ಶುಕ್ರ ನಿಮ್ಮ ತಿಂಗಳ ಮೊದಲ 11 ದಿನ ನಿಮ್ಮ ರಾಶಿಯಲ್ಲಿಯೇ ಇರುತ್ತಾನೆ. ನಿಮ್ಮ ರಾಶಿಯಲ್ಲಿ ಶುಕ್ರ ಇರುವುದರಿಂದ ನಿಮಗೆ ಆದಷ್ಟು ಶುಭಫಲಗಳನ್ನೇ ಕೊಡುತ್ತಾನೆ. ರಾಶಿಯಿಂದ ಹೋದರೂ ಬೇರೆ ಎಲ್ಲೂ ಹೋಗುವುದಿಲ್ಲ ದ್ವಿತೀಯ ಭಾಗಕ್ಕೆ ಶುಕ್ರ ಹೋಗುತ್ತಾನೆ. ಈ ದ್ವಿತೀಯ ಭಾಗದಲ್ಲಿ ಹಲವಾರು ಗ್ರಹಗಳು ಇರುತ್ತವೆ ಅಂದರೆ ಇದರಿಂದಾಗಿ ನೀವು ಈ ತಿಂಗಳು ಸ್ವಲ್ಪ ಹಣಕಾಸಿನ ಬಗ್ಗೆ ಕೆಲವೊಂದಷ್ಟು ಯೋಚನೆಗಳನ್ನು ಮಾಡುವ ಸಂದರ್ಭಗಳೂ ಕೂಡ ಬರಬಹುದು.
ಹಾಗೆಂದ ಮಾತ್ರಕ್ಕೆ ನಿಮಗೆ ಹಣಕಾಸಿನ ವಿಚಾರದಲ್ಲಿ ತೊಂದರೆ ಎಂದು ಹೇಳಲು ಸಾಧ್ಯವಿಲ್ಲ ಯಾವುದೇ ರೀತಿಯ ಸಂದರ್ಭ ಬಂದರು ಅದನ್ನು ನಿರ್ವಹಿಸಿಕೊಂಡು ಹೋಗುವಂತಹ ಶಕ್ತಿ ನಿಮ್ಮಲ್ಲಿ ಇರುತ್ತದೆ. ಅಂತಹ ಒಂದು ಚೈತನ್ಯವನ್ನು ನಿಮಗೆ ದೇವರು ತುಂಬುತ್ತಾನೆ.
ವಿಶೇಷವಾಗಿ ಬುಧ ಮತ್ತು ಶುಕ್ರ ಎರಡು ಗ್ರಹಗಳು ದ್ವಿತೀಯ ಭಾವದಲ್ಲಿ ಇರುತ್ತದೆ ಇವುಗಳು ನಿಮಗೆ ಸ್ವಲ್ಪ ಗೊಂದಲಗಳನ್ನು ಉಂಟು ಮಾಡಿ ದರು ಕೂಡ ಅಂತಿಮವಾಗಿ ನಿಮ್ಮನ್ನು ಒಂದು ಸರಿಯಾದ ಮಾರ್ಗದ ಲ್ಲಿಯೇ ಕರೆದುಕೊಂಡು ಹೋಗುತ್ತಾರೆ.
ಈ ಸುದ್ದಿ ನೋಡಿ:- ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಹಣ ಘೋಷಣೆ.!
ಅದರಲ್ಲೂ ವಿಶೇಷವಾಗಿ ಬ್ಯಾಂಕಿಂಗ್ ಕೆಲಸ ಆಗಿರಬಹುದು, ಸಾಫ್ಟ್ವೇರ್ ಇಂಜಿನಿಯರಿಂಗ್ ಇರಬಹುದು, ಯಾವುದೇ ರೀತಿಯಲ್ಲಿ ಕೆಲವೊಂದಷ್ಟು ಜನರಿಗೆ ವಿಷಯಗಳನ್ನು ಹೇಳಿಕೊಡುವಂತಹ ಬೋಧಕರಿರಬಹುದು, ವ್ಯಾಪಾರ ಸ್ಥರು ಮಾರ್ಕೆಟಿಂಗ್ ಎಕ್ಸಿಕ್ಯೂಟರ್ಸ್ ಇವರೆಲ್ಲರಿಗೂ ಕೂಡ ಬಹಳ ಚೆನ್ನಾಗಿ ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಯಶಸ್ಸು ಸಿಗುತ್ತದೆ.
ಬುಧ ಗ್ರಹ ದ್ವಿತೀಯದಲ್ಲಿ ಇರುತ್ತದೆ ಫೆಬ್ರವರಿ 19ನೇ ತಾರೀಖಿನವರೆಗೆ. ಅದೇ ರೀತಿ ಶುಕ್ರ ಗ್ರಹ ದ್ವಿತೀಯದಲ್ಲಿರುತ್ತದೆ ಫೆಬ್ರವರಿ 11 ನೇ ತಾರೀಖಿನಿಂದ ಪ್ರಾರಂಭವಾಗಿ ಆ ತಿಂಗಳ ಕೊನೆಯವರೆಗೂ ಕೂಡ ಇರುತ್ತದೆ. ಈ ಗ್ರಹಗಳ ಅನುಗ್ರಹದಿಂದ ನಿಮಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆಗಳು ಕೂಡ ಬರುವುದಿಲ್ಲ.
