ವಿ ರವಿಚಂದ್ರನ್ ಸಿನಿಮಾವೇ ಜೀವ, ಜೀವನ ಎಂದರೆ ಸಿನಿಮಾ ಎಂದು ಬದುಕಿದ ಕಲಾವಿದ. ಈಶ್ವರಿ ಸಂಸ್ಥೆಯು ಕನ್ನಡ ಸಿನಿಮಾ ರಂಗಕ್ಕೆ ಅಪಾರ ಮಟ್ಟದ ಕೊಡುಗೆ ನೀಡಿದೆ. ಇದರ ಸಂಸ್ಥಾಪಕರಾದ ನಿರ್ಮಾಪಕ ವೀರ ಸ್ವಾಮಿ ಅವರ ಪುತ್ರನಾದ ರವಿಚಂದ್ರನ್ ಅವರು ಇಂದು ಕನ್ನಡ ಚಿತ್ರರಂಗ ಇಷ್ಟು ಹೆಸರು ಮಾಡಲು ಅಡಿಪಾಯ ಹಾಕಿಕೊಟ್ಟ ನಟರಲ್ಲಿ ಒಬ್ಬರು ಎಂದು ಹೇಳಬಹುದು. ಸಿನಿಮಾ ಬಗ್ಗೆ ಈತನಿಗೆ ಇದ್ದ ಆಸಕ್ತಿ, ಒಲವು, ಸಿನಿಮಾವನ್ನು ಇವರು ಪ್ರೀತಿಸಿದ ಬಗೆ, ಹಚ್ಚಿಕೊಂಡ ರೀತಿ ಬಹುಶಃ ಇಡೀ ಭಾರತದಲ್ಲಿ ಮತ್ತೆ ಯಾವ ನಿರ್ದೇಶಕನಾಗಲಿ ನಟನಾಗಲಿ ಇಲ್ಲ ಎನಿಸುತ್ತದೆ.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಆದರೆ ಇಂತಹ ಒಬ್ಬ ಅದ್ಭುತ ಕನಸುಗಾರನಿಗೂ ಕೂಡ ಸೋಲು ಎನ್ನುವುದು ಬಿಡಲಿಲ್ಲ. ರವಿಚಂದ್ರನ್ ಅವರ ಸೋಲಿಗೆ ಕಾರಣವಾದ ಆ ಸಿನಿಮಾ ಯಾವುದು ಗೊತ್ತಾ? ಆನಂದ ಜ್ಯೋತಿ ಚಿತ್ರವನ್ನು ಈಶ್ವರಿ ಪ್ರೊಡಕ್ಷನ್ ಮೊದಲಿಗೆ ರವಿಚಂದ್ರನ್ ಅವರಿಗಾಗಿ ಮಾಡುತ್ತದೆ. ಇದಾದ ಬಳಿಕ ಯಾವಾಗ ಪ್ರೇಮ ಲೋಕ ಎನ್ನುವ ಒಂದು ಸುಂದರ ಕಾವ್ಯ ತೆರೆ ಮೇಲೆ ಕಂಡಿತ್ತು, ಅಂದಿನಿಂದ ರಾಜಯೋಗ ರವಿಚಂದ್ರನ್ ಅವರಿಗೆ ಶುರುವಾಯಿತು. ಅವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದ್ದ ಸಮಯ ಅದು ಆ ಸಮಯದಲ್ಲಿ ಅದೇ ಸಾಲಿನಲ್ಲಿ ರಣಧೀರ ಅಂಜದಗಂಡು ಯುದ್ಧ ಕಾಂಡ ಯುಗ ಪುರುಷ ಕಿಂದರಜೋಗಿ ಹೀಗೆ ಸಾಲು ಸಾಲು ಸಿನಿಮಾಗಳು ಗೆದ್ದು ಬೀಗಿದವು.
ಆಗ ರವಿಚಂದ್ರನ್ ಅವರ ತಲೆಯಲ್ಲಿ ಒಂದು ಸ್ಕ್ರಿಪ್ ಓಡುತ್ತದೆ ಅದೇ ಶಾಂತಿ ಕ್ರಾಂತಿ ಸಿನಿಮಾದ ಸ್ಕ್ರಿಪ್ಟ್ ಇದಕ್ಕಾಗಿ ಅವರು ಮೂರು ಭಾಷೆಗಳಲ್ಲಿ ಸಿನಿಮಾ ತೆಗೆಯುವ ಪ್ಲಾನ್ ಮಾಡಿಕೊಳ್ಳುತ್ತಾರೆ. ಇವರ ಮಾತಿಗೆ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಒಪ್ಪಿಗೆ ಕೊಡುತ್ತಾರೆ ಮತ್ತು ತೆಲುಗಿನಲ್ಲಿ ನಾಗಾರ್ಜುನ್ ಅವರು ಸಹ ಈ ಸಿನಿಮಾಗೆ ಒಪ್ಪಿಕೊಳ್ಳುತ್ತಾರೆ ಕನ್ನಡದಲ್ಲಿ ರವಿಚಂದ್ರನ್ ಅವರು ಈ ಸಿನಿಮಾ ಮಾಡುವ ನಿರ್ಧಾರ ಮಾಡುತ್ತಾರೆ.
