Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವೃದ್ಧಾಪ್ಯಕ್ಕೆ ಕಾರಣಗಳು.!

Posted on October 14, 2023 By Kannada Trend News No Comments on ವೃದ್ಧಾಪ್ಯಕ್ಕೆ ಕಾರಣಗಳು.!

 

ಇಂದು ಬಹಳಷ್ಟು ಜನರು ಸಣ್ಣ ವಯಸ್ಸಿನಲ್ಲಿಯೇ ಮುದುಕರಂತೆ ಕಾಣುತ್ತಾರೆ. ದೇಹದಲ್ಲಿ ಶಕ್ತಿ ಕುಂದುವದು, ಕೂದಲು ಬೆಳ್ಳಗಾಗುವುದು ಹಲ್ಲುಗಳು ಹುಳುಕಾಗುವುದು ಇಲ್ಲವೆ ಬಿದ್ದುಹೋಗುವುದು ಮುಖ ಬೆಳಿಚಿಕೊಳ್ಳುವುದು, ಕೆನ್ನೆಗಳು ಚಪ್ಪಗಾಗುವುದು, ಊಟ ಸುಲಭವಾಗಿ ಜೀರ್ಣವಾಗದಿರುವುದು, ಕಣ್ಣುಗಳು ಮಂಜಾಗುವುದು ಇತ್ಯಾದಿ.

* ಬಹಳಷ್ಟು ನೀರು ಕುಡಿಯುವುದು ನೀರನ್ನು ಹೆಚ್ಚಾಗಿ ಕುಡಿಯುವುದ ರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತುಂಬಾ ಜನ ತಿಳಿದಿದ್ದಾರೆ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಮಾತನ್ನು ನಾವು ನೆನಪಿನಲ್ಲಿಡಬೇಕು. ಅನಾವಶ್ಯಕವಾಗಿ ನೀರಡಿಕೆ ಇಲ್ಲದೆ ನಾವು ಹೆಚ್ಚು ಹೆಚ್ಚು ನೀರು ಕುಡಿಯುತ್ತಾ ಹೋದರೆ ಮೂತ್ರಪಿಂಡಗಳು ಬಹಳ ಕಷ್ಟಪಟ್ಟು ಕೆಲಸಮಾಡಬೇಕಾಗುತ್ತದೆ.

* ನಾವು ಅತಿಯಾಗಿ ನೀರು ಕುಡಿಯುವುದರಿಂದ ದೇಹದಲ್ಲಿನ ಲವಣಾಂಶವು ಏರುಪೇರಾಗಿ ತಲೆನೋವು ವಾಂತಿ ಸ್ನಾಯುಗಳಲ್ಲಿ ದುರ್ಬಲತೆ ಉಂಟಾಗುವ ಸಾಧ್ಯತೆಗಳಿವೆ.
* ಆಯುರ್ವೇದದ ಪ್ರಕಾರವೂ ಅತೀ ಹೆಚ್ಚು ನೀರು ಕುಡಿಯುವುದ ರಿಂದ ವ್ಯಕ್ತಿಯು ಬೇಗನೆ ವೃದ್ಧಾಪ್ಯಕ್ಕೆ ಒಳಗಾಗುತ್ತಾನೆ.

* ಹಗಲಿನಲ್ಲಿ ಮಲಗುವುದು ಮತ್ತು ರಾತ್ರಿಯಲ್ಲಿ ಏಳುವುದು ಪಕೃತಿಯು ನಮ್ಮ ದೇಹದಲ್ಲಿ ಜೈವಿಕ ಗಡಿಯಾರವನ್ನು ಅಳವಡಿಸಿದೆ. ಹಿಂದಿನ ಕಾಲದಲ್ಲಿ ಮನುಷ್ಯರು ಈ ಜೈವಿಕ ಗಡಿಯಾರದ ಪ್ರಕಾರ ಮಲಗುತ್ತಿ ದ್ದರು ಮತ್ತು ಬೆಳಿಗ್ಗೆ ಬೇಗನೆ ಏಳುತ್ತಿದ್ದರು. ಆದರೆ ಈಗಿನವರ ದಿನಚರಿ ಹಿಂದಿನಂತೆ ಇಲ್ಲ. ಕೆಲವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ದಿನವಿಡೀ ಮಲಗಿರುತ್ತಾರೆ.

