Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಬಿಗ್ ಬಾಸ್ ಮನೆಯಿಂದ ಹೊರ ಬಂದ ರೂಪೇಶ್ ರಾಜಣ್ಣ, ವಿನ್ ಆಗಬೇಕಿದ್ದ ಸ್ಪರ್ಧಿ ಎಲಿಮಿನೇಟ್ ಬೇಸರ...

ಬಿಗ್ ಬಾಸ್ ಮನೆಯಿಂದ ಹೊರ ಬಂದ ರೂಪೇಶ್ ರಾಜಣ್ಣ, ವಿನ್ ಆಗಬೇಕಿದ್ದ ಸ್ಪರ್ಧಿ ಎಲಿಮಿನೇಟ್ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.

ನವೀನರ ಪೈಕಿ ಆಯ್ಕೆ ಆಗಿದ್ದ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಿಂದ ಹೊರಗೆ

ಬಿಗ್ ಬಾಸ್ ಗ್ರಾಂಡ್ ಫಿನಾಲೆ ನೆನ್ನೆ ಮತ್ತು ಇವತ್ತು ನಡೆಯುತ್ತಿದೆ ಫಿನಾಲೆ ಹಂತಕ್ಕೆ 5 ಜನ ಸ್ಪರ್ಧಿಗಳು ಆಯ್ಕೆಯಾಗಿದ್ದರು ಮಿನಿ ಬಿಗ್ ಬಾಸ್ ಕಾರ್ಯಕ್ರಮದಿಂದ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಅವರು ಆಯ್ಕೆಯಾದರು. ಪ್ರವೀಣರು ಕಡೆಯಿಂದ ದೀಪಿಕಾ ದಾಸ್ ಹಾಗೂ ದಿವ್ಯ ಉರುಡುಗ ಅವರು ಆಯ್ಕೆಯಾಗಿದ್ದರು ಇನ್ನು ಬಿಗ್ ಬಾಸ್ ಸೀಸನ್ 9ಕ್ಕೆ ಬಂದಂತಹ ನವೀನರ ಪೈಕಿ ರೂಪೇಶ್ ರಾಜಣ್ಣ ಅವರು ಆಯ್ಕೆಯಾಗಿದ್ದರು ಅಲ್ಲಿಗೆ ಒಟ್ಟಾರೆಯಾಗಿ 5 ಜನ ಕಂಟೆಸ್ಟೆಂಟ್ಗಳು ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪಿದ್ದರು.

ನೆನ್ನೆಯ ಎಪಿಸೋಡ್ ನಲ್ಲಿ ದಿವ್ಯ ಅವರು ಎಲಿಮಿನೇಷನ್ ಆಗಿದರು. ಐದು ಜನ ಸ್ಪರ್ಧಿಗಳಲ್ಲಿ ನಾಲ್ಕು ಜನ ಉಳಿದುಕೊಂಡರು ಅವರಲ್ಲಿ ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ಮತ್ತು ರೂಪೇಶ್ ಶೆಟ್ಟಿ ಮತ್ತು ದೀಪಿಕಾ ದಾಸ್ ಇದೀಗ ಈ ನಾಲ್ವರಲ್ಲೂ ಕೂಡ ಬಾರಿ ಪೈಪೋಟಿ ಏರ್ಪಟ್ಟಿತ್ತು. ಆದರೆ ಇಂದಿನ ಕಾರ್ಯಕ್ರಮದಲ್ಲಿ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಹೌದು ಫಿನಾಲೆ ಅಂತಕ್ಕೆ ಬಂದಿದ್ದಂತಹ ವ್ಯಕ್ತಿಗಳಲ್ಲಿ ರೂಪೇಶ್ ರಾಜಣ್ಣ ಅವರು ಟಾಪ್ ಫೋರ್ ಲಿಸ್ಟ್ ಗೆ ಸೇರ್ಪಡೆಯಾಗಿದ್ದು ಇದೀಗ ಮನೆಯಿಂದ ಹೊರ ಬಂದಿದ್ದಾರೆ.

ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಂತಹ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಬಾರಿಯ ನವೀನರು ಸ್ಪರ್ಧಿಗಳಲ್ಲಿ ರೂಪೇಶ್ ರಾಜಣ್ಣ ಅವರು ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಆಗಿದ್ದರು ಅಷ್ಟೇ ಅಲ್ಲದೆ ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ಸೆಲೆಬ್ರಿಟಿ ಅಲ್ಲದೆ ಇದ್ದರೂ ಕೂಡ ರೂಪೇಶ್ ರಾಜಣ್ಣ ಅವರು ಇಷ್ಟು ದಿನಗಳ ಕಾಲ ತಮ್ಮದೇ ಆದಂತಹ ಟ್ಯಾಲೆಂಟ್ ಅನ್ನು ಬಳಸಿಕೊಂಡು ಅಲ್ಲಿ ಇರುವಂತಹ ಜನರಿಗೆ ಎಂಟರ್ಟೈನ್ಮೆಂಟ್ ಕೊಡುತ್ತಾ ಎಲ್ಲಾ ಟಾಸ್ಕ್ ಗಳಲ್ಲಿಯೂ ಕೂಡ ಉತ್ತಮವಾಗಿ ಸ್ಪರ್ಧೆ ನೀಡಿದರು.

ಈ ಕಾರಣಕ್ಕಾಗಿ ಸಾಕಷ್ಟು ಅಭಿಮಾನಿಗಳು ರೂಪೇಶ್ ರಾಜಣ್ಣ ಅವರು ಈ ಬಾರಿಯ ಬಿಗ್ ಬಾಸ್ ಅನ್ನು ಗೆಲ್ಲಬೇಕು ಎಂದು ಆಸೆ ಇಟ್ಟುಕೊಂಡಿದ್ದರು ಆದರೆ ಇದೀಗ ಅವರೆಲ್ಲರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಕನ್ನಡಪರ ಹೋರಾಟಗಾರರ ಗುಂಪಿನ ಮುಖ್ಯಸ್ಥರಾದಂತಹ ರೂಪೇಶ್ ರಾಜಣ್ಣ ಅವರು ಇಲ್ಲಿಯವರೆಗೂ ಕೂಡ ನಾಡು, ನುಡಿ, ಜಲ ಹಾಗೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಅಭಿಮಾನವನ್ನು ಮೈಗೂಡಿಸಿಕೊಂಡಿರುವಂತಹ ಇವರು ಪ್ರತಿ ಬಾರಿಯೂ ಕೂಡ ಕನ್ನಡದ ಬಗ್ಗೆ ಮಾತನಾಡುತ್ತಾರೆ.

ಇವರ ಕನ್ನಡ ಅಭಿಮಾನವನ್ನು ನೋಡಿದಂತಹ ಅದೆಷ್ಟೋ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ವಿನ್ನರ್ ರೂಪೇಶ್ ರಾಜಣ್ಣ ಅವರಾಗಬೇಕು ಅಂತ ಅಂದುಕೊಂಡಿದ್ದರು. ಆದರೆ ರೂಪೇಶ್ ರಾಜಣ್ಣ ಅವರ ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ ಹೌದು ಬಿಗ್ ಬಾಸ್ ನಾ ನಾಲ್ಕನೇ ರನ್ನರ್ ಅಪ್ ಆಗಿ ರಾಜಣ್ಣ ಅವರು ಹೊರ ಬಿದ್ದಿದ್ದಾರೆ. ಇದೀಗ ಟಾಪ್ ತ್ರೀ ಲಿಸ್ಟ್ ನಲ್ಲಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ದೀಪಿಕಾ ದಾಸ್ ಅವರಿದ್ದಾರೆ ಇನ್ನು ಕೆಲವು ಮಾಹಿತಿಗಳ ಪ್ರಕಾರ ಈ ಬಾರಿಯ ವಿನ್ನರ್ ರೂಪೇಶ್ ಶೆಟ್ಟಿ ಆಗುತ್ತಾರೆ ರನ್ನರ್ ಅಪ್ ದೀಪಿಕಾ ದಾಸ್ ಆಗುತ್ತಾರೆ ಅಂತ ಹೇಳುತ್ತಿದ್ದಾರೆ ಆದರೆ ಅಂತಿಮ ನಿರ್ಧಾರ ಯಾವುದು ಎಂಬುದು ಖಚಿತವಾಗಿ ಹೇಳಲಾಗುತ್ತಿಲ್ಲ. ಆದರೂ ಕೂಡ ರೂಪೇಶ್ ರಾಜಣ್ಣ ಅವರು ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ಎಲ್ಲರನ್ನೂ ಮನರಂಜಿಸಿದ್ದರೂ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕು ತಪ್ಪದೇ ಕಮೆಂಟ್ ಮಾಡಿ.