Friday, June 9, 2023
HomeEntertainmentಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು...

ಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು ಹೇಳಿದ ಸಾಧುಕೋಕಿಲ. ಆ ವ್ಯಕ್ತಿ ಯಾರು ಗೊತ್ತ.?

ಸಾಧು ಕೋಕಿಲ ಅವರು ಹಲವು ದಶಕಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾಮಿಡಿ ಕಲಾವಿದನಾಗಿ ಸಂಗೀತ ನಿರ್ದೇಶಕನಾಗಿ ಪೋಷಕ ಪಾತ್ರಧಾರಿಯಾಗಿ ಗಾಯಕನಾಗಿ ಮತ್ತು ಸಿನಿಮಾ ನಿರ್ಮಾಪಕನಾಗಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಇಷ್ಟು ದಿನದ ಅವರ ಈ ಜರ್ನಿಯಲ್ಲಿ ಸಾಕಷ್ಟು ಕಲಾವಿದರುಗಳನ್ನು, ತಂತ್ರಜ್ಞರನ್ನು ಅವರು ಕಂಡಿದ್ದಾರೆ. ಜನವರಿ 26 ರಂದು ಬಿಡುಗಡೆ ಆಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಸಿನಿಮಾದಲ್ಲೂ ಕೂಡ ಸಾಧು ಕೋಕಿಲ ಅವರು ಕಾಮಿಡಿ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ.

ಎಲ್ಲಾ ಕಲಾವಿದರಂತೆ ಸಾಧು ಅವರು ಸಹ ಕ್ರಾಂತಿ ಸಿನಿಮಾದ ಪ್ರಚಾರದ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗೆ ಸಂದರ್ಶನ ಒಂದರಲ್ಲಿ ಸಾಧುಕೋಕಿಲ ಅವರನ್ನು ಕ್ರಾಂತಿ ಸಿನಿಮಾದ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ ಜೊತೆಗೆ ಸಿನಿಮಾದ ಇತರ ಕೆಲಸಗಳಾದ ನಿರ್ದೇಶನ ಸಂಗೀತ ಇನ್ನಿತರ ವಿಷಯಗಳ ಬಗ್ಗೆಯೂ ಕೂಡ ಪ್ರಶ್ನೆ ಕೇಳಲಾಗಿದೆ.

ಅದಕ್ಕೆಲ್ಲ ಸಾಧುಕೋಕಿಲ ಅವರು ಸಮಾಧಾನಕರವಾದ ಉತ್ತರವನ್ನು ಕೊಟ್ಟು ಇದುವರೆಗೆ ಇಂಡಸ್ಟ್ರಿ ಅವರ ಬಗ್ಗೆ ತಿಳಿಯದಿರುವ ವಿಷಯಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಕ್ರಾಂತಿ ಸಿನಿಮಾದ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ವಿ.ಹರಿಕೃಷ್ಣ ಅವರನ್ನು ಕುರಿತು ಪ್ರಶ್ನೆ ಕೇಳಲಾಗಿದೆ, ಅವರ ಬಗ್ಗೆಯೂ ಸಹ ಸಾಧು ಕೋಕಿಲ ಅವರು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ. ಸಾಧು ಕೋಕಿಲ ಅವರು ವಿ ಹರಿಕೃಷ್ಣ ಅವರ ಬಗ್ಗೆ ಹಾಗೂ ಅವರ ನಿರ್ದೇಶನದ ಬಗ್ಗೆ ಹೇಳಿದ ಮಾತುಗಳು ಈ ರೀತಿ ಇದ್ದವು.

ಸಂಗೀತ ನಿರ್ದೇಶಕನೊಬ್ಬನಿಗೆ ಸಿನಿಮಾ ನಿರ್ದೇಶನ ಮಾಡುವುದು ಬಹಳ ಸುಲಭ ಯಾಕೆಂದರೆ ಈಗಾಗಲೇ ನಾವು ಸಂಗೀತ ನಿರ್ದೇಶಕರಾಗಿ ಹಲವು ಸಿನಿಮಾಗಳನ್ನು ನೋಡಿರುತ್ತೇವೆ. ನಾವು ಸಂಗೀತ ನಿರ್ದೇಶನ ಮಾಡುವಾಗಲೇ ಸಿನಿಮಾದ ವಿಷಯಗಳನ್ನು ಗಮನಿಸಿರುವುದರಿಂದ ನಿರ್ದೇಶಕನೊಬ್ಬ ಕ್ಯಾಮರ ಎಲ್ಲಿ ಇಡುತ್ತಾನೆ ಯಾವ ಲೆನ್ಸ್ ಬಳಸಿದ್ದಾನೆ ಅವನ ತಲೆಯಲ್ಲಿ ಈ ದೃಶ್ಯ ತೆಗೆಯುವಾಗ ಏನು ಓಡುತ್ತಿರಬಹುದು ಈ ಸಿನಿಮಾ ಗೆಲ್ಲುತ್ತದಾ ಇಲ್ಲವಾ ಏನು ಬದಲಾಯಿಸಬಹುದು ಇತ್ಯಾದಿ ವಿಚಾರಗಳೆಲ್ಲ ನಮ್ಮಲ್ಲೂ ಓಡುತ್ತಿರುತ್ತವೆ.

