Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್, ಕಂಟ್ರೋಲ್‌ ತಪ್ಪಿ ರೂಪೇಶ್ ರಾಜಣ್ಣ & ಆರ್ಯ ವರ್ಧನ್ ಗುರೂಜಿ ಮಾಡುತ್ತಿರುವ ಕುಸ್ತಿ ನೋಡಿ ಎಲ್ಲರೂ ಶಾ-ಕ್

Posted on December 7, 2022 By Kannada Trend News No Comments on ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್, ಕಂಟ್ರೋಲ್‌ ತಪ್ಪಿ ರೂಪೇಶ್ ರಾಜಣ್ಣ & ಆರ್ಯ ವರ್ಧನ್ ಗುರೂಜಿ ಮಾಡುತ್ತಿರುವ ಕುಸ್ತಿ ನೋಡಿ ಎಲ್ಲರೂ ಶಾ-ಕ್

ಗೊಂದಲದ ಗೂಡದ ಬಿಗ್ ಬಾಸ್ ಮನೆ, ರೂಪೇಶ್ ರಾಜಣ್ಣ ಹಾಗೂ ಆರ್ಯವರ್ಧನ್ ನಡುವೆ ನಡೆದ ಬಿಗ್ ಫೈಟ್.

ಬಿಗ್ ಬಾಸ್ ಸೀಸನ್ ೯ ರ ಕಾರ್ಯಕ್ರದ ಕಾಂಪಿಟೇಶನ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಅರ್ಧ ಜರ್ನಿ ಮುಗಿಸಿರುವ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಹಾಗೂ ಅದೇ ರೀತಿ ಕೋಲ್ಡ್ ವಾರ್ ಕೂಡ ನಡೆಯುತ್ತಿದೆ. ಗೆಲುವಿನ ಗದ್ದಿಗೆ ಏರಲು ಎಲ್ಲರೂ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈಗಿರುವ ಕಂಟೆಸ್ಟೆಂಟ್ಗಳಲ್ಲಿ ಕೆಲವರು ವಯಸ್ಸಿಗೆ ಮೀರಿದ ಪ್ರಬುದ್ಧತೆ ತೋರಿ ತಮ್ಮ ದೃಢ ನಿರ್ಧಾರಗಳು ಹಾಗೂ ಬುದ್ಧಿವಂತಿಕೆಯಿಂದ ಹೆಸರು ಮಾಡುತ್ತಿದ್ದರೆ ಕೆಲ ಕಂಟೆಸ್ಟೆಂಟ್ ಗಳು ವಯಸ್ಸಿನಲ್ಲಿ ಇತರರಿಗಿಂತ ಹಿರಿಯರಾಗಿದ್ದರು, ಚಿಕ್ಕ ಮಕ್ಕಳ ರೀತಿ ನಡೆದುಕೊಳ್ಳುತ್ತಾ ಪ್ರೇಕ್ಷಕರ ಮನ ಗೆಲುತ್ತಿದ್ದಾರೆ.

ಈ ಸಾಲಿನಲ್ಲಿ ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ ಅವರನ್ನು ಮಗುವಿನಂತಹ ಮನಸ್ಸಿನವರು ಎಂದು ಹೇಳಬಹುದು. ರಾಜಣ್ಣ ಹಾಗೂ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಯಲ್ಲಿ ಎಂಟರ್ಟೈನ್ಮೆಂಟ್ ಮಾಡುವುದರಲ್ಲಿ ಪ್ರಬಲ ಸ್ಪರ್ಧಿಗಳು ಎಂದರೆ ತಪ್ಪಾಗುವುದಿಲ್ಲ.

