((Rajinikanth)ರಜನಿಕಾಂತ್ ಎದುರು ತೊಡೆತಟ್ಟಿ ಗೆದ್ದಿದ್ದ ರವಿಚಂದ್ರನ್(Ravichandran) ಯಾವ ಕಾರಣಕ್ಕಾಗಿ ಗೊತ್ತಾ.?
ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳಿನ ಒಬ್ಬ ಶ್ರೇಷ್ಠ ನಟ ಈ ಹೆಸರಾಂತ ನಟ ಇಂದು ತಮಿಳಿಗೆ ಮಾತ್ರ ಸೀಮಿತವಾಗದೆ ಭಾರತದಾದ್ಯಂತ ತಮ್ಮ ಹವಾ ಕ್ರಿಯೆಟ್ ಮಾಡಿದ್ದಾರೆ. ಭಾರತದ ಸಿನಿಮಾ ಲೋಕದಲ್ಲಿಯೇ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ರಜನಿಕಾಂತ್ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ.
ಕರ್ನಾಟಕ ಮೂಲದವರಾದ ರಜನಿಕಾಂತ್ ಅವರು ಚೆನ್ನೈ ಹೋಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಂಡ ಕಥೆಯೇ ರೋಚಕ. ರಜನಿಕಾಂತ್ ಅವರ ಯುಗ ಎಂದೆ ಒಂದು ಸಮಯವನ್ನು ಕರೆಯಲಾಗುತ್ತಿತ್ತು. ಯಾಕೆಂದರೆ ಆ ಸಮಯದಲ್ಲಿ ತಮಿಳು ಮಾತ್ರವಲ್ಲದೆ ಪರಭಾಷೆಯ ಸಿನಿರಂಗದವರು ಕೂಡ ರಜನಿಕಾಂತ್ ಅವರ ಸಿನಿಮಾ ರಿಲೀಸ್ ಆದ ಸಮಯದಲ್ಲಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೆದರುತ್ತಿದ್ದರು.
ಯಾಕೆಂದರೆ ರಜನಿಕಾಂತ್ ಅವರಿಗೆ ಭಾರತದಾದ್ಯಂತ ಅಷ್ಟು ಅಭಿಮಾನಿಗಳು ಇದ್ದರು. ಹಾಗಾಗಿ ಅವರ ಸಿನಿಮಾ ರಿಲೀಸ್ ಆದಾಗ ಅದರ ಎದುರು ಯಾವುದೇ ನಟನ ಸಿನಿಮಾ ರಿಲೀಸ್ ಆದರೂ ಥಿಯೇಟರ್ ನಲ್ಲಿ ಜನ ಇಲ್ಲದೆ ಸಿನಿಮಾ ಫ್ಲಾಫ್ ಆಗುತ್ತಿತ್ತು. ಹಾಗಾಗಿ ಬಾಲಿವುಡ್ ಮುಂದಿ ಕೂಡ ಹಿಂದೂ ಮುಂದು ನೋಡಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದರು.
ಆ ರೀತಿಯ ರಜನಿ ಯುಗ ಇದ್ದ ಕಾಲದಲ್ಲಿ ಕನ್ನಡ ಸ್ಟಾರ್ ನಟರೊಬ್ಬರು ರಜನಿಕಾಂತ್ ಅವರ ಭಾಷ ಸಿನಿಮಾ ರಿಲೀಸ್ ಆದ ದಿನವೇ ತಮ್ಮ ಸಿನಿಮಾವನ್ನು ರಿಲೀಸ್ ಮಾಡಿ ಅಷ್ಟೇ ಮಟ್ಟದ ಸಕ್ಸಸ್ ಕೂಡ ಪಡೆದುಬಿಟ್ಟರು. ಆತ ಮತ್ಯಾರು ಅಲ್ಲ ಕನ್ನಡದಲ್ಲಿ ಸಿನಿಮಾಗಳ ಬಗ್ಗೆ ಕನಸು ಕಾಣುತ್ತಾ ತಮ್ಮ ಇಡೀ ಜೀವನವನ್ನು ಸಿನಿಮಾಗಾಗಿ ಅರ್ಪಿಸಿದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು.
