Home Entertainment ರಚಿತಾ ರಾಮ್ ಜೊತೆ ರವಿಚಂದ್ರನ್ ಮಾಡಿದ ಮಸ್ತ್ ಡ್ಯಾನ್ಸ್ ಹೇಗಿದೆ ನೋಡಿ.

ರಚಿತಾ ರಾಮ್ ಜೊತೆ ರವಿಚಂದ್ರನ್ ಮಾಡಿದ ಮಸ್ತ್ ಡ್ಯಾನ್ಸ್ ಹೇಗಿದೆ ನೋಡಿ.

0
ರಚಿತಾ ರಾಮ್ ಜೊತೆ ರವಿಚಂದ್ರನ್ ಮಾಡಿದ ಮಸ್ತ್ ಡ್ಯಾನ್ಸ್ ಹೇಗಿದೆ ನೋಡಿ.

ಒಂದು ಕಾಲದಲ್ಲಿ ಪ್ರೇಮಲೋಕ ಎನ್ನುವ ಸಿನಿಮಾವು ಅದುವರೆಗಿನ ಸಿನಿಮಾ ಸಂಸ್ಕೃತಿಯನ್ನು ಕೊಂಚ ಮಾರ್ಪಡಿಸಿ ಮತ್ತೊಂದು ದಿಕ್ಕಿನ ಕಡೆ ನೋಡುವಂತೆ ಮಾಡಿತು. ಈ ಸಿನಿಮಾ ಒಂದು ಹೊಸ ಪರ್ವವನ್ನು ಕನ್ನಡ ಚಿತ್ರರಂಗದಲ್ಲಿ ಹುಟ್ಟು ಹಾಕಿತ್ತು ಎಂದು ಹೇಳಬಹುದು. ಇದಕ್ಕೆ ಕಾರಣ ಆ ಸಿನಿಮಾದ ನಿರ್ದೇಶಕ ನಿರ್ಮಾಪಕ ಮತ್ತು ನಟನು ಕೂಡ ಆದ ರವಿಚಂದ್ರನ್ ಅವರು. ಒಂದು ಕಾಲೇಜ್ ಲವ್ ಸ್ಟೋರಿಯನ್ನು ಸಿನಿಮಾ ಪೂರ್ತಿ ತಂದು ಕನ್ನಡಿಗರು ಸಿನಿಮಾ ತೆರೆಕಂಡು ಇಷ್ಟು ವರ್ಷಗಳಾದರೂ ಆ ಸಿನಿಮಾವನ್ನು ನೆನೆಯುವಂತೆ ಮಾಡಿದೆ ಎಂದರೆ ಇದು ನಿಜವಾದ ಸಾಧನೆ. ಇಂದಿಗೂ ಆ ಸಿನಿಮಾದ ಹಾಡುಗಳು ಮಾಡಿರುವ ಮೋಡಿ ಬಗ್ಗೆ ಎಲ್ಲರಿಗೂ ತಿಳಿದಿದೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಇದಾದ ಬಳಿಕ ಅದೇ ರೀತಿ ಬಂದ ರಣಧೀರ ಅಂಜದಗಂಡು ಇತ್ಯಾದಿ ಸಿನಿಮಾಗಳು ಅದೇ ರೀತಿ ಇದ್ದವು. ಸಿನಿಮಾದಲ್ಲಿ ನಟಿಯರನ್ನು ತುಂಬಾ ವಿಶೇಷವಾಗಿ ತೋರಿಸಿರುವ ಹಾಗೂ ತನ್ನ ಸಿನಿಮಾಗಳಿಗೆ ಹೊಸ ಹೊಸ ಹೀರೋಯಿನ್ ಗಳನ್ನು ಬೇರೆ ಭಾಷೆಗಳಿಂದ ಪರಿಚಯಿಸಿರುವ ಖ್ಯಾತಿ ಹೆಚ್ಚಿನ ಮಟ್ಟದಲ್ಲಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಈ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದೆ ಅವರು ಅಲ್ಲಿಯ ತನಕ ಸಿನಿಮಾದಲ್ಲಿ ಹೀರೋಯಿನ್ ಪಾತ್ರಗಳಿಗೆ ಅಷ್ಟೊಂದು ಪ್ರೇಮ್ ಇರುತ್ತಿರಲಿಲ್ಲ ರವಿಚಂದ್ರನ್ ಅವರು ಹೆಣ್ಣಿನ ಸೌಂದರ್ಯವನ್ನು ಸಿನಿಮಾ ಮೇಲೆ ತಮ್ಮ ಕ್ಯಾಮೆರಾ ಕೈಚಳಕದಿಂದ ಸೆರೆ ಹಿಡಿದು ಕಲಾ ರಸಿಕರಿಗೆ ರಸದೌತಣ ನೀಡುತ್ತಿದ್ದರು.

