ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಅನ್ನದ ಅಂಶ ಹೆಚ್ಚಿರುತ್ತದೆ. ನಾವು ಮಾಡುವ ಹೆಚ್ಚಿನ ಪ್ರಮಾಣದ ಅಡುಗೆಗಳು ಅಕ್ಕಿಯನ್ನೇ ಬಳಸುತ್ತೇವೆ. ಅನ್ನ, ಚಿತ್ರಾನ್ನ, ಪಲಾವ್, ಟೊಮೆಟೊ ಬಾತ್, ಗೀ ರೈಸ್ ಹೀಗೆ ಯಾವುದೇ ಅಡುಗೆ ಮಾಡಿದರು ಅಕ್ಕಿಯದ್ದೇ ಹೆಚ್ಚಿನ ಪ್ರಮಾಣ. ಈ ಅಕ್ಕಿ ಬಳಸಿ ಅನ್ನ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ತೊಳೆಯುತ್ತೇವೆ, ಅಕ್ಕಿ ತೊಳೆದು ಅದನ್ನು ನೆನೆಸಿಟ್ಟು ಅನ್ನ ಮಾಡುತ್ತೇವೆ.
ಆದರೆ ಆ ನೀರನ್ನು ಮಾತ್ರ ವೇಸ್ಟ್ ಎಂದು ಚೆಲ್ಲಿ ಬಿಡುತ್ತೇವೆ, ಆದರೆ ಇದರಲ್ಲೂ ಕೂಡ ಸಾಕಷ್ಟು ಸತ್ವವಿದೆ. ಇದು ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಅತ್ಯುತ್ತಮ ಔಷಧಿಯಾಗಿದೆ. ಯಾವ ರೀತಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವುದರ ವಿವರ ಹೀಗಿದೆ ಯಾವಾಗಲೂ ಊಟಕ್ಕೆ ಕೆಂಪಕ್ಕಿಯನ್ನು ಬಳಸುವುದು ಒಳ್ಳೆಯದು.
ಅನ್ನ ಮಾಡುವ ಮುನ್ನ ಮೊದಲು ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಧೂಳು, ಕಲ್ಮಶ ಹೊರಹೋಗುವಂತೆ ಮಾಡಬೇಕು, ನಂತರ ಮತ್ತೊಮ್ಮೆ ಶುದ್ಧವಾದ ನೀರನ್ನು ಹಾಕಿ ಐದರಿಂದ ಹತ್ತು ನಿಮಿಷ ನೆನೆಸಿ ಆಮೇಲೆ ಅಕ್ಕಿ ತೆಗೆದು ಅಡುಗೆಗೆ ಬಳಸಬೇಕು. ಆದರೆ ನೆನೆಸಿಟ್ಟ ನೀರನ್ನು ವೇಸ್ಟ್ ಮಾಡಬೇಡಿ ಮತ್ತೊಂದು ಬಿಳಿ ಬಣ್ಣದ ಕಾಟನ್ ಬಟ್ಟೆಯಲ್ಲಿ ಅದನ್ನು ಶೋಧಿಸಿ ಅರ್ಧ ಗಂಟೆ ಹಾಗೆ ಬಿಡಿ ಪಾತ್ರೆಯ ತಳದಲ್ಲಿ ಬಿಳಿ ಬಣ್ಣದ ಪೇಸ್ಟ್ ಇರುತ್ತದೆ ಅದನ್ನು ಈ ರೀತಿ ಉಪಯೋಗಿಸಿಕೊಳ್ಳಿ.
* ಈ ಪೇಸ್ಟ್ ಜೊತೆ ಸ್ವಲ್ಪ ಅರಿಶಿನ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಚರ್ಮ ಸಾಫ್ಟ್ ಆಗುತ್ತದೆ ಮುಖಕ್ಕೆ ಗ್ಲೋ ಬರುತ್ತದೆ.
* ಈ ಬಿಳಿ ಬಣ್ಣದ ಪೇಸ್ಟ್ ನ್ನು ಹತ್ತಿಯ ಸಹಾಯದಿಂದ ತೆಗೆದುಕೊಂಡು ಕಣ್ಣು ರೆಪ್ಪೆಗಳ ಮೇಲೆ ಇಟ್ಟುಕೊಂಡು ಮಲಗಿಕೊಂಡರೆ ಚೆನ್ನಾಗಿ ನಿದ್ದೆ ಬರುತ್ತದೆ.
* ಈ ಪೇಸ್ಟ್ ಅನ್ನು ಸುಟ್ಟ ಕಾಯದ ಮೇಲೆ ಹಾಕಿದರೆ ಗಾಯಕ್ಕೆ ಬೊಬ್ಬೆ ಬರುವುದಿಲ್ಲ, ಸುಟ್ಟ ಗಾಯ ಬೇಗ ವಾಸಿಯಾಗುತ್ತದೆ.
