ನಮ್ಮ ಹಿಂದೂ ಸಂಪ್ರದಾಯದಲ್ಲಿ ತಾಳಿಗೆ ಬಹಳ ಮಹತ್ವ ಇದೆ ಎಂದೇ ಹೇಳಬಹುದು ಹೌದು. ನಮ್ಮ ಶಾಸ್ತ್ರಪುರಾಣಗಳಲ್ಲಿ ನೋಡಿರುವಂತೆ ರಾಮಾಯಣ ಮಹಾಭಾರತದ ಕಾಲದಿಂದಲೂ ಕೂಡ ತಾಳಿಗೆ ಬಹಳ ಪವಿತ್ರವಾದ ಸ್ಥಾನವನ್ನು ಕೊಟ್ಟಿದ್ದಾರೆ. ಮದುವೆಯಾದಂತಹ ಹೆಣ್ಣು ತನ್ನ ಗಂಡನ ಆಯಸ್ಸು ಹೆಚ್ಚಾಗಲಿ ಎಂದು ಅವನಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದು ಮದುವೆಯಾದ ನಂತರ ಆ ಹೆಣ್ಣಿಗೆ ತಾಳಿಯನ್ನು ಕಟ್ಟಿಸುತ್ತಾರೆ.
ತಾಳಿ ಇದ್ದರೆ ಆ ಹೆಣ್ಣಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ದಾಳಿಗೆ ಅಷ್ಟೊಂದು ಮಹತ್ವಪೂರ್ಣವಾದ ಬೆಲೆ ಗೌರವ ಎನ್ನುವುದು ಇದೆ. ಆದ್ದರಿಂದ ಮದುವೆಯಾದ ಪ್ರತಿಯೊಂದು ಹೆಣ್ಣು ಕೂಡ ತಾಳಿಯನ್ನು ಸದಾ ಕಾಲ ಧರಿಸಿಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಫ್ಯಾಷನ್ ಎನ್ನುವ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತಾಳಿಯನ್ನು ತೆಗೆದಿಡು ವಂತಹ ಕೆಟ್ಟ ಹವ್ಯಾಸಗಳನ್ನು ಮಾಡುತ್ತಿದ್ದಾರೆ. ಆದರೆ ಈ ರೀತಿ ಮಾಡು ವುದರಿಂದ ಅವರ ಗಂಡನ ಆರೋಗ್ಯದ ಮೇಲೆ ಅವನ ಆಯಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಆಲೋಚನೆಯನ್ನು ಸಹ ಮಾಡುವುದಿಲ್ಲ ಹಾಗೂ ಕೆಲವೊಂದಷ್ಟು ಜನರಿಗೆ ಇಂತಹ ಮಾಹಿತಿ ಗಳು ಕೂಡ ತಿಳಿದಿರುವುದಿಲ್ಲ.
ಆದ್ದರಿಂದ ಈ ರೀತಿಯ ತಪ್ಪುಗಳನ್ನು ಮಾಡುತ್ತಿರುವ ಜನರಿಗೆ ಮುಂದಿನ ದಿನದಲ್ಲಿ ಹಲವಾರು ರೀತಿಯ ಸಂಕಷ್ಟಗಳು ಎದುರಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮದುವೆಯಾದಂತಹ ಹೆಣ್ಣು ತಾಳಿಯನ್ನು ಯಾಕೆ ಧರಿಸಬೇಕು? ಹಾಗೂ ಅದನ್ನು ಅವಳು ಧರಿಸದಿದ್ದರೆ ಏನಾಗುತ್ತದೆ ಎನ್ನುವ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಓರ್ವ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು ತಾಳಿ, ಹಣೆ ಬೊಟ್ಟು, ಕಾಲುಂಗುರ, ಮುಗೂತಿ, ಬಳೆ ಇವಿಷ್ಟು ಓರ್ವ ವಿವಾಹಿತ ಮಹಿಳೆ ಹಾಕಬೇಕಾದ ಆಭರಣಗಳು. ಹಾಗಾಗಿಯೇ ಆಕೆಯನ್ನು ಮುತ್ತೈದೆ ಎಂದು ಕರೆಯಲಾಗುತ್ತದೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಮಹತ್ವವಿದೆ ಅದರಲ್ಲಿ ಇಂದು ನಾವು ತಾಳಿ ಧರಿಸುವುದರಿಂದ ಏನು ಉಪಯೋಗ ಎನ್ನುವುದನ್ನು ತಿಳಿಯೋಣ.
