ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸಖತ್ ಬ್ಯುಸಿ ಇರುವ ನಾಯಕ ನಟಿಯರ ಪಟ್ಟಿಯಲ್ಲಿ ಇವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅಂತ ಹೇಳಬಹುದು. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದಂತಹ ರಶ್ಮಿಕ ಅವರು ಇಲ್ಲಿಯವರೆಗೂ ಹಿಂತಿರುಗಿ ನೋಡಿದ ಇತಿಹಾಸವೇ ಇಲ್ಲ. ಒಂದರ ಮೇಲೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ ಇಲ್ಲಿಯವರೆಗೂ ಕೂಡ ರಶ್ಮಿಕ ಅವರು ನಟಿಸಿದಂತಹ ಯಾವ ಸಿನಿಮಾವು ಕೂಡ ಫ್ಲಾಫ್ ಆಗಿಲ್ಲ. ಇದೊಂದೇ ಕಾರಣಕ್ಕಾಗಿ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಸದ್ಯಕ್ಕೆ ರಶ್ಮಿಕಾ ಅವರು ಬಾಲಿವುಡ್ ನಾ ಗುಡ್ ಬೈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ ಈ ಸಿನಿಮಾದ ಪ್ರಮೋಷನ್ ಕಾರ್ಯ ಮುಗಿದ ನಂತರ ಮಿಷನ್ ಮಜ್ನು ಎಂಬ ಹಿಂದಿ ಸಿನಿಮಾದಲ್ಲಿಯೂ ಕೂಡ ಅಭಿನಯಿಸಲಿದ್ದಾರೆ. ಸದ್ಯಕ್ಕೆ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿರುವಂತಹ ರಶ್ಮಿಕ ಮದ್ದಣ್ಣ ಅವರು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಹೈದರಾಬಾದ್ ಹಾಗೂ ಮುಂಬೈ ಸೇರಿದಂತೆ ಸಾಕಷ್ಟು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಪ್ರತಿ ಬಾರಿಯೂ ಕೂಡ ರಶ್ಮಿಕ ಮಂದಣ್ಣ ಅವರ ವೈಯಕ್ತಿಕ ವಿಚಾರಗಳು ಚರ್ಚೆ ಆಗುತ್ತದೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಾಂತರಗಳಿಂದ ಇವರ ನಡುವೆ ನಡೆದಿದ್ದಂತಹ ನಿಶ್ಚಿತಾರ್ಥವನ್ನು ಅರ್ಧಕ್ಕೆ ಮುರಿದುಕೊಳ್ಳುತ್ತಾರೆ. ತದನಂತರ ತಮ್ಮ ಮದುವೆಯ ಬಗ್ಗೆ ಹಾಗೂ ಪ್ರೀತಿಯ ಬಗ್ಗೆ ಎಲ್ಲಿಯೂ ಕೂಡ ಮಾತನಾಡುವುದಕ್ಕೆ ಹೋಗುವುದಿಲ್ಲ. ಆದರೆ ಕಳೆದ ಕೆಲವು ದಿನಗಳ ಹಿಂದೆ ವಿಜಯ್ ದೇವರಕೊಂಡ ಜೊತೆ ರಿಲೇಷನ್ಶಿಪ್ ನಲ್ಲಿ ಇದ್ದರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಈ ವಿಚಾರದ ಬಗ್ಗೆ ರಶ್ಮಿಕ ಆಗಲಿ ಅಥವಾ ವಿಜಯ ದೇವರಕೊಂಡ ಆಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ.
ಎರಡು ವರ್ಷಗಳ ಕಾಲ ಪ್ರಣಿಯ ಪಕ್ಷಗಳಂತೆ ಸುತ್ತಾಡಿದರು ಆದರೆ ಕಳೆದ ಮೂರು ತಿಂಗಳ ಹಿಂದೆಯಿಂದ ಇಬ್ಬರ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ವದಂತಿಗಳು ಕೇಳಿ ಬರುತ್ತಿದೆ ಆದರೆ ಇದು ಎಷ್ಟು ಸುಳ್ಳು ಮತ್ತು ಎಷ್ಟು ಸತ್ಯ ಎಂಬುದು ಯಾರಿಗೂ ಕೂಡ ತಿಳಿದಿಲ್ಲ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರಶ್ಮಿಕ ಮದ್ದಣ್ಣ ಅವರ ಸ್ವಯಂ ವರದ ಚರ್ಚೆ ಬಹಳಷ್ಟು ಸುದ್ದಿಗೆ ಒಳಗಾಗಿದೆ ಹೌದು ರಶ್ಮಿಕಾ ಮಂದಣ್ಣ ಅವರನ್ನು ಸಂದರ್ಶನದಾರರೊಬ್ಬರು ನೀವು ಯಾರನ್ನು ಮದುವೆಯಾಗಲು ಇಚ್ಛೆ ಪಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತೀರಾ ಈ ಪ್ರಶ್ನೆಗೆ ಉತ್ತರಿಸಿದಂತಹ ರಶ್ಮಿಕ ಅವರು ನಾನು ಮದುವೆ ಯಾವುದು ಸ್ವಯಂ ವರವನ್ನು ಏರ್ಪಡಿಸುತ್ತೇನೆ.
ಈ ಸ್ವಯಂವರದಲ್ಲಿ ಎಲ್ಲಾ ನಟರು ಕೂಡ ಭಾಗವಹಿಸಬೇಕು ತದನಂತರ ಅವರಲ್ಲಿ ಯೋಗ್ಯರನ್ನೊಬ್ಬರನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ವಿಶೇಷ ಏನೆಂದರೆ ನನ್ನ ಸ್ವಯಂ ವರದಲ್ಲಿ ಈ ಮೂರು ವಿಶೇಷ ವ್ಯಕ್ತಿಗಳು ಇರಲೇಬೇಕು ಎಂದು ಕಂಡಿಶನ್ ಹಾಕಿದ್ದಾರೆ. ಅಷ್ಟಕ್ಕೂ ಆ ಮೂರು ನಟರು ಯಾರು ಎಂಬುದನ್ನು ನೋಡುವುದಾದರೆ ನಾನು ಸಿನಿಮಾದಲ್ಲಿ ವರ್ಕ್ ಮಾಡುತ್ತಿರುವ ಹೀರೋಗಳು ಇರಬೇಕೆಂದು ಹೇಳಿದ್ದು. ರಣಬೀರ್ ಕಪೂರ್, ವಿಜಯ್ ದಳಪತಿ ಹಾಗೂ ಅಲ್ಲು ಅರ್ಜುನ್ ಇರಬೇಕು ಅಂತ ಹೇಳಿದ್ದರೆ. ಸದ್ಯಕ್ಕೆ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿರುವ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ. ರಶ್ಮಿಕಾ ಮಾತನಾಡಿರುವ ವಿಡಿಯೋ ಈ ಕೆಳಗಿದೆ ನೋಡಿ.