ರೂಪೇಶ್ ರಾಜಣ್ಣ ಅವರು ಕನ್ನಡಪರ ಹೋರಾಟಗಾರನಾಗಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಕೋಟದಿಂದ ಅವರನ್ನು ಬಿಗ್ ಬಾಸ್ ಮನೆಗೆ ಆರಿಸಲಾಗಿತ್ತು. ನೂತನವಾಗಿದ್ದ ಈ ಬಾರಿಯ ಬಿಗ್ ಬಾಸ್ ಅಲ್ಲಿ ನವೀನರಾಗಿ ಅವರು ಮನೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ಅಂತಿಮ ವಾರದವರೆಗೂ ಕೂಡ ಇದ್ದು ಟಾಪ್ ಫೈವ್ ಅಲ್ಲಿ ಒಬ್ಬ ಸ್ಪರ್ಧಿಯಾಗಿ ಒಂದು ರೀತಿಯಲ್ಲಿ ಅವರು ವಿನ್ನರ್ ಆಗಿದ್ದಾರೆ.
ಈಗ ಬಿಗ್ ಬಾಸ್ ಮನೆ ಆಟಕ್ಕೆ ತೆರೆ ಬಿದ್ದಿದ್ದು ರೂಪೇಶ್ ಶೆಟ್ಟಿ ಅವರು ವಿನ್ನರ್, ರಾಕೇಶ್ ಅಡಿಗ ಅವರು ರನ್ನರಪ್ಪಾಗಿ ಘೋಷಣೆ ಆಗಿಯಾಗಿದೆ. ಈಗ ಮನೆಯಿಂದ ಹೊರಬಂದ ಮೇಲೆ ಎಲ್ಲಾ ಸ್ಪರ್ಧಿಗಳು ಕೂಡ ಇಂಟರ್ವ್ಯೂ ಕೊಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಇದೇ ರೀತಿ ಸುದ್ದಿ ಮಾಧ್ಯಮ ಒಂದರಲ್ಲಿ ರೂಪೇಶ್ ರಾಜಣ್ಣ ಅವರು ಮಾತನಾಡಿ ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳ ಡ್ರೆಸ್ಸಿಂಗ್ ಬಗ್ಗೆ ನೇರವಾಗಿ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ಬಾರಿಯೂ ಕೂಡ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸರಿಸಮಾನ ಸಂಖ್ಯೆಯಲ್ಲಿ ಇರುತ್ತಾರೆ. ಅದರಲ್ಲಿ ಹೆಚ್ಚಾಗಿ ಧಾರವಾಹಿ ನಟಿಯರು ಮತ್ತು ಸಿನಿಮಾ ನಾಯಕಿಯರು ಇರುತ್ತಾರೆ. ಈ ರೀತಿ ಬಿಗ್ ವೇದಿಕೆಯಲ್ಲಿ ಕಾಣಿಸಿಕೊಳ್ಳುವಾಗ ಅವರು ಸ್ವಲ್ಪ ಬೋಲ್ಡ್ ಆಗಿ ಬಟ್ಟೆಗಳನ್ನು ಧರಿಸುವುದು ಸಹಜ. ಅದರಲ್ಲಿ ಈ ಬಾರಿ ಅಂತೂ ಅಮೂಲ್ಯ ಗೌಡ, ಸಾನಿಯಾ ಅವರು ಸೇರಿದಂತೆ ಎಲ್ಲಾ ಹೆಣ್ಣು ಮಕ್ಕಳು ಸ್ವಲ್ಪ ಕಡಿಮೆ ತುಂಡು ಉಡುಗೆಯನ್ನು ಧರಿಸಿ ಓಡಾಡುತ್ತಿದ್ದರು.
