ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಛಾಪನ್ನು ಮೂಡಿಸಿದಂತಹ ನಟ ಅಂದರೆ ಅದು ರವಿಚಂದ್ರನ್ ಅಂತಾನೇ ಹೇಳಬಹುದು. ಪ್ರೇಮ ಲೋಕವನ್ನು ಸೃಷ್ಟಿ ಮಾಡಿ ಕನ್ನಡಕ್ಕೆ ಒಂದು ಹೆಮ್ಮೆಯನ್ನು ತಂದು ಕೊಟ್ಟರು ಅಂದಿನ ಕಾಲದಲ್ಲಿ ರವಿಚಂದ್ರನ್ ಅವರು ಯಾವ ಸಿನಿಮಾ ಮಾಡಿದರು ಕೂಡ ಅದು ಹಿಟ್ ಆಗುತ್ತಿತ್ತು ಅಷ್ಟೇ ಅಲ್ಲದೆ 100 ದಿನಗಳ ಕಾಲವನ್ನು ಪೂರೈಸುತ್ತಿತ್ತು. ಆದರೆ ಇತ್ತೀಚಿಗೆ ರವಿಚಂದ್ರನ್ ಅವರ ತೆಗೆಯುತ್ತಿರುವಂತಹ ಸಿನಿಮಾಗಳು ಅಷ್ಟೇನೂ ಸದ್ದು ಮಾಡುತ್ತಿಲ್ಲ ಆದರೂ ಕೂಡ ವಿಭಿನ್ನವಾದ ರೀತಿಯಲ್ಲಿ ಕಥೆಯನ್ನು ಸೃಷ್ಟಿಸಬೇಕು ಹಾಡನ್ನು ತಯಾರ ಮಾಡಬೇಕು ಎಂಬುದು ಇವರ ಮೂಲ ಉದ್ದೇಶವಾಗಿದೆ. ಸಿನಿಮಾವನ್ನು ಇವರು ಎಷ್ಟು ಪ್ರೀತಿಸುತ್ತಾರೆ ಅಂದರೆ ಹಗಲು ರಾತ್ರಿ ಎನ್ನದೆ ಯಾವಾಗಲೂ ಸಿನಿಮಾದ ಬಗ್ಗೆ ಯೋಚನೆ ಮಾಡುತ್ತಾರೆ.
ಈಗಾಗಲೇ ರವಿಚಂದ್ರನ್ ಅವರ ಇಬ್ಬರು ಮಕ್ಕಳು ಆದಂತಹ ಮನೋರಂಜನ್ ಮತ್ತು ವಿಕ್ರಂ ಇಬ್ಬರು ಕೂಡ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಆದರೆ ಇಬ್ಬರು ನಟರ ಕೈಯನ್ನು ಸಿನಿಮಾರಂಗ ಹಿಡಿಯಲಿಲ್ಲ ಎಷ್ಟೇ ಪ್ರಯತ್ನ ಪಟ್ಟರು ಕೆಲಸ ಮಾಡಿದರು ಕೂಡ ಇವರ ಸಿನಿಮಾಗಳು ಯಶಸ್ವಿಯಾಗುತ್ತಿಲ್ಲ. ಇದೆಲ್ಲದರ ನೋವು ಒಂದು ಕಡೆ ಇದ್ದರೆ ಇತ್ತೀಚಿಗಷ್ಟೇ ತೆರೆ ಕಂಡ ರವಿ ಬೋಪಣ್ಣ ಸಿನಿಮಾ ಕೂಡ ಯಾಕೋ ರವಿಚಂದ್ರನ್ ಅವರ ಕೈಹಿಡಿಯಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕಾಲದಲ್ಲಿ ಸ್ಟಾರ್ ನಟನಾಗಿ ಮಿಂಚಿದಂತಹ ನಟ ರವಿಚಂದ್ರನ್ ಸಿನಿಮಾ ಆಗಲಿ ಅವರ ಮಕ್ಕಳ ಸಿನಿಮಾ ಆಗಲಿ ಯಾವುದೂ ಕೂಡ ಸಕ್ಸಸ್ ಆಗುತ್ತಿಲ್ಲ.
