Friday, June 9, 2023
HomeEntertainmentದಿವ್ಯ ಉರುಡುಗ & ಅರವಿಂದ್ ಮದುವೆಯಾದ್ರೆ ಡಿ-ವೋ-ರ್ಸ್ ಆಗೋದು ಗ್ಯಾರಂಟಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್...

ದಿವ್ಯ ಉರುಡುಗ & ಅರವಿಂದ್ ಮದುವೆಯಾದ್ರೆ ಡಿ-ವೋ-ರ್ಸ್ ಆಗೋದು ಗ್ಯಾರಂಟಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮತ್ತೊಂದು ಹೇಳಿಕೆ ನೀಡಿ ಟ್ರೋಲ್ ಆದ ಗುರೂಜಿ

ನಾನು ಅಂದ್ರೆ ನಂಬರ್ ನಂಬರ್ ಅಂದ್ರೆ ನಾನು ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತಿರುವ ಆರ್ಯವರ್ಧನ್ ಗುರೂಜಿ ಈ ವಾರ ಮಿಡ್ ನೈಟ್ ಎಲಿಮಿನೇಷನ್ ಆಗಿರುವ ವಿಚಾರ ನಿಮಗೆ ತಿಳಿದೇ ಇದೆ. ಮಿನಿ ಬಿಗ್ ಬಾಸ್ ಓ ಟಿ ಟಿ ಯಲ್ಲಿ ಸುಮಾರು 45 ದಿನಗಳ ಕಾಲ ಪೂರೈಸಿ ಬಿಗ್ ಬಾಸ್ ಸೀಸನ್ ೯ ರಲ್ಲಿಯೂ ಕೂಡ ಸುಮಾರು 95 ದಿನಗಳ ಕಾಲ ವಾಸ ಮಾಡಿದಂತಹ ಗುರೂಜಿ ಅಚಾನಕ್ಕಾಗಿ ಮಿಡ್ ನೈಟ್ ಎಲಿಮಿನೇಷನ್ ಆಗಿದ್ದಾರೆ. ಇನ್ನು ನಂಬರ್ ಗಳ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ಬಹಳಷ್ಟು ತಿಳಿದುಕೊಂಡಿರುವ ಆರ್ಯವರ್ಧನ್ ಗುರೂಜಿ ನಂಬರ್ ಗಳ ಮೇಲೆ ಬಹಳಷ್ಟು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ನಮ್ಮ ಜೀವನದಲ್ಲಿ ಏನೇ ನಡೆದರೂ ಕೂಡ ಅವೆಲ್ಲದಕ್ಕೂ ನಂಬರ್ ಮುಖ್ಯ ಎಂದು ಹೇಳಿಕೊಂಡು ಬಂದಿದ್ದಾರೆ ಹೀಗಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮತ್ತೊಂದು ರೋಚಕ ಮಾಹಿತಿ ಒಂದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಅದು ಅರವಿಂದ್ ಹಾಗೂ ದಿವ್ಯ ಉರುಡುಗ ಅವರ ಮದುವೆಯ ಬಗ್ಗೆ. ಬಿಗ್ ಬಾಸ್ ನಿಂದ ಎಲಿಮಿನೇಷನ್ ಆದ ನಂತರ ಹಲವಾರು ಖಾಸಗಿ ಚಾನೆಲ್ ಗಳಿಗೆ ಆರ್ಯವರ್ಧನ್ ಗುರೂಜಿ ಇಂಟರ್ವ್ಯೂ ಕೊಟ್ಟಿದ್ದಾರೆ ಈ ಇಂಟರ್ವ್ಯೂ ಒಂದರಲ್ಲಿ ಅರವಿಂದ್ ಹಾಗೂ ದಿವ್ಯ ಅವರ ಬಗ್ಗೆ ಪ್ರಶ್ನೆಯನ್ನು ಕೇಳಲಾಗುತ್ತದೆ.

