
ರಸ್ತೆ ಬದಿಗಳಲ್ಲಿ ಸಾಮಾನ್ಯವಾಗಿ ಬೆಳೆಯುವಂತಹ ಎಕ್ಕೆ ಗಿಡವು ಬಹಳಷ್ಟು ಔಷಧಿಯ ಗುಣಗಳನ್ನು ಹೊಂದಿದೆ ಎಂದರೆ ನೀವು ನಂಬಲೇಬೇಕು. ಹೌದು ನಮ್ಮ ಹಿಂದಿನ ಕಾಲದಿಂದಲೂ ಕೂಡ ಈ ಗಿಡಕ್ಕೆ ಬಹಳ ಮಹತ್ವವಾದ ಸ್ಥಾನವಿದೆ. ಅದರಲ್ಲೂ ಈ ಗಿಡದ ಹಾಲು ಎಲೆ ಇವುಗಳನ್ನು ಬಹಳಷ್ಟು ಔಷಧಿಗಳಲ್ಲಿ ಉಪಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.
ಆದರೆ ನಮ್ಮ ಇತ್ತೀಚಿನ ಯುವ ಜನರಿಗೆ ಈ ಗಿಡದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳು ತಿಳಿದಿಲ್ಲ. ಬದಲಿಗೆ ಆ ಗಿಡ ಸುಮ್ಮನೆ ಕಳೆ ಗಿಡ ಎಂದುಕೊಳ್ಳುತ್ತಾರೆ. ಅದರಲ್ಲೂ ಬಿಳಿ ಎಕ್ಕೆ ಗಿಡದ ಔಷಧಿ ಗುಣ ತಿಳಿದರೆ ನೀವು ಎಲ್ಲೇ ಸಿಕ್ಕರು ಆ ಗಿಡವನ್ನು ತಂದು ನಿಮ್ಮ ಮನೆಯ ಮುಂದೆ ಬೆಳೆಸುತ್ತೀರಿ ಅಷ್ಟು ಮಹತ್ವವನ್ನು ಅದು ಒಳಗೊಂಡಿದೆ.
ಹಾಗಾದರೆ ಈ ದಿನ ಬಿಳಿ ಎಕ್ಕೆ ಗಿಡವನ್ನು ನಾವು ಯಾವ ರೀತಿಯಾಗಿ ಉಪಯೋಗಿಸಬೇಕು. ಅದರಲ್ಲೂ ಆ ಗಿಡದ ಯಾವ ಒಂದು ಭಾಗ ಯಾವ ಸಮಸ್ಯೆಗಳನ್ನು ದೂರಮಾಡುತ್ತದೆ ಹಾಗೂ ಅದನ್ನು ಹೇಗೆ ಉಪಯೋಗಿಸುವುದರಿಂದ ಆ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ.
ಬಿಳಿ ಎಕ್ಕೆ ಗಿಡ ನಿಮ್ಮಮನೆ ಮುಂದಿದ್ದರೆ ಈ ಎಲ್ಲಾ ಸಮಸ್ಯೆಗಳಿಂದ ತಕ್ಷಣ ಪರಿಹಾರವನ್ನ ಕಾಣಬಹುದು. ಬಿಳಿ ಎಕ್ಕೆ ಗಿಡ ಹಲವು ರೋಗಗ ಳಿಗೆ ಹಾಗು ದೈಹಿಕ ಸಮಸ್ಯೆಗಳಿಗೆ ಔಷಧಿ ರೂಪದಲ್ಲಿ ಕೆಲಸ ಮಾಡು ತ್ತದೆ. ಈ ಬಿಳಿ ಎಕ್ಕೆ ಗಿಡ ನಿಮ್ಮ ಮನೆ ಮುಂದೆ ಇದ್ದರೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
* ಮನೆಯಲ್ಲಿ ವಾಸ್ತು ದೋಷ ಇದ್ದರೆ ಈ ರೀತಿಯಾಗಿ ಮಾಡಿ ಪರಿಹಾರ ಕಂಡುಕೊಳ್ಳಿ ಹಾರ ಮಾಡಿ ಮನೆಯ ಮುಂಬಾಗಿಲಿಗೆ ಹಾಗೂ ದೇವರ ಮನೆಯ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆ ಆಗುವುದು. ಆರೋಗ್ಯಕ್ಕೆ ಸಂಬಂಧ ಪಟ್ಟಂತೆ. ಮೂಲವ್ಯಾದಿ ಸಮಸ್ಯೆ ಇರುವವರು ಎಕ್ಕದ ಹಾಲನ್ನು ಮೂಲವ್ಯಾಧಿ ಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರವಾಗುವುದು ಎಂದು ತಿಳಿಯಲಾಗುತ್ತದೆ.
ಹಾಗೂ ಚರ್ಮಕ್ಕೆ ಸಂಬಂದಿಸಿದ ಕಾಯಿಲೆ ಇದ್ದರೆ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಬೇಕು. ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿನದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗು ವುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಎಕ್ಕದ ಹಾಲನ್ನು ಕಾಲುಗಳಲ್ಲಿ ಮುಳ್ಳು ಚುಚ್ಚಿದ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ.
ಎಕ್ಕೆ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಖ ಕೊಟ್ಟರೆ ಕೆಲವೇ ದಿನದಲ್ಲಿ ಆ ನೋವುಗಳಿಂದ ಗುಣಮುಖರಾಗುತ್ತೀರಿ.
* ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, ಬಂಗು ಇದ್ದರೆ ಎಕ್ಕದ ಬೇರನ್ನು ನಿಂಬೇ ರಸದಲ್ಲಿ ತೇದು ಅದಕ್ಕೆ ಸ್ವಲ್ಪ ಅರಿಸಿನ ಸೇರಿಸಿ ಲೇಪಿಸಿ ಮೃದು ವಾಗಿ ಹಚ್ಚಿಕೊಳ್ಳಬೇಕು.
* ಎಕ್ಕದ ಗಿಡದ ಎಲೆಯನ್ನು ನಮ್ಮ ಪಾದದ ಕೆಳಗೆ ಇಡುವುದರಿಂದ ನಮ್ಮ ದೇಹಕ್ಕೆ ತಂಪಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಹೀಗೆ ಮೇಲೆ ಹೇಳಿದೆ ಇಷ್ಟು ಮಾಹಿತಿಗಳು ಕೂಡ ಎಕ್ಕದ ಗಿಡದ ಎಲೆ ಮತ್ತು ಅದರ ಹಾಲಿನ ಉಪಯೋಗವಾಗಿದ್ದು ಮೇಲೆ ಹೇಳಿದ ಸಮಸ್ಯೆ ಗಳು ಏನಾದರೂ ನಿಮ್ಮಲ್ಲಿ ಇದ್ದರೆ ಅದನ್ನು ಈ ಮೂಲಕ ಈ ವಿಧಾನ ಅನುಸರಿಸುವುದರ ಮೂಲಕ ಅದನ್ನು ದೂರ ಮಾಡಿಕೊಳ್ಳಬಹುದು.
https://youtu.be/QkALizJ1arM?si=ottWvQ89f8fq1vDB