ರಶ್ಮಿಕ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿನ ಸಿಂಪಲ್ ಹುಡುಗಿಯಾದ ಸಾನ್ವಿ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಈಗ ಬಾಲಿವುಡ್ ನಲ್ಲಿ ಕೂಡ ಮಿಂಚಲು ಸಜ್ಜಾಗುತ್ತಿರುವ ಈ ಕೊಡಗಿನ ಕುವರಿ ಈ ಮಟ್ಟಕ್ಕೆ ಬೆಳೆದು ಬಂದ ಕಥೆಯೇ ಒಂದು ರೋಚಕ. ಕನ್ನಡದಲ್ಲಿ ಕಿರಿಕ್ ಪಾರ್ಟಿ, ಚಮ್ಮಕ್, ಯಜಮಾನ, ಅಂಜನಿಪುತ್ರ, ಪೊಗರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕನ್ನಡದ ಹುಡುಗಿಯಾದ ರಶ್ಮಿಕ ಮಂದಣ್ಣ ಅವರು ಹೆಚ್ಚಾಗಿ ಮಿಂಚುತ್ತಿರುವುದು ಕಾಲಿವುಡ್ ಹಾಗೂ ಟಾಲಿವುಡ್ ಅಂಗಳದಲ್ಲೇ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಕನ್ನಡ ಸಿನಿಮಾ ಗಳಿಗಿಂತಲೂ ಈಗ ಅವರು ತಮಿಳು ತೆಲುಗು ಮತ್ತು ಬೇರೆ ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಮತ್ತು ಪಾನ್ ಇಂಡಿಯ ನಾಯಕಿಯಾಗಿ ಹೆಸರು ಮಾಡುತ್ತಿರುವ ಇವರನ್ನು ಸದ್ಯಕ್ಕೆ ಭಾರತೀಯರು ನ್ಯಾಷನಲ್ ಕ್ರಷ್ ಎಂದು ಕರೆಯುತ್ತಿದ್ದಾರೆ.
ಕನ್ನಡದ ಹುಡುಗಿಯೊಬ್ಬಳು ಈ ಮಟ್ಟಕ್ಕೆ ಬೆಳೆದಿರುವುದು ನಿಜವಾಗಿಯೂ ಕರ್ನಾಟಕದ ಎಲ್ಲ ಜನತೆಗೂ ಹೆಮ್ಮೆಯ ವಿಚಾರವೇ. ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ತೆಲುಗು ಭಾಷೆಯಲ್ಲಿ ಒಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಕಾಲಿಟ್ಟ ರಶ್ಮಿಕ ಮಂದಣ್ಣ ಅವರ ಬದುಕೇ ಬದಲಾಗುವ ತಿರುವುಗಳು ಅವರಿಗೆ ಅಲ್ಲಿ ದೊರೆತಿತ್ತು. ಗೀತಾ ಗೋವಿಂದಂ ಸಿನಿಮಾ ಮೂಲಕ ಮೊದಲಿಗೆ ಪರ ಭಾಷೆಯಲ್ಲಿ ಕಾಣಿಸಿಕೊಂಡ ರಶ್ಮಿಕ ಮಂದಣ್ಣ ನಂತರ ಈಗ ತಮಿಳು ತೆಲುಗು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅತಿಯಾದ ಬೇಡಿಕೆ ಹೊಂದಿರುವ ನಟಿಯಾಗಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಕೂಡ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಅವರ ಸಿನಿಮಾಗಳಲ್ಲಿ ಅವರಿಗೆ ನಾಯಕ ನಟಿಯಾಗಿ ಅಭಿನಯಿಸಿರುವ ರಶ್ಮಿಕ ಮಂದಣ್ಣ ಅವರ ಸದ್ಯಕ್ಕೆ ಇಂಡಿಯಾದ ಟಾಪ್ ಹೀರೋಯಿನ್ ಲಿಸ್ಟ್ ನಲ್ಲಿ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ರಶ್ಮಿಕ ಮಂದಣ್ಣ ಅವರ ಸಿನಿ ಬದುಕಿನ ಬಗ್ಗೆ ಇರುವ ಇನ್ನೊಂದು ಮಹತ್ವದ ಸಂಗತಿ ಏನೆಂದರೆ, ಕನ್ನಡದಲ್ಲಿ ಆಗಲಿ ಅಥವಾ ಉಳಿದ ಯಾವುದೇ ಬೇರೆ ಭಾಷೆ ಸಿನಿಮಾಗಳಲ್ಲಿ ಆಗಲಿ ಇವರು ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿವೆ. ಒಂದು ಅರ್ಥದಲ್ಲಿ ಸಿನಿಮಂದಿ ರಶ್ಮಿಕ ಮಂದಣ್ಣ ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎನ್ನುವ ಮಟ್ಟಕ್ಕೆ ಮಾತನಾಡಿ ಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿದೆ. ಹೀಗೆ ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳ ಮೂಲಕ ಅಭಿನಯಿಸುತ್ತಾ ಎಲ್ಲರ ಮೆಚ್ಚುಗೆ ಪಡೆಯುತ್ತಿರುವ ರಶ್ಮಿಕ ಮಂದಣ್ಣ ಅವರು ಸದ್ಯಕ್ಕೆ ಭಾರತದ ಬಹುತೇಕ ಜನರ ಫೇವರೆಟ್ ಹೀರೋಯಿನ್ ಕೂಡ ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಈ ಸಿನಿಮಾ ಲೋಕಕ್ಕೆ ಕಾಲಿಟ್ಟು ಅತಿ ಕಡಿಮೆ ಸಮಯದಲ್ಲಿ ಇಷ್ಟೊಂದು ಹೆಸರು ಮಾಡಿರುವುದು ನಿಜವಾಗಿಯೂ ಅದೃಷ್ಟವು ಹೌದು ಜೊತೆಗೆ ಇದು ಅವರ ಕಠಿಣ ಪರಿಶ್ರಮದಿಂದ ಕೂಡ ಹೌದು.
