
ನಮಗೆ ಜೀವನ ಮತ್ತು ಬೆಳವಣಿಗೆಯ ಸಾರವನ್ನು ಒದಗಿಸುವುದು ಹೊಕ್ಕಳು. ಅದು ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ, ರಕ್ತ ಮತ್ತು ಆಮ್ಲಜನಕವನ್ನು ಪೂರೈಸುತ್ತದೆ. ನೀವು ವಯಸ್ಕರಾದರೂ ಹೊಕ್ಕಳನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಅದು ನಿಮ್ಮ ದೇಹದ ಮೂಲ ದೃಢತೆ ಹಾಗೂ ಬೆಳವಣಿಗೆಗೆ ಪೂರಕವಾದ ಅಂಶಗಳಲ್ಲಿ ಒಂದಾಗಿದೆ ನಮ್ಮ ದೇಹದ ಇತರ ಭಾಗಗಳಿಗೆ ಎಣ್ಣೆಯನ್ನು ಹಚ್ಚುತ್ತೇವೆ.
ಅದೇ ರೀತಿಯಾಗಿ ಮಕ್ಕಳಿಗೆ ಎಣ್ಣೆ ಹಚ್ಚುವುದರಿಂದಲೂ ಕೂಡ ಅನೇಕ ಆರೋಗ್ಯ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು. ಹಾಗಾದರೆ ಈ ದಿನ ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ಯಾವುದೆಲ್ಲ ರೀತಿಯ ಲಾಭಗಳು ಆಗುತ್ತದೆ ಹಾಗೂ ಯಾವ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯ ಬಗ್ಗೆ ತಿಳಿಯೋಣ.
ಅದಕ್ಕೂ ಮೊದಲು ನಮ್ಮ ಹೊಕ್ಕಳಿಗೆ ಎಣ್ಣೆಯನ್ನು ಹಾಕುವುದರಿಂದ ಅದು ಹೇಗೆ ನಮ್ಮ ಇಡೀ ದೇಹಕ್ಕೆ ಪ್ರಯೋಜನವನ್ನು ಉಂಟು ಮಾಡು ತ್ತದೆ. ಅದರ ಒಂದು ಕೆಲಸ ಏನು ಎನ್ನುವುದನ್ನು ತಿಳಿದುಕೊಳ್ಳೋಣ. ನಾವೆಲ್ಲರೂ ಕೂಡ ಹುಟ್ಟುವುದಕ್ಕೂ ಮುಂಚೆ ತಾಯಿಯ ಗರ್ಭದಲ್ಲಿ ಹೊಕ್ಕಳಿನ ಮೂಲಕವೇ ತಾಯಿಯಿಂದ ಎಲ್ಲಾ ಪೋಷಕಾಂಶಗಳನ್ನು ಕೂಡ ಪಡೆದುಕೊಳ್ಳುತ್ತೇವೆ.
ಅದರಲ್ಲೂ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಅಂಶಗಳನ್ನು ಕೂಡ ನಾವು ಹೊಕ್ಕಳಿನಿಂದ ಪಡೆದುಕೊಳ್ಳು ತ್ತೇವೆ. ಆದ್ದರಿಂದ ಅದು ಬಹಳ ಪ್ರಮುಖವಾದಂತಹ ಭಾಗವಾಗಿದ್ದು. ಅದನ್ನು ನಾವು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ ವಾಗಿರುತ್ತದೆ. ನಮ್ಮ ಹೊಕ್ಕಳಿಗೂ ಹಾಗೂ ದೇಹದಲ್ಲಿರುವಂತಹ ಎಲ್ಲಾ ನರನಾಡಿಗಳಿಗೂ ಕೂಡ ಒಂದು ಅವಿನಾಭಾವ ಸಂಬಂಧವಿದೆ. ಹಾಗಾಗಿ ನಾವು ಹೊಕ್ಕಳಿಗೆ ಎಣ್ಣೆಯನ್ನು ಹಾಕುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.