ಆ ಸಮಯದಲ್ಲಿ ಇವರಿಬ್ಬರು ಮದುವೆಯಾದರೆ ಖಂಡಿತವಾಗಿಯೂ ಕೂಡ ಡಿ.ವ.ರ್ಸ್ ಆಗುತ್ತದೆ ಏಕೆಂದರೆ ರಾಂಗ್ ನಂಬರ್ ಬೆಸ್ಟ್ ಫ್ರೆಂಡ್ ಆಗಿರುವುದಕ್ಕೆ ಸಾಧ್ಯ ಬೆಸ್ಟ್ ಪಾರ್ಟ್ನರ್ ಆಗುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಏಕೆಂದರೆ ಅರವಿಂದ್ ಅವರ ಹುಟ್ಟಿದ ದಿನಾಂಕ ಹಾಗೂ ದಿವ್ಯ ಅವರ ಹುಟ್ಟಿದ ದಿನಾಂಕ ಇವೆರಡನ್ನು ಹೋಲಿಕೆ ಮಾಡಿ ನೋಡಿದಾಗ ಇವರಿಬ್ಬರು ಬೆಸ್ಟ್ ಫ್ರೆಂಡ್ ಆಗಿ ಇರುವುದಕ್ಕೆ ಮಾತ್ರ ಸಾಧ್ಯ ದಂಪತಿಗಳಾಗುವುದಕ್ಕೆ ಸಾಧ್ಯವಿಲ್ಲ. ಹಾಗೂ ಒಂದು ವೇಳೆ ಇವರಿಬ್ಬರು ಮದುವೆಯಾದರೆ ಮದುವೆಯಾದ ಒಂದೇ ವರ್ಷಕ್ಕೆ ಖಂಡಿತವಾಗಿಯೂ ಕೂಡ ಬೇರೆ ಆಗುತ್ತಾರೆ ಎಂದು ಹೇಳಿದ್ದಾರೆ.

ಈ ವಿಚಾರವನ್ನು ಆರ್ಯವರ್ಧನ್ ಇದೇ ಮೊದಲೆನಲ್ಲ ಹೇಳಿರುವುದು ಇದಕ್ಕಿಂತ ಮುಂಚೆ ಬಿಗ್ ಬಾಸ್ ಮನೆಯಲ್ಲಿ ದಿವ್ಯ ಅವರ ಎದುರುಗಡೆಯೇ ಹೇಳಿದ್ದರು. ಆ ಸಮಯದಲ್ಲಿ ಕೋಪಗೊಂಡಂತಹ ದಿವ್ಯ ಅಲ್ಲಿಂದ ಎದ್ದು ಹೊರಟು ಹೋಗಿದ್ದರು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬೆಸ್ಟ್ ಕಫಲ್ ಅಂತ ಅನಿಸಿಕೊಂಡಿದ್ದಂತಹ ದಿವ್ಯ ಹಾಗೂ ಅರವಿಂದ್ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲು ಈ ವಿಚಾರವನ್ನು ವ್ಯಕ್ತಪಡಿಸಿದ್ದಾರೆ ಮುಂದಿನ ದಿನದಲ್ಲಿ ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವಂತಹ ಈ ಜೋಡಿ ಇನ್ನೇನು ಮದುವೆಯಾಗಬೇಕಿದೆ ಅಷ್ಟರ ಒಳಗೆ ಇದೀಗ ಆರ್ಯವರ್ಧನ್ ಹೇಳಿದಂತಹ ಮಾತನ್ನು ಕೇಳಿ ದಿವ್ಯ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅತ್ತಕಡೆ ಅರವಿಂದ್ ಅವರು ಕೂಡ ಬಹಳಷ್ಟು ನೊಂದುಕೊಂಡಿದ್ದಾರೆ.

ಮದುವೆ ಆಗುವುದಕ್ಕಿಂತ ಮುಂಚೆ ಇಂತಹ ಅಪಶಕುನ ಆಡಿರುವ ಆರ್ಯವರ್ಧನ್ ಗುರೂಜಿಯ ಮಾತು ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಬಹುತೇಕ ನೆಗೆಟಿವ್ ಕಾಮೆಂಟ್ಸ್ ಗಳು ಬರುತ್ತಿದೆ. ಇನ್ನು ಕೆಲವು ಜನ ಆರ್ಯವರ್ಧನ್ ಹೇಳಿರುವಂತಹ ಈ ಜ್ಯೋತಿಷ್ಯವನ್ನು ಯಾರು ನಂಬಬೇಡಿ ಈತ ಬುರುಡೆ ಬಿಡುತ್ತಿದ್ದಾನೆ ಎಂದು ಹೇಳುತ್ತಿದ್ದಾನೆ. ಎರಡು ಮನಸ್ಸುಗಳು ಸೇರಿದರೆ ಸಾಕು ನಂಬರ್ ಮದುವೆಯನ್ನು ನಿರ್ಧಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ ಆದರೆ ಆರ್ಯವರ್ಧನ್ ಮಾತ್ರ ತಾವು ಹೇಳಿದಂತಹ ಹೇಳಿಕೆಗೆ ಬದ್ಧವಾಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ.