ನಟ ರವಿಚಂದ್ರನ್ ಅವರು ಏನೇ ಮಾಡಿದರು ಕೂಡ ತುಂಬಾ ಸ್ಪೆಷಲ್ ಆಗಿ ಮತ್ತು ಡಿಫರೆಂಟ್ ಆಗಿ ಮಾಡುತ್ತಾರೆ ಇದು ಕೇವಲ ಅವರ ಸಿನಿಮಾಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ ನಿಜ ಜೀವನದಲ್ಲಿಯೂ ಕೂಡ ಇದನ್ನೇ ರೂಡಿಸಿಕೊಂಡಿದ್ದಾರೆ. ಹೌದು ನಟ ರವಿಚಂದ್ರನ್ ಅವರು ತೊಡುವಂತಹ ಉಡುಪು ಇರಬಹುದು ವಾಸವಾಗಿರುವಂತಹ ಮನೆ ಇರಬಹುದು ಅವರು ಬಳಕೆ ಮಾಡುವ ಕಾರು ಹಾಗೂ ದಿನನಿತ್ಯದ ಸಾಮಗ್ರಿ ಪ್ರತಿಯೊಂದು ಕೂಡ ವಿಭಿನ್ನ ಇರುತ್ತದೆ. ಸಾಮಾನ್ಯ ಜನರಿಗಿಂತಲೂ ಕೂಡ ವಿಶೇಷವಾದದ್ದನ್ನೇ ಬಳಕೆ ಮಾಡುವುದು ಇವರ ಹವ್ಯಾಸ. ಸಿನಿಮಾ ರಂಗದಲ್ಲಿಯೂ ಕೂಡ ಸಾಕಷ್ಟು ವಿಜೃಂಭಣೆ ಮತ್ತು ವೈಭವೀಕರಣವನ್ನು ತೋರಿಸುತ್ತಾರೆ ವಿಜುವಲ್ ಎಫೆಕ್ಟ್ ಚೆನ್ನಾಗಿ ಬರಬೇಕು ಎಂಬುದಷ್ಟೇ ಇವರ ಉದ್ದೇಶ.
ಇದೇ ರೀತಿ ತಮ್ಮ ಮಗನ ಮದುವೆಯ ಕಾರ್ಯದಲ್ಲಿಯೂ ಕೂಡ ನಟ ರವಿಚಂದ್ರನ್ ಅವರು ಬಹಳ ಅದ್ದೂರಿತನವನ್ನು ತೋರಿಸಿದ್ದಾರೆ ಇದೇ ಮೊದಲ ಬಾರಿಗೆ ಏನೆಲ್ಲ ರವಿಚಂದ್ರನ್ ಅವರು ಇಂತಹ ಅದ್ದೂರಿ ಮದುವೆ ಮಾಡಿರುವುದು. ಇದಕ್ಕೂ ಮುಂಚೆ ರವಿಚಂದ್ರನ್ ಅವರ ಮಗಳು ಗೀತಾಂಜಲಿ ಅವರ ಮಗಳ ಮದುವೆಯನ್ನು ಕೂಡ ಅರಮನೆಯ ಮೈದಾನದ ಮುಂದೆ ಬಹಳ ವಿಜೃಂಭಣೆಯಿಂದ ಮಾಡಿದರು. ಹೌದು ಈ ಒಂದು ಮದುವೆಯನ್ನು ನೋಡಿದರೆ ನಿಜಕ್ಕೂ ಸ್ವರ್ಗವೇ ಭೂಲೋಕಕ್ಕೆ ಇಳಿದಂತೆ ಕಾಣುತ್ತಿತ್ತು ಅಷ್ಟು ವೈಭವಿಕರಿಸಿ ಈ ಮದುವೆಯನ್ನು ಮಾಡಿದ್ದರು. ಡೆಕೋರೇಷನ್ ಆಗಿರಬಹುದು, ಊಟ ಆಗಿರಬಹುದು, ಮೇಕಪ್ ಆಗಿರಬಹುದು ಅವರು ತೊಡುವಂತಹ ವಸ್ತ್ರ ವಿನ್ಯಾಸ ಆಗಿರಬಹುದು ಎಲ್ಲವನ್ನು ಕೂಡ ಸಖತ್ ಸ್ಪೆಷಲ್ ಆಗಿಯೇ ರವಿಚಂದ್ರನ್ ಮಾಡಿಸಿದ್ದರು.
ಇದೀಗ ತಮ್ಮ ಮಗನ ಮದುವೆಗೂ ಕೂಡ ಅದೇ ರೀತಿಯಾದಂತಹ ಸ್ಪೆಷಲ್ ಎಫೆಕ್ಟ್ಸ್ ಅನ್ನು ತೋರಿಸಿದ್ದಾರೆ ಹೌದು. ರವಿಚಂದ್ರನ್ ಅವರ ಹಿರಿಯ ಪುತ್ರ ಆದಂತಹ ಮನೋರಂಜನ್ ಅವರ ಮದುವೆ ಇದೇ ತಿಂಗಳ ಆಗಸ್ಟ್ 22, 23 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಒಂದು ಮದುವೆಗೆ ಸಿನಿಮಾ ರಂಗದವರು ರಾಜಕೀಯ ರಂಗದವರು ಸ್ನೇಹಿತರು ಬಂಧುಮಿತ್ರರು ಎಲ್ಲರೂ ಕೂಡ ಆಗಮಿಸಿ ನೂತನ ವಧು ಮತ್ತು ವರರಿಗೆ ಶುಭಾಶಯಗಳು ಕೋರಿ ಹೋದರು. ಇದೊಂದು ಪಕ್ಕ ಅರೇಂಜ್ ಮ್ಯಾರೇಜ್ ರವಿಚಂದ್ರನ್ ಹೇಗೆ ತಮ್ಮ ತಂದೆ ತೋರಿಸಿದಂತಹ ಹುಡುಗಿಯನ್ನು ಮದುವೆಯಾದರೂ ಅದೇ ರೀತಿ ಮನೋರಂಜನ್ ಕೂಡ ತಮ್ಮ ಕುಟುಂಬಸ್ಥರು ತೋರಿಸಿದಂತಹ ಹುಡುಗಿಯನ್ನು ಮದುವೆಯಾಗಿದ್ದಾರೆ.