* ಪ್ರತಿದಿನ ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ಒಡೆದ ತುಟಿಗಳು ಮೃದು ಮತ್ತು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.
* ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಮುಖದ ಮೇಲಿ ರುವ ಮೊಡವೆಗಳು ಮತ್ತು ಕಪ್ಪು ಕಲೆಗಳು ದೂರವಾಗುತ್ತದೆ.
* ಇದು ಕಣ್ಣುಗಳ ತುರಿಕೆ ಮತ್ತು ಉಷ್ಣತೆಯನ್ನು ಸಹ ಕಡಿಮೆ ಮಾಡುತ್ತದೆ.
* ಮಕ್ಕಳಿಗೆ ಎಣ್ಣೆಯನ್ನು ಹಾಕುವುದರಿಂದ ನಮ್ಮ ದೇಹದಲ್ಲಿ ಯಾವು ದೇ ಭಾಗದಲ್ಲಿ ಊತದ ಸಮಸ್ಯೆ ಇದ್ದರೂ ಅದು ನಿವಾರಣೆಯಾಗುತ್ತದೆ.
* ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಮೊಣಕಾಲು ನೋವು ನಿವಾರಣೆಯಾಗುತ್ತದೆ.
* ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ನಮ್ಮಮುಖ ಮೈ ಕೈ ಬಣ್ಣ ಹೆಚ್ಚುತ್ತದೆ ಹಾಗಾಗಿ ಪ್ರತಿದಿನ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಬೇಕು.
* ಜೊತೆಗೆ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ.
* ಅದೇ ರೀತಿಯಾಗಿ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ.
* ಅಜೀರ್ಣ, ಅತಿಸರ, ವಾಕರಿಕೆ ಮುಂತಾದ ರೋಗಗಳಿಂದ ಉಪಶ ಮನ ದೊರೆಯುತ್ತದೆ.
* ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ಮಹಿಳೆಯರ ಹಾರ್ಮೋನ್ ಸಮ ತೋಲನದಲ್ಲಿ ಇರುತ್ತದೆ.
* ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ತಿಂಗಳು ವರ್ಷಗಟ್ಟಲೆ ಸಂಗ್ರಹವಾಗಿರುವ ಕೊಳೆ ಕರಗುತ್ತದೆ.
* ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮುಟ್ಟಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅಂತಹವರು ಮುಟ್ಟಿನ ಸಮಯದಲ್ಲಿ ಹೊಕ್ಕಳಿಗೆ ಎಣ್ಣೆ ಹಚ್ಚಬೇಕು.
* ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರ ಹೋಗಿ ಆರೋಗ್ಯಕರ ಚರ್ಮ ನಮ್ಮದಾಗುತ್ತದೆ.
* ರಾತ್ರಿ ಹೊತ್ತು ಹೊಕ್ಕಳಿಗೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿದರೆ ಬೆಳಗ್ಗೆ ಎದ್ದ ತಕ್ಷಣ ಉಲ್ಲಾಸದಿಂದ ಇರುತ್ತೀರಿ. ಇದರಿಂದ ನಮ್ಮ ಇಡೀ ದೇಹ ತಂಪಾಗಿರುತ್ತದೆ. ಎಷ್ಟೇ ಆಯಾಸ ಒತ್ತಡ ಇದ್ದರೂ ಅವೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.
* ಹೊಕ್ಕಳು ಬೇಗನೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಒಳಗಿನಿಂದ ಪೋಷಣೆ ನೀಡುತ್ತದೆ. ಆದ್ದರಿಂದ ಹೊಕ್ಕಳಿಗೆ ಹೆಣ್ಣೆ ಹಾಕುವ ಅಭ್ಯಾಸ ಮಾಡಿಕೊಳ್ಳುವುದು ತುಂಬಾ ಉತ್ತಮ.