Friday, June 9, 2023
HomeEntertainmentರಾಯನ್ ಹುಟ್ಟುಹಬ್ಬಕ್ಕೆ ಧೃವ ಸರ್ಜಾ ಕೊಟ್ಟ ಭರ್ಜರಿ ಉಡುಗೊರೆ ನೋಡಿ ಶಾ-ಕ್ ಆದ ಮೇಘಾನ ರಾಜ್

ರಾಯನ್ ಹುಟ್ಟುಹಬ್ಬಕ್ಕೆ ಧೃವ ಸರ್ಜಾ ಕೊಟ್ಟ ಭರ್ಜರಿ ಉಡುಗೊರೆ ನೋಡಿ ಶಾ-ಕ್ ಆದ ಮೇಘಾನ ರಾಜ್

ಚಂದನ ವನದ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗ ರಾಯನ್ ರಾಜ್ ಅಕ್ಟೋಬರ್ 22 ರಂದು ಹುಟ್ಟುಹಬ್ಬದ ಸಂಭ್ರಮ. ರಾಯನ್ 3 ನೇ ವಸಂತಕ್ಕೆ ಕಾಲಿಟ್ಟಿದ್ದಾನೆ. ತನ್ನ ಮುದ್ದಿನ ಮಗನ ಹುಟ್ಟುಹಬ್ಬದಂದು ಮೇಘನಾ ರಾಜ್ ಅವರು ತಮ್ಮ ಮತ್ತು ತಮ್ಮ ಮಗ ರಾಯನ್ ರಾಜ್ ಸರ್ಜಾನ ಸೆಲ್ಫಿ ಚಿತ್ರಗಳನ್ನೊಳಗೊಂಡ ಎಡಿಟೆಡ್ ವಿಡಿಯೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ʻನನ್ನ ಮುದ್ದು ಮಗ 2 ವರ್ಷ ಪೂರೈಸಿದ್ದಾನೆʼ ಎಂದು ಬರೆದುಕೊಂಡಿದ್ದಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಈ ವಿಡಿಯೊಗೆ ಚಿರು ಹಾಗೂ ಮೇಘನಾ ಅಭಿಮಾನಿಗಳು ಮತ್ತು ಸಿನಿ ತಾರೆಯರು ಪ್ರತಿಕ್ರಿಯೆ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ದೇವರ ಆಶೀರ್ವಾದ ಮಗ ರಾಯನ್‌ ಮೇಲೆ ಇರಲಿ ಎಂದಿದ್ದಾರೆ. ದಿವಂಗತ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಸರ್ಜಾ ಪುತ್ರ ರಾಯನ್‌ ಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಎಲ್ಲಾ ಅಭಿಮಾನಿಗಳು ಕೂಡ ರಾಯನ್ ನ ಸಂತೋಷವನ್ನೇ ಬಯಸುತ್ತಾರೆ ಇನ್ನು ಆಗಾಗ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿರುತ್ತವೆ.

ಇನ್ನು ರಾಯನ್ ರಾಜ್ ಸರ್ಜಾನ ಹುಟ್ಟುಹಬ್ಬದ ಸೆಲೆಬ್ರೇಶನ್ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ರಾಯನ್ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಅಂದ ಹಾಗೆ ಇದೇ ಅಕ್ಟೋಬರ್ 17 ರಂದು ಚಿರಂಜೀವಿ ಸರ್ಜಾರ ಹುಟ್ಟುಹಬ್ಬವಾಗಿತ್ತು. ತನ್ನ ಮುದ್ದಿನ ಪತಿಯ ಹುಟ್ಟುಹಬ್ಬಕ್ಕೆ ಪತ್ನಿ ಮೇಘನಾ ರಾಜ್​ ಅವರು ವಿಶೇಷವಾದ ಒಂದು ಫೋಟೋ ಹಂಚಿಕೊಂಡಿದ್ದರು. ಹೌದು ತಮ್ಮ ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮೇಘನಾ ರಾಜ್ ಅವರು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದು, ಈ ಫೋಟೋದ ಜೊತೆಗೆ ‘ನನ್ನ ಸಂತಸಕ್ಕೆ ಹುಟ್ಟುಹಬ್ಬದ ಶುಭಾಶಯಗಳು.

