ಸ್ವರ ಸಮರದಲಿ ಗೆದ್ದ ಪ್ರಗತಿ ಹಾಗೂ ಶಿವಾನಿಗೆ ಸಿಕ್ಕ ಬಹುಮಾನ ಎಷ್ಟು ಗೊತ್ತಾ.? ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರತಿ ವಾರಾಂತ್ಯ ಪ್ರಸಾರವಾಗುತ್ತಿದ್ದ ಜನ ಮೆಚ್ಚಿದ ಸಂಗೀತದ ಕಾರ್ಯಕ್ರಮ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಮುಕ್ತಾಯಗೊಂಡಿದೆ. ಅಕ್ಟೋಬರ್ 29, 2012 ರಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಸುಧೀರ್ಘವಾಗಿ ಆರು ತಿಂಗಳುಗಳ ಕಾಲ ನಡೆದುಕೊಂಡು ಬಂದಿದೆ. ಇದುವರೆಗೆ 47 ಎಪಿಸೋಡ್ಗಳು ಪ್ರಸಾರವಾಗಿ ಪ್ರತಿ ಎಪಿಸೋಡ್‌ಗಳಲ್ಲೂ ನೋಡುಗರಿಗೆ ಭರಪೂರ ಮನರಂಜನೆಯನ್ನು ಕೊಡುವಲ್ಲಿ ಗೆದ್ದಿವೆ.
ಕೊಪ್ಪಳದಲ್ಲಿ ಗ್ರಾಂಡ್ ಫಿನಾಲೆ ಕೂಡ ನಡೆದಿದ್ದು, ಈ ಕಾರ್ಯಕ್ರಮದ ವಿನ್ನರ್ ಹಾಗೂ ರನ್ನರ್ ಹೆಸರು ಘೋಷಣೆ ಆಗಿದೆ ಕೊಪ್ಪಳದಲ್ಲಿ ನಡೆದ ಈ ಸಂಗೀತ ಸಮರದ ಎಪಿಸೋಡ್ಗಳು ಈ ವಾರಾಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅಂತಿಮವಾಗಿ ಜನರು ಊಹಿಸಿದ ಸ್ಪರ್ಧಿಗಳೇ ಗೆದ್ದಿರುವುದು ಎಲ್ಲರಿಗೂ ಖುಷಿ ತಂದಿದೆ. ಸರಿಗಮಪ ಸೀಸನ್ 19 ರಲ್ಲಿ ಒಟ್ಟು 16 ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮವಾಗಿ ಗ್ರಾಂಡ್ ಫಿನಾಲೆ ಗೆ ಬಂದವರು ಪ್ರಗತಿ ಬಡಿಗೇರ್, ಶಿವಾನಿ, ತನುಶ್ರೀ, ಕುಷಿಕ್, ರೇವಣಸಿದ್ಧ ಮತ್ತು ಗುರುಪ್ರಸಾದ್ ಎನ್ನುವ ಸ್ಪರ್ಧಿಗಳು.
ಅಂತಿಮ ಹಂತದ ಸ್ಪರ್ಧೆ ಬಹಳ ಕುತೂಕಲದಿಂದ ಕೂಡಿತ್ತು. ಫಿನಾಲೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಕೂಡ ಅತ್ಯುತ್ತಮ ಪ್ರತಿಭೆಗಳೇ, ಯಾರ ಕೊರಳಿಗೆ ಗೆಲುವಿನ ಹಾರ ಹೋಗುತ್ತದೆ ಎಂದು ಪ್ರೇಕ್ಷಕರೆಲ್ಲ ತುದಿಗಾಲಲ್ಲಿ ಕಾಯುತ್ತಾ ನೋಡುತ್ತಿದ್ದರು. ಕೊನೆಗೆ ತೀರ್ಪುಗಾರರ ಹಾಗೂ ಜನರ ಅಭಿಪ್ರಾಯ ಒಂದೇ ರೀತಿಯಾಗಿದ್ದು ಎಲ್ಲರೂ ಮೆಚ್ಚಿದ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್ ಅವರೇ ಈ ಕಾರ್ಯಕ್ರಮದ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮತ್ತು ಮೊದಲ ರನ್ನರ್ ಅಪ್ ಸರಿಗಮಪದ ರಾಕ್ ಸ್ಟಾರ್ ಎಂದೇ ಹೆಸರು ಪಡೆದ ಶಿವಾನಿ ಹಾಗೂ ಎರಡನೇ ರನ್ನರ್ ತನುಶ್ರೀ ಅವರು ಆಗಿದ್ದಾರೆ.