ಅದರಲ್ಲೂ ಪುಷ್ಪ ಸಿನಿಮಾದ ಸಕ್ಸಸ್ ನಂತರ ಇವರ ಸಂಭಾವನೆ ಇನ್ನೂ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲು ಅರ್ಜುನ್ ಅವರ ಅಭಿನಯದ ಪುಷ್ಪ ಸಿನಿಮಾವು ಪಾನ್ ಇಂಡಿಯಾ ಸಿನಿಮಾವಾಗಿ ಎಲ್ಲಾ ಭಾಷೆಗಳನ್ನು ತೆರೆಕಂಡು ಭಾರತದಾದ್ಯಂತ ಅಬ್ಬರಿಸಿತ್ತು. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರಿಗೆ ನಾಯಕಿಯಾಗಿ ರಶ್ಮಿಕ ಮಂದಣ್ಣ ಅವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಮೇಕಪ್ ಇಲ್ಲದೆ ಇದ್ದರೂ ಕೂಡ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಅಷ್ಟೇ ನೈಜ ಅಭಿನಯದಿಂದ ಎಲ್ಲರ ಮನ ಸೆಳೆದರು. ಇದರಿಂದ ಇವರಿಗೆ ಇನ್ನಷ್ಟು ಸಿನಿಮಾ ಅವಕಾಶಗಳು ಹುಡುಕಿ ಬರಲು ಅನುಕೂಲವಾಯಿತು. ಮುಂದೆ ತಮಿಳಿನ ದಳಪತಿ ವಿಜಯ್ ಹಾಗೂ ರಾಮ್ ಚರಣ್ ತೇಜ ಅವರೊಂದಿಗೆ ಸಿನಿಮಾ ಮಾಡುವ ಅದೃಷ್ಟ ಇವರ ಪಾಲಿಗೆ ಒಲಿದು ಬಂದಿದೆ ಎನ್ನುವ ಮಾತುಗಳು ಹರಿದಾಡುತ್ತಿದೆ.
ಸಿನಿಮಾದಿಂದ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರ ಹೆಸರು ಬೆಳೆಯುತ್ತಿದ್ದಂತೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯಕ್ಕೆ ರಶ್ಮಿಕ ಮಂದಣ್ಣ ಅವರು ಒಂದು ಸಿನಿಮಾ ಮಾಡಲು 4 ಕೋಟಿ ರೂಗಳನ್ನು ಸಂಭಾವನೆಯಾಗಿ ತೆಗೆದುಕೊಳ್ಳುತ್ತಿದ್ದಾರಂತೆ. ಇದರ ಜೊತೆಗೆ ಅವರು ಕೆಲವೊಂದು ಜಾಹಿರಾತುಗಳಲ್ಲಿ ಅಭಿನಯಿಸಿದ್ದಾರೆ ಜೊತೆಗೆ ಕೆಲವು ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ರಶ್ಮಿಕ ಮಂದಣ್ಣ ಅಭಿನಯಿಸಿರುವ ಸಿನಿಮಾಗಳು ಮತ್ತು ಅವರ ಎಲ್ಲಾ ಪ್ರಾಜೆಕ್ಟ್ ಗಳಿಂದ ಅವರು ಗಳಿಸಿರುವ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯಗೊಳ್ಳುತ್ತಾರೆ. ಯಾಕೆಂದರೆ ಕೇವಲ 4 ವರ್ಷಗಳಲ್ಲಿ ರಶ್ಮಿಕ ಮಂದಣ್ಣ ಅವರೇ ಒಬ್ಬಳು ಹೀರೋಯಿನ್ ಆಗಿ ಇಷ್ಟೊಂದು ಸಂಪಾದನೆ ಮಾಡಿರುವುದು, ಮತ್ತು ಇಷ್ಟೊಂದು ಕಡಿಮೆ ಅವಧಿಗೆ ಒಂದು ಹೀರೋಯಿನ್ ಮನೆ ಮೇಲೆ ಐಟಿ ರೈಡ್ ಆಗಿರುವುದರಲ್ಲಿಯೂ ಇವರ ಹೆಸರೇ ಮೊದಲು.
ಇದುವರೆಗೆ ರಶ್ಮಿಕ ಸಂಪಾದನೆ ಮಾಡಿರುವ ಹಣದ ಒಟ್ಟು ಮೌಲ್ಯ 40 ಕೋಟಿ ರೂಗಳು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಶ್ಮಿಕ ಮಂದಣ್ಣ ಮುಂದೆ ಬಾಲಿವುಡ್ ಅಂಗಳದಲ್ಲಿ ಬೆಳಗುವ ಕನಸು ಹೊಂದಿದ್ದಾರೆ. ರಶ್ಮಿಕ ಮಂದಣ್ಣ ಬಾಲಿವುಡ್ ನಲ್ಲಿ ಮಿಂಚಿದ ಬಳಿಕ ಮತ್ತೊಮ್ಮೆ ಅವರ ಸಂಭಾವನೆ ಪಟ್ಟಿ ಮತ್ತಷ್ಟು ದೊಡ್ಡದಾದರೆ ಅದು ಕೂಡ ಆಶ್ಚರ್ಯವೇನಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.