* ಬಿಳಿ ಮುಟ್ಟಿನ ಸಮಸ್ಯೆ ಇದ್ದರೆ ಅಕ್ಕಿ ತೊಳೆದ ನೀರನ್ನು ನಿಯಮಿತವಾಗಿ ಬಳಸಿದರೆ ಕ್ರಮೇಣ ಕಡಿಮೆಯಾಗುತ್ತದೆ,
ಋತುಸ್ತ್ರಾವದ ಸಮಯದಲ್ಲಿ ಅಕ್ಕಿ ತೊಳೆದ ನೀರಿಗೆ ಬೆಲ್ಲ ಹಾಗೂ ಚಿಟಿಕೆ ಉಪ್ಪು ಹಾಕಿ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ.
* ಅಕ್ಕಿ ತೊಳೆದ ನೀರನ್ನು ನಿಂಬೆ ರಸದ ಜೊತೆ ಮಿಕ್ಸ್ ಮಾಡಿ ಸ್ನಾನ ಮಾಡುವ ಮುನ್ನ ತಲೆಕೂದಲಕ್ಕೆ ಹಚ್ಚಿ ಅರ್ಧ ಗಂಟೆ ಒಣಗಿಸಿ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
* ಒಡೆದ ಹಿಮ್ಮಡಿ ಗಳಿಗೆ ಈ ನೀರನ್ನು ಬಳಸಿ ಮಸಾಜ್ ಮಾಡುವುದರಿಂದ ಒಡೆದಿರುವುದು ಗುಣವಾಗುತ್ತದೆ ಮತ್ತು ಮೃದುವಾಗುತ್ತದೆ.
* ಅಕ್ಕಿ ತೊಳೆದ ನೀರಿಗೆ ಕೆಂಪು ಕಲ್ಲುಸಕ್ಕರೆ, ಚೂರು ಏಲಕ್ಕಿ ಪುಡಿ ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ಜ್ಯೂಸ್ ಮಾಡಿ ಕುಡಿದರೆ ಕ್ಯಾಲ್ಸಿಯಂ ಹೆಚ್ಚಾಗುತ್ತದೆ ದೇಹ ತಂಪಾಗುತ್ತದೆ.
* ಈ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಶಕ್ತಿ ಹೆಚ್ಚಾಗುತ್ತದೆ ಮಕ್ಕಳಿಗೆ ಕೊಡುವುದು ಕೂಡ ಬಹಳ ಒಳ್ಳೆಯದು.
* ಅಕ್ಕಿ ತೊಳೆದ ನೀರಿನ ಜೊತೆ ಹುತ್ತದ ಮಣ್ಣನ್ನು ಮಿಕ್ಸ್ ಮಾಡಿ ಕಾಲಿಗೆ ಮಸಾಜ್ ಮಾಡುವುದರಿಂದ ಮಕ್ಕಳ ಕಾಲುಗಳು ಗಟ್ಟಿಯಾಗುತ್ತವೆ ಮತ್ತು ಬೇಗ ನಡೆಯಲು ಕಲಿಯುತ್ತಾರೆ.
* ಅರ್ಧ ಕಪ್ ಅಕ್ಕಿ ನೀರಿಗೆ ಅಲೋವೆರಾ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷಗಳು ಆದ ಬಳಿಕ ಮುಖವನ್ನು ತೊಳೆಯಬೇಕು.
ಇದರಿಂದ ಮುಖದಲ್ಲಿರುವ ಮೊಡವೆಗಳು ಮಾಯವಾಗುತ್ತವೆ.
* ಅಕ್ಕಿ ತೊಳೆದ ನೀರಿಗೆ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷಗಳು ಆದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದರೆ ಮುಖ ಕಾಂತಿಯುತವಾಗುತ್ತದೆ.
* ಈ ನೀರಿಗೆ ಅಡುಗೆ ಸೋಡಾ ಹಾಗೂ ಉಪ್ಪನ್ನು ಸೇರಿಸಿ ಮನೆ ಕಿಟಕಿ ಗಾಜುಗಳನ್ನು ಒರೆಸಲು ಬಳಸಬಹುದು
* ಚರ್ಮದ ತುರಿಕೆ, ಉರಿಯೂತ, ಕಿರಿಕಿರಿ ಇದ್ದರೆ ಈ ನೀರನ್ನು ಸೇರಿಸಿ ಸ್ನಾನ ಮಾಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತವೆ.
* ಅಕ್ಕಿ ತೊಳೆದ ನೀರು ಬಹಳ ತಂಪು ಶೀತ ಕೆಮ್ಮು ಇರುವವರು ಆರೋಗ್ಯ ದೃಷ್ಟಿಯಿಂದ ಕಡಿಮೆ ಬಳಸಿ.