ಚಿತ್ರೀಕರಣ ಶುರುವಾಗಿ ಹಲವು ದಿನಗಳು ಕಳೆದ ನಂತರ ಒಂದು ಹಂತದಲ್ಲಿ ರವಿಚಂದ್ರನ್ ಅವರ ಮನಸ್ಸಿನಲ್ಲಿ ಒಂದು ಯೋಚನೆ ಬರುತ್ತದೆ ಅದನ್ನು ಅವರ ತಂದೆಯ ಬಳಿ ಅವರು ಹೇಳಿಕೊಳ್ಳುತ್ತಾರೆ. ರವಿಚಂದ್ರನ್ ಹಾಗೂ ಅವರ ತಂದೆಯ ಬಾಂಧವ್ಯದ ಬಗ್ಗೆ ಈಗಾಗಲೇ ರವಿಚಂದ್ರನ್ ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ತಂದೆ ಮಗನ ಸಂಬಂಧ ಎಂದರೆ ರವಿಚಂದ್ರನ್ ಹಾಗೂ ಅವರ ತಂದೆ ರೀತಿ ಇರಬೇಕು ಎಂದು ಎಷ್ಟೋ ಜನ ಉದಾಹರಣೆ ಹೇಳಿದ್ದಾರೆ.
ಇಬ್ಬರ ನಡುವೆ ಇದ್ದ ಅನ್ಯೋನ್ಯತೆ ಹಾಗೂ ಆ ಸಂಬಂಧ ಬಗ್ಗೆ ಪದಗಳಲ್ಲಿ ವಿವರಿಸಲಾಗದು, ಶಾಂತಿ ಕ್ರಾಂತಿ ಸಿನಿಮಾ ಬಗ್ಗೆ ರವಿಚಂದ್ರನ್ ಅವರು ತಮ್ಮ ಅಭಿಪ್ರಾಯ ತಿಳಿಸಿದಾಗ ವೀರ ಸ್ವಾಮಿ ಅವರು ಬಹಳ ಕೋಪಗೊಂಡು ಇದು ಈಶ್ವರಿ ಪ್ರೊಡಕ್ಷನ್ ಸಂಸ್ಥೆಯ ಗೌರವದ ಪ್ರಶ್ನೆ ಸಿನಿಮಾ ಹೇಗಾದರೂ ಬರಲಿ ಆದರೆ ಯಾವುದೇ ಕಾರಣಕ್ಕೂ ಸಿನಿಮಾವನ್ನು ನೀನು ನಿಲ್ಲಿಸಲೇಬಾರದು ಎಂದು ಹೇಳುತ್ತಾರೆ. ಅಪ್ಪನ ಮಾತಿಗೆ ಬೆಲೆಕೊಟ್ಟ ರವಿಚಂದ್ರನ್ ಅವರು ಶಾಂತಿ ಕ್ರಾಂತಿ ಸಿನಿಮಾವನ್ನು ಹೇಗೋ ಎಳೆದುಕೊಂಡು ಪೂರ್ತಿಗೊಳಿಸುತ್ತಾರೆ.
ಆದರೆ ಅವರ ನಿರೀಕ್ಷೆ ಸರಿಯಾಗಿತ್ತು ಸಿನಿಮಾ ಅಂದುಕೊಂಡಂತೆ ಸದ್ದು ಮಾಡಲಿಲ್ಲ, ಅಲ್ಲದೆ ವಿಪರೀತ ಹೊಡೆತವನ್ನು ರವಿಚಂದ್ರನ್ ಅವರಿಗೆ ನೀಡುತ್ತದೆ. ಅವರೇ ಹೇಳುವ ಪ್ರಕಾರ ಸುಮಾರು 15 ವರ್ಷಗಳ ಕಾಲ ಸಮಯವನ್ನು ಶಾಂತಿ ಕ್ರಾಂತಿ ಸಿನಿಮಾಗಾಗಿ ಮಾಡಿದ ಸಾಲ ತೀರಿಸುವುದಕ್ಕಾಗಿಯೇ ರವಿಚಂದ್ರನ್ ಅವರು ಜೀವನ ಮಾಡಿದ್ದಾರಂತೆ. ಕೊನೆಗೆ 15 ವರ್ಷದ ಬಳಿಕ ಅಷ್ಟು ಸಾಲವನ್ನು ತೀರಿಸಿ ಋಣ ಮುಕ್ತರಾಗುತ್ತಾರೆ. ಈ ಕುರಿತಾಗಿ ಅವರ ಬಾಯಿಯಲ್ಲಿ ಸಿನಿಮಾ ಮತ್ತು ಅವರ ತಂದೆ ತಾಯಿಯ ಬಗ್ಗೆ ಹಾಡಿದ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ತದನಂತರ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ಕಾಮೆಂಟ್ ಮಾಡಿ.