ಮನರಂಜನೆ ವಿಷಯ ಬಂದಾಗ ಮನೆಯಲ್ಲಿ ಇರೋರನ್ನೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗಿಸುವ ವಿಚಿತ್ರ ಸ್ವಭಾವ ಹಾಗೂ ಶುದ್ಧ ಮನಸ್ಸು ಇಬ್ಬರಿಗೂ ಇದೆ. ಇಬ್ಬರು ನೋಡಲು ಒರಟರಂತೆ ಕಂಡರೂ ಕೋಪ ಬಂದಾಗ ಕಂಟ್ರೋಲ್ ಗೆ ಸಿಗದಷ್ಟು ಘರ್ಜಿಸಿದರು ಸಾಮಾನ್ಯವಾಗಿ ಮನೆ ಮಂದಿ ಜೊತೆ ಇದ್ದಾಗ ಮಕ್ಕಳಂತೆ ಮುಳುಗಿ ಹೋಗುತ್ತಾರೆ.

ಮಗುವಿನಂತಹ ಮುಗ್ಧತೆ ಇದ್ದು ಅದನ್ನೇ ಇತರ ಸ್ಪರ್ಧಿಗಳು ಇವರುಗಳ ಕಾಲೆಳೆಯಲು ಅಸ್ತ್ರ ಮಾಡಿಕೊಂಡಿದ್ದಾರೆ. ಅವರುಗಳ ಮುಗ್ಧತೆ ಕಾರಣ ಸಾಕಷ್ಟು ಬಾರಿ ಮನೆಯಲ್ಲಿ ಅವರನ್ನು ಪ್ರಾಂಕ್ ಕೂಡ ಮಾಡಲಾಗಿದ್ದು ಮನೆಯಲ್ಲಿದ್ದ ಇತರ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ಆ ಎಪಿಸೋಡ್ಗಳು ಬರಪೂರ ಮನೋರಂಜನೆಯನ್ನು ನೀಡಿದೆ.

ನೋಡಿದವರಲ್ಲ ಮನಪೂರ್ತಿ ನಕ್ಕಿದ್ದರು. ಆದರೆ ನೆನ್ನೆ ಎಪಿಸೋಡಲ್ಲಿ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ, ತಮಾಷೆಗೆ ಶುರುವಾದ ಈ ಜಗಳ ತಾರಕಕ್ಕೇರಿ ಮನೆ ಮಂದಿ ಜೊತೆ ಪ್ರೇಕ್ಷಕರು ಕೂಡ ಶಾಕ್ ಆಗಿ ಹೋಗಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಆರ್ಯವರ್ಧನ್ ಹಾಗೂ ರೂಪೇಶ್ ರಾಜಣ್ಣ ಅವರ ನಡುವೆ ತಮಾಷೆ ಶುರುವಾಗುತ್ತದೆ ಹೊಡೆಯುವ ಆಟ ಶುರುಮಾಡುತ್ತಾರೆ. ಪದೇ ಪದೇ ಹೊಡೆಯುತ್ತಿದ್ದನ್ನು ನೋಡಿ ರೂಪೇಶ್ ರಾಜಣ್ಣ ಕಿರಿಕಿರಿ ಆಗಿ ಏನು ಮಾಡ್ತಾ ಇದ್ದೀರಾ? ಕಪಿ ರೀತಿ ಆಟ ಆಡ್ತಾ ಇದ್ದೀರಲ್ಲ ಎಂದಿದ್ದಾರೆ ಇದಕ್ಕೆ ಆರ್ಯವರ್ಧನ್ ಅವರು ನೀವು ಕಪಿ ರಾಜಣ್ಣ ಅಂದಿದ್ದಾರೆ.

