ರಿಯಾಲಿಟಿ ಶೋಗಳು ಕರ್ನಾಟಕಕ್ಕೆ ಹಲವು ಜನರನ್ನು ಪರಿಚಯಿಸುತ್ತದೆ. ಅದರಿಂದ ಖ್ಯಾತಿ ಪಡೆದವರು ಸಿನಿಮಾ ರಂಗದಲ್ಲಿ, ಧಾರಾವಾಹಿಗಳಲ್ಲಿ ಅಥವಾ ಸಂಗೀತದಲ್ಲಿ ಇನ್ನು ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡು ಬೆಳೆಯುತ್ತಾರೆ. ಕಾಮನ್ ಮ್ಯಾನ್ ಆಗಿ ಈ ರೀತಿ ರಿಯಾಲಿಟಿ ಶೋಗಳಿಗೆ ಹೋದವರು ಈಗ ಸೆಲೆಬ್ರಿಟಿಗಳಾಗಿದ್ದರೆ. ಇದೇ ಸಾಲಿಗೆ ಸೇರುತ್ತಾರೆ ಸಮೀರ್ ಆಚಾರ್ಯ ಅವರು. ಇವರು ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸಿದ್ದರು.
ಆಗ ಕಾಮನ್ ಮ್ಯಾನ್ ಕೋಟದಿಂದ ಇವರು ಮನೆ ಒಳಗೆ ಕಂಟೆಸ್ಟೆಂಟ್ ಆಗಿ ಹೋಗಿದ್ದರು. ಬಿಗ್ ಬಾಸ್ ಮುಗಿದ ಬಳಿಕ ಇವರು ಕರ್ನಾಟಕದಲ್ಲಿ ಸೆಲೆಬ್ರಿಟಿ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಮೀರ್ ಆಚಾರ್ಯ ಅವರ ಪತ್ನಿ ಶ್ರಾವಣಿ ಅವರು ಕೂಡ ಫುಲ್ ಫೇಮಸ್. ಹಿಂದೆ ಇವರು ನಿರೂಪಕಿ ಆಗಿ ಕೆಲಸ ಮಾಡಿದ್ದರು ಈಗ ಸಮೀರ್ ಆಚಾರ್ಯ ಅವರ ಪತ್ನಿ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾದ ರಾಜರಾಣಿ ಸೀಸನ್ ಒಂದರಲ್ಲಿ ಹಲವು ಸೆಲೆಬ್ರಿಟಿ ದಂಪತಿಗಳಿಗೆ ಭಾಗವಹಿಸಲು ಅವಕಾಶ ಕೊಡಲಾಗಿತ್ತು. ಆಗ ಈ ದಂಪತಿಗಳು ಸಹ ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವು ಬಾರಿ ಅವರು ತಮ್ಮ ಮಗುವಿನ ವಿಷಯವನ್ನು ಹೇಳಿಕೊಂಡಿದ್ದರು. ಯಾಕೆಂದರೆ ಈಗಾಗಲೇ ಶ್ರಾವಣಿ ಅವರಿಗೆ ಒಂದು ಬಾರಿ ಗರ್ಭಪಾತ ಆಗಿತ್ತು.
ಅದಾದ ನಂತರ ಎಷ್ಟೇ ಹಂಬಲಿಸಿದ್ದರು ಅವರು ತಾಯಿ ಆಗಿರಲಿಲ್ಲ ಈ ನೋವು ಶ್ರಾವಣಿಗೆ ಮಾತ್ರ ಅಲ್ಲದೆ ಸಮೀರ್ ಅವರನ್ನು ಕಾಡುತ್ತಿತ್ತು. ಟಾಸ್ಕ್ ಮಾಡುವಾಗ, ಪರ್ಫಾರ್ಮೆನ್ಸ್ ಮಾಡುವಾಗ ಅವರು ಮಗು ನೆನೆದು ಕಣ್ಣೀರು ಹಾಕಿರುವ ಸನ್ನಿವೇಶಗಳು ಇವೆ. ಜೊತೆಗೆ ಮನದಾಳದ ಮಾತು ಎನ್ನುವ ಭಾಗದಲ್ಲಿ ಸಹ ಇಬ್ಬರು ಮನಮೆಚ್ಚಿ ಮಗುವಿನ ವಿಷಯವಾಗಿಯೇ ಮಾತನಾಡಿದ್ದರು.