ನಾವು ಪ್ರಾಕ್ಟಿಕಲ್ ಆಗಿ ಎಲ್ಲವನ್ನೂ ತಿಳಿದುಕೊಂಡಿರುತ್ತೇವೆ. ಸ್ವಲ್ಪ ಥಿಯಾರಿಟಿಕಲ್ ಆಗಿ ಕಲಿಯುವುದು ಬಾಕಿ ಇರುತ್ತದೆ ಅದನ್ನು ಸಹ ಆಸಕ್ತಿಯಿಂದ ಕಲಿತುಬಿಟ್ಟರೆ ಸಂಗೀತ ನಿರ್ದೇಶಕನಾಗುವವನು ಸಿನಿಮಾ ನಿರ್ದೇಶಕರು ಸಹ ಆಗಬಹುದು. ಇದೇ ದಾರಿಯಲ್ಲಿ ನಾನು ಕೂಡ ಬಂದಿದ್ದು. ವಿ ಹರಿಕೃಷ್ಣ ಈಗಾಗಲೇ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ, ಈಗಿನ ಜನರೇಶನಲ್ಲಿ ನಂಬರ್ ಒನ್ ಸಂಗೀತ ನಿರ್ದೇಶಕ ಯಾರು ಎಂದು ಕೇಳಿದರೆ ವಿ. ಹರಿಕೃಷ್ಣ ಎಂದು ಎಲ್ಲರೂ ಹೇಳುವುದು.

ನಾನು ಈ ವಿಷಯದಲ್ಲಿ ಸೀನಿಯರ್ ಇರಬಹುದು ಅವರು ಜೂನಿಯರ್ ಇರಬಹುದು ಅಷ್ಟೇ ಆದರೆ ನನಗೂ ಹೆಚ್ಚಿನ ಟ್ಯಾಲೆಂಟ್ ಅವರಿಗಿದೆ. ಹಾಗಾಗಿ ಕ್ರಾಂತಿಯಿಂದ ಹರಿಕೃಷ್ಣ ಯಶಸ್ವಿ ಸಿನಿಮಾ ನಿರ್ದೇಶನ ಆಗುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಈಗಾಗಲೇ ಯಜಮಾನ ಸಿನಿಮಾದಲ್ಲೂ ಸಹ ನೀವು ಅವರ ಕೆಲಸವನ್ನು ನೋಡಿದ್ದೀರಾ ಎಂದು ಉದಾಹರಣೆಯನ್ನು ಕೊಟ್ಟಿದ್ದಾರೆ.

ಹರಿಕೃಷ್ಣ ಅವರ ಬಗ್ಗೆ ಕಡಿಮೆ ಮಾತನಾಡುತ್ತಾರೆ ಎನ್ನುವ ಆರೋಪ ಎಲ್ಲೆಡೆ ಇದೆ ಇದರ ಬಗ್ಗೆ ಕೂಡ ಸಾಧುಕೋಕಿಲ ಅವರು ಮಾತನಾಡಿದ್ದು ಹರಿಕೃಷ್ಣ ಮೊದಲ ದಿನದಿಂದಲೂ ಹಾಗೆ ಅವರಿಗೆ ಗೊತ್ತಿರುವುದು ಎರಡೇ ಒಂದು ಕೆಲಸ ಮತ್ತೊಂದು ಊಟ. ಈ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೇ ಒಂದು ಕೆಟ್ಟ ಅಭ್ಯಾಸ ಇಲ್ಲದ ಒಬ್ಬನೇ ಒಬ್ಬ ವ್ಯಕ್ತಿ ಅಂದರೆ ಅದು ಹರಿಕೃಷ್ಣ ಮಾತ್ರ ಎಂದು ಹೇಳಿದ್ದಾರೆ.