ಹಾಗೂ ನೀವು ಮಾತನಾಡುವಂತಹ ಚಾತುರ್ಯವನ್ನು ಹೊಂದಿರುತ್ತೀರಿ ಎಂತದ್ದೇ ಸಂದರ್ಭದಲ್ಲಿಯೂ ಕೂಡ ಅದನ್ನು ನಿಮ್ಮ ಮಾತಿನ ಮೂಲಕ ಸರಿಪಡಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತೀರಿ. ಒಟ್ಟಾರೆಯಾಗಿ ನೀವು ಯಾವುದೇ ವ್ಯಾಪಾರ ವ್ಯವಹಾರ ಮಾಡುವವರಾಗಿರಬಹುದು ಸಣ್ಣ ಪುಟ್ಟ ವ್ಯಾಪಾರ ಮಾಡುವವರಾಗಿರಬಹುದು ಮನೆಯಲ್ಲಿರುವ ಸದಸ್ಯರಾಗಿರಬಹುದು ಒಟ್ಟಾರೆಯಾಗಿ ನಿಮ್ಮ ಮಾತುಕತೆಯು ನಿಮಗೆ ಉತ್ತಮವಾದ ಮಾರ್ಗವನ್ನು ತೋರಿಸುತ್ತದೆ ಎಂದೇ ಹೇಳಬಹುದು.
ಈ ಸುದ್ದಿ ನೋಡಿ:- ಸದಾ ಕಾಲ ಆರೋಗ್ಯವಾಗಿರಲಿ ಈ ಸಲಹೆ ಪಾಲಿಸಿ.!
ಇನ್ನು ಈ ತಿಂಗಳಲ್ಲಿ ನಿಮ್ಮ ಒಂದು ಬೆಳವಣಿಗೆ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ ರವಿ ದ್ವಿತೀಯ ಭಾವಕ್ಕೆ ಹೋಗಲೇಬೇಕು. ಅದೇ ರೀತಿಯಾಗಿ 13ನೇ ತಾರೀಖು ಕುಂಭ ರಾಶಿಗೆ ರವಿ ಹೋದಾಗ ಸರ್ಕಾರಿ ಕೆಲಸ ಕಾರ್ಯಗಳು, ಅಥವಾ ಇನ್ಯಾವುದೇ ಕೆಲಸ ಕಾರ್ಯಕ್ಕೆ ಈ ಕೆಲಸ ನೆರವೇರಲೇಬೇಕು ಎಂದು ಕೈ ಹಾಕಿದ್ದರೂ ಕೂಡ ಅವರೆಲ್ಲದರಲ್ಲಿಯೂ ಕೂಡ ಹೆಸರು ನೀವು ಸಾಧಿಸುತ್ತೀರಿ.
ಅದರೆಲ್ಲದರಲ್ಲಿಯೂ ಕೂಡ ಈ ಸಮಯ ನಿಮಗೆ ಸಹಾಯವನ್ನು ಮಾಡುತ್ತದೆ. ಇದರಿಂದಾಗಿ ನೀವು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮವಾದ ಹೆಸರನ್ನು ಪಡೆದುಕೊಳ್ಳುತ್ತೀರಿ ನಿಮ್ಮನ್ನು ನೋಡಿ ಮತ್ತೊಂದಷ್ಟು ಜನ ನಿಮ್ಮ ಕೆಲಸ ಕಾರ್ಯಗಳನ್ನು ಕಲಿತು ಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಹಾಗೂ ನಿಮಗೂ ಕೂಡ ನಿಮ್ಮ ಕೆಲಸಕ್ಕೆ ಸಹಾಯವಾಗುವಂತೆ ಅವರಿಂದ ನೀವು ಮಾರ್ಗದರ್ಶನವನ್ನು ಪಡೆದುಕೊಳ್ಳುವಂತಹ ವ್ಯಕ್ತಿಗಳ ಪರಿಚಯವೂ ಕೂಡ ಆಗಬಹುದು.
ಹೀಗೆ ಸಾಕಷ್ಟು ಒಳ್ಳೆಯ ಬದಲಾವಣೆಗಳು ನಿಮಗೆ ಈ ತಿಂಗಳಲ್ಲಿ ರವಿ ಕೊಡುತ್ತಾನೆ. ಇನ್ನು ಕುಜ ಗ್ರಹ ತೃತೀಯ ಭಾವದಲ್ಲಿಯೇ ಇರುತ್ತಾನೆ. ಇದರಿಂದಲೂ ಕೂಡ ಬಹಳಷ್ಟು ಒಳ್ಳೆಯದನ್ನು ಪಡೆದುಕೊಳ್ಳುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.