Friday, June 9, 2023
HomeEntertainmentಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, "ಪುನೀತಪರ್ವ" ಕಾರ್ಯಕ್ರಮ ನಡೆಸಿಕೊಡುವುದಕ್ಕೆ...

ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಪಟಪಟನೆ ಮಾತನಾಡುವ ಅನುಶ್ರೀ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ಮಾತಿನ ಮಲ್ಲಿ ಎಂದೇ ಪ್ರಖ್ಯಾತಿ ಆದಂತಹ ಅನುಶ್ರೀ ಅವರು ಸದ್ಯಕ್ಕೆ ಕನ್ನಡದ ನಂಬರ್ ಒನ್ ಆಂಕರ್ ಎಂಬ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಐದು ವರ್ಷಗಳಿಂದಲೂ ಕೂಡ ಜೀ ಕನ್ನಡ ವೇದಿಕೆಯಲ್ಲಿ ಬೆಸ್ಟ್ ಆಂಕರ್ ಎಂಬ ಅವಾರ್ಡನ್ನು ಪಡೆದುಕೊಂಡಿದ್ದಾರೆ. ಇನ್ನು ಅನುಶ್ರೀ ಅವರು ಮೂಲತಃ ಮಂಗಳೂರಿನವರಾದರೂ ಕೂಡ ಸ್ಪಷ್ಟ ಕನ್ನಡವನ್ನು ಮಾತನಾಡುತ್ತಾರೆ ಮೊದಮೊದಲು ಇವರ ಬೆಂಗಳೂರಿಗೆ ಬಂದಾಗ ಕನ್ನಡ ಸರಿಯಾಗಿ ಮಾತನಾಡುವುದಕ್ಕೆ ಬರುತ್ತಿರಲಿಲ್ಲ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಆದರೂ ಕೂಡ ಏನಾದರೂ ಬದುಕಿನಲ್ಲಿ ಸಾಧಿಸಬೇಕು ನಾನು ಏನಾದರೂ ಚಿತ್ರರಂಗದಲ್ಲಿ ಮುಂದುವರಿಯಬೇಕು ಎಂಬ ಆಶಾ ಮನೋಭಾವನೆಯನ್ನು ಇಟ್ಟುಕೊಂಡು ಕನ್ನಡವನ್ನು ಕಲಿಯುವುದಕ್ಕೆ ಪ್ರಾರಂಭ ಮಾಡುತ್ತಾರೆ. ಈಗ ಅನುಶ್ರೀ ಅವರು ಎಷ್ಟು ಚಂದ ಕನ್ನಡ ಮಾತನಾಡುತ್ತಾರೆ ಅಂದರೆ ಯಾರಿಂದಲೂ ಕೂಡ ಇವರನ್ನು ಮಂಗಳೂರಿನವರು ಅಂತ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟು ಸ್ಪಷ್ಟ ಕನ್ನಡವನ್ನು ಮಾತನಾಡುತ್ತಾರೆ. ಇದೆಲ್ಲ ಒಂದು ಕಡೆಯಾದರೆ ಅನುಶ್ರೀ ಅವರು ಈ ನಂಬರ್ ಒನ್ ಸ್ಥಾನ ಪಟ್ಟ ಗಿಟ್ಟಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ.

ತಾವು ಪಟ್ಟ ಕಷ್ಟಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ ಅಂತಾನೇ ಹೇಳಬಹುದು ಇನ್ನು ಅನುಶ್ರೀ ಅವರು ನಡೆಸಿ ಕೊಡುತ್ತಿರುವ ಕಾರ್ಯಕ್ರಮ ಅಂದರೆ ಸಾಕು ಅಲ್ಲಿ ಸಾಕಷ್ಟು ಜನರು ಸೇರುತ್ತಾರೆ. ಏಕೆಂದರೆ ಅನುಶ್ರೀ ಅವರು ಅಷ್ಟು ಅಚ್ಚುಕಟ್ಟಾಗಿ ಯಾವುದೇ ಕಾರ್ಯಕ್ರಮವಾದರೂ ಕೂಡ ನಡೆಸಿಕೊಡುತ್ತಾರೆ ಇನ್ನು ಎಂಟರ್ಟೈನ್ಮೆಂಟ್ ಅಂದರೆ ಅನುಶ್ರೀ ಅಂತಾನೆ ಹೇಳಬಹುದು. ಸ್ವಲ್ಪವೂ ಕೂಡ ಮುಜುಗರ ಪಡೆದ ನಾಚಿಕೆ ಇಲ್ಲದೆ ವೇದಿಕೆ ಮೇಲೆ ಹಾಸಿನರಾಗಿರುವ ಎಲ್ಲಾ ಗಣ್ಯರನ್ನು ಮತ್ತು ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿರುವಂತಹ ಪ್ರೇಕ್ಷಕರನ್ನು ಮನರಂಜಿಸುವ ದೃಷ್ಟಿಯಿಂದ ತಮ್ಮನ್ನು ತಾವೇ ಕೆಲವೊಮ್ಮೆ ಜೋಕ್ ಮಾಡಿಕೊಳ್ಳುತ್ತಾರೆ.