ಶ್ರಾವಣಿ ಅವರಂತೂ ಯಾವಾಗಲೂ ತಮಗೆ ರಾಜಕುಮಾರ ಬೇಕು ಎಂದು ಹೇಳುತ್ತಲೇ ಇದ್ದರು. ಇದನ್ನು ಕಂಡು ಕರ್ನಾಟಕವೇ ಮರುಗಿತ್ತು. ಇಷ್ಟೊಂದು ಬೇಡುತ್ತಿದ್ದಾರಲ್ಲ ದೇವರು ಇವರಿಗೆ ಇನ್ನೂ ಅನುಗ್ರಹ ಮಾಡಲಿಲ್ಲವಲ್ಲ ಎಂದು ಎಲ್ಲರೂ ದೇವರಿಗೆ ಶಪಿಸುತ್ತಿದ್ದರು. ಕೊನೆಗೂ ದೇವರ ಮನಸ್ಸು ಕರಗಿ ಈ ಮುದ್ದಾದ ಜೋಡಿಗೆ ಹೆಣ್ಣು ಮಗುವನ್ನು ಕರುಣಿಸಿದ್ದಾರೆ.
ಸಮೀರ್ ಆಚಾರ್ಯ ಮತ್ತು ಶ್ರಾವಣಿ ಅವರು ಮಗುವನ್ನು ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಕಾರ್ಯಕ್ರಮವಾದ ನಮ್ಮಮ್ಮ ಸೂಪರ್ ಸ್ಟಾರ್ ಗೆ ಕರೆತಂದಿದ್ದಾರೆ. ಅಂದು ನಾವು ಹೇಳಿಕೊಳ್ಳುತ್ತಿದ್ದ ನಮ್ಮ ಕಷ್ಟವನ್ನು ನೋಡಿ ಎಷ್ಟೋ ಜನ ಮರುಗಿದ್ದಾರೆ, ನಮಗಾಗಿ ಪ್ರಾರ್ಥಿಸಿದ್ದಾರೆ ಇಡೀ ಕರ್ನಾಟಕದ ಜನ ನಮ್ಮ ಮೇಲೆ ತೋರಿರುವ ಪ್ರೀತಿ ಹಾಗೂ ಆಶೀರ್ವಾದದ ಫಲಿತಾಂಶ ಎಂದು ಹೇಳಿ ಸೃಜನ್ ತಾರಾ ಹಾಗೂ ಅನು ಪ್ರಭಾಕರ್ ಅವರಿಂದ ಮಗುವಿಗೆ ಸರ್ವಾರ್ಥ ಎಂದು ಹೆಸರಿಡಿಸಿದ್ದಾರೆ.
ತಾರಾ ಅವರು ಮಗುವನ್ನು ತೊಟ್ಟಿಲಲ್ಲಿ ಹಾಕಿ ತುಂಬಿದ್ದಾರೆ ಕೂಡ. ಜೊತೆಗೆ ಈ ಎಪಿಸೋಡ್ ಅಲ್ಲಿ ಮಗುವಿನ ಜರ್ನಿ ಕುರಿತು ಅದರ ಜೊತೆಗಿನ ಭಾವನಾತ್ಮಕ ಸಂಬಂಧದ ಕುರಿತು ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಡೆಲಿವರಿ ಆಗುವವರೆಗೂ ಶ್ರಾವಣಿ ಅವರನ್ನು ತಮ್ಮ ಜೊತೆಗೆ ಇಟ್ಟುಕೊಂಡು ಪ್ರತಿಕ್ಷಣ ಕಷ್ಟ ಸುಖಗಳಲ್ಲಿ ಸಮೀರ್ ಆಚಾರ್ಯ ಅವರು ಜೊತೆಗಿದ್ದರಂತೆ.
ನನ್ನ ಮಗಳು ಹುಟ್ಟಿದ ಸ್ವಲ್ಪ ಹೊತ್ತಿಗೆ ಡಾಕ್ಟರ್ ಹಾರ್ಟ್ ರೇಟ್ ಕಮ್ಮಿ ಇದೆ ಎಂದು ಹೇಳಿ ಬಿಟ್ಟಿದ್ದರು. ನನಗೆ ಗಾಬರಿಯಾಗಿ ಎಲ್ಲ ದೇವರನ್ನು ಬೇಡಿಕೊಂಡಿದ್ದೆ. ನಂತರ ಅವಳು ಅತ್ತ ಮೇಲೆ ನನಗೆ ಸಮಾಧಾನ ಆಯ್ತು ಎಂದು ಆ ಕ್ಷಣವನ್ನು ಕೂಡ ನೆನೆದಿದ್ದಾರೆ. ಈ ಜೋಡಿ ಬದುಕಲ್ಲಿ ಇನ್ನು ಮುಂದೆ ಸಂತಸ ತುಂಬಿ ಬರಲಿ ಎಂದು ಹರಸೋಣ.