ತಡರಾತ್ರಿಯವರೆಗೆ ಟಿವಿ ನೋಡುವುದು. ಮೋಜು ಮಸ್ತಿಗಳಲ್ಲಿ ದುರಭ್ಯಾಸಗಳಲ್ಲಿ ಮುಳುಗಿರುವುದು. ಇದಲ್ಲದೆ ಹಗಲು ರಾತ್ರಿ ಮಲಗುವ ಎಷ್ಟೋ ಜನರಿದ್ದಾರೆ. ಈ ಎಲಾ ಅಭ್ಯಾಸಗಳು ಅನೇಕ ರೋಗಗಳಿಗೆ ಕಾರಣವಾಗುತ್ತವೆ. ಸರಿಯಾದ ನಿದ್ದೆ ವಿಶ್ರಾಂತಿಯು ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

* ನಿದ್ರೆ ಕೊರತೆಯಿಂದ ಕಣ್ಣಿನ ಸುತ್ತ ಕಪ್ಪು ವರ್ತುಲಗಳಿಗೆ ಕಾರಣವಾಗು ತ್ತದೆ. ಮೆದುಳು ದುರ್ಬಲವಾಗುತ್ತದೆ ಮತ್ತು ಜೀರ್ಣಶಕ್ತಿ ಕಡಿಮೆಯಾಗಿ ಬೊಜ್ಜು ಬರಲು ಕಾರಣವಾಗುತ್ತದೆ.

* ಮಲ ಮತ್ತು ಮೂತ್ರ ಬಂದಾಗ ಮಾಡದಿರುವುದು ಕೆಲವರು ಅನಿವಾರ್ಯವಾಗಿ ಕೆಲಸದ ಜಾಗದಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಅಥವಾ ಇನ್ನಾವುದೋ ಕಾರಣದಿಂದ ಮಲಮೂತ್ರಗಳನ್ನು ವಿಸರ್ಜಿಸಲು ಆಗುವುದಿಲ್ಲ. ಮಲ ಮತ್ತು ಮೂತ್ರ ಬಂದಾಗ ಅದನ್ನು ಬಹಳ ಹೊತ್ತಿನವರೆಗೆ ಹಿಡಿದಿಟ್ಟುಕೊಳ್ಳಬಾರದು. ಹಾಗೆ ಮಾಡುವುದರಿಂದ ಮೂತ್ರಪಿಂಡಗಳು ಮತ್ತು ಕರುಳಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಶರೀರದಲ್ಲಿನ ಕಲ್ಮಶಗಳು ಬಹಳ ಹೊತ್ತಿನ ವರೆಗೆ ಉಳಿದರೆ ಕಾಯಿಲೆಗಳಿಗೆ ಕಾರಣವಾಗುತ್ತದೆ.

* ಮಾನಸಿಕ ಖಿನ್ನತೆಯು ಮನುಷ್ಯನನ್ನು ದೈಹಿಕವಾಗಿಯೂ ದುರ್ಬಲಗೊಳಿಸುತ್ತದೆ. ಮಾನಸಿಕ ಖಿನ್ನತೆಗೆ ಒಳಗಾದ ಮನುಷ್ಯ ಚಟುವಟಿಕೆಯಿಂದ ಕೆಲಸಮಾಡಲು ಆಗುವುದಿಲ್ಲ. ದೀರ್ಘ ಕಾಲದವರೆಗೆ ಮನುಷ್ಯನು ಮಾನಸಿಕ ಖಿನ್ನತೆಗೆ ಒಳಗಾದರೆ ದೇಹದ ಲ್ಲಿನ ಜೀವಕೋಶಗಳ ವಯಸ್ಸಾಗುವ ಪ್ರಕ್ರಿಯೆಯು ತೀವ್ರಗೊಳ್ಳುತ್ತದೆ. ಇದರಿಂದಾಗಿ ಖಿನ್ನತೆಗೆ ಒಳಗಾದವರು ಉಳಿದವರಿಗಿಂತ ಬೇಗನೆ ವಯಸ್ಸಾದಂತೆ ಆಗುತ್ತಾರೆ.