ಇದರಿಂದ ತಕ್ಷಣ ಸಿಟ್ಟಿಗೆದ್ದ ರೂಪೇಶ್ ರಾಜಣ್ಣ ಅವರು ಯಾಕೆ ಹೀಗೆ ಹೊಡೆಯುತ್ತಿದ್ದಾರ ಎಂದು ಪ್ರಶ್ನಿಸಿದ್ದಾರೆ ಅದಕ್ಕೆ ತಮಾಷೆಗೆ ರಿ ಎಂದ ಅವರ ಉತ್ತರ ರೂಪೇಶ್ ರಾಜಣ್ಣ ಅವರ ಕೋಪವನ್ನು ಇನ್ನಷ್ಟು ಕೆರಳಿಸಿದೆ. ಯಾವುದು ತಮಾಷೆ ಸ್ವಲ್ಪ ಸಲಿಗೆ ಕೊಟ್ರೆ ಇಷ್ಟೊಂದು ಆಡ್ತಾ ಇದ್ದೀರಲ್ಲ ಇಂದು ರೂಪೇಶ್ ರಾಜಣ್ಣ ಗದರಿದ್ದಾರೆ.

ಅದಕ್ಕೆ ನಾವು ತಮಾಷೆಗಾಗಿ ಮಾಡಿದ್ದನ್ನು ನೀವು ಸೀರಿಯಸ್ ಆಗಿ ತೆಗೆದುಕೊಂಡರೆ ಅದು ನಮ್ಮ ತಪ್ಪ ಎಂದು ಆರ್ಯವರ್ಧನ್ ಕೇಳಿದ್ದಾರೆ. ನೀವು ಲಾರ್ಡ್ ಗವರ್ನರ್ ತರ ಆಡಬೇಡಿ ಎಂದು ರೂಪೇಶ್ ರಾಜಣ್ಣ ಬೈದಿದ್ದಕ್ಕೆ ನೀವು ಲಾಡ್ಜ್ ಗವರ್ನರ್ ಅವರ ಅಪ್ಪನ್ ತರ ಆಡುತ್ತಿದ್ದೀರಾ ಎಂದು ತಿರುಗಿಸಿ ಟಾಂಗ್ ನೀಡಿದ್ದಾರೆ ಆರ್ಯವರ್ಧನ್.

View this post on Instagram

A post shared by Colors Kannada Official (@colorskannadaofficial)

ಮತ್ತೆ ಕೈ ತೋರಿಸಿ ಅದಕ್ಕೇನು ಈಗ ಹೊಡಿತೀರಾ ಹೊಡಿರಿ ನೋಡೋಣ ಎಂದು ಕೂಡ ಜೋರಾಗಿ ಮಾತನಾಡಿದ್ದಾರೆ. ಮತ್ತೊಮ್ಮೆ ಹೊಡೆದರೆ ಸರಿ ಇರಲ್ಲ ಎಂದು ರೂಪೇಶ್ ರಾಜಣ್ಣ ಜಗಳ ಮಾಡಿದ್ದಾರೆ. ಇಬ್ಬರ ನಡುವೆ ತಮಾಷೆಯಾಗಿ ಶುರುವಾಗಿ ದೊಡ್ಡ ಹಂಗಾಮವೇ ಆಗಿ ಹೋಗಿದೆ. ಮಧ್ಯದಲ್ಲಿ ರೂಪೇಶ್ ಶೆಟ್ಟಿ ಮತ್ತು ಅರುಣ್ ಸಾಗರ್ ಇದನ್ನು ಬಿಡಿಸುವ ಪ್ರಯತ್ನ ಕೂಡ ಮಾಡಿದ್ದಾರೆ.

Entertainment Tags:Arya Vardhan Guruji, Big boss, Bigboss season 9, Roopesh Rajanna
WhatsApp Group Join Now
Telegram Group Join Now

Post navigation

Previous Post: KGF ಸಿನಿಮಾ ಖ್ಯಾತಿಯ ಹಿರಿಯ ನಟ ಕೃಷ್ಣೋಜಿರಾವ್ ವಿ.ಧಿ.ವ.ಶ
Next Post: ಕಮಲಿ ಸೀರಿಯಲ್ ಅನಿಕಾ ಜಗ್ಗೇಶ್ ಅವರ ಫೇಮಸ್ ಡೈಲಾಗ್ ಗೆ ಡ್ಯಾನ್ಸ್ ಮಾಡಿದ ಈ ವಿಡಿಯೋ ನೋಡಿ, ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore