ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರನ್ನು ನ್ಯಾಷನಲ್ ಸ್ಟಾರ್ ಅಂತಾನೇ ಕರೆಯಬೇಕು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ಸಕ್ಸಸ್ ಆದ ನಂತರ ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಯಾರ ಕೈಗೂ ಸಿಗುತ್ತಿಲ್ಲ. ಅಂದ ಹಾಗೆ ಕೈಗೆ ಸಿಗುತ್ತಿಲ್ಲ ಎಂದರೆ ಯಾವ ಸಿನಿಮಾದಲ್ಲಿಯೂ ಕೂಡ ನಟನೆ ಮಾಡುತ್ತಿಲ್ಲ ದೊಡ್ಡ ಪ್ರಾಜೆಕ್ಟ್ ನ ಮೂಲಕ ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಬೇಕು ಎಂಬ ಉದ್ದೇಶವನ್ನು ಒಳಗೊಂಡಿದ್ದಾರೆ. ಈ ಕಾರಣಕ್ಕಾಗಿ ಕೆಜಿಫ್ ಸಿನಿಮಾ ತೆರೆ ಕಂಡು ಆರು ತಿಂಗಳು ಕಳೆದರೂ ಕೂಡ ಯಾವುದೇ ಸಿನಿಮಾದ ಸುದ್ದಿಯನ್ನು ಅಥವಾ ಸಿನಿಮಾ ಗೆ ಸಂಬಂಧಪಟ್ಟಂತಹ ಅಪ್ಡೇಟ್ ಅನ್ನು ನೀಡುತ್ತಿಲ್ಲ.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಇದೆಲ್ಲ ಒಂದು ಕಡೆಯಾದರೆ ಸದ್ಯಕ್ಕೆ ದೀಪಾವಳಿ ಹಬ್ಬದ ಸಡಗರ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಇದ್ದಾರೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಕೆಲಸ ಕಾರ್ಯದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಕುಟುಂಬಕ್ಕೆ ನೀಡುವ ಸಮಯದಲ್ಲಿ ಕಿಂಚಿತ್ತು ಕೂಡ ಕಡಿಮೆ ಮಾಡುವುದಿಲ್ಲ. ಹೆಂಡತಿ ಮಕ್ಕಳ ಕಡೆ ಹೆಚ್ಚಿನ ಗಮನ ವಹಿಸುತ್ತಾರೆ ಅದರಲ್ಲಿಯೂ ಕೂಡ ಹಬ್ಬ ಹರಿದಿನ ಬಂದರಂತೂ ಸಂಪೂರ್ಣವಾಗಿ ಅವರ ಜೊತೆಯೇ ಕಾಲ ಕಳೆಯುತ್ತಾರೆ.
ನೆನ್ನೆಯಿಂದ ಮುಂದಿನ ಎರಡು ದಿನಗಳವರೆಗೂ ದೀಪಾವಳಿ ಹಬ್ಬ ಇದ್ದೇ ಇರುತ್ತದೆ ಹಾಗಾಗಿ ನೆನ್ನೆಯ ದೀಪಾವಳಿಯ ಹಬ್ಬದಂದು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹೆಂಡತಿ ಮತ್ತು ಮಕ್ಕಳೊಡನೆ ದೇವರಿಗೆ ಪೂಜೆಯನ್ನು ಸಲ್ಲಿಸಿ ತದನಂತರ ಮನೆಯ ಮುಂಭಾಗದಲ್ಲಿ ದೀಪ ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮಾಚರಣೆ ಮಾಡಿದ್ದಾರೆ. ಇದರ ಜೊತೆಗೆ ಪಟಾಕಿ ಹೊಡೆಯುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಮಕ್ಕಳು ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವಂತಹ ವಿಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋ ಮತ್ತು ಫೋಟೋಗಳನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ದಿ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಎಂಬ ಹೆಸರಿನಿಂದಲೂ ಕೂಡ ಕರೆಯುತ್ತಿದ್ದಾರೆ. ಏಕೆಂದರೆ ತಮ್ಮ ಕೆಲಸ ಕಾರ್ಯದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಮಕ್ಕಳು ಒಟ್ಟಿಗೆ ಕಳೆಯುವಂತಹ ಸಮಯದಲ್ಲಿ ಮಾತ್ರ ಇವರು ರಾಜೀ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಯಶ್ ಅವರಿಗೆ ಇದೀಗ ಹೊಸದೊಂದು ಹೆಸರನ್ನು ನಾಮಕರಣ ಮಾಡಿದ್ದಾರೆ ಹೌದು ಅದೇ “ದಿ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್” ಅಂತ.
ಯಶ್ ಮಾತ್ರವಲ್ಲದೆ ರಾಧಿಕಾ ಪಂಡಿತ್ ಅವರು ಕೂಡ ತಮ್ಮ instagram ಖಾತೆಯಲ್ಲಿ ತಮ್ಮ ಮುದ್ದು ಮಕ್ಕಳು ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿರುವ ಫೋಟೋ ಹಾಕಿಕೊಂಡಿದ್ದಾರೆ. ಈ ಫೋಟೋಸ್ ಸ್ಯಾಂಡಲ್ ವುಡ್ ನಾ ಸಾಕಷ್ಟು ಸೆಲೆಬ್ರೆಟಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕತ್ತಲನ್ನು ಕಳೆದು ಬೆಳಕಿನತ್ತ ಮುನ್ನಡೆದುಕೊಂಡು ಹೋಗುವ ಹಬ್ಬವೇ ದೀಪಾವಳಿ ಈ ದೀಪಾವಳಿ ಎಲ್ಲರಿಗೂ ಹರುಷ ತರಲಿ ಎಲ್ಲರ ಬಾಳಲ್ಲೂ ಬೆಳಕನ್ನು ನೀಡಲಿ ಎಂದು ರಾಧಿಕಾ ಪಂಡಿತ್ ಅವರು ಫೋಟೋದ ಅಡಿಬರಹದಲ್ಲಿ ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಮತ್ತು ಯಶ್ ಅವರು ತಮ್ಮ ಮನೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿರುವ ಫೋಟೋಸ್ ಮತ್ತು ವೀಡಿಯೋಸ್ ಅನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.