ಇದೆಲ್ಲ ಒಂದು ಕಡೆಯಾದರೆ ಅನುಶ್ರೀ ಅವರಿಗೆ ಅಪ್ಪು ಅಂದರೆ ಬಹಳಾನೇ ಪ್ರೀತಿ ಎಲ್ಲಿಲ್ಲದ ಅಭಿಮಾನ ಈ ಕಾರಣಕ್ಕಾಗಿ ಅನುಶ್ರೀ ಅವರು ತಮ್ಮ ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ಅಪ್ಪು ಫ್ಯಾನ್ ಫಾರ್ ಎವೆರ್ ಎಂದು ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಯೂಟ್ಯೂಬ್ ವಾಹಿನಿಯ ಲೋಗೋದಲ್ಲಿಯೂ ಕೂಡ ಅಪ್ಪು ಅವರ ಭಾವಚಿತ್ರವನ್ನು ಹಾಕಿಕೊಂಡಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ತಿಳಿಯುತ್ತದೆ ಅಪ್ಪು ಅವರಿಗೆ ಅನುಶ್ರೀ ಅವರು ಎಷ್ಟು ಗೌರವ ನೀಡುತ್ತಿದ್ದರು ಹಾಗೂ ಎಷ್ಟು ಎತ್ತರದ ಸ್ಥಾನದಲ್ಲಿ ಇಟ್ಟಿದ್ದರು ಅಂತ.

ಇನ್ನು ವಿಚಾರಕ್ಕೆ ಬರುವುದಾದರೆ ಅನುಶ್ರೀ ಅವರು ಯಾವುದೇ ಒಂದು ಕಾರ್ಯಕ್ರಮ ನಡೆಸಿಕೊಟ್ಟರು ಕೂಡ ಅದಕ್ಕೆ ಸಂಭಾವನೆಯ ರೂಪದಲ್ಲಿ ಹಣವನ್ನು ಪಡೆಯುತ್ತಾರೆ. ಕೆಲವು ಮೂಲಗಳ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆಯುವ ಆಂಕರ್ ಗಳ ಪೈಕಿ ಅನುಶ್ರೀ ಅವರು ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಹೌದು ಅನುಶ್ರೀ ಅವರು ಯಾವುದೇ ಕಾರ್ಯಕ್ರಮ ನಡೆಸಿಕೊಡಬೇಕಾದರೂ ಕೂಡ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಸಂಬಾವನೆಯನ್ನು ಪಡೆಯುತ್ತಾರಂತೆ. ಆದರೆ ಮೊನ್ನೆ ಅಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಂತಹ ಅಪ್ಪು ಪರ್ವ ಕಾರ್ಯ ಕ್ರಮಕ್ಕೆ ಇವರು ಒಂದೇ ಒಂದು ಬಿಡಿಗಾಸನ್ನು ಕೂಡ ಪಡೆದಿಲ್ಲ ಬದಲಾಗಿ ಅಪ್ಪು ಅವರ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕಾಗಿ ಉಚಿತವಾಗಿ ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದಾರೆ.

ನಿಜಕ್ಕೂ ಇದು ಮೆಚ್ಚುವಂತಹ ಕೆಲಸ ಸಾಮಾನ್ಯವಾಗಿ ಯಾವುದೇ ವ್ಯಕ್ತಿಯಾದರು ಕೂಡ ಪ್ರತಿಫಲವನ್ನು ಪಡೆಯದೆ ಕೆಲಸ ಮಾಡುವುದಿಲ್ಲ ಆದರೆ ಅನುಶ್ರೀ ಅವರು ಮಾತ್ರ ಅಪ್ಪು ಅವರು ಮಾಡಿರುವ ದಾನ ಧರ್ಮದ ಬಗ್ಗೆ ತಿಳಿದುಕೊಂಡು ಹಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬಾರದು, ಬದಲಾಗಿ ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಮಾನ್ಯತೆಯನ್ನು ನೀಡಬೇಕು ಎಂಬುದನ್ನು ಅರಿತುಕೊಂಡು ಅಪ್ಪು ಕಾರ್ಯಕ್ರಮಕ್ಕೆ ಯಾವುದೇ ರೀತಿಯಾದಂತಹ ಸಂಭಾವನೆಯನ್ನು ಪಡೆಯದೆ ಉಚಿತವಾಗಿ ಈ ಒಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ನಿಜಕ್ಕೂ ಅನುಶ್ರೀ ಅವರು ಮಾಡಿರುವ ಈ ಕೆಲಸ ನೋಡಿ ಇದೀಗ ಕರುನಾಡ ಜನತೆ ಮೆಚ್ಚಿಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