಿಗರೆದುರು ಕಾಣಿಸಿಕೊಂಡು ಹಲ್ ಚಲ್ ಸೃಷ್ಟಿಸಿದ್ದರು. ಇದೇ ರೀತಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ನಟಿಗೆ ಸಂದರ್ಶನದಲ್ಲಿ ಅನಿರೀಕ್ಷಿತ ಪ್ರಶ್ನೆ ಎದುರಾಗಿತ್ತು, ಅದೇ ಈಗ ಇಷ್ಟೆಲ್ಲ ರಾಧ್ದಾಂತಕ್ಕೂ ಕಾರಣ ಆಗಿದೆ.

ಕಳೆದ ನಾಲ್ಕೈದು ದಿನಗಳಿಂದ ಕೂಡ ಸೋಶಿಯಲ್ ಮೀಡಿಯಾದಲ್ಲಿ ತನಿಷಾ ಕುಪಂದ ಅವರ ವಿಷಯ ಬಹಳ ಚರ್ಚೆ ಆಗುತ್ತಿದೆ. ಅದೇನೆಂದರೆ, ತಾನೊಬ್ಬ ಯೂಟ್ಯೂಬರ್ ಎಂದು ಹೇಳಿಕೊಂಡ ಸುಶಾನಂದ ಎನ್ನುವಾತ ಪೆಂಟಗಾನ್ ಚಿತ್ರದ ಕಲಾವಿದರ ಸಂದರ್ಶನ ತೆಗೆದುಕೊಳ್ಳುವ ಸಲುವಾಗಿ ತನುಷ ಕುಪ್ಪಂದ ಅವರನ್ನು ಭೇಟಿಯಾಗಿ ಅಚ್ಚುಕಟ್ಟಾಗಿ ಸಂದರ್ಶನವನ್ನು ಕೂಡ ಮಾಡುತ್ತಿದ್ದರು.

ಆದರೆ ಮಾತಿನ ಮಧ್ಯದಲ್ಲಿ ಕೇಳಿದ ಪ್ರಶ್ನೆ ಈಗ ಪೊಲೀಸ್ ಸ್ಟೇಷನ್ ಮೆಟ್ಟಲೇರುವ ತನಕ ತಲುಪಿದೆ. ಸಂದರ್ಶನದ ಮಧ್ಯದಲ್ಲಿ ನಿರೂಪಕ ಎನಿಸಿಕೊಂಡ ಸುಶಾನಂದ್ ತನಿಷ ಅವರನ್ನು ನೀವು ನೀ-ಲಿ ಚಿತ್ರಗಳಲ್ಲಿ ಅಭಿನಯಿಸಲು ರೆಡಿ ಇದ್ದೀರಾ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು ನಟಿಗೆ ಮಾತ್ರ ಅಲ್ಲದೆ ಮತ್ಯಾವ ಹೆಣ್ಣಿಗೂ ಕೂಡ ಕೇಳಿದರು ಅವರು ಸಿಡಿಯುವುದರಲ್ಲಿ ಸಂದೇಹವೇ ಇಲ್ಲ.

ತಕ್ಷಣವೇ ಅದನ್ನು ತಡೆದ ನಟಿ ಅವರನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ನಂತರ ಅದು ದೊಡ್ಡ ಹೈಡ್ರಾಮವಾಗಿ ಈಗ ಆತ ಪೊಲೀಸ್ ಅತಿಥಿ ಕೂಡ ಆಗಿದ್ದಾನೆ. ಇದೆ ಬೆನ್ನಲ್ಲೇ ನಟಿ ಈ ಕಾಂಟ್ರವರ್ಸಿಯಿಂದ ಮತ್ತಷ್ಟು ಸಂಕಷ್ಟಗಳನ್ನು ಎದುರಿಸುವ ರೀತಿ ಆಗಿದೆ ಎನ್ನುವುದನ್ನು ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಈ ಬಾರಿ ಅವರು ನೇರವಾಗಿ ರಾಜಾಹುಲಿ ಚಿತ್ರದಲ್ಲಿ ಯಶ್ ಸ್ನೇಹಿತರಾಗಿ ಕಾಣಿಸಿಕೊಂಡಿರುವ ಹರ್ಷ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಅದೇನೆಂದರೆ, ನಾನು ಒಂದು ಸ್ಟೋರಿ ಹಾಕಿದ್ದೆ ಆ ಸ್ಟೋರಿಗೆ ರಿಪ್ಲೈ ಮಾಡಿದ ಹರ್ಷ ಬ್ಲೂ ಫಿಲಂ ಅಲ್ಲಿ ನಟಿಸುತ್ತಿರ ಎಂದು ಸ್ಮೈಲ್ ಇಮೊಜಿ ಹಾಕಿ ಕಳಿಸಿದ್ದಾರೆ. ಆ ಸಮಯದಲ್ಲಿ ಬ್ಯುಸಿ ಇದ್ದ ಕಾರಣ ನಾನು ಅದನ್ನು ನೋಡಲಿಲ್ಲ ಬಹಳ ಸಮಯ ಆದನಂತರ ಅದನ್ನು ನೋಡಿದ ಮೇಲೆ ಬಹಳ ವಿ.ಕೃ.ತ ಎಂದು ಅನಿಸಿತು. ತಕ್ಷಣವೇ ಅವರಿಗೆ ನಿಮ್ಮ ಕಾಮನ್ಸೆನ್ಸ್ ಏನಾದರೂ ಸ.ತ್ತು ಹೋಗಿದೆಯಾ ಎಂದು ರಿಪ್ಲೈ ಕೂಡ ಮಾಡಿದೆ.

ಸುಶಾನಂದ್ ಅಂತಹ ಈಡಿಯಟ್ಗಳು ಬಂದು ಏನೇನೋ ಮಾಡಿ ಹೋಗುತ್ತಾರೆ. ನಂತರ ಆಗುವ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಜನರಿಗೆ ಇದು ಹೇಗೆ ತಲುಪುತ್ತಿದೆ ಎನ್ನುವ ಜ್ಞಾನವು ಅವರಿಗಿರುವುದಿಲ್ಲ. ಸಮಾಜ ಒಂದು ಕಡೆ ಆದರೆ ಇಂಡಸ್ಟ್ರಿ ಕುಟುಂಬ ಇದ್ದಂತೆ, ಈಗ ಹರ್ಷ ಕೂಡ ನನ್ನಂತೆ ಆರ್ಟಿಸ್ಟ್ ಆಗಿರುವುದರಿಂದ ಅವರು ನನ್ನ ಕುಟುಂಬ ಇದ್ದಂತೆ. ಅಂತಹವರೇ ಈ ರೀತಿ ಪ್ರಶ್ನೆ ಕೇಳಿದಾಗ ಅದು ಎಷ್ಟು ಬೇಜಾರು ಮಾಡುತ್ತದೆ ಮತ್ತು ನಮ್ಮ ಧೈರ್ಯವನ್ನು ಎಷ್ಟು ಕಸಿದುಕೊಳ್ಳುತ್ತದೆ ಎನ್ನುವುದನ್ನು ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.