* ಅತಿಯಾಗಿ ಉಪ್ಪನ್ನು ತಿನ್ನುವುದು ಕೆಲವರು ಊಟದಲ್ಲಿ ಹೆಚ್ಚು ಉಪ್ಪನ್ನು ತಿನ್ನುತ್ತಾರೆ. ದಿನನಿತ್ಯ ಉಪ್ಪಿನಕಾಯಿ ಸೇವಿಸುತ್ತಾರೆ. ದೇಹದಲ್ಲಿ ಅತಿಯಾದ ಸೋಡಿಯಂ ಲವಣಾಂಶದಿಂದ ಜೀವಕೋಶಗಳ ಕೊಳೆಯುವಿಕೆ ಪ್ರಾರಂಭವಾಗುತ್ತದೆ. ಇವರು ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಸಹ ಗುರಿಯಾಗಬಹುದು.

* ದುರಭ್ಯಾಸಗಳು ವಿವಿಧ ರೀತಿಯಲ್ಲಿ ತಂಬಾಕಿನ ಸೇವನೆ ಧೂಮಪಾನ ಮದ್ಯಪಾನ ಇತ್ಯಾದಿ ದುರಭ್ಯಾಸಗಳಿಂದಾಗಿ ಆರೋಗ್ಯವು ಕೆಡುತ್ತದೆ. ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಏರುಪೇರಾಗಿ ಹೃದಯ ಮತ್ತು ಮೆದುಳು ದುರ್ಬಲವಾಗುತ್ತವೆ. ಲಿವರ್ ನ ಆರೋಗ್ಯ ಕೆಡುತ್ತದೆ. ಸದಾ ತಂಬಾಕು ತೆಗೆಯುವ ವ್ಯಕ್ತಿಯ ಹಲ್ಲುಗಳು ನಾಲಿಗೆ ಹಾನಿಗೊಳಗಾಗು ತ್ತವೆ. ವ್ಯಕ್ತಿ ವಯಸ್ಸಾದಂತೆ ಕಾಣುತ್ತಾನೆ. ಮತ್ತು ಬಾಯಿಯ ಒಳಗೆ ಮತ್ತು ಹೊರಗಿನ ಚರ್ಮದ ಜೀವಕೋಶಗಳು ಹಾನಿಗೊಳಗಾಗುತ್ತದೆ.

* ಹೆಚ್ಚು ಚಟುವಟಿಕೆ ಇಲ್ಲದಿರುವುದು ಇಂದು ಬಹುತೇಕ ಜನರು ಯಾವುದೇ ಚಟುವಟಿಕೆಗಳಿಲ್ಲದೆ ಎಂಟು ಗಂಟೆಗಳ ಕಾಲ ಕಚೇರಿಗಳಲ್ಲಿ ಕುಳಿತುಕೊಂಡಿರುತ್ತಾರೆ. ಸ್ವಂತ ಉದ್ಯೋಗ ಮಾಡುವ ಕೆಲವರು ತಮ್ಮ ಅಂಗಡಿಗಳಲ್ಲಿ ಸುಮಾರು 10 ರಿಂದ 12 ಗಂಟೆಗಳ ಕಾಲ ಕುಳಿತು ಕೊಳ್ಳುವ ಅನಿವಾರ್ಯತೆ ಹೊಂದಿದ್ದಾರೆ. ದೀರ್ಘಕಾಲದವರೆಗಿನ ಈ ಅಭ್ಯಾಸವು ಬೊಜ್ಜು ಸಕ್ಕರೆ ಕಾಯಿಲೆ ಮೂತ್ರಪಿಂಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ನಿದ್ರೆ ಬರಲು 5 ನಿಮಿಷ ಸಾಕು..!
Next Post: ರಕ್ತದಲಿ ಸಕ್ಕರೆ ಮಟ್ಟ ಎಷ್ಟಿರಬೇಕು.! ಶುಗರ್ ಲೆವೆಲ್ ಎಷ್ಟಿದ್ದರೆ ನಿಮ್ಮ ಆರೋಗ್ಯ ಸೇಫ್ ಇರುತ್ತೆ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore