ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತವೆ. 777 ಚಾರ್ಲಿ ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಮೂಲತಹ ಶ್ರೀಮಂತ ಮನೆತನದಿಂದ ಬಂದವರಲ್ಲ, ಸಾಮಾನ್ಯ ಕುಟುಂಬದಿಂದ ಬಂದವರು ಇವರು ಇಂಜಿನಿಯರಿಂಗ್ ಮಾಡಿದ್ದಾರೆ. ನಟನೆಯ ಮೇಲೆ ಹೆಚ್ಚು ಒಲವು ಇದ್ದರಿಂದಾಗಿ ಬಣ್ಣದಲೋಕಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ. ಕೆಲವೊಂದು ಶಾರ್ಟ್ ಫಿಲಂ ಮಾಡುತ್ತಾ ಇರುತ್ತಾರೆ ನಂತರದಲ್ಲಿ ತುಗಲಕ್ ಸಿನಿಮಾದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಅನ್ನು ಕೊಡುತ್ತಾರೆ ಆದರೆ ಈ ಸಿನಿಮಾ ಅಷ್ಟೇನು ಯಶಸ್ಸನ್ನು ಕಾಣುವುದಿಲ್ಲ. ನಂತರದಲ್ಲಿ ಇವರು ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಎನ್ನುವಂತಹ ಸಿನಿಮಾದಲ್ಲಿ ನಟಿಸುತ್ತಾರೆ ಈ ಸಿನಿಮಾ ನೂರು ದಿನಗಳ ಕಾಲ ಓಡಿ ಇವರ ಜೀವನಕ್ಕೆ ಒಂದು ದೊಡ್ಡ ಬ್ರೇಕ್ ಅನ್ನು ನೀಡುತ್ತದೆ.
ಈ ಸಿನಿಮಾದಲ್ಲಿ ನಟಿಸಿದ ನಂತರ ಸಾಕಷ್ಟು ಅವಕಾಶಗಳು ಒದಗಿ ಬರುತ್ತದೆ ಆದರೆ ಯಾವುದೇ ಸಿನಿಮಾಗಳು ಸಹ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸನ್ನು ಕಾಣುವುದಿಲ್ಲ. ಉಳಿದವರು ಕಂಡಂತೆ ಎಂಬ ಸಿನಿಮಾಗೆ ತಾವೇ ಕಥೆ ಬರೆದುಕೊಂಡು ಈ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಟನೆಯನ್ನು ಮಾಡುತ್ತಾರೆ ಈ ಸಿನಿಮಾ ನಟಿ ರಕ್ಷಿತ್ ಶೆಟ್ಟಿ ಮತ್ತೊಂದು ಬ್ರೇಕ್ ಕೊಡುತ್ತದೆ. ಬಣ್ಣದ ಲೋಕದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಯಶಸ್ಸು ತಂದುಕೊಟ್ಟ ಸಿನಿಮಾ ಎಂದರೆ ಅದು ಕಿರಿಕ್ ಪಾರ್ಟಿ, ಈ ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಟನೆ ಸಾಕಷ್ಟು ರೀತಿಯಾದಂತಹ ಸದ್ದನ್ನು ಮಾಡುತ್ತದೆ ಈ ಸಿನಿಮಾ ಬಂದ ಸಮಯದಲ್ಲಿ ಈ ಜೋಡಿ ನೋಡಿ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ನಡುವೆ ಒಂದು ಉತ್ತಮವಾದಂತಹ ಸ್ನೇಹ ಏರ್ಪಟ್ಟಿರುತ್ತದೆ.
ಎರಡು ವರ್ಷಗಳಕಾಲ ಜೊತೆಯಲ್ಲಿ ಓಡಾಡುತ್ತಾರೆ ಅಲ್ಲಿಗಾಗಲೇ ರಕ್ಷಿತ್ ಶೆಟ್ಟಿ ಅವರಿಗೆ ಮದುವೆಯ ವಯಸ್ಸು ಆದ್ದರಿಂದ ಎರಡು ಕಟುಂಬದವರನ್ನು ಒಪ್ಪಿಸಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಎಂಗೇಜ್ಮೆಂಟ್ ಅನ್ನು ಸಹ ಮಾಡಿಕೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿ ಅರ್ಧಕ್ಕೆ ನಿಲ್ಲುತ್ತದೆ ಎಂಬ ಉದ್ದೇಶದಿಂದ ರಶ್ಮಿಕಾ ತಾಯಿ ಎರಡು ಕುಟುಂಬದವರು ಜೊತೆ ಮಾತನಾಡಿ ಮದುವೆಯನ್ನು ಬೇಡ ಎನ್ನುವಂತಹ ನಿರ್ಧಾರಕ್ಕೆ ಬರುತ್ತಾರೆ. ಇದಾದನಂತರ ರಶ್ಮಿಕ ಮಂದಣ್ಣ ಅವರು ಬೇರೆ ಭಾಷೆಗಳಲ್ಲಿಯೂ ಸಹ ನಟನೆಯನ್ನು ಮಾಡಿ ಹೆಸರನ್ನು ಮಾಡುತ್ತಿದ್ದಾರೆ. ಯಾವುದೇ ಇಂಟರ್ವ್ಯೂ ಗಳು ಅಥವಾ ಎಲ್ಲಿ ಆಚೆ ಹೋದರು ಸಹ ರಕ್ಷಿತ್
ರಶ್ಮಿಕಾ ಮಂದಣ್ಣ ಅವರ ಬಗ್ಗೆ ಒಂದು ಪ್ರಶ್ನೆ ಇದ್ದೇ ಇರುತ್ತದೆ ಹಾಗೆಯೇ ರಶ್ಮಿಕಾ ಮಂದಣ್ಣ ಅವರಿಗೆ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಯಾವುದಾದರೂ ಒಂದು ಪ್ರಶ್ನೆಯನ್ನು ಕೇಳೇ ಕೇಳುತ್ತಾರೆ. ರಶ್ಮಿ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಕೇಳಿದಾಗ ರಶ್ಮಿಕ ಮಂದಣ್ಣ ಅವರು ಯಾವುದೇ ರೀತಿಯಾದಂತಹ ಸರಿಯಾದ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ, ಉದಾಸೀನದ ಮಾತುಗಳನ್ನೆ ಹೇಳುತ್ತಾರೆ ಇದರಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಸ್ವಲ್ಪ ದೊಡ್ಡ ಮಟ್ಟದ ಚರ್ಚೆ ಆಗುತ್ತದೆ. ಮುಗಿದು ಹೋಗಿರು ವಿಚಾರದ ಬಗ್ಗೆ ಎಲ್ಲರೂ ಯಾಕೆ ಹೀಗೆ ಮಾತನಾಡುತ್ತಾರೆ ಈ ವಿಚಾರ ನನಗೆ ಬೇಸರವನ್ನು ತರುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಸಾಕಷ್ಟು ಅಭಿಮಾನಿಗಳು ಈ ವಿಷಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ, ಮದುವೆ ಆಗುವುದಿಲ್ಲ ಎಂದ ಮೇಲೆ ಏಕೆ ಎಂಗೇಜ್ಮೆಂಟ್ ಮಾಡಿಕೊಳ್ಳಬೇಕು ಅಂತ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಿಮಗೆ ಕಾಮೆಂಟ್ ಮುಖಾಂತರ ತಿಳಿಸಿ ಜೊತೆಗೆ ಈ ಮಾಹಿತಿಯನ್ನು ತಪ್ಪದೇ ಶೇರ್ ಮತ್ತು ಲೈಕ್ ಮಾಡಿ.