Friday, June 9, 2023
HomeEntertainmentಮದುವೆಗೂ ಮುನ್ನವೇ ಮಗುವಿಗೆ ಅಪ್ಪ ಅಮ್ಮ ಆದ ಬಿಗ್ ಬಾಸ್ ಸ್ಪರ್ಧಿಗಳು.

ಮದುವೆಗೂ ಮುನ್ನವೇ ಮಗುವಿಗೆ ಅಪ್ಪ ಅಮ್ಮ ಆದ ಬಿಗ್ ಬಾಸ್ ಸ್ಪರ್ಧಿಗಳು.

 

ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬರ ಬದುಕಿನಲ್ಲೂ ಸಾಕಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಎಷ್ಟೋ ಹೊಸ ವಿಚಾರಗಳು ಅಥವಾ ಎಷ್ಟು ಹಳೇ ವಿಚಾರಗಳಿಗೆ ವಿದಾಯ ಅಥವಾ ಯಾವುದೋ ಟರ್ನಿಂಗ್ ಪಾಯಿಂಟ್ ಮತ್ತದೇನೋ ವಿಶೇಷ ಸಂದರ್ಭಗ ಇದೆಲ್ಲ ಸರ್ವೇ ಸಾಮಾನ್ಯವಾಗಿ ಜರುಗುತ್ತಲೇ ಇರುತ್ತವೆ. ಆದರೆ ಹಲವರ ಕುರಿತು ಹೊರ ಜಗತ್ತಿಗೆ ತಿಳಿಯದೇ ಹೋದರು ಸೆಲೆಬ್ರೆಟಿಗಳ ಸಣ್ಣ ಪುಟ್ಟ ವಿಚಾರ ಕೂಡ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿ ಬಿಡುತ್ತದೆ.

ಅದರಲ್ಲೂ ಬಣ್ಣದ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ಗಳ ಮೇಲೆ ಎಲ್ಲರ ಕಣ್ಣು ಎಂದೇ ಹೇಳಬಹುದು. ಕೆಲವರು ಅಭಿಮಾನಕ್ಕಾಗಿ ಸಣ್ಣ ಪುಟ್ಟ ವಿಷಯವನ್ನು ಕೂಡ ದೊಡ್ಡದಾಗಿ ಸಂಭ್ರಮಿಸಿ ತಮ್ಮ ನೆಚ್ಚಿನ ನಟರ ಬಗ್ಗೆ ತಿಳಿದುಕೊಳ್ಳಲು ಆಸೆಪಟ್ಟರೆ ಮತ್ತೆ ಕೆಲವರು ಅವರ ವೈಯಕ್ತಿಕ ವಿಚಾರಗಳನ್ನು ಕೆಣಕಿ ಗಾಸಿಪ್ ಮಾಡುವುದಕ್ಕಾಗಿಯೇ ಕಾಯುತ್ತಾ ಇರುತ್ತಾರೆ.

ಅದರಲ್ಲೂ ಸೋಶಿಯಲ್ ಮೀಡಿಯ ಬಂದ ಮೇಲೆ ಬಹಳ ಬೇಗ ವಿಷಯಗಳು ಜಗಜ್ಡಾಹಿರಾಗಿ ಬಿಡುತ್ತಿದೆ. ಅದರಲ್ಲಿ ಈಗ ಬಿಗ್ ಬಾಸ್ ಸ್ಪರ್ಧಿಗಳ ಬಗೆಗಿನ ವಿಶೇಷ ಸುದ್ದಿ ಒಂದು ಬಾರಿ ಸದ್ದು ಮಾಡುತ್ತಿದೆ. ಅದೇನು ಎಂದರೆ ಮದುವೆ ಆಗುವುದಕ್ಕೂ ಮುನ್ನವೇ ಮಗುವನ್ನು ದತ್ತು ಪಡೆದುಕೊಂಡು ಇವರಿಬ್ಬರೂ ತಂದೆ ತಾಯಿ ಆಗಿದ್ದಾರೆ ಎಂದು. ಅಷ್ಟಕ್ಕೂ ಯಾರು ಈ ಜೋಡಿ ಎಂದರೆ ತೆಲುಗು ಬಿಗ್ ಬಾಸ್ ಐದನೇ ಸೀಸನ್ ಸ್ಪರ್ಧಿ ಆಗಿದ್ದ ಸಿರಿ ಹನುಮಂತು ಮತ್ತು ಬಿಗ್ ಬಾಸ್ 6ನೇ ಸೀಸನ್ ನ ಕಂಟೆಸ್ಟೆಂಟ್ ಆಗಿರುವ ಶ್ರೀಹಾನ್ ಅವರು.