ಇನ್ನು ರವಿಚಂದ್ರನ್ ಅವರಿಗೆ ಒಬ್ಬ ತಮ್ಮ ಇರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಒಂದು ಕಾಲದಲ್ಲಿ ಫೇಮಸ್ ನಟ ಆಗಿದ್ದರೂ ಹಲವಾರು ಸಿನಿಮಾದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಯಾವುದೇ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಿಲ್ಲ ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾವನ್ನು ನೀಡಿದಂತಹ ಬಾಲಾಜಿ ಅವರ ಚಿತ್ರರಂಗದಿಂದ ಕಣ್ಮರೆಯಾಗಿದ್ದು ಯಾಕೆ ಎಂಬ ಪ್ರಶ್ನೆ ಹಲವಾರು ಸಿನಿ ರಸಿಕರ ಮನಸ್ಸಿನಲ್ಲಿ ಕಾಡುತ್ತಿತ್ತು. ಆ ಎಲ್ಲಾ ಪ್ರಶ್ನೆಗಳಿಗೂ ಇದೀಗ ಬಾಲಾಜಿಯವರು ಉತ್ತರ ನೀಡಿದ್ದಾರೆ ಹೌದು ಬಾಲಾಜಿಯವರು ಚಿತ್ರರಂಗದಿಂದ ದೂರ ಉಳಿಯುವುದಕ್ಕೆ ಒಂದೇ ಒಂದು ಕಾರಣ ಅದು ರವಿಚಂದ್ರನ್ ಅವರ ತಂದೆ ವೀರ ಸ್ವಾಮಿ ಅವರು ಬಾಲಾಜಿ ಅವರಿಗೆ ನೀಡಿದಂತಹ ಜವಾಬ್ದಾರಿ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ವೀರ ಸ್ವಾಮಿಯವರು ಈಶ್ವರಿ ಪ್ರೊಡಕ್ಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಒಂದು ಸಂಸ್ಥೆಯ ಮುಖಾಂತರ ಹಲವರು ಸಿನಿಮಾಗಳಿಗೆ ಪ್ರೊಡ್ಯೂಸರ್ ಆಗಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ 1990ರ ಸಮಯದಲ್ಲಿ ವೀರ ಸ್ವಾಮಿಯವರು ವಿ.ಧಿ.ವ.ಶ.ರಾಗುತ್ತಾರೆ ಈ ಸಮಯದಲ್ಲಿ ಈಶ್ವರಿ ಸಂಸ್ಥೆಯನ್ನು ನೋಡಿಕೊಳ್ಳುವವರು ಯಾರು ಇದನ್ನು ಮುನ್ನಡೆಸಿಕೊಂಡು ಹೋಗುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಇದಾಗಲೇ ವೀರ ಸ್ವಾಮಿ ಅವರಿಗೆ ರವಿಚಂದ್ರನ್ ಮತ್ತು ಬಾಲಾಜಿ ಎಂಬ ಇಬ್ಬರು ಗಂಡು ಮಕ್ಕಳ ಇರುತ್ತಾರೆ ಆದರೆ ರವಿಚಂದ್ರನ್ ಅವರಿಗೆ ಯಾವಾಗಲೂ ಕೂಡ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಬೇಕು ಸಿನಿಮಾವನ್ನು ಚೆನ್ನಾಗಿ ತೆಗೆಯಬೇಕು ಎಂಬುದಷ್ಟೇ ಮನಸಿನಲ್ಲಿ ಇರುತ್ತದೆ.