ನಾನು ನಗುತ್ತಿರುವುದು ನಿಮಗಾಗಿ ಮಾತ್ರ. ನನ್ನ ಪ್ರೀತಿಯ ಪತಿ ಚಿರು. ಐ ಲವ್​ ಯೂ ಎಂದಿದ್ದರು ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೂ ಮೊದಲು ಭಾರತದ ಸಿನಿರಂಗದ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಒಂದಾದ ಫಿಲ್ಂ ಫೇರ್ ಅವಾರ್ಡ್ ಫಂಕ್ಷನ್ ಸಿಲಿಕಾನ್ ಸಿಟಿಯಲ್ಲಿ ನಡೆದಿತ್ತು. ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ ಮೇಘನಾ ರಾಜ್ ಸಂಭ್ರಮದಿಂದ ಅವಾರ್ಡ್ ಫಂಕ್ಷನ್ ನಲ್ಲಿ ಪಾಲ್ಗೊಂಡಿದ್ದರು. ಮೇಘನಾ ರಾಜ್ ಅವರು, ಚಿರು ಪರವಾಗಿ ಲೈಫ್ ಟೈಂ ಅಚಿವಮೆಂಟ್ ಅವಾರ್ಡ್ ಕೂಡ ಸ್ವೀಕರಿಸಿದ್ದರು.

ಚಿರು ಪರವಾಗಿ ಸ್ವೀಕರಿಸಿದ ಅವಾರ್ಡ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ ನೋಡು ಚಿರು ಫೈನಲ್ಲಿ ನಿನ್ನ ಬ್ಲ್ಯಾಕ್ ಲೇಡಿ ಮನೆಯಲ್ಲಿದ್ದಾಳೆ. ನನಗೆ ಸರಿಯಾಗಿ ಕಾಣಿಸುತ್ತಿದೆ ಒಂದೊಮ್ಮೆ ನೀವು ಈ ಅವಾರ್ಡ್ ಸ್ವೀಕರಿಸಿದರೇ ನಿಮ್ಮ ರಿಯಾಕ್ಷನ್, ಮುಖದ ಭಾವ ಏನಿರುತ್ತಿತ್ತು ಎಂಬುದನ್ನು ನಾನು ಈಗಲೂ ಹೇಳಬಲ್ಲೆ. ಇಂತ ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಮೇಘನಾ ಚಿರುಗಾಗಿ ಅವಾರ್ಡ್ ಜೊತೆ ಪೋಟೋ ಶೇರ್ ಮಾಡಿದ್ದರು. ಸದ್ಯ ಮೇಘನಾ ರಾಜ್ ಅವರು ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ರಾಜ್ ಕೈಯಲ್ಲಿ ಒಂದೆರಡು ಸಿನಿಮಾಗಳಿದ್ದು, ಸಿನಿಮಾ ಚಿತ್ರೀಕರಣವೆಂದು ಬ್ಯುಸಿಯಾಗಿದ್ದಾರೆ.

ಇನ್ನು ರಾಯನ್ ಹುಟ್ಟುಹಬ್ಬಕ್ಕೆ ನಟ ಧೃವ ಸರ್ಜಾ ಹಾಗೂ ಅವರ ತಾಯಿ ಅಮ್ಮಾಜಿ ಅವರು ಬಂದಿದ್ದರು ಮುದ್ದು ಮೊಮ್ಮಗನನ್ನು ಆಟ ಆಡಿಸಿದ್ದಾರೆ ತದ ನಂತರ ಧೃವ ಸರ್ಜಾ ಅಣ್ಣನ ಮಗನಿಗೆ ಚಿನ್ನದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಇದನ್ನು ಚಿರು ತಾಯಿ ಸ್ವತಃ ರಾಯನ್ ಕೈಗೆ ಹಾಕಿದ್ದರೆ ಆ ವಿಡಿಯೋ ಈ ಕೆಳಗಿದೆ ನೋಡಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.