* ತಾಳಿಯಲ್ಲಿರುವ ಚಿನ್ನ ಮತ್ತು ಕಪ್ಪುಮಣಿಯನ್ನು ಶಿವ ಪಾರ್ವತಿಗೆ ಹೋಲಿಸಲಾಗಿದೆ.
* ಕರಿಮಣಿ ಎಂದರೆ ಶಿವ ಮತ್ತು ಚಿನ್ನ ಅಥವಾ ಅರಿಷಿನ ಎಂದರೆ ಪಾರ್ವತಿ ಎಂದು ಹೇಳಲಾಗಿದೆ.
* ಹಿಂದೂ ಧರ್ಮದ ಕಥೆಗಳ ಪ್ರಕಾರ, ಕೃಷ್ಣರಾಧೆ, ರಾಮ ಸೀತೆ ಸಫಲ ವೈವಾಹಿಕ ಜೀವನವನ್ನು ನಡೆಸಿಲ್ಲ. ಆದರೆ ಶಿವ ಪಾರ್ವತಿ ಮಾತ್ರ ಸಫಲ ವೈವಾಹಿಕ ಜೀವನವನ್ನು ನಡೆಸಿದ್ದಾರೆ.
ಹಾಗಾಗಿ ಇವರಿಬ್ಬರ ಆಶೀರ್ವಾದವಾಗಿ ತಾಳಿಯನ್ನ ಧರಿಸಲಾಗುತ್ತೆ.
* ಪತ್ನಿ ತಾಳಿ ಧರಿಸುವುದರಿಂದ ಪತಿಯ ಆಯುಷ್ಯ ಗಟ್ಟಿಯಾಗಿರುತ್ತದೆ. ಆತನಿಗೆ ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಅನ್ನುವ ನಂಬಿಕೆ ನೂರಾರು ವರ್ಷಗಳಿಂದಲೂ ಕೂಡ ಇದೆ.
* ವಿವಾಹದ ಸಮಯದಲ್ಲಿ ಮಂತ್ರ ಹೇಳಿ ಮಂಗಲಸೂತ್ರ ಕಟ್ಟುವುದ ರಿಂದ ಅದರಲ್ಲಿ ದೈವಿಕ ಶಕ್ತಿ ಇರುತ್ತದೆ ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ. ಅಲ್ಲದೇ ತಾಳಿಯಲ್ಲಿ ಪಂಚ ತತ್ವಗಳಿದ್ದು ಪತಿ ಪತ್ನಿ ಸಂಬಂಧ ಗೊಳಿಸುವುದರಲ್ಲಿ ಸಹಕಾರಿಯಾಗಿದೆ ಎನ್ನುವ ನಂಬಿಕೆಯೂ ಇದೆ.
* ಇಷ್ಟೇ ಅಲ್ಲದೇ ತಾಳಿ ಅನ್ನೋದು ವಿವಾಹಿತ ಮಹಿಳೆಯ ರಕ್ಷಾ ಕವಚ ವಾಗಿದೆ. ಇದು ಆಕೆಯ ಕುತ್ತಿಗೆಯಲ್ಲಿ ಇರುವ ತನಕ ದುಷ್ಟ ಶಕ್ತಿಗಳು ದುಷ್ಟರ ಕಣ್ಣು ಆಕೆಯ ಮೇಲೆ ಬೀಳುವುದಿಲ್ಲ. ಇದರಿಂದ ಆಕೆ ಸುರಕ್ಷಿತವಾಗಿರುತ್ತಾಳೆ ಹಾಗಾಗಿ ವಿವಾಹಿತ ಹೆಣ್ಣು ತಾಳಿ ಧರಿಸಲೇಬೇಕು.