ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಇಂದು ಮದುವೆಯ ಸಂಭ್ರಮ. ರವಿಚಂದ್ರನ್ ಅವರು ಈಗಷ್ಟೇ ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ದೂರಿಯವಾಗಿ ಮಾಡಿದ್ದು ಎಲ್ಲರ ಕಣ್ಣಿನಲ್ಲಿ ಕಟ್ಟಿದೆ ಈಗ ಅವರ ಮನೆಯಲ್ಲಿ ಮತ್ತೊಂದು ನಡೆಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೇಷ್ಠ ಪುತ್ರ ಮನೋರಂಜನ್ ಅವರು ಇಂದು ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಾಹೇಬ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದ್ದ ಮನೋರಂಜನ್ ಅವರ ತ್ರಿವಿಕ್ರಮ ಸಿನಿಮಾ ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈ ಸಿನಿಮಾ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಪ್ಲಾನ್ ಮಾಡಿದ್ದ ಸಿನಿಮಾ ತಂಡವನ್ನು ಪ್ರೇಕ್ಷಕರನ್ನು ಥಿಯೇಟರ್ ಗೆ ಆಹ್ವಾನಿಸಲು ಮದುವೆ ಪತ್ರಿಕೆ ರೂಪದಲ್ಲಿ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದರು ಆದರೆ ಇದೀಗ ಆ ತ್ರಿವಿಕ್ರಮನಿಗೆ ಇಂದು ನಿಜವಾಗಿ ಕಂಕಣ ಭಾಗ್ಯ ಕೂಡಿಬಂದಿದೆ.
ಸ್ನೇಹಿತರು, ಕುಟುಂಬದವರು ಹಾಗೂ ಬಂಧು ಬಾಂಧವರ ನಡುವೆ ಸಂಪ್ರದಾಯಿಕವಾಗಿ ಮದುವೆ ನಡೆಯುತ್ತಿದೆ. ಈಗಾಗಲೇ ಇವರ ರಿಸೆಪ್ಶನ್ ನಡೆದಿರುವ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದು ಮದುವೆ ಸಂಭ್ರಮ ನೋಡಿ ಎಲ್ಲರೂ ಬಾಯ ಮೇಲೆ ಬೆರಳು ಇಡುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯ ಮದುವೆ ಎಂದರೆ ಅದರಲ್ಲಿ ಅದ್ದೂರಿತನಕೆ ಏನೂ ಕಡಿಮೆ ಇಲ್ಲ. ಗ್ರಾಂಡ್ ಡೆಕೋರೇಷನ್ ಅದ್ದೂರಿ ಲೈಟ್ಸ್ ಸೆಟ್ ಇನ್ನು ಮುಂತಾದ ಹಲವು ವಿಶೇಷತೆಗಳಿಂದ ಮದುವೆ ಮಂಟಪ ಜಗಮಗಗೊಳಿಸುತ್ತಿದೆ. ಮಧ್ಯೆ ನಿಂತಿರುವ ವಧು-ವರರು ನೋಡುಗರ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಕಾಣುತ್ತಿದ್ದಾರೆ. ಮದುವೆ ಮನೆ ತುಂಬಾ ರವಿಚಂದ್ರನ್ ಹಾಗೂ ಅವರ ಪತ್ನಿ ಮತ್ತು ಮಗಳು ಅಳಿಯ, ಕಿರಿಯ ಪುತ್ರ ಯುವ, ತಮ್ಮ ಬಾಲಾಜಿ ಹೀಗೆ ಎಲ್ಲರೂ ಬಹಳ ಸಂಭ್ರಮದಿಂದ ಓಡಾಡಿಕೊಂಡು ಬಂದು ಬಾಂಧವರ ಆಗಮನವನ್ನು ವಿಚಾರಿಸುತ್ತಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ರವಿಚಂದ್ರನ್ ಅವರ ಆತ್ಮೀಯ ಸ್ನೇಹಿತ ಇವರು ಕೂಡ ಆಗಮಿಸಿ ವಧುವರರಿಗೆ ಶುಭಾಶಯ ಕೋರಿದ್ದಾರೆ. ಶಿವಣ್ಣನ ಜೊತೆ ರಾಘಣ್ಣ ಕೂಡ ಮದುವೆಗೆ ಬಂದಿದ್ದಾರೆ. ಸಾಧುಕೋಕಿಲ ಅವರು ಕುಟುಂಬ ಸಮೇತ ಆಗಮಿಸಿದ್ದಾರೆ ಮತ್ತು ಡೈರೆಕ್ಟರ್ ಯೋಗರಾಜ್ ಭಟ್ ಅವರು ಕೂಡ ವಧುವರರಿಗೆ ಆಶೀರ್ವದಿಸಲು ಬಂದಿದ್ದಾರೆ. ಖುಷ್ಬು ಅವರು ರವಿಚಂದ್ರನ್ ಅವರಿಗೆ ಬಹಳ ಆತ್ಮೀಯರು ಇವರು ಸಹ ಉಡುಗೊರೆಯೊಂದಿಗೆ ಮಧುಮಕ್ಕಳಿಗೆ ಶುಭಾಶಯ ತಿಳಿಸಲು ಬಂದಿದ್ದಾರೆ. ಸಿಟಿ ರವಿ ಅವರು ಕೂಡ ರಿಸೆಪ್ಶನ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ ಅವರಿಗೂ ಆಹ್ವಾನ ತಲುಪಿತ್ತು ಹೀಗಾಗಿ ಅವರು ಸಹ ರವಿಚಂದ್ರನ್ ಪುತ್ರನಿಗೆ ಶುಭ ಹಾರೈಸಲು ಬಂದಿದ್ದಾರೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಸಹ ಮದುವೆ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ರವಿಚಂದ್ರನ್ ಅವರ ಮನೆಯ ಯಾವುದೇ ಸಮಾರಂಭ ಇದ್ದರೂ ಕೂಡ ಹಂಸಲೇಖ ಅವರು ತಪ್ಪಿಸಿಕೊಳ್ಳುವುದಿಲ್ಲ ಯಾಕೆಂದರೆ ಅವರ ಒಂದು ಕುಟುಂಬದ ಒಂದು ಭಾಗವಾಗಿ ಹಂಸಲೇಖ ಅವರು ಇದ್ದಾರೆ. ಈಗ ಮನೋರಂಜನ್ ಮದುವೆಗೆ ಕುಟುಂಬ ಸಮೇತ ಹಂಸಲೇಖ ಅವರು ಬಂದಿದ್ದಾರೆ. ನಿರೂಪಕ ಮಾಸ್ಟರ್ ಆನಂದ್ ಅವರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ, ಇವರ ಜೊತೆ ಆಂಕರ್ ಅಕುಲ್ ಬಾಲಾಜಿ ಅವರು ಕೂಡ ಭಾಗವಹಿಸಿ ನವ ವಧುವರರಿಗೆ ಶುಭ ಹಾರೈಸಿದ್ದಾರೆ. ಇದರೊಂದಿಗೆ ಇನ್ನು ಅನೇಕ ಕರ್ನಾಟಕದ ಗಣ್ಯ ವ್ಯಕ್ತಿಗಳು ರಾಜಕೀಯ ವ್ಯಕ್ತಿಗಳು ಮತ್ತು ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟ ಹಲವಾರು ಸ್ನೇಹಿತರು ಕೂಡ ಭೇಟಿ ಕೊಟ್ಟಿದ್ದಾರೆ.