ಪ್ರೊಡಕ್ಷನ್ ಬಗ್ಗೆ ಹೆಚ್ಚಾಗಿ ಗಮನವನ್ನು ನೀಡುತ್ತಿರಲಿಲ್ಲ ಆ ಸಮಯದಲ್ಲಿ 17 ವರ್ಷದ ಯುವಕನಾಗಿದ್ದಂತಹ ಬಾಲಾಜಿ ಅವರೇ ವೀರಸ್ವಾಮಿ ಅವರ ಚೇಂಬರ್ ಮೇಲೆ ಕುಳಿತುಕೊಂಡು ಈಶ್ವರಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ನಿರ್ಧಾರ ಮಾಡುತ್ತಾರೆ. ಇತ್ತ ಕಡೆ ರವಿಚಂದ್ರನ್ ಅವರು ಕೂಡ ತಮ್ಮ ತಮ್ಮ ಆದಂತಹ ಬಾಲಾಜಿ ಅವರಿಗೆ ಸಕಲ ನೆರವನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಕೆಲವು ಸಲಹೆಗಳನ್ನು ನೀಡುತ್ತಾರೆ. ಇದರ ಮಧ್ಯದಲ್ಲಿಯೇ ಬಾಲಾಜಿ ಅವರು ನಾಲ್ಕೈದು ಸಿನಿಮಾದಲ್ಲಿಯೂ ಕೂಡ ನಟನಾಗಿ ಅಭಿನಯಿಸುತ್ತಾರೆ. ಆದರೆ ನಟನಾಗಿ ಅಭಿನಯಿಸುವುದಕ್ಕಿಂತಲೂ ಈಶ್ವರಿ ಸಂಸ್ಥೆಯನ್ನು ಮುಂದೆ ತೆಗೆದುಕೊಂಡು ಹೋಗಬೇಕು ಈ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸಬೇಕು ಎಂಬುದು ಬಾಲಾಜಿ ಅವರ ಆಸೆ ಮತ್ತು ಕನಸಾಗಿರುತ್ತದೆ.
ಅಷ್ಟೇ ಅಲ್ಲದೆ ವಿರ ಸ್ವಾಮಿ ಅವರ ಗುರಿ ಕೂಡ ಇದೆ ಆಗಿರುತ್ತದೆ ಈ ಕಾರಣಕ್ಕಾಗಿ ನಾನು ನಟನಾಗಿ ಹೆಚ್ಚು ಗುರುತಿಸಿಕೊಂಡರೆ ಈಶ್ವರಿ ಸಂಸ್ಥೆಯ ಬಗ್ಗೆ ಗಮನ ನೀಡುವುದಕ್ಕೆ ಸಮಯ ಸಾಕಾಗುವುದಿಲ್ಲ ಎಂದು ಮನಗಂಡಂತಹ ಬಾಲಾಜಿಯವರು ಚಿತ್ರರಂಗದಿಂದ ದೂರ ಉಳಿದು ಸದ್ಯಕ್ಕೆ ಈಶ್ವರಿ ಎಂಬ ದೊಡ್ಡ ಸಂಸ್ಥೆಯನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇದೊಂದು ಕಾರಣಕ್ಕಾಗಿಯೇ ಚಿತ್ರರಂಗದಿಂದ ಬಾಲಾಜಿಯವರು ದೂರ ಉಳಿದಿರುವುದು ನಿಜಕ್ಕೂ ಬಾಲಾಜಿ ಅವರ ಇತಿಹಾಸವನ್ನು ಮೆಚ್ಚಲೇಬೇಕು ಏಕೆಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ನಟನಾಗಿ ಗುರುತಿಸಿಕೊಳ್ಳಬೇಕು ಸಮಾಜದಲ್ಲಿ ಹೆಸರು ಮತ್ತು ಖ್ಯಾತಿ ಗಳಿಸಬೇಕು ಹಣ ಸಂಪಾದನೆ ಮಾಡಬೇಕು ಸದಾ ಕಾಲ ನಾನು ಪ್ರಚಾರದಲ್ಲಿ ಇರಬೇಕು ಎಂದು ಬಯಸುವಂತಹ ಇಂತಹ ಕಾಲದಲ್ಲಿಯೂ ಕೂಡ. ತಂದೆಯ ಆಸೆ ಕನಸುಗಳಿಗೆ ಗೌರವ ಕೊಟ್ಟು ತಂದೆ ನಿರ್ಮಾಣ ಮಾಡಿದಂತಹ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುವಂತಹ ಗಟ್ಟಿ ನಿರ್ಧಾರ ಮಾಡಿರುವ ಬಾಲಾಜಿಯವರಿಗೆ ನಿಜಕ್ಕೂ ಒಂದು ಸಲಾಂ ಹೊಡೆಯಲೇಬೇಕು. ತಂದೆಗೆ ತಕ್ಕ ಮಗ ಎಂಬುದನ್ನು ಇದು ನಿರೂಪಿಸುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಿಮಗೆ ಕಾಮೆಂಟ್ ಮುಖಾಂತರ ತಿಳಿಸಿ.