ಸ್ನೇಹಿತರೆ ಇಂದು ನಮ್ಮ ರಾಜ್ಯ ಹಾಗೂ ದೇಶದ ಜನತೆಗೆ ಬಹಳ ಉಪಯೋಗವಾಗುವ ಮಾಹಿತಿಯೊಂದನ್ನು ನಿಮ್ಮ ಬಳಿ ತಂದಿದ್ದೇವೆ, ಹೌದು ಸ್ನೇಹಿತರೆ ಇಂದಿನ ಪುಟದಲ್ಲಿ ಪಡಿತರ ಚೀಟಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎಂದು ತಿಳಿಸಲಿದ್ದೇವೆ. ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಮಧ್ಯಮ ವರ್ಗದವರು ಹಾಗೂ ಕಡು ಬಡವರೇ ಇದ್ದಾರೆ. ಅದರಲ್ಲೂ ನಮ್ಮ ದೇಶದಲ್ಲಿ ಹಳ್ಳಿ ಜನತೆ ಹೆಚ್ಚು, ಸದ್ಯ ನಮ್ಮ ಭಾರತ ದೇಶದ ಜನತೆಗೆ ಪಡಿತರ ಚೀಟಿ ಒಂದು ದೊಡ್ಡ ಹಕ್ಕಾಗಿದೆ ಎಂದರೆ ತಪ್ಪಾಗುವುದಿಲ್ಲ.
ನಮ್ಮ ದೇಶದಲ್ಲಿ ಅನಕ್ಷರಸ್ಥರು ಕೂಡ ಸ್ವಲ್ಪ ಹೆಚ್ಚಾಗಿ ಇರುವುದರಿಂದ ಪಡಿತರ ಚೀಟಿಯನ್ನು ಹೇಗೆ ಅಪ್ಡೇಟ್ ಮಾಡಬೇಕೆಂದು ತಿಳಿದಿಲ್ಲ ಅದರಲ್ಲೂ ಈ ಕೆಲಸಕ್ಕಾಗಿ ಹೆಚ್ಚು ದಿನಗಳು ತಾಲೂಕು ಪಂಚಾಯಿತಿಗಳು ಹಾಗೂ ಬೆಂಗಳೂರು ದಿನವೂ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡು ಅಲ್ಲಿದಾಡುವವರೆ ಹೆಚ್ಚು. ಇಂತಹ ಜನರಿಗೆ ನಮ್ಮಿಂದ ಪುಟ್ಟ ಸಹಾಯ ಎಂದರೆ ತಪ್ಪಾಗದು ಸ್ನೇಹಿತರೆ ಬನ್ನಿ ಅಂತವರಿಗೆ ನಮ್ಮ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡಿಕೊಂಡು ಇದನ್ನು ಮರುಬಳಕೆ ಮಾಡುವುದು ಹೇಗೆ ಎಂದು ತಿಳಿಸಿಕೊಡಲಿದೇವೆ.
ಈ ಪುಟದಲ್ಲಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ಇತ್ತೀಚಿಗೆ ನರೇಂದ್ರ ಮೋದಿಯವರು ಏಕ ದೇಶ ಏಕ ಪಡಿತರ ಚೀಟಿ ಎಂದು ಘೋಷಣೆ ನೀಡಿ ದೇಶದ ಎಲ್ಲಾ ಕಡೆ ಒಂದೇ ತರಹದ ಪಡಿತರ ಚೀಟಿಯನ್ನು ಚಲಾಯಿಸಿದ್ದಾರೆ ಹಾಗಾಗಿ ಅಳೆಯ ರೇಷನ್ ಕಾರ್ಡ್ ಗಳ ನಂಬರ್ ಬದಲಾಗಿ ಹೊಸದಾಗಿ ನಮೂದೆಯಾಗಿದೆ. ಇನ್ನೂ ಈ ಹೊಸದಾದ ಪಡಿತರ ಚೀಟಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು.
ಹಾಗೂ ಇದರಲ್ಲಿ ಬರುವಂತಹ ಪದಗಳನ್ನು ಅಳಿಸಿ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಲಿದ್ದೇವೆ. ಮೋದಲ್ನೆಯದಾಗಿ ahaara.kar.nic.in ಎಂಬ ವೆಬ್ಸೈಟ್ಗೆ ಬೇಟಿ ನೀಡಬೇಕು. ಅದರಲ್ಲಿ ಈ ಸೇವೆಗಳು ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು.ಅದರಲ್ಲಿ ಇ ಸ್ಥಿತಿ ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು.ನಂತರ ಹೊಸ ಅಥವಾ ಹಾಲಿ ಪಡಿತರ ಚೀಟಿಯ ಮೇಲೆ ಒತ್ತಿ ಅದರಲ್ಲಿ ನಿಮ್ಮ ಜಿಲ್ಲೆಯ ಮೇಲೆ ಒತ್ತಿ ನಂತರ ಒಂದು ಹೊಸ ಪೇಜ್ ಬರುತ್ತದೆ.
ಅದರಲ್ಲಿ ಪಡಿತರ ಚೀಟಿಯ ವಿವರ ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಇದಾದ ನಂತರ ಇನ್ನೊಂದು ಪಿಸ್ತರು ಅದರಲ್ಲಿ ವಿತೌಟ್ o t p ವಿತ್ OTP ಎಂಬ ಆಯ್ಕೆಗಳು ಕಾಣುತ್ತದೆ ಅದರಲ್ಲಿ ನಾವು ವಿತ್ o t p ಆಯ್ದುಕೊಂಡು ನಾವು ಲಿಂಕ್ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೆ o t p ಬರುತ್ತದೆ. ಆ ರೇಷನ್ ಕಾರ್ಡಿನ ಸಂಖ್ಯಾ ಮೇಲೆ ಒತ್ತಿದರೆ ನಿಮಗೆ ಹೊಸ ರೇಷನ್ ಕಾರ್ಡ್ ವಿವರವು ದೊರೆಯುತ್ತದೆ.
ಒಂದು ಕಡೆ ಆ ನಂಬರ್ ನನ್ನು ಬರೆದುಕೊಂಡು ಮತ್ತೆ ಹಳೆ ರೇಷನ್ ಕಾರ್ಡ್ ಹಾಕಿದ ಜಾಗದಲ್ಲಿ ಹೊಸ ಪಡಿತರ ಚೀಟಿಯ ನಂಬರ್ ಹಾಕಬೇಕು. ಆಗ ಅಲ್ಲಿ ಪಡಿತರ ಚೀಟಿಯಲ್ಲಿರುವ ಸದಸ್ಯರ ಹೆಸರು ಬರುತ್ತದೆ ಅಲ್ಲಿ ಯಾರದಾದರೂ ಹೆಸರಿನ ಮೇಲೆ ಒತ್ತಿದರೆ ಅವರ ಮೊಬೈಲ್ ಸಂಖ್ಯೆಗೆ o t p ಹೋಗುತ್ತದೆ. ಇನ್ನೂ o t p ಅನ್ನು ಹಾಕಿದರೆ ನಿಮ್ಮ ಪಡಿತರ ಚೀಟಿಯ ವಿವರವೂ ಬರುತ್ತದೆ. ಇದನ್ನು ಈಗ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.