ರವಿಚಂದ್ರನ್ ಅವರ ದೂರದ ಸಂಬಂಧಿ ಆದಂತಹ ಸಂಗೀತ ಅವರನ್ನು ಮನೋರಂಜನ್ ಅವರು ಮದುವೆಯಾಗಿದ್ದಾರೆ ಸಂಗೀತ ಅವರು ಮೂಲತಃ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರು ಮೂಲತಃ ವಿಲ್ಸನ್ ಗಾರ್ಡನ್ನಲ್ಲಿ ವಾಸಿಸುತ್ತಿದ್ದಾರೆ. ರವಿಚಂದ್ರನ್ ಅವರಿಗೆ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ಆಸೆ ಕನಸು ಇತ್ತು. ಈ ಕಾರಣಕ್ಕಾಗಿಯೇ ಅವರು ವಿಶೇಷ ಲಗ್ನಪತ್ರಿಕೆ ಒಂದನ್ನು ಕೂಡ ಪ್ರಿಂಟ್ ಮಾಡಿಸಿದರು ಹೌದು ಲಗ್ನ ಪತ್ರಿಕೆಯಲ್ಲಿ ರವಿಚಂದ್ರನ್ ಅವರು ಸಿಂಹಾಸನದ ಮೇಲೆ ಕುಳಿತಿರುವ ಹಾಗೆ ಸ್ಟ್ಯಾಚು ಒಂದು ಇತ್ತು. ತದನಂತರ ಅದರ ಒಳಗೆ ವಿವಾಹಕ್ಕೆ ಸಂಬಂಧಪಟ್ಟಂತಹ ಕೆಲವೊಂದಿಷ್ಟು ಬರವಣಿಗಳನ್ನು ಬರೆಯಲಾಗಿತ್ತು ಒಂದು ಇನ್ವಿಟೇಶನ್ ನ ಬೆಲೆ ಬರೋಬ್ಬರಿ 3000 ಅಲ್ಲಿಗೆ ನೀವೇ ಊಹೆ ಮಾಡಿಕೊಂಡು ನೋಡಿ ಈ ಮದುವೆಯನ್ನು ಇನ್ನೆಷ್ಟು ಅದ್ದೂರಿಯಾಗಿ ರವಿಚಂದ್ರನ್ ಮಾಡಿರಬಹುದು ಅಂತ.
ಹೌದು ರವಿಚಂದ್ರನ್ ಅವರು ಬಹಳ ಸ್ಟೈಲಿಶ್ ಆಗಿ ಡೆಕೋರೇಷನ್ ಮಾಡಿಸಿದ್ದಾರೆ ವಸ್ತ್ರ ವಿನ್ಯಾಸವನ್ನು ಕೂಡ ಇವರೇ ತುಂಬಾ ಸಮಯ ತೆಗೆದುಕೊಂಡು ಮಾಡಿದ್ದಾರೆ ತಮ್ಮ ಮಗ ಮದುವೆಯಲ್ಲಿ ಯುವರಾಜನಂತೆ ಕಾಣಬೇಕು ಎಂಬ ದೃಷ್ಟಿಯಿಂದ ಸಾಕಷ್ಟು ಶ್ರಮವಹಿಸಿ ಊಟದಿಂದ ಹಿಡಿದು ವಿಡಿಯೋ ಫೋಟೋಸ್ ಡೆಕೋರೇಷನ್ ಎಲ್ಲವನ್ನು ಕೂಡ ಸ್ವತಃ ರವಿಚಂದ್ರನ್ ಅವರೇ ಡಿಸೈನ್ ಮಾಡಿದ್ದಾರೆ. ಈ ಒಂದು ಮದುವೆಗೆ ರವಿಚಂದ್ರನ್ ಅವರು ಖರ್ಚು ಮಾಡಿರುವುದು ಬರೋಬ್ಬರಿ 8 ರಿಂದ 10 ಕೋಟಿ ಹಣ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅದೇನೆ ಆಗಲಿ ಒಟ್ಟಾರೆಯಾಗಿ ಹೇಳುವುದಾದರೆ ರವಿಚಂದ್ರನ್ ಅವರು ತಮ್ಮ ಮಗನ ಮದುವೆಗೆ ಇಷ್ಟು ಹಣವನ್ನು ಖರ್ಚು ಮಾಡಬೇಕಿತ್ತಾ ಎಂಬುದೇ ಕೆಲವು ನೆಟ್ಟಿಗರ ಪ್ರಶ್ನೆಯಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.