ಪ್ರಗತಿ ಬಡಿಗೇರ್ ಕುಶಾಲನಗರದ ಪ್ರತಿಭೆ. ಬಡ ಕುಟುಂಬದ ಕೋಗಿಲೆಯಾದ ಈಕೆ ಸರಿಗಮಪ ಸೀಸನ್ 19 ಪ್ರಾರಂಭವಾದ ದಿನದಿಂದಲೂ ಕೂಡ ಪ್ರೇಕ್ಷಕರಿಗೆ ಮನೆ ಮಗಳು ಎನಿಸಿದ್ದರು. ಈಕೆ ಮಾತ್ರವಲ್ಲದೆ ಇಡೀ ಕುಟುಂಬ ಕೂಡ ಹಾಡುಗಾರಿಕೆಯಲ್ಲಿ ಮುಂದಿತ್ತು. ಜನ ಇವರ ಕುಟುಂಬವನ್ನು ಮತ್ತು ಪ್ರಗತಿಬಡಿಗೇರ್ ಅವರ ಹಾಡುಗಾರಿಕೆಯನ್ನು ಮೆಚ್ಚಿದ್ದರು. ಈಗ ಈಕೆ ವಿನ್ನರ್ ಆಗಿರುವುದು ಎಲ್ಲರ ಪಾಲಿಗೂ ಗೆಲುವಿನ ಸಂಭ್ರಮ ತಂದಿದೆ.
ಇವರಿಗೆ ಬೆಂಗಳೂರಿನ ನೆಲಮಂಗಲ ಸಮೀಪ 20 ಲಕ್ಷ ಬೆಳೆಬಾಳುವ 30:20 ಸೈಟ್ ಸಿಕ್ಕಿದೆ ಜೊತೆಗೆ ನಾಲ್ಕು ಲಕ್ಷ ಕ್ಯಾಶ್ ಪ್ರೈಸ್ ಕೂಡ ಸಿಕ್ಕಿದೆ, ಪ್ರತಿ ಬಡಿಗೇರ್ ಅವರಿಗೆ ಮೆಂಟರಿಂಗನ್ನು ಲಕ್ಷ್ಮಿ ನಾಗರಾಜ್ ಅವರು ಮಾಡುತ್ತಿದ್ದರು. ಗಾಯಕ ಹೇಮಂತ್ ಅವರ ಗರಣಿಯಲ್ಲಿ ಪಳಗುತ್ತಿದ್ದ ಮೊದಲನೇ ರನ್ನರ್ ಅಪ್ ಶಿವಾನಿ ಅವರಿಗೆ 20 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ ಮತ್ತು ಎರಡನೇ ರನ್ನರ್ ಅಪ್ ಆದ ತನುಶ್ರೀ ಅವರಿಗೆ 5 ಲಕ್ಷ ಸಿಕ್ಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಪ್ರೀತಿ ಈ ಪ್ರತಿಭೆಗಳಿಗೆ ಸಿಕ್ಕಿದೆ.
ಜಿ ಕನ್ನಡ ವಾಹಿನಿಯ ಇಂತಹ ಕಾರ್ಯಕ್ರಮಗಳು ಮರೆಯಲಿದ್ದ ಪ್ರತಿಭೆಗಳಿಗೆ ವೇದಿಕೆ ಆಗಿರುವುದು ಮಕ್ಕಳ ಪಾಲಿಗೆ ಬಹುದೊಡ್ಡ ವರದಾನವಾಗಿದೆ. ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಗಳಾಗಿದ್ದ ಅನೇಕ ಮಕ್ಕಳ ಬದುಕು ಬದಲಾಗಿದ್ದು ಈಗಾಗಲೇ ಇದರಲ್ಲಿ ಹಲವರು ಸಿನಿಮಾಗಳಲ್ಲಿ ಹಾಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸರಿಗಮಪ ಕಾರ್ಯಕ್ರಮದ ಬಗ್ಗೆ ಮತ್ತು ವಿನ್ನರ್ ಆಗಿರುವ ಕಂಟೆಸ್ಟೆಂಟ್ಗಳ ಪರ್ಫಾರ್ಮೆನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