ಎಲ್ಲಾ ಬಾರಿಯೂ ಕೂಡ ಪರೋಕ್ಷವಾಗಿ ಹೆಣ್ಣು ಮಕ್ಕಳಿಗೆ ಈ ವಿಷಯವಾಗಿ ಟಾಂಗ್ ಮಾಡಲಾಗಿದೆ. ಈಗ ಇದೇ ಪ್ರಶ್ನೆಯನ್ನು ರೂಪೇಶ್ ರಾಜಣ್ಣ ಅವರಿಗೆ ಸಂದರ್ಶನಕಾರರು ಕೇಳಿದ್ದಾರೆ. ನೀವು ಕನ್ನಡ ಪರ ಹೋರಾಟಗಾರರು ಹೋರಾಟ ಅಂದಮೇಲೆ ಎಲ್ಲ ವಿಷಯದ ಬಗ್ಗೆಯೂ ಕೂಡ ಬರುತ್ತದೆ. ಹೆಣ್ಣು ಮಕ್ಕಳು ಅಲ್ಲಿ ಧರಿಸುತ್ತಿದ್ದ ಬಟ್ಟೆ ಬಗ್ಗೆ ಹೊರಗಡೆ ತುಂಬಾ ಚರ್ಚೆಗಳಿವೆ ಅದರ ಬಗ್ಗೆ ಎಂದಾದರೂ ಮಾತನಾಡಿದ್ದೀರಾ ಎಂದು ಕೇಳಿದ್ದಾರೆ.
ಅದಕ್ಕೆ ರೂಪೇಶ್ ರಾಜಣ್ಣ ಅವರು ಈ ರೀತಿ ಉತ್ತರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಮ್ಮೆ ಪ್ರಶಾಂತ್ ಸಂಭರ್ಗಿ ಅವರಿಗೆ ಹೆಣ್ಣು ಮಕ್ಕಳ ಬಟ್ಟೆ ಧರಿಸುವ ಟಾಸ್ಕ್ ಬಂದಿತ್ತು, ಆ ಬಾರಿ ಅವರು ತುಂಬಾ ಕಡಿಮೆ ಬಟ್ಟೆ ಧರಿಸಿದ್ದರು. ಆಗ ನಾನು ಎಲ್ಲರಿಗೂ ತಲುಪುವಂತೆ ಪರೋಕ್ಷವಾಗಿ ಹೇಳಿ ಪ್ರಶಾಂತ್ ಸಂಭರ್ಗಿ ಗೆ ಅವರಿಗೆ ಮಾತ್ರ ನೀವು ಫುಲ್ ಕವರ್ ಆಗುವಂತೆ ಬಟ್ಟೆ ಹಾಕಬೇಕು ಎಂದು ನೇರವಾಗಿ ಹೇಳಿದ್ದೆ.
ಅದನ್ನು ಅರ್ಥ ಮಾಡಿಕೊಂಡವರಿಗೆ ಅರ್ಥ ಆಗಿರುತ್ತದೆ ಆದರೆ ಅದನ್ನು ಮೀರಿ ಇದೆಲ್ಲ ನಮ್ಮ ಹಕ್ಕು ಎನ್ನುವ ಮಾತುಗಳು ಕೂಡ ಆ ಕಡೆಯಿಂದ ಬರುತ್ತವೆ. ಅದಕ್ಕೆ ಅಷ್ಟೇನು ನಾನು ಆ ಬಗ್ಗೆ ಧ್ವನಿ ಎತ್ತಲು ಹೋಗಲಿಲ್ಲ. ಯಾಕೆಂದರೆ ಎಲ್ಲರಿಗೂ ಕೂಡ ಅವರವರ ಆಟ ಇದ್ದೇ ಇರುತ್ತದೆ. ಹಾಗಾಗಿ ಅದನ್ನು ಹಾಗೆ ಬಿಡುತ್ತಿದ್ದೆ ಎಂದಿದ್ದಾರೆ.
ಇನ್ನು ಮುಂದುವರೆದು ಬಿಗ್ ಬಾಸ್ ಮನೆಯ ಹಲವು ಕ್ಷಣಗಳ ಬಗ್ಗೆ ಅವರು ಹಂಚಿಕೊಂಡಿದ್ದಾರೆ. ಜಗಳ, ಗಲಾಟೆ, ತಮಾಷೆ ಸ್ನೇಹ ಬಾಂಧವ್ಯ ಮತ್ತು ಅವರ ಅಭಿಪ್ರಾಯದಲ್ಲಿ ಯಾರು ವಿನ್ನರ್, ಯಾರು ಗೆಲ್ಲ ಬೇಕಾಗಿತ್ತು ಎಂಬಿತ್ಯಾದಿ ವಿಷಯಗಳನ್ನು ಕೂಡ ಹೇಳಿಕೊಂಡಿದ್ದಾರೆ. ರೂಪೇಶ್ ರಾಜಣ್ಣ ಅವರು ಏನೆಲ್ಲಾ ಮಾತನಾಡಿದ್ದಾರೆ ಎಂದು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.