ಸಿರಿ ಹನುಮಂತು ಅವರು ಮೂಲತಃ ಧಾರಾವಾಹಿ ಹಾಗೂ ಸಿನಿಮಾ ಕಲಾವಿದೆ ಮತ್ತು ಮ್ಯೂಸಿಕ್ ಅಲ್ಲಿ ಕೂಡ ಹೆಸರು ಮಾಡಿದ್ದಾರೆ. ಶ್ರೀಹಾನ್ ಅವರು ಸಹ ಯೂಟ್ಯೂಬ್ ಸ್ಟಾರ್ ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಕಲಾವಿದ. ಸೋಶಿಯಲ್ ಮೀಡಿಯಾ ಉಪಯೋಗಿಸುವ ಹಲವು ಜನರಿಗೆ ಇವರಿಬ್ಬರ ಪರಿಚಯ ಇದ್ದೇ ಇರುತ್ತದೆ. ಈ ಜೋಡಿಗಳು ಬಹಳ ದಿನಗಳಿಂದ ಪ್ರೀತಿಯಲ್ಲಿ ಇದ್ದರು ಕೆಲವೊಮ್ಮೆ ಮನಸ್ತಾಪ ಉಂಟಾಗಿ ಬೇರೆ ಆಗುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.

ಆದರೆ ಬಂದ ಮನಸ್ತಾಪವನ್ನು ಬಹಳ ಬೇಗ ಸುಧಾರಿಸಿಕೊಂಡು ಮತ್ತೆ ಒಂದಾಗಿದ್ದಾರೆ. ಹಾಗಾಗಿ ಇವರಿಬ್ಬರು ಮದುವೆ ಆಗೇ ಆಗುತ್ತಾರೆ ಎನ್ನುವ ಸುದ್ದಿಗಳು ಬಹಳ ಗಟ್ಟಿ ಆಗಿವೆ. ಇವರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಹಿಂದೆ ಸಿರಿ ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಶ್ರೀಹಾನ್ ಒಂದು ದಿನದ ವಿಶೇಷ ಅತಿಥಿಯಾಗಿ ಮನೆ ಒಳಗೆ ಎಂಟ್ರಿ ಆಗಿದ್ದರು ಈಗ ಶ್ರೀಹಾನ್ ಮನೆ ಒಳಗೆ ಕಂಟೆಸ್ಟೆಂಟ್ ಆಗಿರುವಾಗಲೂ ಸಹ ಸಿರಿ ಹನುಮಂತು ಅವರಿಗೆ ಕೆಲವು ಸಮಯ ಮನೆ ಒಳಗೆ ಇರಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಅಲ್ಲಿಗೆ ಇವರಿಬ್ಬರು ದತ್ತು ತೆಗದುಕೊಂಡಿರುವ ಸಾಕು ಮಗ ಚೈತು ಅವರನ್ನು ಸಹ ಸಿರಿ ಕಳೆದುಕೊಂಡು ಹೋಗಿದ್ದಾರೆ. ಚೈತು ಅವರು ಯಾವಾಗಲೂ ಸಿರಿ ಜೊತೆಗೆ ಇರುತಾರಂತೆ ಅವರು ಸಿರಿ ಅವರನ್ನು ಅಮ್ಮ ಎಂದೇ ಕರೆಯುತ್ತಾರೆ ಹಾಗೂ ಶ್ರೀಹಾನ್ ಅವರನ್ನು ಅಪ್ಪ ಎಂದು ಕರೆಯುತ್ತಾರಂತೆ. ಶ್ರೀಹಾನ್ ಅವರು ಆರನೇ ಸೀಸನ ರನ್ನರ್ ಆಗಿದ್ದಾರೆ. ಅದನ್ನು ಸಿರಿ ಅವರು ಬಹಳ ಆನಂದದಿಂದ ಸಂಭ್ರಮಿಸಿದ್ದು ವಿಶೇಷವಾಗಿ ಮನೆಗೆ ಬರ ಮಾಡಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಸಹ ಚೈತು ಅವರು ಇರುವುದನ್ನು ಕಾಣಬಹುದಾಗಿದೆ. ಸದ್ಯದಲ್ಲೇ ಇವರಿಬ್ಬರು ಮದುವೆ ಕೂಡ ಹಾಕಿ ಅಧಿಕೃತವಾಗಿ ದಂಪತಿಗಳಾಗಲಿದ್ದಾರೆ ಎನ್ನುವ ಸುದ್ದಿಯು ಸಹ ಇದೆ.