ಹೀಗಾಗಿ ಆ ಸಮಯದ ಪ್ರತಿ ನಟಿಗೂ ಕೂಡ ಒಂದೇ ಒಂದು ಅವಕಾಶ ರವಿಚಂದ್ರನ್ ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕರೆ ಸಾಕು ಎನ್ನುವ ಭಾವನೆ ಇತ್ತು. ಹೀಗಾಗಿ ರವಿಮಾಮ ಎಂದು ಕೂಡ ರಸಿಕನಾಗಿ ಪ್ರೇಮಿಗಳ ಪಾಲಿನ ರಣಧೀರನಾಗಿ ಮಹಿಳಾ ಪ್ರೇಕ್ಷಕರನ್ನು ತನ್ನಡೆಗೆ ಮೋಡಿ ಮಾಡಿ ಕರೆಯುವ ಕಿಂದರಜೋಗಿ ಆಗಿ ಎಂಗಳೆಯರ ಮನ ಕದ್ದ ಮಲ್ಲನಾಗಿ ಫೇಮಸ್ ಆಗಿದ್ದಾರೆ. ಈಗ ಹೆಚ್ಚು ಕಮ್ಮಿ 50 ದಾಟಿದ್ದರೂ ಕೂಡ ರವಿಚಂದ್ರನ್ ಅವರು ಯಂಗ್ ಹೀರೋ ಅಂತೆಯೇ ಕಾಣುತ್ತಾರೆ.

ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ಸ್ ಎನ್ನುವ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗಿ ಆಗುತ್ತಿರುವ ಇವರು ಆ ಕಾರ್ಯಕ್ರಮದಲ್ಲಿ ಇವರ ಜೊತೆ ಸಹ ತೀರ್ಪುಗಾರರಾಗಿ ಕುಳಿತಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಗೆ ಆ ಕಾರ್ಯಕ್ರಮದ ವೇದಿಕೆ ಮೇಲೆ ಹೆಜ್ಜೆ ಹಾಕಿ ತಮ್ಮ ಹಳೆಯ ದಿನಗಳನ್ನು ಎಲ್ಲರಿಗೂ ನೆನಪಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳೆಲ್ಲ ಸೇರಿ ರಣಧೀರ ಸಿನಿಮಾವನ್ನು ಮತ್ತೆ ರಿಕ್ರಿಯೇಟ್ ಮಾಡಿದ್ದರು. ಅಂತ್ಯದಲ್ಲಿ ರವಿಚಂದ್ರನ್ ಅವರು ರಚಿತಾ ರಾಮ್ ಜೊತೆ ಕಾಣಿಸಿಕೊಂಡಿದ್ದಾರೆ.

ಇನ್ನೂ ತಮ್ಮ ಬೋಲ್ಡ್ ನಟನೆಯ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಫೇಮಸ್ ಆಗಿರುವ ರಚಿತರಾಮ್ ಅವರು ಕೂಡ ರವಿಚಂದ್ರನ್ ಅವರ ಜೊತೆ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ಇದುವರೆಗೆ ಸಾಧ್ಯವಾಗಿರಲಿಲ್ಲ ಆದರೆ ಕಾರ್ಯಕ್ರಮದಲ್ಲಿ ಆದರೂ ರವಿಚಂದ್ರನ್ ಅವರ ಜೊತೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದ್ದಕ್ಕಾಗಿ ಖುಷಿಯಿಂದ ಕುಣಿದಿದ್ದಾರೆ. ಮೊದಲಿಗೆ ಇದಕ್ಕೆ ಸಂಬಂಧಪಟ್ಟ ಕ್ಲಿಪಿಂಗ್ಗಳು ಜೀ ಕನ್ನಡ ವಾಹಿನಿಯ ಸಾಮಾಜಿಕ ಜಾಲತಾಣದ ಅಕೌಂಟಗಳಲ್ಲಿ ಶೇರ್ ಆಗಿತ್ತು ಇದಾದ ಬಳಿಕ ಆ ಕಾರ್ಯಕ್ರಮ ಪೂರ್ತಿ ನೋಡಲು ಸಾಕಷ್ಟು ಅಭಿಮಾನಿಗಳು ಟಿವಿ ಮುಂದೆ ಕಾದು ಕುಳಿತಿದ್ದು ಮಾತ್ರ ಸುಳ್ಳಲ್ಲ. ರಣಧೀರ ಸಿನಿಮಾದ ಕೊಳಲಿನ ನಾದಕ್ಕೆ ರವಿಮಾಮ ಹಾಗೂ ರಚಿತಾ ರಾಮ್ ಅಭಿನಯ ಮಾಡಿ ನೋಡುಗರ ಗಮನ ಸೆಳೆದು ಬಿಟ್ಟರು. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

 

LEAVE A REPLY

Please enter your comment!
Please enter your name here