1995 ಜನವರಿ 12ರಂದು ರಜನಿಕಾಂತ್ ಅವರ ಭಾಷಾ ಸಿನಿಮಾ ರಿಲೀಸ್ ಆಗಿತ್ತು, ಅದೇ ದಿನದಂದು ಕನ್ನಡದಲ್ಲಿ ವೀರ ಸ್ವಾಮಿ ಅವರ ನಿರ್ಮಾಣದ ಪುಟ್ನಂಜ ಸಿನಿಮಾ ಕೂಡ ರಿಲೀಸ್ ಆಯ್ತು. ಎರಡು ಸಹ ವಿಭಿನ್ನ ಬಗೆಯ ಕಥೆ ಹೊಂದಿದ ವಿಭಿನ್ನ ಝೋನರ್ ಸಿನಿಮಾ ಆಗಿತ್ತು. ಭಾಷಾ ಸಿನಿಮಾ ರಿಲೀಸ್ ಆದ ದಿನ ರಜನಿಕಾಂತ್ ಸಿನಿಮಾ ಎದುರು ಪುಟ್ನಂಜ ರಿಲೀಸ್ ಆಗುತ್ತಿದೆ ಇದು ಖಂಡಿತ ಸೋಲುತ್ತದೆ ಎಂದೆ ಎಲ್ಲರೂ ಮಾತನಾಡಿಕೊಂಡಿದ್ದರು.
ಆದರೆ ಪುಟ್ನಂಜ ಸಿನಿಮಾದ ಕಥೆ ಮೆಚ್ಚಿಕೊಂಡು ರವಿಚಂದ್ರನ್ ಅಭಿನಯ, ಹಂಸಲೇಖ ಅವರ ಸಂಗೀತ, ಉತ್ತಮ ಸಾಹಿತ್ಯ ಹೊಂದಿದ ಹಾಡುಗಳು ಇವೆಲ್ಲ ಕಾರಣದಿಂದ ಸಿನಿಮಾ ಗೆದ್ದಿತ್ತು. ಇಂದಿಗೂ ಸಹ ರವಿಚಂದ್ರನ್ ಅವರ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಗಳ ಸಾಲಿನಲ್ಲಿ ಪುಟ್ನಂಜ ಸಿನಿಮಾ ಕೂಡ ಇದೆ ಇಂದು ಅದು ರಿಲೀಸ್ ಆಗಿ 27 ವರ್ಷಗಳಾಗುತ್ತಿದ್ದರೂ ಕೂಡ ಜನ ಇನ್ನೂ ಅಷ್ಟೆ ಖುಷಿಯಿಂದ ಪುಟ್ನಂಜ ಸಿನಿಮಾವನ್ನು ಮತ್ತೊಮ್ಮೆ ಮಗದೊಮ್ಮೆ ನೋಡುತ್ತಿದ್ದಾರೆ.
ಸಂಕ್ರಾಂತಿ ಹತ್ತಿರ ಸಮಯದಲ್ಲಿ ಬಿಡುಗಡೆ ಆದ ಈ ಸಿನಿಮಾ ಹಳ್ಳಿ ಸೊಡಗಿನ ಸಿನಿಮಾ ಕೂಡ ಆಗಿತ್ತು ಅಲ್ಲದೆ ಸುಗ್ಗಿ ಬಗ್ಗೆ ಹಾಡು ಕೂಡ ಒಂದಿತ್ತು. ಕನ್ನಡಕ್ಕೆ ರವಿಚಂದ್ರನ್ ಕಡೆಯಿಂದ ಸಿಕ್ಕ ಶ್ರೇಷ್ಠ ಸಿನಿಮಾಗಳಲ್ಲಿ ಪುಟ್ನಂಜ ಕೂಡ ಒಂದು. ಭಾಷಾ ಸಿನಿಮಾ ಕೂಡ ತಮಿಳುನಲ್ಲಿ ಸೂಪರ್ ಹಿಟ್ ಆಗಿ ರಜನಿಕಾಂತ್ ಅವರಿಗೆ ಬ್ರೇಕ್ ನೀಡಿತ್ತು. ಇತ್ತ ರವಿಚಂದ್ರನ್ ಅವರು ಕೂಡ ಪುಟ್ನಂಜ ಸಕ್ಸಸ್ ನಿಂದ ಮತ್ತೊಂದು ಮಟ್ಟದಲ್ಲಿ ಬೆಳೆದರು. ಈ ಎರಡು ಸಿನಿಮಾಗಳನ್ನು ಸಿನಿಮಾ ಆರಾಧಕರು ಮೆಚ್ಚಿ ಅಪ್ಪಿಕೊಂಡಿದ್ದರು.